Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕುರೂಪಿ ನಾಯಿ ಸ್ಪರ್ಧೆಯಲ್ಲಿ 4.3 ಲಕ್ಷ ಗೆದ್ದ ಕೂದಲು ಇಲ್ಲದ ನಾಯಿ!!
ನೀವು ನಾಯಿಗಳ ಸ್ಪರ್ಧೆ ನೋಡಿರಬಹುದು. ಯಾವ ನಾಯಿ ಮಾಲಿಕರ ಮಾತನ್ನು ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುವ ಸ್ಪರ್ಧೆ ನೀವು ಕೂಡ ನೋಡಿರಬಹುದು. ಹಾಗೆ ನಾಯಿಗಳಿಗೂ ಸೌಂದರ್ಯ ಸ್ಪರ್ಧೆ ಏರ್ಪಡಿಸುವುದು ಕೂಡ ಇದೆ. ಹಾಗೆ ಯಾವ ನಾಯಿ ನೋಡಲು ಸುಂದರವಾಗಿದೆ ಎಂಬ ಆಧಾರದ ಮೇಲೆ ವಿಜೇತರನ್ನಾಗಿ ಘೋಷಿಸಿಸುವುದು ನೋಡಬಹುದು.
ಇನ್ನು ಅತ್ಯಂತ ವಿಕಾರವಾಗಿ ಕಾಣುವ ಹಾಗೆ ಕುರೂಪಿಯಾಗಿರುವ ನಾಯಿಗಳ ಸ್ಪರ್ಧೆ ಕೂಡ ನಡೆಯಲಿದೆ. ಇದರಲ್ಲಿ ಯಾವ ನಾಯಿ ಅತ್ಯಂತ ವಿರೂಪವಾಗಿ ಕಾಣಿಸಲಿದೆ ಎಂಬ ಆದಾರದ ಮೇಲೆ ವಿಜೇತ ನಾಯಿಯನ್ನು ಆರಿಸಲಾಗುತ್ತದೆ. ಹಾಗೆ ಈಗ ವಿಶ್ವದ ಅತ್ಯಂತ ಕುರೂಪಿ ನಾಯಿ ಸ್ಪರ್ಧೆಯಲ್ಲಿ ಈ ಕೂದಲು ಇಲ್ಲದ ನಾಯಿ ವಿಜಯ ಗಳಿಸಿದ.

ಕೂದಲು ಇಲ್ಲದೆ ವಿಕಾರವಾಗಿ ಕಾಣಿಸುತ್ತಿದ್ದ ಇಂಗ್ಲಿಷ್-ಫ್ರೆಂಚ್ ಬುಲ್ ಡಾಗ್ ಮೊದಲ ಸ್ಥಾನ ಗಿಟ್ಟಿಸಿದೆ. ಕಳೆದ ವಾರ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ರೋಸಾದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಒರೆಗಾನ್‌ನ ಯುಜೀನ್ ನಾಯಿ ಮೊದಲ ಸ್ಥಾನ ಪಡೆದಿದೆ. ಈ ನಾಯಿ ಮೈ ಮೇಲೇ ಒಂದೇ ಒಂದು ಕೂದಲು ಇಲ್ಲ. ಕೇವಲ ಚರ್ಮದ ಮುದ್ದೆಯಾಗಿ ವಿಕಾರವಾಗಿ ಕಾಣಿಸಲಿದೆ.
4.3 ಲಕ್ಷ ಗೆದ್ದ ಕುರೂಪಿ ನಾಯಿ
ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆದ್ದಿರುವ ನಾಯಿಗೆ ಬರೋಬ್ಬರಿ 4.3 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗಿದೆ. ಇದು ಹೆಣ್ಣು ನಾಯಿಯಾಗಿದ್ದ, ಜನಿಸುವಾಗಲೇ ಮೈ ಮೇಲೆ ಕೂದಲುಗಳಿಲ್ಲದೆ ವಿಕಾರವಾಗಿತ್ತು. ಹಾಗೆ ಇದು ಎಲ್ಲರ ಗಮನ ಸೆಳೆದ ನಾಯಿ ಆಗಿತ್ತು. ವರದಿಗಳ ಪ್ರಕಾರ ಈ ನಾಯಿಯ ಬ್ರೀಡ್ ಹೇಗೆ ಆರಂಭಗೊಂಡಿತು ಎಂಬುದು ತಿಳಿದಿಲ್ಲ. ಏಕೆಂದರೆ ಈ ನಾಯಿ ಮರಿಯಾಗಿದ್ದಾಗ ಲಾಸ್ ವೇಗಾಸ್‌ನ ಬ್ರೀಡರ್ ಮತ್ತು ಹೋರ್ಡರ್‌ನಿಂದ ರಕ್ಷಿಸಲಾಯಿತು ಮತ್ತು ಲುವೇಬಲ್ ಡಾಗ್ ರೆಸ್ಕ್ಯೂ ಮೂಲಕ ಒರೆಗಾನ್‌ಗೆ ಕರೆತರಲಾಯಿತು. ಮರಿ ಇದ್ದಾಗಲೇ ಕೂದಲು ಇಲ್ಲದೆ ಇದ್ದ ಕಾರಣ ಅದರ ಬ್ರೀಡಿಂಗ್‌ನಲ್ಲಾದ ಜೈವಿಕ ಬದಲಾವಣೆಯಂದಾಗಿ ಈ ಸಮಸ್ಯೆ ಉಂಟಾಗಿರಬಹುದು ಎಂದು ಅಂದಾಜಿಸಲಾಗಿತ್ತು.
