Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಪಾಕಿಸ್ತಾನದ ಕರಾಚಿ ಬೀದಿಯಲ್ಲೂ ರಾರಾಜಿಸುವ ಗಣಪ..! ವಿಡಿಯೋ ನೋಡಿ!
ಭಾರತದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯುತ್ತಿದೆ. ಹಳ್ಳಿ ಹಳ್ಳಿಯಲ್ಲೂ ಗಣೇಶನ ಜಪವಾಗುತ್ತಿದೆ. ಹಾಗೆ ದೇಶದ ಎಲ್ಲಾ ಭಾಗದಲ್ಲೂ ಗಣೇಶನ ರಾಜಬೀದಿ ಉತ್ಸವವನ್ನು ನೀವು ಸಹ ನೋಡಬಹುದು. ಹಾಗೆ ಗಣೇಶನಿಗೆ ವಿಶ್ವದ ಹಲವು ದೇಶದಲ್ಲಿ ದೇವಾಲಯಗಳಿವೆ. ಕೇವಲ ಹಿಂದೂ ದೇಶವಲ್ಲ ಬೇರೆ ಬೇರೆ ದೇಶದಲ್ಲೂ ದೇವಾಲಯ ಇರುವುದು ನೋಡಬಹುದು.
ಹಾಗೆ ಸಂಪೂರ್ಣ ಮುಸ್ಲಿ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಗಣೇಶನ ಹಬ್ಬ ನಡೆಯೋದು ನಿಮಗೆ ಗೊತ್ತಾ?. ಅಲ್ಲಿಯೂ ವಿಜೃಂಭಣೆಯಿಂದ ಗಣೇಶನ ಮೆರವಣಿಗೆ ನಡೆಯುತ್ತಿತ್ತು ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಹೌದು ಕರಾಚಿಯ ಬೀದಿಯಲ್ಲೂ ಗಣೇಶೋತ್ಸವ ನಡೆಯುತ್ತಿತ್ತು. 2023 ರಲ್ಲಿ ಕರಾಚಿಯ ಬೀದಿಗಳಲ್ಲಿ ಉತ್ಸಾಹಭರಿತ ಗಣೇಶ ಚತುರ್ಥಿ ಆಚರಣೆಗಳು ನಡೆಯುತ್ತಿದ್ದವು.

ಅಲ್ಲಿನ ಜನರು ಕೂಡ ಡೋಲ್‌ಗಳ ಬಡಿತಕ್ಕೆ ಹೆಜ್ಜೆ ಹಾಕುವುದು, ಗಣಪತಿ ಬಪ್ಪ ಮೋರಯ ಪಠಣಗಳ ಮಾಡುವುದು ಕೂಡ ನೋಡಬಹುದು. ಇಂತಹದೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನದಲ್ಲೂ ಅದ್ದೂರಿ ಗಣೇಶೋತ್ಸವ ಎಂಬ ಈ ವಿಡಿಯೋದಲ್ಲಿ ನೂರಾರು ಮಂದಿ ಕೇಸರಿ ಬಾವುಟ ಹಿಡಿದು ಸಾಗುತ್ತಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮರಾಠ ಸಮುದಾಯವು ಇಲ್ಲಿ ಗಣೇಶೋತ್ಸವ ಆರಂಭಿಸಿತು ಎಂಬುದಾಗಿ ಹೇಳಲಾಗಿದೆ. ವಿಡಿಯೋದಲ್ಲಿ ವಿನಾಯಕನ ನಿಮಜ್ಜನ ಸಂಭ್ರಮ ನೋಡಬಹುದು. ಹಾಗೆ ಪಾಕ್ ಪ್ರಾಂತ್ಯದಲ್ಲಿನ ಪಂಜಾಬ್ ಹಾಗೂ ಗಡಿ ಭಾಗದಲ್ಲಿ ಗಣೇಶೋತ್ಸವ ನಡೆಯಲಿದೆ.
ಇನ್ನು ಪಾಕಿಸ್ತಾನ ಮಾತ್ರವಲ್ಲ ಹಲವು ದೇಶಗಳಲ್ಲಿ ಗಣೇಶತ್ಸವ ವಿಜೃಂಭಣೆಯಿಂದ ನಡೆಯುವುದು ನೋಡಬಹುದು. ನೇಪಾಳದಲ್ಲಿ ಗಣೇಶೋತ್ಸವದ ಭಾರತದಷ್ಟೇ ಸಂಭ್ರಮದಿಂದ ನಡೆಯುತ್ತದೆ. ಇದನ್ನು ಮಾರು ಗಣೇಶ ಮತ್ತು ಸೂರ್ಯ ವಿನಾಯಕನಂತಹ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ನೇಪಾಳದ ಹಿಂದೂ ಕುಟುಂಬಗಳನ್ನು ಇದನ್ನು ಮನೆಯಲ್ಲಿಯೂ ಆಚರಿಸುತ್ತಾರೆ.
