Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಪ್ರಾಣಿ ಮೇಳದಲ್ಲಿ ಒಂದೂವರೆ ಟನ್ ದೈತ್ಯ ಕೋಣ: ತಿಂಗಳಿಗೆ 5 ಲಕ್ಷ ದುಡಿಯುವ 23 ಕೋಟಿಯ ಕೋಣವಿದು!!
ರೈತರು ಈಗ ದುಬಾರಿ ಬೆಲೆಯ ಹಸುಗಳು, ಎಮ್ಮೆ, ಕೋಣಗಳು, ಕುರಿ, ಮೇಕೆ ಸೇರಿದಂತೆ ಹಲವು ರೀತಿಯ ಸಾಕು ಪ್ರಾಣಿಗಳ ಸಾಕುವುದು ನೋಡಬಹುದು. ಹಾಗೆ ದುಬಾರಿ ಬೆಲೆಗೆ ಕೋಣಗಳು, ಎತ್ತುಗಳು ಮಾರಾಟ ಆಗುವುದು ಸಹ ನೋಡಿರುತ್ತೀರ. ಜಾತ್ರೆಗಳಿಗೆ ದಾಖಲೆ ಮಟ್ಟಕ್ಕೆ ಜಾನುವಾರು ಹರಾಜು ನೋಡಬಹುದು.
ಅದೇ ಸಾಲಿಗೆ ಇಲ್ಲಿ ಒಂದು ಕೋಣ ಸಹ ಸೇರಿಕೊಂಡಿದೆ. ಈ ಕೋಣ ಹರಿಯಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್, ಹಾಗೆ ಅದರ ಬೆಲೆ ಕೇಳಿದ್ರೆ ನೀವು ಬಾಯಿ ಮೇಲೆ ಬೆರಳಿಡುವುದು ಖಚಿತ. ಇದು ಆನ್‌ಲೈನ್ ಸೆನ್ಷೇಷನ್ ಆಗಿರುವ ಅನ್ಮೋಲ್ ಎಂಬ ಕೋಣವಾಗಿದೆ. ಇದು ಬರೋಬ್ಬರಿ 1,500 ಕೆ.ಜಿ ತೂಕ ಇರುವ ಕೋಣ ಆಗಿದೆ.

ಪ್ರಾಣಿಗಳ ಕುರಿತು ಪ್ರೀತಿ ಹೊಂದಿರುವ ಮಂದಿಗೆ ಈ ಕೋಣ ಬಹಳ ಚಿರಪರಿಚಿತ. ಹಲವು ಕಡೆಗಳಲ್ಲಿ ತನ್ನ ಪ್ರದರ್ಶನದ ಮೂಲಕ ಪ್ರಶಸ್ತಿಗಳ ಗೆದ್ದಿರುವ ಹರಿಯಾಣದಾದ್ಯಂತ ಹೆಸರಾಗಿರುವ ಕೋಣ ಇದು. ಈಗ ಹರಿಯಾಣದ ಪುಷ್ಕರ್ ಮೇಳದಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದೆ. ಅದ್ರಲ್ಲೂ ಈ ಅನ್ಮೋಲ್ ಕೋಣ ಕಂಡು ಜನರು ಹಾಗೂ ಅದರ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದಾರೆ.
ಅನ್ಮೋಲ್ ಕೋಣದ ಬೆಲೆ ಎಷ್ಟು ಗೊತ್ತಾ?
ಈ 1500 ಕೆ.ಜಿ ತೂಕ ಹೊಂದಿರುವ ಈ ವಿಶೇಷ ತಳಿಯ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂಪಾಯಿ. ಹೌದು ಈ ಕೋಣದ ಬೆಲೆ 23 ಕೋಟಿ ರೂ. ಆಗಿದೆ. ಈ ಅನ್ಮೋಲ್ ಸಾಮಾನ್ಯ ಕೋಣ ಅಲ್ಲ. ಈ ಬೆಲೆಯಲ್ಲಿ ನೀವು 10 ರೋಲ್ಸ್ ರಾಯ್ಸ್ ಕಾರು, ಹಾಗೆ ಉಳಿದ ಹಣದಿಂದ ಆಸ್ತಿ ಕೂಡ ಖರೀದಿಸಬಹುದು.
