Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
83ರ ವೃದ್ಧೆಯ ಬಂಗೀ ಜಂಪಿಂಗ್: ವಿಡಿಯೋ ನೋಡಿ ದಂಗಾದ ಮಂದಿ!
ಬಂಗೀ ಜಂಪಿಂಗ್ ಹೆಸರು ಕೇಳಿದ್ರೆ ಹಲವರಿಗೆ ಪ್ರವಾಸದ ನೆನಪಾಗುತ್ತೆ. ವಿದೇಶಗಳಲ್ಲಿ ಬಹಳ ಫೇಮಸ್ ಆಗಿದ್ದ ಬಂಗೀ ಜಂಪಿಂಗ್ ಈಗ ಭಾರತದಲ್ಲೂ ಬಲು ಫೇಮಸ್ ಆಗಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಈಗ ಬಂಗೀ ಜಂಪಿಂಗ್ ಮಾಡಬಹುದು. ಆದ್ರೆ ಬಂಗೀ ಜಂಪಿಂಗ್ ಮಾಡೋದು ಅಂದ್ರೆ ದೊಡ್ಡ ಸಾಹಸ ಮಾಡಿದಂತೆ.
ಏಕೆಂದರೆ ಸೋಂಟಕ್ಕೆ ಹಗ್ಗ ಕಟ್ಟಿಕೊಂಡು ಎತ್ತರ ಜಾಗದಿಂದ ನೂರಾರು ಅಡಿ ಕೆಳಗೆ ಜಿಗಿಯುವುದು ಅಂದ್ರೆ ಕೈಕಾಲು ನಡುಗಿಸುವ ಕ್ರಿಯೆ. ಹೀಗಾಗಿ ಎಲ್ಲರಿಂದಲೂ ಈ ಬಂಗೀ ಜಂಪಿಂಗ್ ಮಾಡೋದು ಅಷ್ಟು ಸುಲಭದ ಮಾತಲ್ಲ. ಯುವ ಸಮುದಾಯ ಎಲ್ಲಾ ರೀತಿಯ ಸಾಹಸ ಕ್ರೀಡೆಗಳಿಂದ ಹಿಡಿದು ಅಡ್ವೆಂಚರ್ ಅನಿಸುವ ಎಲ್ಲಾ ವಿಧದ ಪ್ರಯೋಗಗಳ ಮಾಡಿರುತ್ತಾರೆ. ಆದ್ರೆ ಬಂಗೀ ಜಂಪಿಂಗ್ ಅಂದರೆ ಹಲವರು ಭಯ ಪಡುತ್ತಾರೆ.

ಇನ್ನು ಒಲ್ಲೊಂದು ಕಡೆ ಬರೋಬ್ಬರಿ 83 ವರ್ಷ ವೃದ್ಧೆಯೊಬ್ಬರು ಈ ಬಂಗೀ ಜಂಪಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 83 ವರ್ಷ ಅಂದರೆ ಎದ್ದು ಓಡಾಡುವುದೇ ಕಷ್ಟ ಎನ್ನುವಂತಹ ಸ್ಥಿತಿ. ಆದ್ರೆ ಈ ವೃದ್ಧೆ ಬಂಗೀ ಜಂಪಿಂಗ್ ಅನ್ನುವ ಸಾಹಸಮಯ ಜಿಗಿತ ಮಾಡಿ ಎಲ್ಲರಲ್ಲೂ ಅಚ್ಚರಿ ತಂದಿದ್ದಾರೆ.
ಹೌದು ಭಾರತದ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಋಷಿಕೇಶದಲ್ಲಿರುವ ಪ್ರಸಿದ್ಧ ಬಂಗೀ ಜಂಪಿಂಗ್‌ನಲ್ಲಿ 82 ವರ್ಷದ ವೃದ್ಧೆಯೊಬ್ಬರು ಆಗಸದಿಂದ ಜಿಗಿದು ಎಲ್ಲರಲ್ಲೂ ಅಚ್ಚರಿ ತಂದರು. ಅವರು ಬರೋಬ್ಬರಿ 117 ಅಡಿ ಎತ್ತರದಿಂದ ಜಿಗಿದಿದ್ದಾರೆ. ಋಷಿಕೇಶದ ಶಿವಪುರಿಯಲ್ಲಿರುವ ಅತ್ಯಂತ ಎತ್ತರದ ಈ ಬಂಗೀ ಜಂಪಿಂಗ್‌ನಲ್ಲಿ ಈ ವೃದ್ಧೆ ಈಗ ದಾಖಲೆ ಬರೆದಿದ್ದಾರೆ.
