Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಹಳೆಯ ದಿನಗಳೇ ಸುಂದರ..! 90 ದಶಕದ ಮದುವೆ ಸಂಭ್ರಮ ವೈರಲ್..!
ನೀವು 1990 ಅಥವಾ ಅದಕ್ಕೂ ಮುನ್ನ ಜನಿಸಿದ್ದವರಾಗಿದ್ದರೆ ಅಂದಿನ ಕಾಲದ ಹಬ್ಬ, ಮದುವೆ ಕಾರ್ಯಕ್ರಮಗಳ ಅಂದ ನಿಮಗೆ ಮಾತ್ರ ಗೊತ್ತಿರುತ್ತೆ. ಈಗಿನಂತೆ ಆಡಂಬರ, ಡಿಜಿಟಲ್ ಯುಗದ ಮದುವೆ ಕಾರ್ಯಕ್ರಮಗಳಿಂದು ಕೇವಲ ಪ್ರತಿಷ್ಠೆ ಮತ್ತು ಸಂಪತ್ತು ತೋರಿಸಲು ಅವರೇ ಮಾಡಿಕೊಳ್ಳುತ್ತಿರುವ ಸಮಾರಂಭದಂತೆ ಕಾಣುತ್ತವೆ.
ಆದ್ರೆ 90 ದಶಕ ಮದುವೆಯ ಸಂಭ್ರಮ ಹೇಗಿರುತ್ತಿದ್ದವು ಎಂಬುದನ್ನು ನೀವೆ ಊಹಿಸಿಕೊಳ್ಳಿ. ಅಲ್ಲಿ ಸುಂದರವಾಗಿ ಹೂವಿನಿಂದ ಅಲಂಕರಿಸಿ ಮನೆ, ಮನೆ ಮುಂದೆ ತೋರಣ, ನೆಲಕ್ಕೆ ಸಗಣಿ ಬಳಿದು ರಂಗೋಲಿ ಹಾಕಿದ್ದರೆ ತಲೆ ಎತ್ತಿದರೆ ಚಪ್ಪರ ಹಾಕಿರುತ್ತಿದ್ದರು. ಆದ್ರೆ ಈಗ ಇದೆಲ್ಲಾ ಬದಲಾಗಿದೆ. ನೆಲಕ್ಕೆ ರಂಗೋಲಿ ಬದಲು ಮ್ಯಾಟ್ ಹಾಕಿರುತ್ತಾರೆ. ಚಪ್ಪರದ ಬದಲು ಶಾಮಿಯಾನ ಬಂದು ನಿಂತಿರುತ್ತದೆ.

ಇದಿಷ್ಟೇ ಅಲ್ಲ ಅಂದಿನ ಮದುವೆಯಲ್ಲಿ ಇಡೀ ಊರಿಗೆ ಊರು ಸೇರುತ್ತಿತ್ತು. ಪ್ರತಿಯೊಬ್ಬರ ಅವರ ಮದುವೆಯ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು, ಅದು ಊಟ, ತಿಂಡಿ ವಿಚಾರವಿರಲಿ ಅಥವಾ ಮದುವೆಯ ಕೆಲಸಗಳಲ್ಲಿ ಆಗಿರಲಿ ಬಂದು ಕೈ ಜೋಡಿಸುತ್ತಿದ್ದರು. ಆದರೆ ಇಂದು ಇದೆಲ್ಲಾ ಬದಲಾಗಿದೆ. ಈಗ ಏನಿದ್ದರು ಹಣ. ಎಲ್ಲ ಕೆಲಸಗಳು ಹಣದಿಂದಲೇ ಅಳೆಯಾಲಗುತ್ತದೆ.