ಈ ಕೋಣದ ಮೈ ಕಪ್ಪು ಬಣ್ಣದಿಂದ ಹೊಳೆಯಲಿದೆ. ಅದರ ದೇಹದ ಗಾತ್ರ ಹಾಗೂ ಎತ್ತರ ನೋಡಿದವರು ಒಮ್ಮೆಯಾದರು ಮುಟ್ಟಿ ನೋಡಬೇಕು ಎಂದುಕೊಳ್ಳುತ್ತಾರೆ. ಅನ್ಮೋಲ್‌ಗೆ ಈಗಲೂ 8 ವರ್ಷ. ಇದು ಹರಿಯಾಣದ ಸಿರ್ಸಾ ಜಿಲ್ಲೆಯ ವ್ಯಕ್ತಿಯೊಬ್ಬರು ಸಾಕುತ್ತಾರೆ. ಈ ಅನ್ಮೋಲ್ ಪ್ರಾಣಿ ಪ್ರದರ್ಶನದಂತಹ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಅಷ್ಟೇ ಅಲ್ಲ ಈ ಕೋಣ ಈಗ ಮಾಲೀಕರಿಗೆ ಆದಾಯದ ಮೂಲವಾಗಿದೆ ಪ್ರತಿತಿಂಗಳು ಅವರು 5 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗಿದೆ. ಈ ಕೋಣದ ಬ್ರೀಡ್ ಹೆಚ್ಚಿಸುವ ಸಲುವಾಗಿ ಪ್ರತಿವಾರ ಮೇಟಿಂಗ್‌ಗೆ ಕರೆದೊಯ್ಯಲಾಗುತ್ತದೆ. ಹೀಗಾಗಿ ಹಣಗಳಿಸುವಿಕೆ ಪ್ರತಿ ತಿಂಗಳು ಹೆಚ್ಚಾಗುತ್ತಿದೆಯಂತೆ.
ಹಾಗೆ ಇದನ್ನು ಸಾಕುವುದು ಕೂಡ ಲಕ್ಷ ಲಕ್ಷ ರೂಪಾಯಿಗಳ ಖರ್ಚು ತರಲಿದೆಯಂತೆ. ದಿನವೊಂದಕ್ಕೆ 1,500 ರೂಪಾಯಿ ಖರ್ಚು ಕೂಡ ಮಾಡಬೇಕಂತೆ. ಪ್ರತಿ ದಿನ ಅದಕ್ಕೆ 250 ಗ್ರಾಂ ಬಾದಾಮಿ, 4 ಕಿಲೋಗ್ರಾಂ ದಾಳಿಂಬೆ, 30 ಬಾಳೆಹಣ್ಣು, 5 ಲೀಟರ್ ಹಾಲು ಮತ್ತು 20 ಮೊಟ್ಟೆಗಳನ್ನು ನೀಡಲಾಗುತ್ತದೆ. ಅದರೊಂದಿಗೆ ತುಪ್ಪ, ಸೋಯಾಬೀನ್, ಜೋಳ, ಎಣ್ಣೆ ಕೇಕ್ ಮತ್ತು ತಾಜಾ ಹಸಿರು ಮೇವು ನೀಡಲಾಗುತ್ತದೆ. ಇದರಿಂದ ಅನ್ಮೋಲ್ ಕಟ್ಟುಮಸ್ತಾದ ದೇಹ ಹೊಂದಿದೆ.
ಇದಕ್ಕೆ ಪ್ರತಿನಿತ್ಯ ಎಣ್ಣೆ ಸ್ನಾನ ಮಾಡಿಸಲಾಗುತ್ತದೆ. ಬಾದಾಮಿ ಹಾಗೂ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ಇದಕ್ಕೆ ಮಾಲೀಶ್ ಮಾಡಲಾಗುತ್ತದೆ. ಹಾಗೆ ಈ ಜಾತಿಯ ಹೆಣ್ಣು ಎಮ್ಮೆಗಳು ದಿನವೊಂದಕ್ಕೆ ಬರೋಬ್ಬರಿ 25 ಲೀಟರ್ ಹಾಲು ನೀಡುತ್ತವೆಯಂತೆ. ಕಳೆದ ವರ್ಷ ಮೀರತ್‌ನಲ್ಲಿ ನಡೆದ ಅಖಿಲ ಭಾರತ ರೈತ ಮೇಳದಲ್ಲಿ ಅನ್ಮೋಲ್ ಪ್ರಮುಖ ಆಕರ್ಷಣೆಯಾಗಿತ್ತು. ಹಾಗೆ ಅದರ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಛಾಗುತ್ತಲೇ ಇದೆಯಂತೆ.



Click it and Unblock the Notifications