Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅನಾಥ ನಾಯಿಮರಿಗಳಿಗೆ ಹಾಲುಣಿಸುವ ಗೋಮಾತೆ..!! ಅಚ್ಚರಿ ಹುಟ್ಟಿಸುವ ವಿಡಿಯೋ
'ಪ್ರಾಣಿಗಳೇ ಗುಣದಲಿ ಮೇಲು ಮಾನವರಿಗಿಂತ ಮಿಗಿಲು' ಎಂಬ ನುಡಿಯನ್ನ ನಾವು ಕೇಳಿದ್ದೇವೆ. ಇದರ ಅರ್ಥ ಮಾನವರಿಗಿಂತ ಗುಣದಲ್ಲಿ ಪ್ರಾಣಿಗಳೇ ಶ್ರೇಷ್ಠವಂತೆ. ಯಾಕಂದ್ರೆ ಮಾನವ ಜಾರಿ, ಧರ್ಮ, ಕುಲ, ಗೋತ್ರ, ಬಣ್ಣ ಹೀಗೆ ಒಂದಲ್ಲಾ ಒಂದು ಕಟ್ಟುಪಾಡುಗಳ ಹಿಂದೆ ಬಿದ್ದು ತನ್ನ ತನ ಮರೆತು ಇಂದು ಆತ ಸ್ವಾರ್ಥಿಯಾಗಿ ಮೆರೆಯುತ್ತಿದ್ದಾನೆ.
ಆತ ಕರುಣೆ, ದಯೆ, ಮಾನವಿಯ ಮೌಲ್ಯಗಳ ಮರೆತು ಜಗತ್ತನ್ನೇ ತನ್ನ ಆಸೆಗೆ ಬಲಿ ಕೊಡುತ್ತಿದ್ದಾನೆ. ಎಲ್ಲವೂ ಹಣಕ್ಕಾಗಿ ಹಣದಿಂದಲೇ ಎಲ್ಲಾ ಎಂಬುದನ್ನೇ ಆತ ಮೌಲ್ಯ ಎಂದುಕೊಂಡಿದ್ದಾನೆ. ಹೀಗಾಗಿ ಈ ಮಾನವ ಜನ್ಮವೇ ಅತ್ಯಂತ ಕೆಟ್ಟದ್ದು, ಕಲಿಗಾಲದಲ್ಲಿ ಆತ ಅಧರ್ಮವನ್ನೇ ಪಾಲಿಸುತ್ತಿದ್ದಾನೆ.

ಆದರೆ ಪ್ರಾಣಿಗಳು ಇದೆಲ್ಲಾ ಗುಣಗಳಿಗಿಂತ ಮೇಲು. ಆವು ಮಾನವೀಯ ಗುಣಗಳಿಗೆ ಈಗ ಮೂರ್ತಿಯಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋದಲ್ಲಿ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಗೋಮಾತೆಯನ್ನು ಮುಕ್ಕೋಟಿ ದೇವತೆಗಳ ಆಶ್ರಯ ನೀಡುವ ಪ್ರಾಣಿ ಎಂದು ಪೂಜಿಸಲಾಗುತ್ತದೆ.
ಈಗ ನಾಯಿ ಮರಿಗಳಿಗೆ ಹಸು ಹಾಲುಣಿಸುತ್ತಿದೆ, ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೆ ಪ್ರಾಣಿಗಳ ಮಾನವೀಯ ಗುಣಗಳಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಇದೆಯೇ ಎಂದು ಜನರು ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ನಾಯಿ ಮರಿಗಳ ತಾಯಿ ಅಪಘಾತದಲ್ಲಿ ಮೃತಪಟ್ಟಿದ್ದು, ಹಾಲಿಲ್ಲದೆ ಪರದಾಡುತ್ತಿದ್ದ ನಾಯಿ ಮರಿಗಳಿಗೆ ಈ ಹಸು ಆಶ್ರಯ ನೀಡಿದೆ.
ಈ ಮಾತೃಪ್ರೇಮ ಕಂಡ ಜನರು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ. ಬೀದಿ ನಾಯಿಗಳಿಗೆ ಒಂದು ಹನಿ ಹಾಲು ಹಾಕದೆ, ಅವುಗಳಿಗೆ ಒಂಚೂರು ಆಹಾರ ನೀಡದೆ ಇರುವ ಜನರ ನಡುವೆ ಈ ಮೂಕ ಪ್ರಾಣಿಯ ಮಾತೃ ಪ್ರೇಮ ಎಲ್ಲರ ಮೆಚ್ಚುಗೆ ಗಳಿಸಿದೆ.
ಈ ಅಚ್ಚರಿ ಹುಟ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ನಾಯಿ ಮೃತಪಟ್ಟಿತ್ತು. ಆದರೆ ರಸ್ತೆ ಬದಿ ಇದ್ದ ಹಸು ಅಲ್ಲಿಯೇ ಅಡ್ಡಾಡುತ್ತಿದ್ದ ಮರಿಗಳ ನೋಡಿ ಅವುಗಳಿಗೆ ಹಾಲು ನೀಡುತ್ತಿದೆ. ಹೊಟ್ಟೆ ಹಸಿದಿದ್ದ ನಾಯಿ ಮರಿಗಳು ಹಾಲು ಕುಡಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು @Family_viralvid ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿವೆ. ಜೊತೆಗೆ ಈ ವಿಡಿಯೋ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ವಿಡಿಯೋ ನೋಡಿದ ಸಾವಿರಾರು ಮಂದಿ ಕಮೆಂಟ್ ನಲ್ಲಿ ತಮ್ಮ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಮಾನವರಲ್ಲಿ ಇರುವಂತೆ ದತ್ತು ಪ್ರಕ್ರಿಯೆ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಆದರೆ ಪ್ರಾಣಿಗಳಲ್ಲಿ ಕೆಲವೊಮ್ಮೆ ವಿಚಿತ್ರ ರೀತಿಯ ದತ್ತು ನೋಡಬಹುದು. ಮಾಂಸಹಾರಿ ಪ್ರಾಣಿಗಳು ಸಸ್ಯಹಾರಿ ಪ್ರಾಣಿಗಳ ದತ್ತು ಪಡೆಯುವುದು ಸಹ ಇದೆ. ಅದೇ ರೀತಿ ಇಲ್ಲಿ ಹಸು ನಾಯಿ ಮರಿಗಳ ದತ್ತು ಪಡೆದಿದೆ.
ಈ ವಿಡಿಯೋ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಹೀಗಾಗಿ ಗೋಮಾತೆಯನ್ನ ತಾಯಿ ಸ್ವರೂಪಿ ಎನ್ನುತ್ತಾರೆ. ನಾಯಿ ಮರಿಗಳ ಪಾಲಿಗೆ ಹಸು ಈಗ ತಾಯಿಯಾಗಿದೆ. ಸಹೃದಯಿ ಗೋಮಾತೆಯ ಕರುಣೆ ಇನ್ನು ಯಾವ ಪ್ರಾಣಿಯಲ್ಲು ನೋಡಲು ಸಾಧ್ಯವಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.



Click it and Unblock the Notifications