ಹಾಗೆ ಇಂಡೋನೇಷ್ಯಾದಲ್ಲಿ ಕೂಡ ಗಣೇಶೋತ್ಸವ ಆಚರಿಸಲ್ಪಡುತ್ತದೆ. ಇಂಡೋನೇಷ್ಯಾದ ಅನೇಕ ದೇವಾಲಯಗಳು ಗಣೇಶ ಚತುರ್ಥಿಯ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸುತ್ತವೆ, ಇದು ಪ್ರಾಚೀನ ಬಾಲಿನೀಸ್ ಪದ್ಧತಿಗಳನ್ನು ಭಾರತೀಯ ಆಚರಣೆಗಳೊಂದಿಗೆ ಸಂಯೋಜಿಸುತ್ತದೆ. ಹಾಗೆ ಥೈಲ್ಯಾಂಡ್ ದೇಶದಲ್ಲೂ ಕೂಡ ವಿನಾಯಕನಿಗೆ ಪೂಜೆ ಇದೆ. ಗಣೇಶನನ್ನು ಅಲ್ಲಿ ಫ್ರಾ ಫಿಕಾನೆಟ್ ಎಂದು ಪೂಜಿಸಲಾಗುತ್ತದೆ. ಇದು ಜನರಿಗೆ ವ್ಯವಹಾರಿಕ ಲಾಭಕ್ಕೆ ಕಾರಣವಾಗುವ ದೇವರು ಎಂದು ನಂಬಲಾಗಿದೆ. ಗಣೇಶ ಚತುರ್ಥಿಯಂದು ಇಲ್ಲಿನ ವಾಟ್ ಫ್ರಾ ಶ್ರೀ ಉಮಾದೇವಿಯಂತಹ ದೇವಾಲಯಗಳು ವಿಸ್ತಾರವಾದ ಉತ್ಸವಗಳನ್ನು ನಡೆಸುತ್ತವೆ.
ಹಾಗೆ ಜಪಾನ್ ದೇಶದಲ್ಲಿ ಗಣೇಶನನ್ನು ಕಾಂಗಿನೆಟ್ ರೂಪದಲ್ಲಿ ಪೂಜಿಸಲಾಗುತ್ತದೆ. ಗಣೇಶ ಚತುರ್ಥಿಯ ಆಚರಣೆಯನ್ನು ಟೋಕಿಯೊದ ಮತ್ಸುಚಿಯಾಮಾ ಶೋಡೆನ್‌ನಲ್ಲಿಯೂ ಆಚರಿಸಲಾಗುತ್ತದೆ. ಅಲ್ಲಿನ ಹಿಂದು ದೇವಾಲಯದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆಯಾಗುವುದು ನೋಡಬಹುದು.
ಕಾಂಬೋಡಿಯಾದಲ್ಲಿ ಗಣೇಶನ ಆರಾಧನೆಯನ್ನು ಖಮೇರ್ ಸಾಮ್ರಾಜ್ಯದಿಂದಲೂ ಗುರುತಿಸಬಹುದು, ಅಲ್ಲಿ ದೇವತೆಯ ಕೆತ್ತನೆಗಳು ಇನ್ನೂ ಅಂಕೋರ್ ವಾಟ್ ನಂತಹ ದೇವಾಲಯಗಳನ್ನು ಅಲಂಕರಿಸುತ್ತವೆ. ಕಾಂಬೋಡಿಯನ್ ಹಿಂದೂಗಳು ಗಣೇಶ ಚತುರ್ಥಿಯನ್ನು ಪ್ರಾರ್ಥನೆಗಳು ಮತ್ತು ಅರ್ಪಣೆಗಳೊಂದಿಗೆ ಆಚರಿಸುತ್ತಾರೆ, ಶತಮಾನಗಳಿಂದ ಇರುವ ಸಂಪ್ರದಾಯವನ್ನು ಜೀವಂತವಾಗಿರಿಸುತ್ತಾರೆ.
ಹಿಂದೂ ದೇವಾಲಯಗಳ ಹೊಂದಿರುವ ಮಲೇಷ್ಯಾದಲ್ಲೂ ಕೂಡ ಗಣೇಶನಿಗೆ ವಿಶೇಷ ಪೂಜೆ ಇದೆ. ಇಲ್ಲಿನ ಕೌಲಾಲಂಪುರದ ಶ್ರೀ ಸಿದ್ದಿ ವಿನಾಯಕನಂತಹ ದೇವಾಲಯಗಳು ಸಮುದಾಯ ಪ್ರಾರ್ಥನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಊಟ, ಪ್ರಸಾದ ವಿನಿಯೋಗ ಒಳಗೊಂಡ ಬಹು-ದಿನದ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.



Click it and Unblock the Notifications