ಈ ಪೋಸ್ಟ್ ಅನ್ನು 'globesome.india' ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಅನ್ನು 6 ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ ಮತ್ತು 4 ಮಿಲಿಯನ್ ವೀಕ್ಷಣೆ ಕಂಡಿದೆ. ಈ ವಿಡಿಯೋ ನೋಡಿದ ಮಂದಿ ಬಾಯಿ ಮೇಲೆ ಬೆರಳಿಟ್ಟು ನೋಡುವಂತಾಗಿದೆ. ಋಷಿಕೇಶದಲ್ಲಿ ಬಂಗೀ ಜಂಪಿಂಗ್ ಮಾಡಿದ ವೃದ್ಧೆ ವಿದೇಶಿಗರಂತೆ ಕಾಣುತ್ತಾರೆ, ಆದ್ರೆ ಅವರ ಈ ಧೈರ್ಯಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.
59 ವರ್ಷದ ಮಹಿಳೆಯಿಂದಲೂ ಬಂಗೀ ಜಂಪಿಂಗ್
ಇನ್ನು ಇದೇ ಋಷಿಕೇಶದ ಬಂಗೀ ಜಂಪಿಂಗ್ ಕೇಂದ್ರದಲ್ಲಿ ಮತ್ತೋರ್ವ 59 ವರ್ಷದ ಮಹಿಳೆ ಕೂಡ ಬಂಗೀ ಜಂಪಿಂಗ್ ಮಾಡಿ ಎಲ್ಲರಲ್ಲೂ ಅಚ್ಚರಿಗೆ ಕಾರಣರಾದರು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 117 ಅಡಿ ಎತ್ತರದಿಂದ ಜಿಗಿದು ಅಚ್ಚರಿ ಮೂಡಿಸಿದರು. ಈ ಎರಡೂ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಶಾಕ್ ಆಗಿದ್ದಾರೆ.
ವಿಡಿಯೋ ನೋಡಿದವರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದೊಂದು ಅಪಾಯಕಾರಿ ಕ್ರೀಡೆ, ಆದರೂ ಅವರ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಇಷ್ಟು ವರ್ಷವಾದರೂ ಇಂತಹ ಅಪಾಯಕಾರಿ ಕ್ರೀಡೆಗೆ ಮುಂದಾಗೋದು ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತೆ. ವೃದ್ಧೆಯ ಛಲ ನೋಡಿದ್ರೆ ಯುವಕರು ಕೂಡ ನಾಚಬಹುದು. ಅವರಿಗೊಂದು ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವೃದ್ಧೆ ಹಾಗೂ ಮಹಿಳೆಯ ಈ ಸಾಹಸ ನೋಡಿ ಎಲ್ಲರು ಅಚ್ಚರಿಗೊಳಗಾಗಿದ್ದಾರೆ. ಹಾಗೆ ಮತ್ತೆ ಕೆಲವರು ತಾವೂ ಕೂಡ ಈ ಬಂಗೀ ಜಂಪಿಂಗ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಹಲವು ಪ್ರವಾಸಿ ತಾಣಗಳಲ್ಲಿ ಈಗ ಬಂಗೀ ಜಂಪಿಂಗ್ ಮಾಡುವ ಅವಕಾಶಗಳಿವೆ. ನೀವು ಕೂಡ ಈ ಸಾಹಸವನ್ನು ಒಮ್ಮೆಯಾದರು ಟ್ರೈ ಮಾಡಿ ನೋಡಿ.!



Click it and Unblock the Notifications
