Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಮಹಿಳೆಯ ಬಟ್ಟೆ ಹಾಕಿ ಬಂದು ಮತದಾನ..! 78 ವರ್ಷದ ವೃದ್ಧನ ಕಥೆ ನೀವು ಕೇಳಲೆಬೇಕು..!
ಭಾರತದಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆ ನಡೆಯುತ್ತಿದೆ. ಈಗಾಗಲೇ ಹಲವು ಭಾಗದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ. ಮತ್ತೆ ಹಲವು ಭಾಗದಲ್ಲಿ ನಡೆಯಬೇಕಿದೆ. ಕಳೆದ ಮೂರು ದಿನದ ಹಿಂದೆ ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೊದಲ ಹಂತದ ಮತದಾನ ನಡೆದಿದೆ.
ಆದರೆ ಬೆಂಗಳೂರಲ್ಲಿ ಮತದಾನದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಲೆ ಇದೆ. ಆಡಳಿತ ಸರಿಯಿಲ್ಲ, ನೀರಿಲ್ಲ, ರಸ್ತೆಯಿಲ್ಲ, ಕಸ ತೆಗೆಯುವರಿಲ್ಲ ಎಂದು ದೂರುಗಳ ಮೇಲೆ ದೂರು ಹೇಳುವ ಮಂದಿ ತಮ್ಮ ಜನ ಪ್ರತಿನಿಧಿಗಳ ಆಯ್ಕೆ ಮಾಡುವಲ್ಲಿ ಮುಂದೆ ಬರುವುದಿಲ್ಲ. ಆದರೆ ಮತ್ತೊಂದು ನಡೆಯಲಾಗದವರು ಸಹ ವೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ಎಲ್ಲರ ಮೆಚ್ಚುಗೆ ಗಳಿಸುವಂತಿತ್ತು.

ಮತದಾನ ಎಷ್ಟು ಮುಖ್ಯ ಅನ್ನೋದಕ್ಕೆ ಕೇರಳದ ಒಬ್ಬ ವಯೋವೃದ್ಧ ಈಗ ಉದಾಹರಣೆಯಾಗಿದ್ದಾರೆ. ಮತದಾನ ಮಾಡಿ ಅದು ನಿಮ್ಮ ಹಕ್ಕು ಎಂದು ಬಾಯಿ ಬಡಿದುಕೊಂಡರು ಮತಹಾಕದವರ ನಡುವೆ ಇಲ್ಲೊಬ್ಬ ವೃದ್ಧ ಇಳಿ ವಯಸ್ಸಿನಲ್ಲೂ ಮತದಾನ ಮಾಡಿ ಮಾದರಿಯಾಗಿದ್ದಾರೆ. ಆತ ಕೇವಲ ಮತದಾನ ಮಾಡಿದ್ದರೆ ಇಷ್ಟು ಪ್ರಾಮುಖ್ಯತೆ ನೀಡುವ ಅಗತ್ಯವಿರುತ್ತಿರಲಿಲಲ್ಲ. ಬದಲಿಗೆ ಆತ ಮಹಿಳೆಯರ ರೀತಿ ವೇಷ ಧರಿಸಿ ಮತಕೇಂದ್ರಕ್ಕೆ ಹೋಗಿ ಮತಚಲಾಯಿಸಿದ್ದಾರೆ.
ಐಡಿ ಕಾರ್ಡ್ ಯಡವಟ್ಟು
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ವೃದ್ಧರೊಬ್ಬರು ಮಹಿಳೆಯಂತೆ ನೈಟಿ ತೊಟ್ಟು ಮತಗಟ್ಟೆ ಬಂದಿದ್ದರು. ಅವರನ್ನು ನೋಡಿದವರು ಒಮ್ಮೆ ಇದೇನು ವಿಚಿತ್ರ ಇವರು ಯಾರು? ಏಕೆ ಮಹಿಳೆಯರ ವೇಷದಲ್ಲಿ ಬಂದಿದ್ದಾರೆ ಎಂದು ಅವಕ್ಕಾಗಿದ್ದರು.
78 ವರ್ಷದ ರಾಜೇಂದ್ರ ಪ್ರಸಾದ್ ಅವರು ಶುಕ್ರವಾರ ಎಝುಕೋಣೆಯ ತಮ್ಮ ಮತಗಟ್ಟೆಗೆ ಬಂದಾಗ ಎಲ್ಲರು ಅಚ್ಚರಿಯಿಂದ ಅವರನ್ನೇ ನೋಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಅವರು ಮಹಿಳೆಯರಂತೆ ಬಟ್ಟೆ ಧರಿಸಿ ಇಂಕ್ ಹಾಕಿರುವ ಬೆರಳನ್ನು ಕ್ಯಾಮರಾಗೆ ತೋರಿಸುತ್ತಿದ್ದಾರೆ.
