Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮಲಗಿದ್ದವನ ಚಡ್ಡಿಯೊಳಗೆ ಅವಿತಿತ್ತು ನಾಗರಹಾವು..! ಆಮೇಲೆ ಆಗಿದ್ದೇನು ನೋಡಿ!
ಮಳೆಗಾಲದಲ್ಲಿ ಹಾವುಗಳು ಮನೆಯ ಸುತ್ತ ಕಾಣಿಸಿಕೊಳ್ಳುವುದು, ಮನೆಯೊಳಗೆ ಬರುವುದು ನಡೆದೇ ಇರುತ್ತದೆ. ಏಕೆಂದರೆ ಮಳೆಗಾಲದಲ್ಲಿ ಹಾವುಗಳ ಓಡಾಟ ಹೆಚ್ಚಾಗಿರುತ್ತದೆ. ಅದರಲ್ಲು ಮಳೆಯ ನಡುವೆ ಬಿಸಿಲು ಬರಲು ಆರಂಭಿಸಿದರಂತು ಹಾವುಗಳು ಎಲ್ಲಿ ಕಾಣಿಸಿಕೊಳ್ಳುತ್ತವೆ ಅನ್ನೋದನ್ನ ಯೋಚಿಸುವುದು ಸಹ ಕಷ್ಟವಾಗುತ್ತದೆ.
ಅದರಲ್ಲೂ ಹಾವುಗಳು ಹೆಲ್ಮೆಟ್ ಒಳಗೆ, ಶೂಗಳ ಒಳಗೆ, ಬೈಕ್‌ನಲ್ಲಿ, ಶಾಲಾ ಬ್ಯಾಗ್‌ನಲ್ಲಿ ಹೀಗೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಅವಿತಿರುತ್ತವೆ. ಇವು ಹಲವು ಬಾರಿ ಪ್ರಾಣಕ್ಕೆ ಆಪತ್ತು ತಂದ ಉದಾಹರಣೆ ಸಹ ಇದೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಹಾವೊಂದು ಯುವಕನ ಜೀವನಕ್ಕೆ ಆಪತ್ತು ತಂದಿದ್ದ ಘಟನೆ ನಡೆದಿದೆ.

ಥೈಲ್ಯಾಂಡ್‌ನ ವ್ಯಕ್ತಿಯೊಬ್ಬ ಮಲಗಿದ್ದರೆ ಆತನ ಚಡ್ಡಿ ಒಳಗೆ ಹಾವು ಸೇರಿಕೊಂಡ ಘಟನೆ ನಡೆದಿದೆ. ಈ ವಿಡಿಯೋ ಎಷ್ಟೊಂದು ಭಯಾನಕವಾಗಿದೆ ಅಂದ್ರೆ ನೋಡಿದವರು ಅಕ್ಷರಶಃ ಶಾಕ್ ಆಗಿದ್ದಾರೆ. ಆತ ಬೆಡ್ ಮೇಲೆ ಮಲಗಿ ನಿದ್ರಿಸುವಾಗ ಹಾವು ಆತನ ಚಡ್ಡಿಯೊಳಗೆ ಸೇರಿಕೊಂಡಿದೆ.
ಆತ ಗಾಢ ನಿದ್ರೆಯಲ್ಲಿದ್ದಾಗ ಹಾವು ಎಲ್ಲಿಂದಲೋ ಬಂದು ಆತನ ಚಡ್ಡಿಯೊಳಗೆ ಸೇರಿಕೊಂಡಿದೆ. ಆದ್ರೆ ಆತ ಅಲುಗಾಡದೆ ಮಲಗಿದ್ದರಿಂದ ಆತನಿಗೆ ಹಾವು ಕಚ್ಚಿಲ್ಲ. ಆದರೆ ಆತ ಎಚ್ಚರಗೊಂಡಾಗ ಚಡ್ಡಿಯಲ್ಲಿ ಹಾವು ಸೇರಿವುದು ಅರಿವಿಗೆ ಬಂದಿದೆ. ಈ ವೇಳೆ ಆತ ಸ್ವಲ್ಪವು ಅಲಗಾಡದೆ ಅದೇ ಭಂಗಿಯಲ್ಲಿಯೇ ಮಲಗಿದ್ದಾನೆ. ಏಕೆಂದರೆ ಆತ ಸ್ವಲ್ಪ ಅಲುಗಾಡಿದರು ಹಾವು ಕಚ್ಚುವ ಸಂಭವವಿತ್ತು. ಹೀಗಾಗಿ ಆತ ಮಲಗಿದ್ದಲ್ಲೇ ಕಲ್ಲಾಗಿದ್ದಾನೆ.
ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಜನರು ಶಾಕ್ ಆಗಿದ್ದಾರೆ. ಥಾಯ್ಲೆಂಡ್‌ನ ರೇಯಾಂಗ್‌ನಲ್ಲಿ ಈ ಘಟನೆ ನಡೆದಿದೆ. ಆತ ರಾತ್ರಿ ಮಲಗಿದ್ದ ವೇಳೆ ಚಡ್ಡಿಯೊಳಗೆ ಸೇರಿದೆ ಆದರೆ ಆತನಿಗೆ ಎಚ್ಚರವಾಘಿ ತನ್ನ ಸ್ನೇಹಿತನಿಗೆ ಸನ್ನೆಯ ಮೂಲಕ ತಿಳಿಸಿದ್ದಾನೆ. ಚಡ್ಡಿಯಲ್ಲಿ ಹಾವಿರುವ ಕುರಿತು ಆತನ ಸ್ನೇಹಿತನಿಗೆ ತಿಳಿಸಿದಾಗ ಆತ ಉರಗ ರಕ್ಷಕರಿಗೆ ಮಾಹಿತಿ ತಿಳಿಸಿದ್ದಾನೆ.
ಆತ ಎಚ್ಚರಗೊಂಡಾಗ ಚಡ್ಡಿಯಲ್ಲಿ ಚಲನೆ ಗಮನಿಸಿದ್ದಾನೆ. ಆದರೆ ಇದು ತಿಳಿಯದೆ ಆತ ಸ್ವಲ್ಪ ಅಲುಗಾಡಿದ್ದರು ಹಾವು ಕಚ್ಚುತ್ತಿತ್ತು, ಇದರಿಂದ ಆತನ ಜೀವಕ್ಕೆ ಹಾನಿಯಾಗುತ್ತಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತು ಹಾವು ಆತನ ಮೇಲೆ ದಾಳಿ ಮಾಡದೆ ಚಡ್ಡಿಯೊಳಗೆ ಅವಿತು ಕುಳಿತಿದೆ. ಬಳಿಕ ಉರಗ ತಜ್ಞರು ಧಾವಿಸಿ ಹಾವು ಹಿಡಿದು ಆತನ ಜೀವ ಉಳಿಸಿದ್ದಾರೆ.
ಉರಗ ತಜ್ಞ ಆ ಹಾವನ್ನು ಹೊರಗೆ ತೆಗೆದ ಬಳಿಕ ಅದು ನಾಗರಹಾವು ಎಂದು ತಿಳಿದುಬಂದಿದೆ. ಈ ವೇಳೆ ಯುವಕ ಶಾಕ್‌ಗೆ ಒಳಗಾಗಿದ್ದಾನೆ. ಈ ನಗರಹಾವು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಮಾಡಲು ಆತ ಹುಡುಕಾಡಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರು ಮಳೆಗಾಲದ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.
ಈ ವಿಡಿಯೋ ಈಗ 50 ಲಕ್ಷ ವೀಕ್ಷಣೆ ಪಡೆದಿದ್ದು, ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಆತನ ಅದೃಷ್ಟ ಕಂಡು ನಿಬ್ಬೆರಗಾಗಿದ್ದಾರೆ, ಹಾವು ಆತನ ಚಡ್ಡಿಯೊಳಗೆ ಅವಿತಿದ್ದರು ಆತ ಬದುಕುಳಿದಿದ್ದಾನೆ, ಮತ್ತೆ ಕೆಲವರಿಗೆ ಹಾವು ಹುಡುಕಿಕೊಂಡು ಬಂದು ಕಚ್ಚಿ ಸಾಯುತ್ತಾರೆ ಎಂದಿದ್ದಾರೆ.
ಬಹುಶಃ ಹಾವು ರಾತ್ರಿ ಸಮಯದಲ್ಲಿ ದಾರಿ ತಪ್ಪಿದ್ದರಿಂದಾಗಿ ಬೆಳಗ್ಗೆವರೆಗೂ ಅಲ್ಲಿಯೂ ಕಾಯಲು ನಿರ್ಧರಿಸಿರಬಹುದು. ಆತ ಸ್ವಲ್ಪ ಜಾಗರೂಕರಾಗಿದ್ದರೆ ಈ ಅಚಾತುರ್ಯ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಅಲ್ಲದೆ ಹಾವು ನಿಜವಾಗಲು ಕಚ್ಚು ಉದ್ದೇಶದಿಂದ ಬಂದಿದ್ದರೆ ಆತ ಮತ್ತೆ ಎಚ್ಚರವಾಗುತ್ತಿರಲಿಲ್ಲ. ಆದರೆ ಹಾವು ಕಚ್ಚುವ ಉದ್ದೇಶದಿಂದ ಬಂದಿರಲಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.



Click it and Unblock the Notifications
