Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸೌರಮಂಡಲ ವೀಕ್ಷಣೆಗೆ ಕಾರಿನ ಗಾತ್ರದ ಕ್ಯಾಮೆರಾ..! ಫೋಟೋ ವೀಕ್ಷಿಸಲು ಬೇಕು 300 ಟಿವಿ
ಮಾನವನಿಗೆ ತನ್ನ ಭೂಮಂಡಲದ ಮೇಲಿನ ಆಸಕ್ತಿಗಿಂತ ಹೊರ ಜಗತ್ತಿನ ಮೇಲೆಯೇ ಆಸಕ್ತಿ ಹೆಚ್ಚು. ಅಂದರೆ ಮಾನವ ಯಾವಾಗಲೂ ಚಂದ್ರ, ಬುಧ, ಮಂಗಳ, ಸೂರ್ಯ ಹೀಗೆ ಆಕಾಶದತ್ತ ಮುಖ ಮಾಡಿಯೇ ಆತನ ಆಸಕ್ತಿ, ಕುತೂಹಲ ಹೊರಹಾಕುತ್ತಾನೆ. ಅವನಲ್ಲಿ ಆಕಾಶದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಲೇ ಇದೆ.
ಈ ರೀತಿ ಕುತೂಹಲ ಹೆಚ್ಚಲು ಕಾರಣ ಸಹ ಇದೆ. ನಮಗೆ ಇದುವರೆಗೂ ಗೊತ್ತಿಲ್ಲದೆ ಇರುವ ಅಂಶಗಳನ್ನು ತಿಳಿದುಕೊಳ್ಳಲು ಕುತೂಹಲ ಇರುವುದು ಸಹಜವೆ. ಹಾಗೆ ಸೌರ ಮಂಡಲ ಸಹ ತನ್ನೊಳಗೆ ಅದೆಷ್ಟೋ ಕೌತುಕಗಳನ್ನ ಒಡಲಾಳದಲ್ಲಿ ಇಟ್ಟುಕೊಂಡಿದೆ. ಅದನ್ನು ಅರಿಯಲು ಮನಕುಲ ಸತತ ಪ್ರಯತ್ನ ಮಾಡುತ್ತಲೇ ಇದೆ.
ಈ ಪ್ರಯತ್ನಕ್ಕೀಗ ಹೊಸ ಸಾಧನವೊಂದು ಸೇರಿಕೊಳ್ಳುತ್ತಿದೆ. ಹೌದು ಸೌರ ಮಂಡಲದ ಕುರಿತ ಅಧ್ಯಯನಕ್ಕಾಗಿ ಹೊಸದೊಂದು ಕ್ಯಾಮೆರಾ ತಯಾರಾಗುತ್ತಿದೆ. ಕ್ಯಾಮರಾ ಅಂದರೆ ಅದು ನಾವು ನೀವು ಬಳಸುವ ಮೊಬೈಲ್ ಕ್ಯಾಮೆರಾ ಅಥವಾ ಸ್ಟಿಲ್ ಕ್ಯಾಮರಾವಲ್ಲ. ಬರೋಬ್ಬರಿ ಕಾರಿನ ಗಾತ್ರದ ಅತ್ಯಂತ ದೊಡ್ಡ ಕ್ಯಾಮೆರಾ ಅದು.

ಉತ್ತರ ಚಿಲಿಯ ವೆರಾ ಸಿ. ರೂಬಿನ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞರು ವಿಶ್ವದ ಅತಿದೊಡ್ಡ ಡಿಜಿಟಲ್ ಕ್ಯಾಮೆರಾವನ್ನು ದೂರದರ್ಶಕಕ್ಕೆ ಅಳವಡಿಸುವ ಮೂಲಕ ಬ್ರಹ್ಮಾಂಡದ ಅಧ್ಯಯನ ಕೈಗೊಳ್ಳಲು ಮುಂದಾಗಿದ್ದಾರೆ. ಸಣ್ಣ ಕಾರಿನ ಗಾತ್ರ ಮತ್ತು 2.8 ಮೆಟ್ರಿಕ್ ಟನ್ ತೂಕದ, ಅತ್ಯಾಧುನಿಕ ಉಪಕರಣವು ಹಿಂದೆಂದೂ ಕಾಣದಂತಹ ಸೌರವ್ಯೂಹ ವೀಕ್ಷಣೆಗಳ ಬಹಿರಂಗಪಡಿಸುತ್ತದೆ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.
