Latest Updates
-
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ!
ಸುತ್ತಾಡಲು ಬಂದವರಿಗೆಲ್ಲ ಸಿಗುತ್ತಿವೆ ವಜ್ರಗಳು..! ಒಂದೇ ಪಾರ್ಕ್‌ನಲ್ಲಿ 798 ಡೈಮಂಡ್ ಪತ್ತೆ..!
ಆಭರಣಗಳಲ್ಲೇ ಅತ್ಯಂತ ದುಬಾರಿ ಎಂದರೆ ಅಂದರು ಅನ್‌ಕಟ್ ಡೈಮಂಡ್‌ನಿಂದ ಮಾಡಲಾದ ಆಭರಣಗಳಾಗಿರುತ್ತೆ. ಏಕೆಂದರೆ ವಜ್ರಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಭೂಮಿ ಆಳದಲ್ಲಿ ಅದೇಷ್ಟೋ ಮೈಲುಗಳ ದೂರ ಟನ್‌ಗಟ್ಟಲೇ ಅಗೆದಾಗ ಒಂದೆರಡು ಕ್ಯಾರಟ್‌ನ ವಜ್ರಗಳು ಕಣ್ಣಿಗೆ ಬೀಳುತ್ತವೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ವಜ್ರದ ಗಣಿಗಳನ್ನು ರಷ್ಯಾ ದೇಶವು ಹೊಂದಿದೆ. ಹಾಗಾದ್ರೆ ಅಲ್ಲಿ ಎಷ್ಟು ವಜ್ರ ಇರಬಹುದು ಊಹಿಸಿ.
ಆದ್ರೆ ನಾವಿಲ್ಲಿ ಹೇಳ ಹೊರಟಿರೋದು ನೀವು ಸುಮ್ಮನೆ ನಡೆದಾಡಿದಲೆಲ್ಲಾ ವಜ್ರಗಳು ನಿಮ್ಮ ಕಾಲಿಗೆ ಸಿಕ್ಕರೆ ಹೇಗೆ? ಹೌದು ಈ ರೀತಿಯ ವಿದ್ಯಮಾನವೊಂದು ನಡೆಯುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ. ಅಮೆರಿಕದ ಪಾರ್ಕ್‌ವೊಂದರಲ್ಲಿ ಜನರಿನ ದಿನವೂ ವಜ್ರಗಳು ಸಿಗುತ್ತಿದ್ದು, ಈ ವಜ್ರಗಳ ಎತ್ತಿಕೊಳ್ಳಲು ಜನ ಈ ಪಾರ್ಕ್‌ಗೆ ಮುಗಿಬಿದ್ದಿದ್ದಾರೆ.

ಹಿಂದೆಲ್ಲಾ ನಾವು ನಿಧಿ ಕಥೆ ಕೇಳಿದಂತೆ ಈ ಕಥೆ ಈಗ ಅಮೆರಿಕದಲ್ಲಿ ನಿಜವಾಗುತ್ತಿದೆ. ಏಕೆಂದರೆ ಈ ಪಾರ್ಕ್‌ಗೆ ಬರುವ ಅದೃಷ್ಟಶಾಲಿಗಳಿಗೆ ನಿತ್ಯವೂ ಡೈಮಂಡ್ ಸಿಗುತ್ತಿದೆಯಂತೆ. ಹೀಗಂತ ಖುದ್ದು ಪಾರ್ಕ್ ಆಡಳಿತ ಮಂಡಳಿಯೇ ಅಂಕಿ ಅಂಶಗಳ ಜೊತೆಗೆ ತಿಳಿಸಿದೆ.
ಅಮರಿಕದ ಅರ್ಕಾನ್ಸಾಸ್‌ನಲ್ಲಿರುವ 922 ಎಕರೆಯ ಡೈಮಂಡ್ಸ್ ಸ್ಟೇಟ್ ಪಾರ್ಕ್‌ನಲ್ಲಿ ಅಕ್ಷರಶಃ ಈಗ ವಜ್ರಗಳು ಸಿಗುತ್ತಿವೆ. ಡಿಸೆಂಬರ್ 2022 ರಲ್ಲಿ, ಅರ್ಕಾನ್ಸಾಸ್‌ನ ವ್ಯಕ್ತಿಯೊಬ್ಬರು 4.87-ಕ್ಯಾರೆಟ್ ಮೌಲ್ಯದ ವಜ್ರವನ್ನು ಇದೇ ಪಾರ್ಕ್‌ನಲ್ಲಿ ಸುತ್ತಾಡುವಾಗ ಗುರುತಿಸಿದ್ದರು. ಇವಾನ್ಸ್ ಎಂಬಾತ ತನ್ನ ಗೆಳತಿಯೊಂದಿಗೆ ಈ ಪಾರ್ಕ್‌ಗೆ ಸುತ್ತಾಡಲು ಬಂದಾಗ ಗ್ಲಾಸ್‌ನಂತಹ ಸಣ್ಣ ವಜ್ರ ಹೊಳೆಯುತ್ತಿತ್ತು. ಅದನ್ನು ಅವರು ಎತ್ತಿಕೊಂಡಿದ್ದರು ಆದರೆ ಅವರಿಗೆ ಇದು ನಿಜವಾದ ವಜ್ರ ಎಂಬುದು ಆ ವೇಳೆ ತಿಳಿದಿರಲಿಲ್ಲ. ಈ ಘಟನೆ ಬಳಿಕ ಡೈಮಂಡ್ಸ್ ಸ್ಟೇಟ್ ಪಾರ್ಕ್ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿತ್ತು.