ಕೆಲಸಗಳಿಗೂ ಆಳುಗಳು ಬರುತ್ತಾರೆ. ಗ್ಯಾಸ್ ಒಲೆಗಳು, ಇಲ್ಲವೆ ಮಂಟಪದಲ್ಲಿ ಮದುವೆ, ದೊಡ್ಡ ದೊಡ್ಡ ಹಾಲ್‌ಗಳು, ಮೈತುಂಬ ಚಿನ್ನ, ಹೀಗೆ ಹಣದ ಹೊಳೆಯ ಜೊತೆಗೆ ಸಂಪ್ರದಾಯಗಳು ಸಹ ಬದಲಾಗಿವೆ. ಹಿಂದಿನ ಕಾಲಸ ಸಂಪ್ರದಾಯಗಳಿಗೆ ವಿದಾಯ ಹೇಳಿರುವ ಮಂದಿ ಈಗ ತಮ್ಮದೇ ಶೈಲಿಯ ಮದುವೆಗಳಿಗೆ ಒಗ್ಗಿಕೊಂಡಿದ್ದಾರೆ.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಿಂದಿನ ಕಾಲದ ಮದುವೆಯ ವಿಡಿಯೋವೊಂದು ಹರಿದಾಡುತ್ತಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸುವ ಜೊತೆಗೆ ನೋಡಿದವರನ್ನು ಮತ್ತೆ 90ರ ದಶಕಕ್ಕೆ ಕೊಂಡೊಯ್ದಿದೆ. ವಿಡಿಯೋದಲ್ಲಿ ಹಿಂದಿನ ಕಾಲದ ನೆನೆಪು ಮತ್ತೆ ಮರುಕಳಿಸುವಂತೆ ಮಾಡಿದೆ.
ಹಿಂದಿನ ಕಾಲದ ರೂಢಿ ಸಂಪ್ರದಾಯಗಳು, ವಸ್ತ್ರ, ವಿನ್ಯಾಸ, ವಧು ವರರ ಮನೆಯ ಅಲಂಕಾರಗಳು ಎಲ್ಲರನ್ನು ಒಮ್ಮೆ ಹಿಂದಕ್ಕೆ ಕರೆದೊಯ್ಯುತ್ತದೆ. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಎಸಿಎಸ್ ಕಡಕೊಲ್ ಎಂಬುವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಎಲ್ಲರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿದ ಮಂದಿ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ತಮ್ಮ ದಿನಗಳು ನೆನಪಾಗಿವೆ. ಹಳೆಯ ದಿನಗಳೇ ಚೆನ್ನಾಗಿದ್ದವು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಅಂದು ಹಣ, ಚಿನ್ನ, ಬಂಗಾರ ಯಾವುದು ಇಲ್ಲದಿದ್ದೂ ಖಷಿಗೆ ಕೊರತೆ ಇರಲಿಲ್ಲ. ಅಲ್ಲಿ ಎಲ್ಲರಲ್ಲೂ ಮದುವೆಯ ಸಂಭ್ರಮವಿತ್ತು. ಆದರೆ ಇಂದು ಹಣವಿದೆ ಆದರೆ ಹಳೆಯ ದಿನಗಳ ಸಂತೋಷ ಆ ನೆನಪುಗಳು ಮಾತ್ರ ಹಾಗೆ ಉಳಿದಿಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ 50 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೆ ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಜೊತೆಗೆ ಕಮೆಂಟ್‌ಗಳ ಮಾಡುತ್ತಿದ್ದಾರೆ. ಎಲ್ಲರಲ್ಲೂ ಈ ವಿಡಿಯೋ ಹಳೆಯ ದಿನಗಳ ನೆನಪಿಸಿದೆ. ಇಂಟರ್‌ನೆಟ್, ಮೊಬೈಲ್, ಆಡಂಬರ ಇಲ್ಲದ ಸರಳ ಜೀವನ ಮತ್ತೆ ಹಿಂದಿರುಗಿ ಬರಲಿ ಎಂಬುದು ಎಲ್ಲರ ಬಯಕೆಯಾಗಿದೆ.
ಈ ವಿಡಿಯೋ ನೋಡಿದ ಬಳಿಕ ನಿಮಗೆ ಏನನಿಸುತ್ತಿದೆ? ಮತ್ತೆ ನಿಮ್ಮ ಸಂಬಂಧಿಕರ ಇಲ್ಲವೆ ಅಕ್ಕ ಪಕ್ಕದ ಮನೆಯ ಇಲ್ಲ ನಿಮ್ಮದೇ ಮದುವೆಯ ನೆನಪು ಮರುಕಳಿಸಿರಬಹುದು. ಹೀಗೆ ಹಳೆಯ ನೆನಪುಗಳು ಮತ್ತೆ ಮತ್ತೆ ನಮ್ಮ ಮುಂದೆ ಬರುತ್ತಿರಬೇಕು ಎಂಬುದು ವಿಡಿಯೋ ನೋಡಿದವರ ಹೆಬ್ಬಯಕೆಯಾಗಿದೆ.



Click it and Unblock the Notifications
