Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬೆಂಗಳೂರು ದಂಪತಿಗೆ ಆನ್‌ಲೈನ್‌ನಲ್ಲಿ ಬಂತು ಜೀವಂತ ನಾಗರಹಾವು..! ಆಮೇಲೆ ಆಗಿದ್ದೇನು?
ಆನ್‌ಲೈನ್ ಇ-ಕಾಮರ್ಸ್ ಸೈಟ್‌ಗಳಲ್ಲಿ ಈಗ ಸಿಗದಿರುವ ವಸ್ತುಗಳೇ ಇಲ್ಲ. ನಿಮಗೆ ಯಾವೆಲ್ಲಾ ವಸ್ತು ಬೇಕೋ ಕ್ಷಣದಲ್ಲಿ ಸಿಗುತ್ತವೆ. ನಿಮಿಷದಲ್ಲಿ ನಿಮ್ಮ ಮನೆಗೆ ತಲುಪಿಸುವ ಸಂಸ್ಥೆಗಳು ಸಹ ಕಾರ್ಯನಿರ್ವಹಿಸುತ್ತಿವೆ. ಆದ್ರೆ ಆನ್‌ಲೈನ್‌ನಲ್ಲಿ ನೀವಂಡುಕೊಂಡಂತೆ ಎಲ್ಲವು ಅದೇ ವಸ್ತು ಡೆಲಿವರಿ ಆಗುವುದಿಲ್ಲ. ಕೆಲವೊಮ್ಮೆ ವಿಚಿತ್ರ ವಸ್ತುಗಳು ನೀವು ಆರ್ಡರ್ ಮಾಡದ ವಸ್ತುಗಳು ನಿಮ್ಮ ಕೈ ಸೇರಲಿವೆ.
ಕೆಲವೊಮ್ಮೆ ನೀವು ಆರ್ಡರ್ ಮಾಡಿದ ವಸ್ತು ಆ ಬಾಕ್ಸ್‌ನಲ್ಲೇ ಇರುವುದಿಲ್ಲ. ಆದ್ರೆ ಇಲ್ಲೊಂದು ದಂಪತಿಗೆ ಅಮೇಜಾನ್‌ನಿಂದ ಬಂದ ಬಾಕ್ಸ್‌ನಲ್ಲಿ ಜೀವಂತ ನಾಗರಹಾವು ಡೆಲಿವರಿಯಾಗಿದ್ದು, ದಂಪತಿ ಶಾಕ್ ಆಗಿದ್ದಾರೆ. ಬೆಂಗಳೂರು ಮೂಲದ ದಂಪತಿಗೆ ಹಾವಿನ ಪ್ಯಾಕೇಜ್ ಬಂದು ಬಿಟ್ಟಿದೆ.

ದಂಪತಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಎಕ್ಸ್‌ಬಾಕ್ಸ್ ಗೇಮಿಂಗ್ ನಿಯಂತ್ರಕವನ್ನು ಆರ್ಡರ್ ಮಾಡಿದ್ದರು ಆದರೆ ಬಾಕ್ಸ್‌ನಲ್ಲಿ ಜೀವಂತ ನಾಗರಹಾವು ಕಂಡು ಗಾಬರಿಯಾಗಿದ್ದಾರೆ. ಪ್ಯಾಕೇಜ್‌ನ ವಿಡಿಯೋ ಕೂಡ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಜೀವಂತ ಹಾವು ಪೆಟ್ಟಿಗೆಯಿಂದ ಹೊರಬರಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.
ಎರಡು ದಿನದ ಹಿಂದೆ ದಂಪತಿ ಅಮೇಜಾನ್‌ನಲ್ಲಿ Xbox ನಿಯಂತ್ರಕವನ್ನು ಆರ್ಡರ್ ಮಾಡಿದ್ದಾರೆ. ವಿತರಣೆಯ ನಂತರ ಪ್ಯಾಕೇಜ್ ಓಪನ್ ಮಾಡಿದಾಗ ಒಳಗೆ ಜೀವಂತ ಹಾವಿರುವುದು ತಿಳಿದುಬಂದಿದೆ. ಇದರಿಂದ ದಂಪತಿ ಶಾಕ್‌ಗೆ ಒಳಗಾಗಿದ್ದಾರೆ. ಆದ್ರೆ ಹಾವು ಆ ಬಾಕ್ಸ್‌ನಿಂದ ಹೊರಬರಲಾಗದೆ ಸಿಲುಕಿಕೊಂಡಿದೆ.
