Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಅಬ್ಬಬ್ಬಾ..! 98 ವರ್ಷದ ಅಜ್ಜಿಯ ಜಿಮ್ನಾಸ್ಟಿಕ್ ನೋಡಿದ್ರೆ ಶಾಕ್ ಆಗ್ತಿರ..!
ನಾವು 40 ವರ್ಷ ದಾಟಿದ ಬಳಿಕ ಜೀವನದಲ್ಲಿ ಎಲ್ಲವು ಮುಗಿದು ಹೋಗಿದೆ ಎಂದುಕೊಳ್ಳುವವರೆ ಹೆಚ್ಚು. ಯಾವುದರಲ್ಲೂ ಈ ವಯಸ್ಸಿನಲ್ಲಿ ಆಸಕ್ತಿ ಉಳಿದಿರುವುದಿಲ್ಲ. ಅದರಲ್ಲೂ 60-70 ವರ್ಷ ದಾಟಿತು ಅಂದ್ರೆ ಕೇಳೋದೆ ಬೇಡ. ಇಳಿ ವಯಸ್ಸಿನಲ್ಲಿ ತೀರ್ಥಯಾತ್ರೆ, ದೇವಾಲಯ ದರ್ಶನ, ವಿಶ್ರಾಂತಿ ಪಡೆಯುವುದರ ಕಡೆಗೆ ಮಾತ್ರ ಮನಸ್ಸು ಯೋಚಿಸುತ್ತೆ.
ಈ ವಯಸ್ಸಿನವರಲ್ಲಿ ಯಾವ ಆಸೆ, ಆಕಾಂಕ್ಷೆಗಳು ಉಳಿದಿರುವುದಿಲ್ಲ ಎಂಬುದು ಎಲ್ಲರ ನಂಬಿಕೆ. ಅವರು ಬಯಸೋದು ನೆಮ್ಮದಿ ಮಾತ್ರ, ಈ ವಯಸ್ಸಿನಲ್ಲಿ ಬಾಗಿದ ಬೆನ್ನು, ಕೈ ಕಾಲು ಮೂಳೆ ನೋವು ಹೀಗೆ ಒಂದಲ್ಲಾ ಒಂದು ಸಮಸ್ಯೆಗೆ ಒಳಗಾಗುವ ಅವರು ಹೆಚ್ಚಿನ ಓಡಾಟ ಬಿಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ.

ಆದ್ರೆ ನಾವಿಂದು ಹೇಳ ಹೊರಟಿರೋ ಅಜ್ಜಿ ಮಾತ್ರ ಇದೆಲ್ಲದಕ್ಕಿಂತ ಭಿನ್ನ. 90 ವಯಸ್ಸು ದಾಟಿದ್ದರೂ ಆಕೆಯ ಜಿಮ್ನಾಸ್ಟಿಕ್ ಸ್ಟಂಟ್ ನೋಡಿದರೆ ಯುವಕರು ಸಹ ನಾಚುವಂತಿದೆ. 98 ವರ್ಷದ ಅಜ್ಜಿ ಫಿಟ್‌ನೆಸ್ ಕಂಡು ಇಂಟರ್‌ನೆಟ್ ಶಾಕ್ ಆಗಿದೆ. ಆಕೆಯ ಜಿಮ್ನಾಸ್ಟಿಕ್ ಕಂಡು ಜನರೇ ಫಿದಾ ಆಗಿದ್ದಾರೆ.
ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ! ಈ 98 ವರ್ಷ ವಯಸ್ಸಿನ ಮಹಿಳಾ ಜಿಮ್ನಾಸ್ಟ್ ಅವರು ಸುಮಾರು ಒಂದು ಶತಮಾನದ ವಯಸ್ಸಿನ ಹೊರತಾಗಿಯೂ, ತಮ್ಮ ಅದ್ಭುತ ಜಿಮ್ನಾಸ್ಟಿಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 2012 ರಲ್ಲಿ, ಜರ್ಮನ್ ಮೂಲದ ಜೊಹಾನ್ನಾ ಕ್ವಾಸ್ ವಿಶ್ವದ ಅತ್ಯಂತ ಹಳೆಯ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಯ ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ಪಡೆದಿದ್ದಾರೆ.
