Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತನ್ನ ಬಾಲವನ್ನೇ ಕಚ್ಚಿ ಒದ್ದಾಡಿದ ತಲೆ ಇಲ್ಲದ ಹಾವು..! ವಿಡಿಯೋ ನೋಡಿ ಶಾಕ್ ಆದ ಮಂದಿ
ಇಂಟರ್‌ನೆಟ್ ಸಾಮ್ರಾಜ್ಯದಲ್ಲಿ ಕೆಲವೊಮ್ಮೆ ಎಷ್ಟು ವಿಚಿತ್ರ ಹಾಗೂ ನಂಬಲು ಸಾಧ್ಯವಿಲ್ಲದ ಘಟನೆಗಳು, ವಿಡಿಯೋಗಳು ನಮ್ಮ ಕಣ್ಣ ಮುಂದೆ ಬರುತ್ತವೆ ಅಂದ್ರೆ ನೋಡಿದವರು ಖಂಡಿತ ಶಾಕ್ ಆಗುತ್ತಾರೆ. ಕೆಲವೊಮ್ಮೆ ನಮ್ಮ ಕಣ್ಣನ್ನೇ ನಾವು ನಂಬದ ಪರಿಸ್ಥಿತಿಗೆ ಬಂದು ಬಿಡುತ್ತೇವೆ. ಅಂತಹ ಅಚ್ಚರಿಗಳು ನಮಗೆ ಎದುರಾಗುತ್ತವೆ.
ಇಂತಹ ಅಚ್ಚರಿಯ ವಿಡಿಯೋಗಳಲ್ಲಿ ಇಲ್ಲೊಂದು ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲೂ ಹಾವಿಗೆ ಸಂಬಂಧಿಸಿದ ಹತ್ತಾರು ವಿಡಿಯೋಗಳು ನಮಗೆ ನೋಡಲು ಸಿಗುತ್ತವೆ ಇಲ್ಲಿಯೂ ಕೂಡ ಇಂತಹದ್ದೆ ಹಾವಿನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಹಾವೊಂದರ ತಲೆ ಕತ್ತರಿಸಿ ಹೋಗಿದ್ದರು ಅದು ತನ್ನ ಬಾಲವನ್ನು ಕಚ್ಚುತ್ತಿರುವುದು ನೋಡಬಹುದು. ತನ್ನ ಬಾಲವನ್ನು ತಾನೆ ಕಚ್ಚಿದ್ದರಿಂದ ತಲೆಯೇ ಇಲ್ಲದ ಹಾವು ಒದ್ದಾಡುತ್ತಿರುವುದು ಸಹ ವಿಡಿಯೋದಲ್ಲಿ ಕಾಣಸಿಗುತ್ತಿದೆ. ಇದೊಂದು ವಿಚಿತ್ರ ಘಟನೆಯ ವಿಡಿಯೋ ಎಂದರು ತಪ್ಪಾಗಲಾರದು.
ಏಕೆಂದರೆ ಯಾವುದೇ ಜೀವಿಯಿಂದ ತಲೆ ಬೇರ್ಪಟ್ಟಾಗ ಬಹುಪಾಲು ಅದರ ಚಲನೆ ನಿಂತಿರುತ್ತದೆ. ಏಕೆಂದರೆ ಯಾವ ಜೀವಿಗೆ ಆದರು ತಲೆಯಲ್ಲಿಯೇ ಜೀವವಿರುತ್ತದೆ. ಆದರೆ ಇಲ್ಲಿ ಹಾವಿನ ತಲೆ ಕಟ್ಟಾದರೂ ಕೂಡ ಅದು ಒದ್ದಾಡುತ್ತಿರುವುದನ್ನು ನೋಡಬಹುದು, ಅದರ ಜೊತೆಗೆ ತನ್ನ ಬಾಲವನ್ನೇ ಅದು ಕಚ್ಚಲು ಮುಂದಾಗುತ್ತದೆ. ಈ ವೇಳೆ ಇಡೀ ಹಾವು ಒದ್ದಾಡುತ್ತಿದೆ.
ಈ ವಿಡಿಯೋವನ್ನ ಎಕ್ಸ್‌ನ ವೈಲ್ಡ್ ಲೈಫ್ ಅನ್ ಸೆನ್ಸರ್ಡ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬರೋಬ್ಬರಿ 39 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಲಕ್ಷ ಲಕ್ಷ ಮಂದಿ ಕಮೆಂಟ್ ಸಹ ಮಾಡಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಆಘಾತಕ್ಕೊಳಗಾಗಿದ್ದಾರೆ, ಇದು ಹೇಗೆ ಸಾಧ್ಯ ತಲೆ ಇಲ್ಲದ ಹಾವು ತನ್ನ ಬಾಲವನ್ನೆ ಕಚ್ಚಲು ಸಾಧ್ಯವಾಗುವುದು ಹೇಗೆ ಎಂಬ ಅಚ್ಚರಿಯ ಪ್ರಶ್ನೆ ಮುಂದಿಟ್ಟಿದ್ದಾರೆ.