2025ರ ಆರಂಭದಲ್ಲಿ, 800 ಮಿಲಿಯನ್ ಡಾಲರ್ ಕ್ಯಾಮೆರಾ ತನ್ನ ಮೊದಲ ಫೋಟೋಗಳನ್ನು ಸೆರೆಹಿಡಿಯಲಿದೆಯಂತೆ. ಈ ಯಂತ್ರವು ಪ್ರತಿ ಮೂರು ದಿನಗಳಿಗೊಮ್ಮೆ ಆಕಾಶದ ಚಿತ್ರಣವನ್ನು ವಿಜ್ಞಾನಿಗಳಿಗೆ ನೀಡಲಿದೆ. ಈ ಯೋಜನೆಯು ಖಗೋಳ ವೀಕ್ಷಣೆಯಲ್ಲಿ ಚಿಲಿಯ ಪ್ರಮುಖ ಸ್ಥಾನವನ್ನು ಗಟ್ಟಿಗೊಳಿಸುತ್ತದೆ, ಏಕೆಂದರೆ ದಕ್ಷಿಣ ಅಮೆರಿಕಾದ ದೇಶವು ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶಕಗಳ ಮೂರನೇ ಒಂದು ಭಾಗವಾಗಿದೆ.
ರೂಬಿನ್ ಅಬ್ಸರ್ವೇಟರಿ ಕ್ಯಾಮೆರಾದ ಮೊದಲ ಕಾರ್ಯವು ಆಕಾಶದ 10 ವರ್ಷಗಳ ವಿಮರ್ಶೆಯನ್ನು ಪೂರ್ಣಗೊಳಿಸುತ್ತದೆ, ಇದನ್ನು ಲೆಗಸಿ ಸರ್ವೆ ಆಫ್ ಸ್ಪೇಸ್ ಅಂಡ್ ಟೈಮ್ (ಎಲ್‌ಎಸ್‌ಎಸ್‌ಟಿ) ಎಂದು ಕರೆಯಲಾಗುತ್ತದೆ, ಇದು 20 ಮಿಲಿಯನ್ ಗೆಲಕ್ಸಿಗಳು, 17 ಬಿಲಿಯನ್ ನಕ್ಷತ್ರಗಳು ಮತ್ತು ಆರು ಮಿಲಿಯನ್ ಬಾಹ್ಯಾಕಾಶ ವಸ್ತುಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಈ ಕ್ಯಾಮೆರಾದ ಮೂಲಕ ವಿಜ್ಞಾನಿಗಳಿಗೆ ಸೌರವ್ಯೂಹದ ಚಿತ್ರಗಳ ನವೀಕೃತ ಮಾದರಿ ನೀಡುತ್ತದೆ, ನಮ್ಮದೇ ನಕ್ಷತ್ರಪುಂಜ, ಕ್ಷೀರಪಥವನ್ನು ನಕ್ಷೆ ಮಾಡಲು ಮತ್ತು ಶಕ್ತಿ ಮತ್ತು ಡಾರ್ಕ್ ಮ್ಯಾಟರ್‌ನ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಅವರಿಗೆ ಅವಕಾಶ ನೀಡುತ್ತದೆ.
ಒಂದು ಚಿತ್ರ ವೀಕ್ಷಿಸಲು ಬೇಕು 300 ಟಿವಿಗಳು
ಹೊಸ ಕ್ಯಾಮೆರಾವು 3,200-ಮೆಗಾಪಿಕ್ಸೆಲ್ ಫೋಟೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಈ ಚಿತ್ರಗಳ ಗಾತ್ರ ದೊಡ್ಡದಾಗಿರುವ ಜೊತೆಗೆ ಪಿಕ್ಸೆಲ್‌ಗಳು ಹೆಚ್ಚಾಗಿರುವ ಕಾರಣ ಒಂದು ಚಿತ್ರ ವೀಕ್ಷಿಸಬೇಕಾದರೆ 300 ಹೈ ಡೆಫಿನೇಷನ್ ಟಿವಿಗಳ ಅಗತ್ಯವಿದೆ. ಈ ಟಿವಿಗಳನ್ನು ಒಟ್ಟಿಗೆ ಜೋಡಿಸಿ ಅದರ ಮೇಲೆ ಕ್ಯಾಮೆರಾ ಸೆರೆಹಿಡಿದ ಫೋಟೋವನ್ನು ಮೂಡಿಸಬೇಕಾಗುತ್ತದೆ.
ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಲಾದ ಈ ಯಂತ್ರವು ವಿಶ್ವದ ಪ್ರಸ್ತುತ ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಪಾನ್‌ನಲ್ಲಿರುವ 870-ಮೆಗಾಪಿಕ್ಸೆಲ್ ಹೈಪರ್ ಸುಪ್ರಿಮ್-ಕ್ಯಾಮ್‌ನ ಮೂರು ಪಟ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು NOIRLab ನ ಅತ್ಯಂತ ಶಕ್ತಿಶಾಲಿ ಕ್ಯಾಮೆರಾಕ್ಕಿಂತ ಆರು ಪಟ್ಟು ಸಾಮರ್ಥ್ಯವನ್ನು ಇದು ಹೊಂದಿದೆ.
ವಿಶ್ವದ ಖಗೋಳಶಾಸ್ತ್ರದ ರಾಜಧಾನಿ
ಡಾರ್ಕ್ ಮ್ಯಾಟರ್ ಅನ್ನು ಕಂಡುಹಿಡಿದ US ಖಗೋಳಶಾಸ್ತ್ರಜ್ಞರ ಗೌರವಾರ್ಥವಾಗಿ ಹೆಸರಿಸಲಾದ ವೆರಾ C. ರೂಬಿನ್ ವೀಕ್ಷಣಾಲಯವು ಉತ್ತರ ಚಿಲಿಯಲ್ಲಿರುವ ಹಲವಾರು ಇತರ ಬಾಹ್ಯಾಕಾಶ ವೀಕ್ಷಣಾ ಸಂಶೋಧನಾ ಕೇಂದ್ರಗಳನ್ನು ಸೇರುತ್ತದೆ. ಇಲ್ಲಿಯೇ ಟೆಲಿಸ್ಕೋಪ್‌ಗಳು ಸೌರ ಮಂಡಲದತ್ತ ಮುಖ ಮಾಡಿರುತ್ತವೆ. ಹೀಗಾಗಿ ಇದನ್ನು ಖಗೋಳಶಾಸ್ತ್ರದ ರಾಜಧಾನಿ ಎಂದು ಕರೆಯುತ್ತಾರೆ.
ಈ ಪ್ರದೇಶವು 30ಕ್ಕೂ ಹೆಚ್ಚು ದೇಶಗಳ ದೂರದರ್ಶಕಗಳಿಗೆ ಆತಿಥ್ಯ ವಹಿಸುತ್ತದೆ, ಇದರಲ್ಲಿ ವಿಶ್ವದ ಕೆಲವು ಶಕ್ತಿಶಾಲಿ ಖಗೋಳ ಉಪಕರಣಗಳು ಸೇರಿವೆ, ಉದಾಹರಣೆಗೆ ALMA ವೀಕ್ಷಣಾಲಯದಲ್ಲಿನ ರೇಡಿಯೊ ದೂರದರ್ಶಕ ಮತ್ತು ನಿರ್ಮಾಣ ಹಂತದಲ್ಲಿರುವ ಅತ್ಯಂತ ದೊಡ್ಡ ದೂರದರ್ಶಕ, ಇದು 2027ರ ವೇಳೆಗೆ ವೀಕ್ಷಣೆಗೆ ಲಭ್ಯವಾಗಲಿದೆ. ಇದರಿಂದ ಸೌರವ್ಯೂಹವನ್ನು ಹಿಂದೆಂದು ನೋಡಿರದ ದೂರದ ವರೆಗೆ ವೀಕ್ಷಿಸಬಹುದಾಗಿದೆ.



Click it and Unblock the Notifications
