Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೃಹತ್ ಅಗಲದ ಡೈನೋಸಾರ್ ಹೆಜ್ಜೆ ಗುರುತು ಪತ್ತೆ ಮಾಡಿದ 10 ವರ್ಷದ ಬಾಲಕಿ..!
ಈ ಭೂಮಿ ಮೇಲೆ ಒಂದು ಕಾಲದಲ್ಲಿ ಜೀವಿಸಿದ್ದ ಅತ್ಯಂತ ದೊಡ್ಡ ಜೀವಿಗಳಾಗಿರುವ ಡೈನೋಸಾರ್‌ಗಳು ಈಗ ಇತಿಹಾಸದ ಪುಟದಲ್ಲಿ ಸೇರಿ ಹೋಗಿವೆ. ಆದ್ರೆ ಇಂದಿಗೂ ಈ ಡೈನೋಸಾರ್‌ಗಳ ಕುರಿತು ನಾವು ಕೇಳುತ್ತಲೇ ಇರುತ್ತೇವೆ. ಇದೇ ಡೈನೋಸಾರ್‌ಗಳ ಸಿನಿಮಾಗಳ ಕಂಡು ನಾವು ಸಹ ಹುಬ್ಬೇರಿಸಿದ್ದೆವು. ಇಷ್ಟೊಂದು ದೈತ್ಯಾಕಾರದ ಜೀವಿಗಳು ಎಷ್ಟು ಬಲಶಾಲಿಯಾಗಿದ್ದವು, ಎಂತಹ ಪ್ರಾಣಿಗಳನ್ನಾದರು ಮಣಿಸಿ ಬಿಡುತ್ತಿದ್ದವು.
ಆದ್ರೆ ಈಗ ಇವುಗಳ ದೊಡ್ಡ ದೊಡ್ಡ ಮೂಳೆಗಳನ್ನು ನಾವು ಮ್ಯೂಸಿಯಂನಲ್ಲಿ ನೋಡುತ್ತಿದ್ದೇವೆ. ಹಲವು ಕಡೆಗಳಲ್ಲಿ ಭೂಮಿ ಅಗೆಯುವಾಗ ಡೈನೋಸಾರ್ ಮೊಟ್ಟೆಗಳು, ಮೂಳೆಗಳು ಪತ್ತೆಯಾದ ಕುರಿತು ನಾವು ಕೇಳುತ್ತಲೇ ಇರುತ್ತೇವೆ. ಇಂತಹ ಹತ್ತು ಹಲವು ಪ್ರಕರಣಗಳನ್ನು ನಾವು ನೋಡಿರುತ್ತೇವೆ.

ಇತ್ತೀಚಿನವರೆಗೂ ಡೈನೋಸಾರ್ ಮೊಟ್ಟೆಗಳು ಸಿಗುತ್ತಿದ್ದ ಪ್ರಕರಣಗಳ ನಾವು ಕೇಳುತ್ತಿದ್ದೆವು. ಅಲ್ಲದೆ ಹೊಸ ಹೊಸ ಪ್ರಬೇದಗಳನ್ನು ಗುರುತು ಮಾಡುತ್ತಿರುವುದು ಇತ್ತೀಚಿನವರೆಗೂ ನಡೆಯುತ್ತಲೇ ಇದೆ. ಆದ್ರೆ ಈಗ 10 ವರ್ಷದ ಬಾಲಕಿಯೊಬ್ಬಳು ಡೈನೋಸಾರ್ ಕುರಿತ ಅತೀ ದೊಡ್ಡ ರಹಸ್ಯವೊಂದನ್ನ ಬಯಲಿಗೆಳೆದಿದ್ದಾಳೆ.
