Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಧಮಾಕಾ: ನೌಕರರಿಗೆ 9 ದಿನ ರಜೆ ಘೋಷಿಸಿದ ಕಂಪನಿ! 'ನೆಮ್ಮದಿಯಾಗಿ ನಿದ್ರೆ ಮಾಡಿ' ಎಂದ ಸಿಇಓ
ದೀಪಾವಳಿಗೆ ಬಂಪರ್ ಆಫರ್! ನೌಕರರಿಗೆ 9 ದಿನ ರಜೆ ಘೋಷಿಸಿದ ಕಂಪನಿ. ಮೊದಲು ನಿದ್ದೆ ಮಾಡಿ ಎಂದ ಸಿಇಒ. ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಎಂದರೆ ಸಾಕು, ಬಹುತೇಕ ಎಲ್ಲಾ ಕಂಪನಿಗಳಲ್ಲಿ ಉದ್ಯೋಗಿಗಳು ತಮ್ಮ ಕೆಲಸವನ್ನು ಬೇಗನೆ ಮುಗಿಸಲು ಹಗಲು ರಾತ್ರಿ ಶ್ರಮಿಸುತ್ತಿರುತ್ತಾರೆ. ಹೆಚ್ಚಿದ ಕೆಲಸದ ಒತ್ತಡದಿಂದ ಉದ್ಯೋಗಿಗಳು ದೈಹಿಕ ಮತ್ತು ಮಾನಸಿಕ ಬಳಲಿಕೆಯಿಂದ ಕೂಡಿರುವುದು ಸಾಮಾನ್ಯ. ಆದರೆ, ಇದೇ ಸಂದರ್ಭದಲ್ಲಿ ದೆಹಲಿಯ ಒಂದು ಖಾಸಗಿ ಕಂಪನಿ ತನ್ನ ಉದ್ಯೋಗಿಗಳಿಗೆ ಕೇವಲ ಒಂದೆರಡು ದಿನವಲ್ಲ, ಬರೋಬ್ಬರಿ 9 ದಿನಗಳ ಸುದೀರ್ಘ ರಜೆಯನ್ನು (Diwali 9 Days Holiday) ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಹೌದು, ಈ ರಜೆ ಘೋಷಣೆ ಬಂದಿರುವುದು ಯಾವುದೇ ನಕಲಿ (Fake) ಇಮೇಲ್‌ನಿಂದಲ್ಲ. ಬದಲಿಗೆ, ಸ್ವತಃ ಕಂಪನಿಯ ಸಿಇಓ ಕಡೆಯಿಂದ ಎನ್ನುವುದು ವಿಶೇಷ. ಈ ಇಮೇಲ್ ಓದಿದ ಉದ್ಯೋಗಿಗಳು ಮೊದಲು ಅಚ್ಚರಿಗೊಳಗಾದರೂ, ಸುದ್ದಿ ಖಚಿತವಾಗುತ್ತಿದ್ದಂತೆ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ರಜೆ ಘೋಷಣೆಯ ಜೊತೆಗೆ ಸಿಇಓ ನೀಡಿದ ವಿಶೇಷ ಸಂದೇಶ. 'ಇಮೇಲ್ ಸ್ಥಗಿತಗೊಳಿಸಿ, ಮೊದಲು ನಿಮ್ಮ ನಿದ್ರೆಯನ್ನು ಪೂರ್ಣಗೊಳಿಸಿ'

ಯಾವುದು ಆ ಕಂಪನಿ?
ಒಂದು ಕಡೆ 'ವರ್ಕ್ ಫ್ರಂ ಹೋಮ್' ಮಾದರಿ ಕೊನೆಗೊಂಡು, ಉದ್ಯೋಗಿಗಳಿಗೆ ಕಚೇರಿಗೆ ಬರುವ ಒತ್ತಡ ಹೆಚ್ಚುತ್ತಿದೆ. ಹಬ್ಬಗಳ ಮುನ್ನವೇ ಕೆಲಸ ಮುಗಿಸುವಂತೆ ಒತ್ತಾಯಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಉದ್ಯೋಗಿಗಳಿಗೆ 9 ದಿನಗಳ ರಜೆ (Diwali 9 Days Company Holiday) ನೀಡಿ, 'ನಿದ್ರೆ ಮಾಡಿ' ಎಂದು ಹೇಳಿರುವ ಕಂಪನಿ ಯಾವುದು ಎಂಬ ಕುತೂಹಲ ಎಲ್ಲರಲ್ಲಿ ಮೂಡುವುದು ಸಹಜ.
