Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
ಮಾನವ ಈಗಿರುವ ಭೂಮಿಯ ಜೊತೆಗೆ ನಮ್ಮ ಗ್ಯಾಲಕ್ಸಿ ಬಿಟ್ಟು ಬೇರೆ ಬೇರೆ ಗ್ಯಾಲಕ್ಸಿಯಲ್ಲಿ ಮಾನವರು ಜೀವಿಸಲು ಬೇರೆ ಗ್ರಹಳಿವೆಯೇ ಎನ್ನುವ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಮಂಗಳ ಗ್ರಹ ಬುಧ ಗ್ರಹ ಅಂತ ಒಂದಿಷ್ಟು ಅಧ್ಯಯನಗಳು ಸಹ ನಡೆಯುತ್ತಲೇ ಇವೆ. ಆದರೆ ಈವರೆಗೆ ಭೂಮಿಗೆ ಪರ್ಯಾಯ ಗ್ರಹವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಆದರೆ ಸೌರ ಮಂಡದಲ್ಲಿ ಆಗಾಗ ಹೊಸ ಹೊಸ ಗ್ರಹಗಳು ಪತ್ತೆಯಾಗುವ ಕುರಿತು ನಾವು ಕೇಳಿದ್ದೇವೆ. ನಮ್ಮ ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ? ಹೆಚ್ಚಿನವರು 8 ಎಂದು ಹೇಳುತ್ತಾರೆ, ಆದರೆ ಇತರರು ಪ್ಲುಟೊ ಸೇರಿದಂತೆ ಒಂಬತ್ತು ಎಂದು ವಾದಿಸುತ್ತಾರೆ, ಇದನ್ನು ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್ (IAU) 2006 ರಲ್ಲಿ 'ಕುಬ್ಜ ಗ್ರಹ' ಎಂದು ಡೌನ್‌ಗ್ರೇಡ್ ಮಾಡಿದೆ.

ಆದರೆ ನಿಮಗೆ ಪ್ಲಾನೆಟ್ 9 ಬಗ್ಗೆ ಗೊತ್ತಾ? ನಮ್ಮ ಸೌರವ್ಯೂಹದಲ್ಲಿರುವ ನೆಪ್ಚೂನ್‌ನ ಆಚೆಗೆ ಮತ್ತೊಂದು ಗ್ರಹವಿದೆ. ಆದರೆ ಅದು ಪ್ಲುಟೋ ಅಲ್ಲವೇ ಅಲ್ಲ ಅದೇ ಪ್ಲಾನೆಟ್ 9.
ಪ್ಲಾನೆಟ್ 9 ಎಂದರೇನು?
ನಮ್ಮ ಸೌರವ್ಯೂಹದಲ್ಲಿ ನೆಪ್ಚೂನ್‌ನ ಆಚೆಗೆ ಒಂಬತ್ತನೇ ಗ್ರಹವಿದೆ, ಆದರೆ ಪ್ಲುಟೊ ಅಲ್ಲ ಎಂದು ವಾದಿಸುವ ಇತರರು ಇದ್ದಾರೆ. ಸಾಮಾನ್ಯವಾಗಿ ಪ್ಲಾನೆಟ್ 9 ಮತ್ತು ಪ್ಲಾನೆಟ್ ಎಕ್ಸ್ ಎಂದು ಕರೆಯಲಾಗುತ್ತದೆ, ಈ ಅಜ್ಞಾತ ಗ್ರಹವು ದೀರ್ಘಕಾಲದವರೆಗೆ ವಿಜ್ಞಾನವನ್ನು ಆಕರ್ಷಿಸಿದೆ, ಆದರೆ ಇಲ್ಲಿಯವರೆಗೆ ಅದರ ಅಸ್ತಿತ್ವವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಮುಂದೊಂದು ದಿನ ಪ್ಲಾನೆಟ್ 9 ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇಂದಿಗೂ ವಿಜ್ಷಾನಿಗಳು ಹುಡುಕುತ್ತಲೇ ಇದ್ದಾರೆ.
ಪ್ಲಾನೆಟ್ 9 ಎಲ್ಲಿರಬಹುದು?
ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಂಶೋಧಕರಾದ ಮೈಕೆಲ್ ಬ್ರೌನ್ ಮತ್ತು ಕಾನ್ಸ್ಟಾಂಟಿನ್ ಬ್ಯಾಟಿಗಿನ್ ಮಂಡಿಸಿದ ಅತ್ಯಂತ ಜನಪ್ರಿಯ ಸಿದ್ಧಾಂತದ ಪ್ರಕಾರ, ಪ್ಲಾನೆಟ್ 9 ಕೈಪರ್ ಬೆಲ್ಟ್‌ನಲ್ಲಿ ಎಲ್ಲಿಯಾದರು ಸಿಲುಕಿರಬಹುದು ಎಂದು ಅಂದಾಜಿಸಿದ್ದಾರೆ. ನೆಪ್ಚೂನ್ ಕಕ್ಷೆಯ ಆಚೆಗೆ ಹಿಮಾವೃತ ಕಾಯಗಳ ಡೋನಟ್ ಆಕಾರದ ಪ್ರದೇಶದಲ್ಲಿ ಈ ಗ್ರಹ ಇದೆ ಎಂದು ವಾದಿಸುತ್ತಾರೆ.
ಅವರ ಪ್ರಕಾರ, ಕೈಪರ್ ಬೆಲ್ಟ್ ಸೂರ್ಯನ ಸುತ್ತ ಅಸಾಧಾರಣವಾಗಿ ಸುತ್ತುವ ಕಕ್ಷೆಗಳನ್ನು ಹೊಂದಿತ್ತು, ಇದು ಕೇವಲ ಬೃಹತ್ ಗ್ರಹದ ಗುರುತ್ವಾಕರ್ಷಣೆಯ ಪರಿಣಾಮವಾಗಿರಬಹುದು ಎಂದು ಅವರು ಹೇಳುತ್ತಾರೆ.
ಈ ಗ್ರಹವನ್ನು ಪತ್ತೆ ಮಾಡೋದು ಹೇಗೆ?
ಹೀಗೆ ಪ್ಲಾನೆಟ್ 9 ಎಂಬ ಗ್ರಹವೊಂದಿದೆ ಎಂದು ಊಹಿಸಿರುವ ಸಂಶೋದಕರು ಅದರ ಪತ್ತೆಗೂ ತಂತ್ರ ರೂಪಿಸಿದ್ದಾರೆ. ನಿರಂತರ ಟೆಲಿಸ್ಕೋಪಿಕ್ ಯಂತ್ರದ ಮೂಲಕ ಈ ಗ್ರಹದ ಕುರಿತು ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಇದರ ಜೊತೆಗೆ ಆಕಾಶಕಾಯಗಳ ಚಲನೆ ಮೇಲೆ ಅವರು ವಿಶೇಷ ಗಮನ ಇಟ್ಟಿದ್ದಾರೆ. ಅದೆಲ್ಲೂ ನೆಪ್ಚ್ಯೂನ್ ಕಕ್ಷೆಯಲ್ಲಿ ಯಾವುದಾದರು ಸಣ್ಣ ವ್ಯತ್ಯಾಸಗಳು ಕಂಡು ಬಂದರು ಎಲ್ಲಾ ವಿಜ್ಞಾನಿಗಳ ದೃಷ್ಟಿ ಆಕಾಶದತ್ತ ಹೊರಳುತ್ತದೆ.
2017ರಲ್ಲಿ ನಾಸಾ ಸಹ ಈ 9ನೇ ಗ್ರಹ ಅಸ್ಥಿತ್ವದಲ್ಲಿದೆ ಎಂದು ವಾದಿಸಿತ್ತು. ಆದರೆ ಪುರಾವೆ ನೀಡುವಲ್ಲಿ ಸೋತಿದೆ. ಈ ವಲಯದಲ್ಲಿರುವ ಒಂಬತ್ತನೇ ಗ್ರಹದ ಪರಿಣಾಮದಿಂದಲೇ ಸೌರಮಂಡಲದ ಸೂರ್ಯನನ್ನು ಸುತ್ತುವ ಇತರೆ 8 ಗ್ರಹಗಳು ಸೌರಮಧ್ಯರೇಖೆಗಿಂತ 6 ಡಿಗ್ರಿಯಷ್ಟು ಬಾಗಿರುವುದಾಗಿ ಖಗೋಳಶಾಸ್ತ್ರಜ್ಞರ ತಂಡ ವಿವರಿಸಿದೆ. ಆದರೆ ನಾಸಾ ಈ ಗ್ರಹದ ವಲಯಗಳು ಏನು.? ಅದರ ರಾಸಾಯನಿಕ ಅಂಶಗಳೇನು? ಅದರ ಅಸ್ಥಿತ್ವ ಹಾಗೂ ಮೇಲ್ಮೈ ಲಕ್ಷಣಗಳ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ 9ನೇ ಗ್ರಹ ಇರುವುದಂತು ನಿಜ ಎಂದು ವಾದಿಸುತ್ತಲೇ ಬರುತ್ತಿದೆ.



Click it and Unblock the Notifications