ಇಂಗ್ಲೆಂಡ್‌ನಲ್ಲಿನ 10 ವರ್ಷದ ಬಾಲಕಿಯೊಬ್ಬಳು ಬೃಹತ್ ಡೈನೋಸಾರ್ ಹೆಜ್ಜೆಗುರುತುಗಳ ಮೇಲೆ ಎಡವಿ ಬಿದ್ದು ಹೊಸ ಆವಿಷ್ಕಾರಕ್ಕೆ ದಾರಿಯಾಗಿದೆ. ತನ್ನ ತಾಯಿ ಜೊತೆ ಬೀಚ್ ಬಳಿ ವಾಕಿಂಗ್‌ಗೆಂದು ಹೋದಾಗ ಡೈನೋಸಾರ್‌ನ ಹೆಜ್ಜೆ ಗುರುತು ಪತ್ತೆಯಾಗಿದೆ. ಪೆನಾರ್ತ್ ತೀರದಲ್ಲಿ 200 ಮಿಲಿಯನ್ ವರ್ಷಗಳಷ್ಟು ಹಿಂದಿನದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
75 ಸೆಂಟಿಮೀಟರ್‌ಗಳಷ್ಟು ಅಂತರದಲ್ಲಿರುವ ಹೆಜ್ಜೆಗುರುತುಗಳು ಟ್ರಯಾಸಿಕ್ ಅವಧಿಯ ಅಂತ್ಯದ ದೊಡ್ಡ ಸಸ್ಯಹಾರಿ ಡೈನೋಸಾರ್‌ನಿಂದ ಮಾಡಲ್ಪಟ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಡೈನೋಸಾರ್ ಕಾಲದ ಕುರಿತು ನಿಖರವಾಗಿ ಇನ್ನು ತಿಳಿದಿಲ್ಲ. ಈ ಹೆಜ್ಜೆ ಗುರುತಿನಲ್ಲಿ ಐದು ಬೆರಳುಗಳ ಅಚ್ಚು ಮೂಡಿರುವುದು ಕಾಣಿಸುತ್ತಿದೆ. ಅಂದರೆ ಸುಮಾರು ಮುಕ್ಕಾಲು ಮೀಟರ್‌ನಷ್ಟು ದೊಡ್ಡದಾಗಿ ಹರಡಿದೆ. ಇದು ಸೌರೋಪೊಡೋಮಾರ್ಫಾ ಎಂದು ಕರೆಯಲ್ಪಡುವ ದೊಡ್ಡ ಡೈನೋಸಾರ್ ಹೆಜ್ಜೆ ಗುರುತು ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಈಗ ಹೆಜ್ಜೆ ಗುರುತು ಪತ್ತೆಯಾದ ಜಾಗ ಸೇರಿದಂತೆ ಸುತ್ತ ಮುತ್ತಲ ಜಾಗದಲ್ಲೂ ಶೋಧ ನಡೆಸುತ್ತಿದ್ದಾರೆ. ಕರಾವಳಿ ಉದ್ದಕ್ಕೂ ಲ್ಯಾವೆನಾರ್ಕ್ ಪಾಯಿಂಟ್‌ಗಳ ಗುರುತು ಮಾಡಲಾಗಿದೆ. ಹೀಗಾಗಿ ಮುಂದೆ ಮತ್ತಷ್ಟು ಗುರುತುಗಳು ಇಲ್ಲಿ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್‌ನ ಹಲವು ಭಾಗದಲ್ಲಿ ಈ ರೀತಿಯ ಡೈನೋಸಾರ್ ಪಳೆಯುಳಿಕೆಗಳು ಪತ್ತೆಯಾದ ಕುರಿತ ವರದಿಗಳಾಗಿದ್ದವು.
ಭಾರತದಲ್ಲೂ ಪತ್ತೆಯಾಗಿತ್ತು ಮೊಟ್ಟೆ
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಡ್ಲ್ಯಾ ಗ್ರಾಮದಲ್ಲಿ ಭೂಮಿ ಅಗೆಯುವಾಗ ಈ 'ಕಲ್ಲಿನ ಚೆಂಡುಗಳು' ಕಣ್ಣಿಗೆ ಬಿದ್ದಿದ್ದವು. ವೆಸ್ಟಾ ಮಂಡಲೋಯ್ ಎಂಬುವರು ವರ್ಷಗಳ ಹಿಂದೆ ಅವುಗಳನ್ನು 'ಕುಲ ದೇವರು' ಎಂದು ಪೂಜಿಸುತ್ತಾ ಬಂದಿದ್ದರು. ತಲಾತಲಾಂತರದಿಂದ ಇವು ಕುಲದೇವರು ಎಂದು ಆ ಕುಟುಂಬ ಪೂಜೆ ಸಲ್ಲಿಸುತ್ತಾ ಬಂದಿತ್ತು. ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದು ದೇವರಲ್ಲ ಡೈನೋಸಾರ್ ಮೊಟ್ಟೆಗಳು ಎಂಬುದಾಗಿ ತಜ್ಞರು ತಿಳಿಸಿದ್ದರು.
ಈ ಮೊಟ್ಟೆಗಳನ್ನು ಅವರು 'ಕಾಕರ್ ಭೈರವ್' ಎಂದು ಕರೆಯುತ್ತಿದ್ದರು. ಕಾಕರ್ ಎಂದರೆ ಭೂಮಿ ಮತ್ತು ಭೈರವ್ ಎಂದರೆ ಭಗವಂತ ಎಂಬರ್ಥ ಕೊಡುತ್ತಿತ್ತು. ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಂಡ ಈ ಕಲ್ಲುಗಳ ಪರೀಕ್ಷೆಗೊಳಪಡಿಸಿದ್ದಾಗ ಇದು ಡೈನೋಸಾರ್‌ನ ಮೊಟ್ಟೆಗಳು ಎಂದು ತಿಳಿದುಬಂದಿತ್ತು. ಈ ವಿಚಾರ ತಿಳಿದ ಕುಟುಂಬ ಹಾಗೂ ಇಡೀ ಗ್ರಾಮ ನಿಬ್ಬೆರಗಾಗಿದೆ. ಮಣ್ಣಿನೊಳಗೆ ಮೊಟ್ಟೆಗಳು ವರ್ಷಗಳಿದ್ದ ಕಾರಣ ಕಲ್ಲುಗಳಂತೆ ರೂಪ ತಳೆದಿದ್ದವು.



Click it and Unblock the Notifications
