Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದುಬಾರಿ ಹಣ ನೀಡಿ ಮರಳು ಆಮದು ಮಾಡುವ ಸೌದಿ ಅರೇಬಿಯಾ! ಮರಳುಗಾಡಿನಲ್ಲೂ ಬೇಡಿಕೆ ಏಕೆ?
ಸೌದಿ ಅರೇಬಿಯಾ ಅಂದ್ರೆ ನಿಮಗೆ ವಿಶಾಲ ಮರುಭೂಮಿ ನೆನಪಾಗುತ್ತದೆ. ಒಂದಿಷ್ಟು ಪ್ರದೇಶ ನಗರ ಹಾಗೂ ಕುರುಚಲು ಹಸಿರು ನೋಡಲು ಸಿಕ್ಕರೆ ಉಳಿದೆಲ್ಲಾ ಕಡೆ ನೀವು ಕಣ್ಣು ಹಾಯಿಸಿದಷ್ಟು ದೂರ ಬರೀ ಮರಳು ಕಾಣಿಸುತ್ತದೆ. ಅಲ್ಲಿ ಮಳೆ ಬಹಳ ಕಡಿಮೆ ಬೀಳುವ ಪ್ರದೇಶಗಳಿವೆ. ಹಾಗೆ ಬೇಸಿಗೆಯಲ್ಲಿ ತಾಪಮಾನ 45ರಿಂದ 50 ಡಿಗ್ರಿಯಷ್ಟು ಏರಿಕೆಯಾಗುವುದು ನೋಡಬಹುದು.
ಹಾಗೆ ಅಲ್ಲಿ ಮರಳು ತುಂಬಿದ ಬಿರುಗಾಳಿ ಎದುರಾಗುವುದು ಕೂಡ ಸರ್ವೇ ಸಾಮಾನ್ಯ. ಹಾಗೆ ಅಲ್ಲಿ ನೀವು ನೋಡಿದಷ್ಟು ದೂರ ಮರಳು ಕಾಣಸಿಕ್ಕರೂ ಸೌದಿ ಅರೇಬಿಯಾ ಮರಳನ್ನು ಆಮದು ಮಾಡಿಕೊಳ್ಳುತ್ತೆ. ಹೌದು ದುಬಾರಿ ಬೆಲೆ ನೀಡಿ ಬೇರೆ ದೇಶಗಳಿಂದ ಅಲ್ಲಿಗೆ ಮರಳನ್ನು ಆಮದು ಮಾಡಿಕೊಳ್ಳುವ ಅಚ್ಚರಿ ವಿಚಾರ ನಿಮಗೆ ತಿಳಿದಿದ್ಯಾ?

ಮರಳುಗಾಡಿನ ಈ ನಾಡು ಮರಳನ್ನೇ ಆಮದು ಮಾಡಿಕೊಳ್ಳುವುದು ವಿಪರ್ಯಾಸ ಎನಿಸಿದರು ಅದು ನೈಜ ಸಂಗತಿಯಾಗಿದೆ. ಸೌದಿ ಅರೇಬಿಯಾವು ಆಸ್ಟ್ರೇಲಿಯಾ, ಚೀನಾ, ಬೆಲ್ಜಿಯಂ ಸೇರಿ ಸುತ್ತ ಮುತ್ತಲಿನ ದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾದ್ರೆ ಸೌದಿ ಅರೇಬಿಯಾದಲ್ಲಿ ಮರಳಿಗೆ ಬೇಡಿಕೆ ಏಕಿದೆ? ಅಲ್ಲಿನ ಮರಳು ಏಕೆ ಬಳಸುತ್ತಿಲ್ಲ ಎಂಬ ಮಾಹಿತಿ ನೀವು ಕೂಡ ತಿಳಿದುಕೊಳ್ಳಿ.
ಸೌದಿ ಅರೇಬಿಯಾದಲ್ಲಿ ಕಾಲು ಇಟ್ಟಲೆಲ್ಲಾ ನಿಮಗೆ ಮರಳು ಸಿಗುತ್ತದೆ. ಆದ್ರೆ ಈ ಮರಳು ಬಳಕೆ ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಸಮುದ್ರ ದಡದಲ್ಲಿ ಸಿಗುವ ಮರಳು ಕೂಡ ಹೇಗೆ ಬಳಕೆಗೆ ಯೋಗ್ಯವಾಗಿ ಉಳಿದಿಲ್ಲವೋ ಹಾಗೆಯೇ ಸೌದಿ ಅರೇಬಿಯಾದಲ್ಲಿ ದೊರೆಯುವ ಮರಳು ಕೂಡ ದೊಡ್ಡ ಮಟ್ಟದ ನಿರ್ಮಾಣ ಕಾರ್ಯಗಳಿಗೆ ಯೋಗ್ಯವಾಗಿ ಉಳಿದಿಲ್ಲ.
