Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಮ್ಮದೇ ಗ್ಯಾಲಕ್ಸಿಯಲ್ಲಿ ಬೃಹತ್ ಗಾತ್ರದ ಬ್ಲಾಕ್ ಹೋಲ್ ಪತ್ತೆ..! ಎಷ್ಟು ದೂರದಲ್ಲಿದೆ ಗೊತ್ತಾ?
ಬ್ರಹ್ಮಾಂಡದ ಅತ್ಯಂತ ದೊಡ್ಡ ವಿಸ್ಮಯ ಎನಿಸಿರುವ 'ಕಪ್ಪು ರಂದ್ರ' (ಬ್ಲ್ಯಾಕ್ ಹೋಲ್). ಬ್ರಹ್ಮಾಂಡವೇ ಒಂದು ವಿಸ್ಮಯ, ಬೆದಕಿದಷ್ಟು ಆಶ್ಚರ್ಯಗಳು ಒಂದೊಂದಾಗಿ ಹೊರಗೆ ಬರುತ್ತವೆ. ಅದರಲ್ಲೂ ಈ ಕಂಪು ಕುಳಿಗಳ ಕುರಿತು ಶತಮಾನಗಳಿಂದಲೂ ವಿಸ್ಮಯಕಾರಿ ವಿಚಾರಗಳು ಹೊರಬರುತ್ತಲೇ ಇದೆ.
ಖಗೋಳಶಾಸ್ತ್ರಜ್ಞರು ಕ್ಷೀರಪಥ ನಕ್ಷತ್ರಪುಂಜದಲ್ಲಿ ಗುರುತಿಸಬಹುದಾದ 'ಅತ್ಯಂತ ಬೃಹತ್ ನಕ್ಷತ್ರದ ಕಪ್ಪು ಕುಳಿ'ಯ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾರೆ. ಕಪ್ಪು ರಂದ್ರ ಎನ್ನುವುದು ಅತ್ಯಂತ ಸಾಂದ್ರವಾದ ವಸ್ತು. ಇದರಿಂದ ಯಾವ ಬೆಳಕೂ ತಪ್ಪಿಸಿಕೊಳ್ಳಲಾರದು. ಇವೆಂಟ್ ಹಾರಿಜಾನ್ ಎಂದು ಕರೆಯಲಾಗುವ ಕಪ್ಪು ರಂಧ್ರದ ಒಳಭಾಗದೊಳಗೆ ಏನೇ ತೋರಿಕೊಂಡರೂ ಅದು ಮತ್ತೆ ಮರಳುವ ಪ್ರಶ್ನೆಯೇ ಇಲ್ಲ. ಅದನ್ನು ಕಪ್ಪು ರಂಧ್ರ ನುಂಗಿಬಿಡುತ್ತದೆ. ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿಯನ್ನು ಈ ಕಪ್ಪು ಕುಳಿಗಳು ಹೊಂದಿವೆ ಎಂದು ಅಧ್ಯಯನಗಳು ತಿಳಿಸಿವೆ.

ಆದರೆ ಇದೀಗ ಅತೀ ದೊಡ್ಡ ಕಪ್ಪುಕುಳಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಗಯಾ BH3 ಎಂಬ ಬೃಹತ್ ಕಪ್ಪು ರಂದ್ರ ಇದಾಗಿದ್ದು, ಯೂರೋಪಿಯನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದೂರದರ್ಶಕದ ಮೂಲಕ ಆಕಾಶಕಾಯಗಳ ಚಲನೆ ಗುರುತಿಸುತ್ತಿರುವಾಗ ಆಕಸ್ಮಿಕವಾಗಿ ಈ ಕುಳಿ ಪತ್ತೆಯಾಗಿದೆ.
ವಿಜ್ಞಾನಿಗಳ ಪ್ರಕಾರ, ನಾಕ್ಷತ್ರಿಕ-ದ್ರವ್ಯರಾಶಿ ಕಪ್ಪು ಕುಳಿಯನ್ನು ಗುರುತಿಸಲಾಗಿದೆ ಏಕೆಂದರೆ ಅದು ಪರಿಭ್ರಮಿಸುವ ಸಹವರ್ತಿ ನಕ್ಷತ್ರವನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಚಲನೆ ಪತ್ತೆಯಾಗಿದೆ. ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ವೆರಿ ಲಾರ್ಜ್ ಟೆಲಿಸ್ಕೋಪ್ (ESO's VLT) ಮತ್ತು ಇತರ ಭೂ-ಆಧಾರಿತ ವೀಕ್ಷಣಾಲಯಗಳ ದತ್ತಾಂಶದ ಆಧಾರದ ಮೇಲೆ ಕಪ್ಪು ಕುಳಿಯ ದ್ರವ್ಯರಾಶಿಯನ್ನು ಪರಿಶೀಲಿಸಲು ಬಳಸಲಾಯಿತು, ಇದು ಸೂರ್ಯನ ಗುರುತ್ವಾಕರ್ಷಣಾ ಬಲಕ್ಕಿಂತಲೂ 33 ಪಟ್ಟು ಹೆಚ್ಚು ಪ್ರಭಾವ ಶಾಲಿಯಾಗಿದೆ ಎಂಬ ಅಂಶವನ್ನೂ ಸಹ ತಿಳಿಸಲಾಗಿದೆ.