ಫೋಟೋ ಕೃಪೆ (ಡೈಮಂಡ್ಸ್ ಸ್ಟೇಟ್ ಪಾರ್ಕ್)
ಆದರೆ ಈ ಹರಳನ್ನು ಪರೀಕ್ಷೆಗೊಳಪಡಿಸಿದಾಗ ವಜ್ರ ಎಂಬುದು ಖಾತರಿಯಾಗಿತ್ತು. ಮನೆಗೆ ತಲುಪಿದ ನಂತರ, ಅವರು ಜೆಲ್ಲಿ ಬೀನ್ ಗಾತ್ರದ ವಸ್ತುವನ್ನು ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೇರಿಕಾಕ್ಕೆ ಕಳುಹಿಸಿದರು ಮತ್ತು ಅವರು ಬಣ್ಣರಹಿತ ಬಿಳಿ ವಜ್ರವನ್ನು ತಮ್ಮದಾಗಿಸಿಕೊಂಡಿದ್ದರು. ಈ ಘಟನೆಯನ್ನು ಪಾರ್ಕ್ ಅಧಿಕಾರಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡರು. ಇದಾದ ಬಳಿಕ ಪಾರ್ಕ್‌ಗೆ ಜನರ ಆಗಮನ ಹೆಚ್ಚಾಯಿತು.
ವಜ್ರಗಳ ಹುಡುಕಲೆಂದೇ ಜನ ಈ ಪಾರ್ಕ್‌ಗೆ ಬರುತ್ತಿದ್ದರು. ಒಂದು ದಿನ ಅರ್ಕಾನ್ಸಾಸ್‌ನ ಮೌಮೆಲ್ಲೆಯ ಕೆವಿನ್ ಕಿನಾರ್ಡ್ ಎಂಬಾತನಿಗೆ ಬರೋಬ್ಬರಿ 9.07-ಕ್ಯಾರೆಟ್ ಮೌಲ್ಯದ ಕಂದು ಬಣ್ಣದ ವಜ್ರ ಸಿಕ್ಕಿಬಿಟ್ಟಿತು. ಇದು ಈ ಪಾರ್ಕ್‌ನಲ್ಲಿ ಸಿಕ್ಕ ಅತ್ಯಂತ ದೊಡ್ಡ ಗಾತ್ರದ ವಜ್ರ ಎನಿಸಿತು. ಆತ ಸಹ ಮೊದಲು ಇದನ್ನು ವಜ್ರ ಎಂದು ನಂಬಿರಲಿಲ್ಲ ಬಳಕ ಪರೀಕ್ಷೆಯಲ್ಲಿ ವಜ್ರವೆಂದು ಖಚಿತವಾಯಿತು.
ಮೊದಲು 'ಕ್ರೇಟರ್ ಆಫ್ ಡೈಮಂಡ್ಸ್' ಎಂದು ಕರೆಯಲಾಗುತ್ತಿದ್ದ ಈ ಪ್ರದೇಶವು 1972ರಲ್ಲಿ ಉದ್ಯಾನವನವಾಯಿತು ಎಂದು ಸಿಎನ್ಎನ್ ವರದಿ ಹೇಳಿದೆ. ಇಲ್ಲಿಗೆ ಬರುವವರಿಗೆ ಪ್ರತಿದಿನ ಸರಾಸರಿ ಒಂದು ಅಥವಾ ಎರಡು ವಜ್ರಗಳು ಸಿಗುತ್ತಿದ್ದವು. 2023ರಲ್ಲಿ ಉದ್ಯಾನದಲ್ಲಿ 125 ಕ್ಯಾರೆಟ್‌ಗಳಿಗಿಂತ ಹೆಚ್ಚು ಒಟ್ಟು 798 ವಜ್ರಗಳು ಸಿಕ್ಕ ವರದಿಯಾಯಿತು. ಇಲ್ಲಿ ಎಲ್ಲಾ ಬಣ್ಣದ ವಜ್ರಗಳು ಸಿಗಲು ಆರಂಭವಾಯಿತು. ಪಾರ್ಕ್‌ನ ಆಡಳಿತ ಮಂಡಳಿ ಸಹ ಇದಕ್ಕೆ ಯಾವುದೇ ಅಡ್ಡಿಪಡಿಸದೆ ಪಾರ್ಕ್‌ನಲ್ಲಿ ವಜ್ರ ಹುಡುಕಲು ಅನುವು ಮಾಡಿಕೊಟ್ಟಿತು. ಹೀಗಾಗಿ ಈ ಪಾರ್ಕ್ ಈಗ ವಜ್ರದ ಗಣಿಯಂತಾಗಿದೆ. ಅಲ್ಲಿಗೆ ಬರುವ ಜನರು ವಜ್ರಗಳ ಹುಡುಕುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ.



Click it and Unblock the Notifications
