Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವೈದ್ಯಲೋಕದ ಅಚ್ಚರಿ..! 4 ಇಂಚಿನ ಬಾಲದೊಂದಿಗೆ ಜನಿಸಿದ ಮಗು.!
ಜಗತ್ತಿನಲ್ಲಿ ಎಂತಹ ವಿಚಿತ್ರ ಘಟನೆಗಳು ನಡೆಯುತ್ತವೆ ಅಂದ್ರೆ ನಾವೆಂದು ಅದನ್ನು ನಂಬಲು ಸಾಧ್ಯವಾಗುವುದಿಲ್ಲ. ಇಂತಹ ಘಟನೆಗಳಲ್ಲಿ ನಮಗೆ ಹೆಚ್ಚು ಅಚ್ಚರಿ ಹುಟ್ಟಿಸೋದು ಮಿರಾಕಲ್ ಮಕ್ಕಳು ಹುಟ್ಟಿದಾಗ. ಕೆಲವು ಮಕ್ಕಳು ಹುಟ್ಟುವಾಗ ವಿಚಿತ್ರವಾಗಿ, ವಿಶೇಷವಾಗಿ ಅಚ್ಚರಿ ಹುಟ್ಟಿಸುವ ರೀತಿ ಜನಿಸಿರುತ್ತವೆ.
ಹೌದು ಕೆಲ ಮಕ್ಕಳು ಹುಟ್ಟುವಾಗ ಮೂರು ಕೈ, ಒಂದು ಕಾಲು, ಎರಡು ತಲೆ ಹೀಗೆ ವಿಚಿತ್ರ ರೀತಿಯ ಅಂಗಾಂಗಗಳ ಜೊತೆಗೆ ಹುಟ್ಟುತ್ತವೆ. ಇಲ್ಲೊಂದು ಮಗು ಸಹ ಇದೇ ರೀತಿ ಬಾಲದೊಂದಿಗೆ ಹುಟ್ಟಿದೆ. ಹೌದು ಈ ಮಗು ಹುಟ್ಟುವಾಗಲೇ ಬಾಲದೊಂದಿಗೆ ಹುಟ್ಟಿದ್ದು, ಭಾರೀ ಕುತೂಹಲ ಮೂಡಿಸಿದೆ.

ಈ ಮಗುವಿನ ಬೆನ್ನ ಹಿಂದೆ 4 ಇಂಚು ಉದ್ದದ ಬಾಲವಿದೆ. ಚೀನಾದ ಆಸ್ಪತ್ರೆಯೊಂದರಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಗಾದರೆ ಈ ರೀತಿ ಅಂಗಾಂಗಗಳ ಜೊತೆ ಮಕ್ಕಳು ಏಕೆ ಜನಿಸುತ್ತಾರೆ? ಏನಿದರ ಕಾರಣ ಎಂಬುದನ್ನು ನಾವಿಂದು ತಿಳಿಯೋಣ.
ಶಿಶು ಬಾಲದೊಂದಿಗೆ ಜನಿಸಿದ್ದೇಕೆ?
ವರದಿಯ ಪ್ರಕಾರ, ಈ ಅಪರೂಪದ ಮಗು ಚೀನಾದ ಹ್ಯಾಂಗ್‌ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿತು. ಅಲ್ಲಿನ ನರಶಸ್ತ್ರಚಿಕಿತ್ಸಕ ಡಾ.ಲೀ ಅವರು ಈ ಮಗುವಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಕುರಿತ ಮಾಹಿತಿ ಬರೆದುಕೊಂಡಿದ್ದಾರೆ.
ಇದೊಂದು ಅತ್ಯಂತ ಅಪರೂಪದ ಪ್ರಕರಣ ಮತ್ತು ವಿಶೇಷ ಸ್ಥಿತಿಯಿಂದ ಇದು ಸಂಭವಿಸುತ್ತದೆ. ವಾಸ್ತವವಾಗಿ, ಬಾಲದೊಂದಿಗೆ ಜನಿಸಿದ ಮಗು ಅಸಹಜ ಬೆಳವಣಿಗೆಯ ಪರಿಣಾಮವಾಗಿದೆ ಎಂದಿದ್ದಾರೆ. ದೇಹದ ಕೆಲವು ಭಾಗಗಳ ಬೆಳವಣಿಗೆಯು ತುಂಬಾ ವೇಗವಾಗಿ ಸಂಭವಿಸಿದಾಗ ಮತ್ತು ಈ ಪ್ರಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಅಂತಹ ಪರಿಸ್ಥಿತಿ ಉಂಟಾಗುತ್ತದೆ. ಬಹುಶಃ ಈ ಬಾಲವನ್ನು ಮಗುವಿನ ಬೆನ್ನುಹುರಿಯೊಂದಿಗೆ ಅಂಟಿಕೊಂಡಿದೆ ಎಂದು ನಾವು ಮೊದಲೇ ಶಂಕಿಸಿದ್ದೇವೆ. ಆದರೆ ನಾವು ಎಂಆರ್‌ಐ ಮಾಡಿದಾಗ, ಬಾಲದ ಸ್ಥಿತಿಯನ್ನು ಸಂಪೂರ್ಣವಾಗಿ ಖಚಿತವಾಗಿತ್ತು ಎಂದಿದ್ದಾರೆ.