ನಾಕ್ಷತ್ರಿಕ ಕಪ್ಪು ಕುಳಿಗಳು ಯಾವುವು?
ಬೃಹತ್ ನಕ್ಷತ್ರಗಳ ಕುಸಿತದಿಂದ ನಾಕ್ಷತ್ರಿಕ ಕಪ್ಪು ಕುಳಿಗಳು ರೂಪುಗೊಳ್ಳುತ್ತವೆ ಮತ್ತು ಕ್ಷೀರಪಥದಲ್ಲಿ (ಮಿಲ್ಕಿ ವೇ ಗ್ಯಾಲಕ್ಸಿ) ಹಿಂದೆ ಗುರುತಿಸಲಾದವುಗಳು ಸೂರ್ಯನಿಗಿಂತ ಸರಾಸರಿ 10 ಪಟ್ಟು ಬೃಹತ್ ಪ್ರಮಾಣದಲ್ಲಿರುತ್ತವೆ. ನಮ್ಮ ನಕ್ಷತ್ರಪುಂಜದಲ್ಲಿ ತಿಳಿದಿರುವ ಮುಂದಿನ ಅತ್ಯಂತ ಬೃಹತ್ ನಾಕ್ಷತ್ರಿಕ ಕಪ್ಪು ಕುಳಿ, ಸಿಗ್ನಸ್ X-1 ಇದು ಸೂರ್ಯನಿಗಿಂತ 21 ಪಟ್ಟು ಬಲಶಾಲಿಯಾಗಿತ್ತು.
ನಮ್ಮ ನಕ್ಷತ್ರಪುಂಜದ ಅತ್ಯಂತ ದೊಡ್ಡ ಕಪ್ಪು ಕುಳಿ ಯಾವುದು?
ಆದರೆ ಈಗ ಪತ್ತೆಯಾಗಿರುವ ಬ್ಲಾಕ್ ಹೋಲ್ ನಮ್ಮ ನಕ್ಷತ್ರಪುಂಜದಲ್ಲಿನ ಅತ್ಯಂತ ಬೃಹತ್ ಕಪ್ಪು ಕುಳಿ ಅಲ್ಲ. ಸ್ಯಾಗಿಟರಿಯಸ್ ಎ (Sagittarius A) ಎಂಬ ಕುಳಿಯು ಅತ್ಯಂತ ದೊಡ್ಡ ಗಾತ್ರದ್ದಾಗಿದೆ. ಇದು ನಮ್ಮ ಗ್ಯಾಲಕ್ಸಿಯ ಮಧ್ಯಭಾಗದಲ್ಲಿರುವ ಸೂಪರ್ ಮ್ಯಾಸಿವ್ ಕಪ್ಪು ರಂದ್ರ ಎಂದು ಗುರುತಿಸಲಾಗಿದೆ. ಇದು ನಮ್ಮ ಸೂರ್ಯನ ದ್ರವ್ಯರಾಶಿಗಿಂತಲೂ ಸುಮಾರು 4 ಮಿಲಿಯನ್ ಪಟ್ಟು ಹೆಚ್ಚು ಬಲವಾಗಿದೆ. ಅಂದರೆ ನಮ್ಮ ಭೂಮಿ ಈ ಕಪ್ಪು ಕುಳಿಯ ಮುಂದೆ ಸಣ್ಣ ಸಾವಿವೆ ಕಾಳಿನಂತೆ ಕಂಡುಬರುತ್ತದೆ.
ಭೂಮಿಯಿಂದ ಕೇವಲ 2,000 ಜ್ಯೋತಿರ್ ವರ್ಷಗಳ ದೂರದಲ್ಲಿದೆ
ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾನಿಲಯದ (TAU) ಸಂಶೋಧಕರು ಗಯಾ BH3 ಭೂಮಿಯಿಂದ ಕೇವಲ 2,000 ಬೆಳಕಿನ ವರ್ಷಗಳ ದೂರದಲ್ಲಿದೆ, ಇದು ಭೂಮಿಗೆ ತಿಳಿದಿರುವ ಎರಡನೇ ಅತ್ಯಂತ ಸಮೀಪವಿರುವ ಕಪ್ಪು ಕುಳಿಯಾಗಿದೆ ಎಂದು ವಿವರಿಸಿದ್ದಾರೆ. ಇಲ್ಲಿಯವರೆಗೆ ಪತ್ತೆಯಾಗದ, ಸಮೀಪದಲ್ಲಿ ಸುಪ್ತವಾಗಿರುವ ಹೆಚ್ಚಿನ ದ್ರವ್ಯರಾಶಿಯ ಕಪ್ಪು ಕುಳಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ, "ಎಂದು ಗಯಾ ಸಹಯೋಗದ ಸದಸ್ಯ ಪಾಸ್‌ಕ್ವೇಲ್ ಪನುಝೋ ಹೇಳುತ್ತಾರೆ. ಆದರೆ ಈ ಕಪ್ಪು ಕುಳಿಯು ಭೂಮಿಯೂ ಸೇವಿ ಯಾವುದೇ ಗ್ರಹಗಳಿಗೆ ಹಾನಿ ಮಾಡುವ ಸಂಭವವಿಲ್ಲ ಎಂದಿದ್ದಾರೆ.



Click it and Unblock the Notifications
