Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ಮಾಡಿದ್ದು 20 ವರ್ಷದ ಯುವಕ..! ಆತ ಯಾರು ಗೊತ್ತಾ?
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಆದ್ರೆ ಈ ನಡುವೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಅವರನ್ನು ಭದ್ರತಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ದಾಳಿಯಲ್ಲಿ ಟ್ರಂಪ್ ಕಿವಿಗೆ ಗಾಯವಾಗಿದೆ.
ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಕಾರ್ಯಕರ್ತರು ಹಾಗೂ ಮತದಾರರ ಕುರಿತು ಭಾಷಣ ಮಾಡುವಾಗ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಪ್ರತಿದಾಳಿಯಲ್ಲಿ ಓರ್ವ ಹತನಾಗಿದ್ದಾನೆ ಎಂದು ವರದಿಯಾಗಿದೆ. ಟ್ರಂಪ್ ಮೇಲೆ ದಾಳಿ ನಡೆಸುವ ಮೊದಲು ದಾಳಿಕೋರ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ ಎಂದು ಸಹ ತಿಳಿದುಬಂದಿದೆ.

ದಾಳಿಕೋರನನ್ನು ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್‌ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಟ್ರಂಪ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಎತ್ತರದ ಸ್ಥಾನದಿಂದ ಕ್ರೂಕ್ಸ್ ಅನೇಕ ಗುಂಡುಗಳನ್ನು ಹಾರಿಸಿದ್ದ. ಆದರೆ ಯಾವುದೇ ಗುಂಡು ಟ್ರಂಪ್‌ಗೆ ತಗುಲಲಿಲ್ಲ. ಬದಲಿಗೆ ಒಂದು ಆತನ ಕಿವಿಯನ್ನು ತಾಕಿ ಮುಂದೆ ಸಾಗಿದೆ. ಹೀಗಾಗಿ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.
ಆದರೆ ದಾಳಿಯಲ್ಲಿ ಓರ್ವ ನಾಗರೀಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ತಕ್ಷಣ ಶೂಟರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒಬ್ಬ ಯುವಕನ ತಂತ್ರ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆದರೆ ನಾವು ಈಗಾಗಲೇ ಒಬ್ಬನ ಹತ್ಯೆ ಮಾಡಿದ್ದೇವೆ. ಆದ್ರೆ ಇದರಲ್ಲಿ ಒಬ್ಬನೇ ಇದ್ದಾನೆ ಎಂದು ನಾವೆಂದು ಭಾವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
1981 ರಲ್ಲಿ ಡೊನಾಲ್ಡ್ ರೇಗನ್ ಹತ್ಯೆಯ ನಂತರ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ. ಅಲ್ಲದೆ ಈ ಮೊದಲು ಸಹ ಅಮೆರಿಕ ಅಧ್ಯಕ್ಷರು ಈ ರೀತಿಯ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದಾರೆ. ಇದು ಸಹ ಹತ್ಯೆಯ ಉದ್ದೇಶದಿಂದಲೇ ದಾಳಿ ಮಾಡಲಾಗಿತ್ತು, ಆದರೆ ಆತ ಕೊನೆ ಕ್ಷಣದಲ್ಲಿ ಗುರಿ ತಪ್ಪಿದ್ದರಿಂದಾಗಿ ಟ್ರಂಪ್ ಬದುಕುಳಿದಿದ್ದಾನೆ.
ಇದಕ್ಕೂ ಮೊದಲು ಅಮೆರಿಕದ ಅಧ್ಯಕ್ಷರು ಗುಂಡಿ ದಾಳಿಗೆ ಬಲಿಯಾಗಿದ್ದಾರೆ. 1963 ರಲ್ಲಿ, ಜಾನ್ ಎಫ್ ಕೆನಡಿ ಅವರು ಅಧ್ಯಕ್ಷರಾಗಿದ್ದಾಗ ಹತ್ಯೆಯಾಗಿದ್ದರು. 1968 ರಲ್ಲಿ, ರಾಬರ್ಟ್ ಎಫ್. ಕೆನಡಿ ಮತ್ತು ಇತರ ಚುನಾವಣಾ ಅಭ್ಯರ್ಥಿಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಘಟನೆ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಪ್ರತಿಕ್ರಿಯಿಸಿ ಈ ಘಟನೆಯನ್ನ ಖಂಡಿಸಿದ್ದಾರೆ. ಅಮೆರಿಕನ್ನರು ಈ ಘಟನೆಯಿಂದಾಗಿ ವಿಚಲಿತರಾಗಬೇಡಿ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಶಾಂತಿ ಕಾಪಾಡಬೇಕು. ನಾವೆಲ್ಲಾ ಒಟ್ಟಾಗಿ ಈ ದೇಶ ಕಟ್ಟುವ ಕೆಲಸ ಮಾಡೋಣ ಎಂದಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಈಗ ಹಲವು ರೀತಿಯ ಕುತೂಹಲಕಾರಿ ವಿಚಾರಗಳು ಹೊರಬೀಳುತ್ತಿವೆ. ಶೂಟರ್‌ಗೆ ನೇರವಾಗಿ ತಲೆಗೆ ಗುಂಡು ಹಾರಿಸಲಾಗಿದೆ. ಟ್ರಂಪ್ ವೇದಿಕೆ ಮೇಲೆ ಇದ್ದ ಶಾರ್ಪ್ ಸ್ನೈಪರ್ ಸಿಬ್ಬಂದಿ ಈ ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಇದರ ವಿಡಿಯೋಗಳು ಸಹ ಹರಿದಾಡುತ್ತಿವೆ. ಘಟನೆ ಕುರಿತು ವಿಶ್ವದ ಪ್ರಮುಖ ದೇಶಗಳ ನಾಯಕರು ಖಂಡಿಸಿದ್ದಾರೆ. ಜೊತೆಗೆ ಟ್ರಂಪ್ ಆದಷ್ಟು ಬೇಗ ಗುಣಮುಖರಾಗುವಂತೆ ಹರಸಿದ್ದಾರೆ.



Click it and Unblock the Notifications