ದಂಪತಿ ಈ ಘಟನೆಯ ವಿಡಿಯೋ ಮಾಡಿ ಅದನ್ನು ಅಮೇಜಾನ್ ಗ್ರಾಹಕ ಕೇಂದ್ರದ ಖಾತೆಗೆ ಟ್ಯಾಗ್ ಸಹ ಮಾಡಿದ್ದಾರೆ. ಜೊತೆಗೆ ನಾವು ಸಂಪೂರ್ಣ ಮರುಪಾವತಿಯ ಕೇಳುತ್ತಿದ್ದೇವೆ, ಆದರೆ ಇಲ್ಲಿ ಹೆಚ್ಚು ವಿಷಕಾರಿ ಹಾವಿನೊಂದಿಗೆ ನಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಕ್ಕಾಗಿ ನಾವು ಏನು ಪಡೆಯುತ್ತೇವೆ? ಇದು ಸ್ಪಷ್ಟವಾಗಿ ಅಮೆಜಾನ್‌ನ ನಿರ್ಲಕ್ಷ್ಯ ಮತ್ತು ಕಳಪೆ ಸಾರಿಗೆ ಮತ್ತು ಗೋದಾಮಿನ ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ. ಸುರಕ್ಷತೆಯಲ್ಲಿ ಅಂತಹ ಗಂಭೀರ ಲೋಪಕ್ಕೆ ಹೊಣೆಗಾರಿಕೆ ಎಲ್ಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ದಂಪತಿ ಹಂಚಿಕೊಂಡಿರುವ ವಿಡಿಯೋಗೆ ಅಮೇಜಾನ್ ಕ್ಷಮೆಯಾಚಿಸಿದೆ. ಅಮೆಜಾನ್ ಆರ್ಡರ್‌ನಲ್ಲಿ ನೀವು ಹೊಂದಿರುವ ಅನಾನುಕೂಲತೆಯ ಬಗ್ಗೆ ತಿಳಿಯಲು ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಹಂಚಿಕೊಳ್ಳಿ ಮತ್ತು ನವೀಕರಣದೊಂದಿಗೆ ನಮ್ಮ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ' ಎಂದಿದೆ.
ಈ ವಿಡಿಯೋ ನೋಡಿದ ಮಂದಿ ದಂಪತಿಗಳಿಬ್ಬರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಏಕೆಂದರೆ ಅವರು ಬಾಕ್ಸ್ ತೆರೆಯುವಾಗ ಸ್ವಲ್ಪ ಎಚ್ಚರಿಕೆ ತಪ್ಪಿದ್ದರು ಇಬ್ಬರ ಜೀವಕ್ಕೆ ಅಪಾಯ ಬರುತ್ತಿತ್ತು. ಅಲ್ಲದೆ ಯಾರು ಸಹ ಊಹಿಸದಂತೆ ಅದರಲ್ಲಿ ಜೀವಂತ ಹಾವು ಬಂದಿರುವುದು ಎಲ್ಲರಲ್ಲೂ ಅಚ್ಚರಿ ಹಾಗೂ ಆಘಾತ ತಂದಿದೆ. ಅಲ್ಲದೆ ಈ ವಿಡಿಯೋಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಈ ಬಾಕ್ಸ್ ತಪ್ಪಾಗಿ ನಿಮ್ಮ ಅಡ್ರೆಸ್‌ಗೆ ಬಂದಿರಬಹುದು. ಏಕೆಂದರೆ ಆನ್‌ಲೈನ್‌ನಲ್ಲಿ ಈಗ ಎಲ್ಲಾ ವಸ್ತು ಸಿಗುತ್ತವೆ. ಯಾರೋ ಹಾವು ಸಹ ಆರ್ಡರ್ ಮಾಡಿರಬಹುದು ಎಂದು ಒಬ್ಬ ಬಳಕೆದಾರರು ತಮಾಷೆಯ ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ರೀತಿ ಎರಡು ವಸ್ತು ನಿಮಗೆ ಡೆಲಿವರಿ ಮಾಡಿದ್ದಾರೆ ನಿಮಗೆ ಇದು ಲಾಭ ಮಾಡಿದಂತೆ ಅಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮೂಲಕ ಕಿಚಾಯಿಸಿದ್ದಾರೆ.
'ನೀವು ಈ ಹಾವಿನೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಏಕೆಂದರೆ ಇದೊಂದು ಜೀವಕ್ಕೆ ಹಾನಿ ಮಾಡುವಂತಹ ಘಟನೆಯಾಗಿದೆ. ಇಷ್ಟೊಂದು ನಿರ್ಲಕ್ಷ್ಯ ಮಾಡಿವುದು ಒಳಿತಲ್ಲ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.



Click it and Unblock the Notifications