ಆ ಸಮಯದಲ್ಲಿ ಆಕೆಗೆ 86 ವರ್ಷ. ಆಕೆಯ ದೃಢಸಂಕಲ್ಪ ಮತ್ತು ಉತ್ಸಾಹವು ಜನರನ್ನು ಪ್ರೇರೇಪಿಸುವುದನ್ನು ಮುಂದುವರೆಸಿದೆ, ಇದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ಆಶ್ಚರ್ಯಚಕಿತಗೊಳಿಸಿದೆ. ಕೈಗಾರಿಕೋದ್ಯಮಿ ಜೋಹಾನ್ನಾ ಕ್ವಾಸ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದು, ಈಕೆ ನನ್ನ ಮೋಟಿವೇಷನ್ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. "ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಯಾರೋ ಸರಿಯಾಗಿ ಹೇಳಿದ್ದಾರೆ" ಎಂದು ಬರೆದರೆ, ಮತ್ತೊಬ್ಬರು "ಸ್ಫೂರ್ತಿದಾಯಕ" ಎಂದು ಕಾಮೆಂಟ್ ಮಾಡಿದ್ದಾರೆ.
ನಾನು ನನ್ನ 40 ರ ಹರೆಯದಲ್ಲಿದ್ದೇನೆ ಮತ್ತು ಎದ್ದು ನಿಲ್ಲಲು ನೋವುಂಟುಮಾಡುತ್ತದೆ. ಅವರು ತಮ್ಮ 20 ರ ಹರೆಯದ ಕೆಲವು ಜನರಿಗಿಂತ ಹೆಚ್ಚು ಶಕ್ತಿಯನ್ನು ಪಡೆದಿದ್ದಾರೆ. ಅವರು ವಿಶ್ವದ ಅತ್ಯಂತ ಹಳೆಯ ಸಕ್ರಿಯ ಜಿಮ್ನಾಸ್ಟ್ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರು ಮೊದಲು 10 ನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು 9 ದಶಕಗಳಿಂದ ಅದನ್ನು ಮಾಡಿಕೊಂಡು ಬಂದಿದ್ದಾರೆ'' ಎಂದು ಮತ್ತೊಬ್ಬರು ವಿವರಣೆ ನೀಡಿದ್ದಾರೆ.
ಈ ಅಜ್ಜಿಗೆ 98 ವರ್ಷ ಎಂದರೆ ಯಾರು ಸಹ ನಂಬುವುದಿಲ್ಲ. ಯಾರೋ ಮೇಕಪ್ ಮಾಡಿಕೊಂಡು ಬಂದಿರಬಹುದು ಸರಿಯಾಗಿ ಪರೀಕ್ಷಿಸಿ ಹೇಳಿ ಎಂದು ಒಬ್ಬರು ಸಂಶಯಾಸ್ಪದವಾಗಿ ಬರೆದುಕೊಂಡಿದ್ದಾರೆ. ಆದರೆ 98 ವರ್ಷದ ಅಜ್ಜಿಯ ಜಿಮ್ನಾಸ್ಟಿಕ್ ಸಾಹಸ ಅನ್ನೋದರಲ್ಲಿ ಯಾವ ಅನುಮಾನವು ಉಳಿದಿಲ್ಲ.
ಆಕೆ ಫಿಟ್ ಆಗಿರಲು ತನ್ನದೇ ನಿಯಮ ರೂಪಿಸಿಕೊಂಡಿದ್ದಾರಂತೆ. ಆಹಾರದ ಜೊತೆ ಹಣ್ಣು, ಹಾಲು, ನಿತ್ಯವು ವ್ಯಾಯಾಮ ಹೀಗೆ ಕಟ್ಟುನಿಟ್ಟಿನ ನಿಯಮ ಹಾಕಿಕೊಂಡಿದ್ದಾಳಂತೆ. ಇದೇನು ಒಂದು ದಿನಕ್ಕೆ ಹಾಕಿರುವ ಕ್ರಮವಲ್ಲ ನಿತ್ಯವೂ ಇದನ್ನೇ ಪಾಲಿಸುತ್ತಿರುವ ಆಕೆ ಈಗಲೂ ಯುವಕರು ನಾಚುವಂತ ಫಿಟ್‌ನೆಸ್ ಹೊಂದಿದ್ದಾಳೆ.



Click it and Unblock the Notifications