ಅಪರೂಪದ ಕಾಯಿಲೆಯಿಂದ ಇದು ಸಂಭವಿಸುತ್ತದೆ
ವೈದ್ಯರ ಪ್ರಕಾರ, ಬೆನ್ನುಹುರಿಯು ಅಂಗಾಂಶಗಳಿಗೆ ಅಸಹಜವಾಗಿ ಅಂಟಿಕೊಂಡಾಗ, ಅಂತಹ ಬಾಲವು ಹೊರಗೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅದನ್ನು ಲಘುವಾಗಿ ತೆಗೆದುಕೊಳ್ಳಬೇಕು ಎಂದಲ್ಲ. ಏಕೆಂದರೆ ಇದು ಅನೇಕ ರೀತಿಯ ನರಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಭವಿಷ್ಯದಲ್ಲಿ ಮಗುವಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಈಗ ಅದರ ಚಿಕಿತ್ಸೆ ಏನು?
ಪೋಷಕರು ಈ ಬಾಲವನ್ನು ತೆಗೆದು ಹಾಕುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ ವೈದ್ಯರು ಈ ಬಾಲವನ್ನು ತೆಗೆದುಹಾಕಲು ನಿರಾಕರಿಸಿದರು. ವಾಸ್ತವವಾಗಿ, ವೈದ್ಯರು ಮಗುವಿನ ಬಾಲವು ನರಮಂಡಲದೊಂದಿಗೆ ಸಂಪರ್ಕ ಹೊಂದಿದೆ, ಆದ್ದರಿಂದ ಅದನ್ನು ತೆಗೆದುಹಾಕಿದರೆ ಅದು ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ವೈದ್ಯರು ಈ ಬಾಲ ತೆಗೆಯಲು ನಿರಾಕರಿಸಿರು. ಮತ್ತು ಈ ಬಾಲದಿಂದ ಮಗುವಿನ ಬೆಳವಣಿಗೆಯಲ್ಲಿ ಯಾವ ಪ್ರಭಾವವೂ ಉಂಟಾಗುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆಯೂ ಈ ರೀತಿ ಪ್ರಕರಣ ದಾಖಲಾಗಿದೆ
ಬಾಲದೊಂದಿಗೆ ಮಕ್ಕಳು ಜನಿಸುವ ಪ್ರಕರಣಗಳು ಈ ಹಿಂದೆಯು ವರದಿಯಾಗಿವೆ. ಈ ಹಿಂದೆ 2014ರಲ್ಲಿ ಚೀನಾದಲ್ಲಿ ಬಾಲವಿರುವ ಮಗುವೊಂದು ಜನಿಸಿತ್ತು. ಇಲ್ಲಿಯೂ ಸಹ ಮಗುವಿನ ಬಾಲ ಕತ್ತರಿಸಿ ತೆಗೆಯಲು ವೈದ್ಯರು ನಿರಾಕರಿಸಿದ್ದರು. ಇನ್ನು ಪಶ್ಚಿಮ ಬಂಗಾಳದ 27 ವರ್ಷದ ಬನ್ಹರತ್ ಎಂಬಾತನಿಗೂ 38 ಸೆಂ.ಮೀ ಉದ್ದದ ಬಾಲವಿದೆ. ಆತ ಆ ಬಾಲದೊಂದಿಗೆ ಇಂದಿಗೂ ಜೀವಿಸುತ್ತಿದ್ದಾನೆ. ಆತನನ್ನು ದೈವೀಕ ಪುರುಷ ಎಂದು ಅಲ್ಲಿನ ಜನರು ಭಾವಿಸಿದ್ದಾರೆ. ಇನ್ನು ಮಧ್ಯ ಪ್ರದೇಶದ ಬರ್ವಾನಿಯಲ್ಲಿ ಸುರೇಶ್ ಎಂಬಾತ ಸಹ ಬಾಲದಂತಹ ಆಕೃತಿಯೊಂದಿಗೆ ಇನ್ನೂ ಜೀವಿಸುತ್ತಿದ್ದಾನೆ. 2 ಅಡಿ ಉದ್ದದ ಬಾಲವೊಂದು ಆತ ಬೆನ್ನ ಕೆಳಗೆ ಇದ್ದು, ಇದು ಬೆಳೆಯುತ್ತಿದೆ ಎಂದು ಆತ ಹೇಳಿಕೊಂಡಿದ್ದಾನೆ.



Click it and Unblock the Notifications