ಈ ಪ್ರದೇಶದಲ್ಲಿ ಕೆಲವೇ ಕೆಲವು ಭಾಗದಲ್ಲಿ ಮಾತ್ರವೆ ಬಳಕೆ ಯೋಗ್ಯ ಮರಳು ಎಂಬುದಾಗಿ ಪರಿವರ್ತಿಸಲಾದ ಮರಳನ್ನು ಬಳಸಲಾಗುತ್ತದೆ. ಅದನ್ನು ಹೊರತುಪಡಿಸಿ ಇಡೀ ದೇಶ ಈಗ ಮರಳು ಆಮದು ಮಾಡಿಕೊಳ್ಳುತ್ತಿದೆ. ಹಾಗೆ ವಿಷನ್ 2030 ಯೋಜನೆ ಘೋಷಣೆಯಾದ ಬಳಿಕ ದೇಶದಾದ್ಯಂತ ಮರಳು ಬೇಡಿಕೆ ಹೆಚ್ಚಾಗಿದೆ. ಈ ನಿರ್ಮಾಣ ಕಾಮಗಾರಿಗಾಗಿ ಅತೀ ಹೆಚ್ಚು ಮರಳನ್ನು ದೇಶ ಈಗ ಆಮದು ಮಾಡಿಕೊಳ್ಳುತ್ತಿದೆ.
ಮರಭೂಮಿ ಮರಳು ಏಕೆ ನಿರ್ಮಾಣ ಕಾರ್ಯಗಳಿಗೆ ಬಳಸಲು ಆಗೋದಿಲ್ಲ?
ಸೌದಿ ಅರೇಬಿಯಾದ ಬಹುತೇಕ ಪ್ರದೇಶ ಮರಳಿನಿಂದಲೇ ಆವೃತವಾಗಿದೆ. ಆದ್ರೆ ಇಲ್ಲಿನ ಮರಳು ಬಳಕೆ ಯೋಗ್ಯವಾಗಿ ಉಳಿದಿಲ್ಲ. ಈ ಮರಳುಗಳು ಗಾಳಿಯ ವೇಗಕ್ಕೆ ಸಿಲುಕಿ ಸವೆದಿರುತ್ತದೆ. ಬಹಳ ನಯವಾಗಿರುತ್ತದೆ. ಹಾಗೆ ನುಣುಪಾದ ಈ ಮರಳುಗಳನ್ನು ಯಾವುದೇ ಕೆಲಸಗಳಿಗೆ ಬಳಸಲು ಆಗುವುದಿಲ್ಲ. ಸಿಮೆಂಟ್‌ನೊಂದಿಗೆ ಬೆರೆತಾಗ ಇದು ಪೌಡರ್‌ನಂತಹ ರಚನೆಗೆ ತಿರುಗುತ್ತವೆ. ಹಾಗೆ ದುಂಡಾಗಿರುವ ಕಾರಣ ಇದು ಕಟ್ಟಡವನ್ನು ಬಲಶಾಲಿಯಾಗಿಸುವುದಿಲ್ಲ. ಈ ಮರಳಿನ ಕಣಗಳು ಹೆಚ್ಚು ಶಕ್ತಿಶಾಲಿಯಾಗಿರುವುದಿಲ್ಲ.
ಮರಳಿರುವ ದೇಶಗಳೇ ಶ್ರೀಮಂತ
ಸದ್ಯ ಸೌದಿ ಅರೇಬಿಯಾ ದುಬಾರಿ ಬೆಲೆ ನೀಡಿ ಮರಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೆ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಆಸ್ಟ್ರೇಲಿಯಾ ಮರಳು ರಫ್ತು ಮಾಡುತ್ತಿದೆ. ದೇಶವು 2023 ರಲ್ಲಿ ಒಟ್ಟು $273 ಮಿಲಿಯನ್ ಮೌಲ್ಯದ ಮರಳನ್ನು ರಫ್ತು ಮಾಡಿದೆ. ಇದು ಜಾಗತಿಕವಾಗಿ ಎರಡನೇ ಅತಿದೊಡ್ಡ ಮರಳಿನ ರಫ್ತುದಾರ ರಾಷ್ಟ್ರವಾಗಿದೆ. ಹಾಗೆ ಸೌದಿ ಅರೇಬಿಯಾ ಆಸ್ಟ್ರೇಲಿಯಾದಿಂದ ಮಾತ್ರವೇ ಬರೋಬ್ಬರಿ $140,000 ಮೌಲ್ಯದ ಮರಳನ್ನ ಒಂದೇ ವರ್ಷದಲ್ಲಿ ಆಮದು ಮಾಡಿಕೊಂಡಿದೆ.
ಸೌದಿ ಅರೇಬಿಯಾ ಮಾತ್ರವಲ್ಲ, ಕತಾರ್, ಯುಎಇ, ದುಬೈ, ಅಬುಧಾಬಿ ಸೇರಿದಂತೆ ಹಲವು ದೇಶಗಳು ಮರಳುನ್ನು ಆಮದು ಮಾಡಿಕೊಳ್ಳುತ್ತಿವೆ. ಈ ನಗರಗಳಲ್ಲಿ ಗಗನ ಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಾದಂತೆ ಅಲ್ಲಿ ಮರಳಿನ ಬೇಡಿಕೆ ಕೂಡ ಹೆಚ್ಛಾಗಿದೆ.



Click it and Unblock the Notifications