ಬಳಿಕ ಈ ನಾಯಿಯನ್ನು ಮಾಲೀಕ ಶಾನನ್ ನೈಮನ್ ಎಂಬಾತ ದತ್ತು ಪಡೆದಿದ್ದ. ಆತನ ಬಳಿಯಲ್ಲೇ ಇರುವ ಈ ನಾಯಿ ಈಗ ಹಲವು ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದೆ. ಕೂದಲು ಇಲ್ಲದೆ ಮಾಂಸದ ಮುದ್ದೆಯಂತೆ ಕಾಣುವ ಈ ನಾಯಿ ಈಗ ವಿಶ್ವದ ಅತ್ಯಂತ ಕುರೂಪಿ ನಾಯಿ ಎನಿಸಿಕೊಂಡಿದೆ. ಹೀಗಾಗಿ ಸ್ಪರ್ಧೆಯಲ್ಲೂ ಜಯಗಳಿಸಿ ಮೊದಲ 4.3 ಲಕ್ಷ ರೂಪಾಯಿ ಗೆದ್ದುಕೊಂಡಿದೆ.
ಕಳೆದ ವರ್ಷ ವೈಲ್ಡ್ ಥಾಂಗ್ ಎಂಬ ಹಳೆಯ ಪೆಕಿಂಗೀಸ್ ಸ್ಪರ್ಧೆಯಲ್ಲೂ ಕೂಡ ವಿಜಯ ದಾಖಲಿಸಿತ್ತು. ಈ ಸ್ಪರ್ಧೆಯಲ್ಲಿಯೂ ಕೂಡ ವಿಕಾರವಾಗಿ ಕಾಣಿಸುವ ಹಲವು ನಾಯಿಗಳಿದ್ದವು. ಅದ್ರಲ್ಲೂ ಡೈಸಿ ಎಂಬ ಹಲ್ಲುಗಳಿಲ್ಲದ ಮೈ ತುಂಬ ಕೂದಲು ತುಂಬಿಕೊಂಡಿದ್ದ ನಾಯಿ ಎಲ್ಲರ ಗಮನ ಸೆಳೆದಿತ್ತು. ಅದು ಕುರುಡು ನಾಯಿಯಾಗಿತ್ತು. ಹೀಗಾಗಿ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಕೂಡ ಪಡೆದಿತ್ತು.
ವಿಶ್ವದ ಅತ್ಯಂತ ಕುರೂಪಿ ನಾಯಿ ಸ್ಪರ್ಧೆಯನ್ನು ಸುಮಾರು 50 ವರ್ಷಗಳಿಂದ ನಡೆಸಲಾಗುತ್ತಿದೆ. ಸುಂದರವಲ್ಲದ ನಾಯಿಗಳು ಭಾಗಿಯಾಗುವುದು ಮಾತ್ರವಲ್ಲ ಅವುಗಳ ವಿಶೇಷತೆಯನ್ನು ಕೂಡ ತೆರೆದಿಡುವ ಸ್ಪರ್ಧೆ ಇದಾಗಿರಲಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಹಲವು ದೇಶಗಳಿಂದಲೂ ನಾಯಿಗಳನ್ನು ಕರೆತರಲಾಗುತ್ತದೆ. ಈ ಬಾರಿ ಈ ಕೂದಲು ಇಲ್ಲದ ಪೆಟೂನಿಯಾ ಎಂಬ ನಾಯಿ ಗೆದ್ದುಕೊಂಡಿದೆ. ಬರೋಬ್ಬರಿ 4.3 ಲಕ್ಷ ರೂಪಾಯಿ ವಿಜೇತರಿಗೆ ಬಹುಮಾನವಾಗಿ ನೀಡಲಾಗಿದೆ. ವಿರೂಪವಾಗಿರುವ ನಾಯಿಗಳ ದ್ವೇಷ ಮಾಡುವ ಬದಲಾಗಿ ಅವುಗಳ ದತ್ತು ಪಡೆಯಲು ಪ್ರೇರೇಪಿಸುವುದು ಈ ಸ್ಪರ್ಧೆ ಆಯೋಜಿಸಿರುವ ಸಂಸ್ಥೆಯ ಉದ್ದೇಶವಾಗಿದೆಯಂತೆ



Click it and Unblock the Notifications