ಈ ಕಂಪನಿ ದೆಹಲಿ ಮೂಲದ ಪಿಆರ್ ಸಂಸ್ಥೆ (PR Company) ಆಗಿದ್ದು, ಇದರ ಹೆಸರು 'ಎಲೈಟ್ ಮಾರ್ಕ್' (Elite Marque). ಈ ಕಂಪನಿಯ ಸಿಇಓ ರಜತ್ ಗ್ರೋವರ್ ಅವರು ವೈಯಕ್ತಿಕವಾಗಿ ಇಮೇಲ್ ಕಳುಹಿಸುವ ಮೂಲಕ ತಮ್ಮ ಉದ್ಯೋಗಿಗಳಿಗೆ ಈ ಆಶ್ಚರ್ಯಕರ ರಜೆಯನ್ನು ನೀಡಿದ್ದಾರೆ.
ಆ ಇಮೇಲ್‌ನಲ್ಲಿ ಏನಿತ್ತು?
ರಜತ್ ಗ್ರೋವರ್ ಅವರು ಕಳುಹಿಸಿದ ಈ ಇಮೇಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅವರ ಇಮೇಲ್‌ನ ಸಾರಾಂಶ ಹೀಗಿದೆ.
"ನೀವು ಈ ದೀಪಾವಳಿಗೆ ನಿಮ್ಮ ಕಚೇರಿಯ ಇಮೇಲ್‌ಗಳನ್ನು ಸ್ಥಗಿತಗೊಳಿಸಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಡರಾತ್ರಿಯವರೆಗೆ ಕುಳಿತು ನಕ್ಕು ನಲಿಯಿರಿ. ಸಿಹಿ ತಿಂಡಿಗಳನ್ನು ಸವಿಯಿರಿ, ಹಬ್ಬವನ್ನು ಪೂರ್ಣವಾಗಿ ಆನಂದಿಸಿ, ಮತ್ತು ಸಾಕಷ್ಟು ನಿದ್ರೆ ಮಾಡಿ." ಈ ಇಮೇಲ್ ಈಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ರಜತ್ ಗ್ರೋವರ್ ಅವರು, ರಜೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಆಫೀಸ್ ಇಮೇಲ್ ಅಥವಾ ಚಾಟ್ ವಿಭಾಗಗಳನ್ನು ತೆರೆಯದಂತೆ ನೌಕರರಿಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ.
ಸಿಇಓ ಕೊಟ್ಟ ಸಲಹೆ ಏನು?
ಸಿಇಓ ರಜತ್ ಗ್ರೋವರ್ ಅವರ ಈ ನಡೆಯು ಉದ್ಯೋಗಿಗಳಿಗೆ ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯುವಂತೆ ನೀಡಿದ ಅಮೂಲ್ಯ ಸಲಹೆಯಾಗಿದೆ. ಅವರು ತಮ್ಮ ಉದ್ಯೋಗಿಗಳು ಈ ರಜೆಯನ್ನು ಸಂಪೂರ್ಣವಾಗಿ ಬಳಸಿಕೊಂಡು, ಮನಸ್ಸು ಮತ್ತು ದೇಹ ಎರಡನ್ನೂ ಪುನಶ್ಚೇತನಗೊಳಿಸಬೇಕು ಎಂದು ಬಯಸಿದ್ದಾರೆ. ರಜೆಯ ನಂತರ ಉದ್ಯೋಗಿಗಳು ಸಂಪೂರ್ಣ ಶಕ್ತಿ ಮತ್ತು ಹೊಸ ಉತ್ಸಾಹದಿಂದ ಕೆಲಸಕ್ಕೆ ಮರಳಬೇಕು ಎಂಬುದು ಅವರ ಆಶಯ.
ಒಟ್ಟಾರೆಯಾಗಿ, ಈ ಸುದ್ದಿ ಕೇಳಿದ ಇತರ ಕಂಪನಿಗಳ ಉದ್ಯೋಗಿಗಳು ಕೂಡ, ತಮ್ಮ ಕಂಪನಿಯ ಸಿಇಓ ಕಡೆಯಿಂದ ಇಂತಹದೇ ಒಂದು 'ಸರ್ಪ್ರೈಸ್ ಮೇಲ್' ಗಾಗಿ ಕಾಯುತ್ತಿರುವುದಂತೂ ಸತ್ಯ. ಈ ನಡೆಯು ಉದ್ಯೋಗಿ ಕೇಂದ್ರಿತ ಸಂಸ್ಕೃತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದೆ.



Click it and Unblock the Notifications