ಆದರೆ ಅವರು ಮಹಿಳೆಯಂತೆ ವೇಷ ಹಾಕಲು ಚುನಾವಣಾ ಆಯೋಗ ಕಾರಣವಾಗಿದೆ. ಹೌದು ಅವರ ಮತದಾನ ಗುರುತಿನ ಚೀಟಿಯಲ್ಲಿ ಅವರನ್ನು ಮಹಿಳೆ ಎಂದು ತಪ್ಪಾಗಿ ನಮೂದಿಸಲಾಗಿದೆ. ಅವರ ಲಿಂಗವನ್ನು ಮಹಿಳೆ ಎಂದು ನಮೂದಿಸಲಾಗಿದ್ದು, ಈ ತಪ್ಪಿನ ವಿರುದ್ಧ ಪ್ರತಿಭಟಿಸಲು ಅವರು ಈ ರೀತಿ ಮಹಿಳೆ ಅಂತೆ ಕಾಣಲು ನೈಟಿ ಧರಿಸಿ ಮತದಾನ ಮಾಡಿದ್ದಾರೆ.
ಚುನಾವಣಾ ಆಯೋಗ ಹೇಳಿದರೆ ಮುಗೀತು. ಅದು ನಾನು ಮಹಿಳೆ ಎಂದು ತಿಳಿಸಿದೆ. ಹಾಗಾಗಿ ನಾನು ಮಹಿಳೆಯಂತೆ ಬಂದು ಮತ ಹಾಕಿದ್ದೇನೆ. ಅವರು ಹೇಳೋದನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ರಾಜೇಂದ್ರ ಪ್ರಸಾದ್ ವ್ಯಂಗ್ಯವಾಗಿ ಹೇಳಿದ್ದಾರೆ.
ಮತದಾರರ ಗುರುತಿನ ಚೀಟಿಯಲ್ಲಿ ತಪ್ಪು ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ದೋಷಗಳನ್ನು ಸರಿಪಡಿಸಿಕೊಳ್ಳು ಆಯೋಗ ಸಮಯಾವಕಾಶ ನೀಡುತ್ತದೆ. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ದೋಷಗಳನ್ನು ಸರಿಪಡಿಸಬಹುದು. ಆದರೆ ವೃದ್ಧನ ಗುರುತಿನ ಚೀಟಿಯಲ್ಲಿ ಲಿಂಗ ಬದಲಾವಣೆ ಕುರಿತು ತಪ್ಪು ತಿದ್ದಲು ಅವರಿಗೆ ಹಲವು ರೀತಿ ದಾಖಲೆ ಕೇಳಿದ್ದರಂತೆ. ಆದರೆ ಅದೆಲ್ಲವನ್ನು ನೀಡಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹಲವು ಬಾರಿ ಅಲೆದಾಡಿದರು ಪ್ರಯೋಜನವಾಗಲಿಲ್ಲವಂತೆ. ಹೀಗಾಗಿ ಅವರು ಮಹಿಳೆಯಂತೆ ವೇಷ ಧರಿಸಿ ಮತದಾನ ಮಾಡುತ್ತಿದ್ದಾರೆ.
ಅವರು ಪ್ರತಿಭಟನೆಯ ಜೊತೆಗೆ ಸಮಾಜಕ್ಕೆ ಮಾದರಿಯೂ ಆಗಿದ್ದಾರೆ. ಅವರ ಗುರುತಿನ ಚೀಟಿಯಲ್ಲಿ ತಪ್ಪಿದ್ದರೂ ಮತದಾನ ಮಾತ್ರ ತಪ್ಪಿಸಿಕೊಳ್ಳದೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 78 ವರ್ಷ ತುಂಬಿದ್ದರೂ ಮತದಾನ ಮಾಡಬೇಕು ಎಂಬ ಅರಿವು, ಛಲ ಅವರಲ್ಲಿದೆ. ಆದರೆ ಕೆಲವರು ಎಲ್ಲಾ ಸೌಲಭ್ಯವಿದ್ದರೂ ಮತಗಟ್ಟೆ ಬಂದು ಹಕ್ಕು ಚಲಾಯಿಸುವುದನ್ನೇ ಮರೆತು ಬಿಡುತ್ತಾರೆ.



Click it and Unblock the Notifications