ವಾಷಿಂಗ್ಟನ್, D.C ಯಲ್ಲಿರುವ ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯದ ಸರೀಸೃಪ ಡಿಸ್ಕವರಿ ಕೇಂದ್ರದ ಮುಖ್ಯಸ್ಥ ಜೇಮ್ಸ್ ಮರ್ಫಿ, ಈ ವಿಡಿಯೋ ಕುರಿತಂತೆ ಮಾತನಾಡಿದ್ದು, 'ಒಂದು ಹಾವು ತನ್ನ ತಲೆಯನ್ನು ಕಳೆದುಕೊಳ್ಳುವ ಹೊತ್ತಿಗೆ, ಅದು ಈಗಾಗಲೇ ಸತ್ತಿದೆ ಮತ್ತು ಅದರ ಮೂಲಭೂತ ದೈಹಿಕ ಕಾರ್ಯಗಳು ಸ್ಥಗಿತಗೊಂಡಿವೆ. ಆದಾಗ್ಯೂ, ಇನ್ನೂ ಇವೆ ಪ್ರತಿಫಲಿತ ಕ್ರಿಯೆಗಳು ಶಿರಚ್ಛೇದನದ ನಂತರವೂ ಕಚ್ಚುವುದನ್ನು ಮತ್ತು ವಿಷವನ್ನು ಚುಚ್ಚುವುದನ್ನು ಮುಂದುವರಿಸಬಹುದು' ಎಂದಿದ್ದಾರೆ.
ಅರ್ಕಾನ್ಸಾಸ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರದ ಪ್ರಾಧ್ಯಾಪಕ ಸ್ಟೀವನ್ ಬ್ಯೂಪ್ರೆ, ಸಹ ಈ ವಿಡಿಯೋ ಕುರಿತು ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಅವರ ಪ್ರಕಾರ 'ಹಾವುಗಳು ಸಾವಿನ ನಂತರವೂ ಚಲನೆಗಳ ಮಾಡುವ ಪ್ರಾಣಿಗಳು ಎಂದು ಹೆಸರುವಾಸಿಯಾಗಿವೆ. ಸಾವಿನ ನಂತರ ಹಲವಾರು ಗಂಟೆಗಳ ಕಾಲ ಹಾವಿನ ನರ ಕೋಶಗಳಲ್ಲಿ ಅಯಾನುಗಳು ಉಳಿಯುವುದರಿಂದ ಈ ಮರಣೋತ್ತರ ಚಲನೆಗಳು ಸಂಭವಿಸುತ್ತವೆ. ಸತ್ತ ಹಾವಿನ ನರಗಳನ್ನು ಉತ್ತೇಜಿಸುವುದು ಅಯಾನು ಚಾನಲ್‌ಗಳನ್ನು ತೆರೆಯುತ್ತದೆ, ವಿದ್ಯುತ್ ಪ್ರಚೋದನೆಗಳು ಕಚ್ಚುವಿಕೆಯಂತಹ ಪ್ರತಿಫಲಿತ ಕ್ರಿಯೆಗಳನ್ನು ಪ್ರಚೋದಿಸಲು ಅನುವು ಮಾಡಿಕೊಡುತ್ತದೆ' ಎಂದು ವಿವರಿಸಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಸಾವಿರಾರು ಮಂದಿ ಕಮೆಂಟ್‌ಗಳಲ್ಲಿ ಅಚ್ಚರಿ ಹೊರಹಾಕಿದ್ದಾರೆ. ಒಂದು ವೇಳೆ ಆ ತಲೆ ಮನುಷ್ಯರಿಗೆ ಕಚ್ಚಿದರೆ ಖಂಡಿತ ಸಾಯುತ್ತಾರೆ, ಅದು ಇನ್ನೂ ಸಹ ಸಂಪೂರ್ಣವಾಗಿ ಸತ್ತಿಲ್ಲ ಎಂದಿದ್ದಾರೆ. ಈ ಹಾವು ನೋಡಿದರೆ ಅದು ವಿಷಕಾರಿ ರಾಟೆಲ್‌ನಂತೆ ಕಾಣುತ್ತಿದೆ. ಇದು ಸಂಪೂರ್ಣವಾಗಿ ಸಾಯಲು ಗಂಟೆಗಳೇ ಬೇಕಾಗುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
