Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ಈ 7 ಪ್ರಮುಖ ದೇವಾಲಯಗಳಲ್ಲಿ ಪುರುಷರು ಪ್ರವೇಶ ಮಾಡುವಂತೆಯೇ ಇಲ್ಲ
ಕೆಲವೊಂದು ದೇವಾಲಯಗಳಲ್ಲಿ ಮಹಿಳೆಯರಿಗೆ ಅವಕಾಶವಿರಲ್ಲ, ಆ ದೇವಾಲಯದ ಆವರಣದೊಳಗೆ ಮಹಿಳೆಯರಿಗೆ ಪ್ರವೇಶವಿರಲ್ಲ, ಇನ್ನು ಕೆಲವು ಕಡೆ ಮಹಿಳೆಯರು ಬರಬಹುದು ಆದರೆ ದೇವಾಲಯದ ಒಳಗಡೆ ಬರುವಂತೆಯಿಲ್ಲ, ಹೊರಗಡೆಯಿಂದಲೇ ದೇವರಿಗೆ ಕೈ ಮುಗಿದು ಹೋಗಬೇಕು.
ಹೀಗೆಯೇ ಭಾರತದಲ್ಲಿರುವ ಕೆಲವೊಂದು ದೇವಾಲಯಗಳಲ್ಲಿ ಪುರುಷರಿಗೂ ಅವಕಾಶವಿಲ್ಲ. ಹೌದು ಆ ದೇವಾಲಯದಲ್ಲಿ ಮಹಿಳೆಯರಷ್ಟೇ ಪೂಜೆ ಸಲ್ಲಿಸುತ್ತಾರೆ. ಪುರುಷರಿಗೆ ಅನುಮತಿಯಿಲ್ಲದ ದೇವಾಲಯಗಳು ಯಾವುವು ಎಂದು ನೋಡೋಣ:

1. ಕೇರಳದಲ್ಲಿರುವ ಆಟುಕಳ ಭಗವತಿ ಕ್ಷೇತ್ರ
ಇದು ಕೇರಳದ ತಿರುವಂತಪುರದಲ್ಲಿದೆ, ಮಕರ ಸಂಕ್ರಾಂತಿ ಸಮಯದಲ್ಲಿ ಇಲ್ಲಿ ದೊಡ್ಡ ಹಬ್ಬವನ್ನು ಮಾಡಲಾಗುವುದು, ಲಕ್ಷಾಂತರ ಮಹಿಳೆಯರು ಇಲ್ಲಿಗೆ ಬಂದು ಪೊಂಗಲ್ ಆಚರಿಸುತ್ತಾರೆ, ಆದರೆ ದೇವಾಲಯದ ಆವರಣದೊಳಗೆ ಪುರುಷರಿಗೆ ಅನುಮತಿ ಇರಲ್ಲ, ಮಹಿಳೆಯರೇ ದೇವಿಯನ್ನು ಪೂಜಿಸಿ ಹಬ್ಬವನ್ನು ಆಚರಿಸಲಾಗುವುದು.
2. ಕೇರಳದ ಚಾಕುಲುತುಕಾವು ದೇವಾಲಯ
ದರ್ಗೆಯ ದೇವಾಲಯವಾಗಿದೆ. ಇಲ್ಲಿ ನಾರಿ ಪೂಜೆ ಮಾಡಲಾಗುವುದು ಅಂದರೆ ಮಹಿಳೆಯರನ್ನು ಪೂಜಿಸಲಾಗುವುದು. ಇಲ್ಲಿಯೂ ಪುರುಷರು ಬರುವಂತಿಲ್ಲ, ಭಾರತದ ಎಲ್ಲಾ ಕಡೆಯಿಂದ ಮಹಿಳೆಯರು ಇಲ್ಲಿಗೆ ಬಂದು ಪೂಜೆಯನ್ನು ಸಲ್ಲಿಸಿ ಹೋಗುತ್ತಾರೆ.
3. ಅಸ್ಸಾಂನ ಕಾಮಕ್ಯ ದೇವಾಲಯ
ಮುಟ್ಟಿನ ದೇವಿ ಎಂದು ಕರೆಯಲ್ಪಡುವ ಕಾಮಕ್ಯ ದೇವಾಲಯ ಇದಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ದೇವಿ ಮುಟ್ಟಾಗುತ್ತಾಳೆ, ಅಚ್ಚರಿಯೆಂದರೆ ಅಲ್ಲಿರುವ ಯೋನಿ ಆಕಾರದ ಕಲ್ಲಿನಲ್ಲಿ ರಕ್ತಸ್ರಾವವಾಗುವುದು, ಈ ಸಮಯದಲ್ಲಿ ಸಮೀಪದಲ್ಲಿರುವ ಝರಿ ಕೂಡ ಕೆಂಪು ಬಣ್ಣಕ್ಕೆ ತಿರುಗುತ್ತದೆ. ದೇವಾಲಯದ ಒಳಭಾಗದಲ್ಲಿ ಬಿಳಿ ವಸ್ತ್ರಗಳನ್ನು ಹರಡಿ ಬಶಗಲು ಹಾಕಲಾಗುವುದು, ನಂತರ 3 ದಿನಗಳ ಬಳಿಕ ಬಾಗಿಲು ತೆಗಿಯಲಾಗುವುದು. ಕೆಂಪು ಬಣ್ಣಕ್ಕೆ ತಿರುಗಿದ ಬಟ್ಟೆಯನ್ನು ಕತ್ತರಿಸಿ ಪ್ರಸಾದವನ್ನಾಗಿ ಆಚರಿಸಲಾಗುವುದು.
4. ಕುಮಾರಿ ಅಮ್ಮನ್ ದೇವಾಲಯ
ಇದು ಕನ್ಯಾ ಕುಮಾರಿಯಲ್ಲಿ ಇರುವ ದೇವಾಲಯವಾಗಿದೆ. ಪುರುಷರು ಅದರಲ್ಲೂ ಅವಾಹಿತ ಪುರುಷರು ಈ ದೇವಾಲಯದೊಳಗೆ ಹೋಗುವಂತೆಯೇ ಇಲ್ಲ. ಸಂನ್ಯಾಸಿಗಳು ಈ ದೇವಾಲಯದ ಮೆಟ್ಟಿಲುಗಳವರೆಗೆ ಬಂದು ಪೂಜಿಸಿ ಹೋಗುತ್ತಾರೆ. ಮಹಿಳೆಯರು ಮಾತ್ರ ದೇವಾಲಯದೊಳಗಡೆ ಹೋಗುತ್ತಾರೆ.
5. ರಾಜಾಸ್ಥಾನದಲ್ಲಿರುವ ಬ್ರಹ್ಮ ದೇವಾಲಯ
ಸೃಷ್ಟಿಕರ್ತ ಬ್ರಹ್ಮನ ದೇವಾಲಯ ರಾಜಾಸ್ಥಾನದಲ್ಲಿದೆ. ಈ ದೇವಾಲಯದೊಳಗೆ ಪುರುಷರು ಪ್ರವೇಶಿಸಿದರೆ ಅವರ ವೈವಾಹಿಕ ಜೀವನ ಹಾಳಾಗುವುದು ಎಂದು ಗಾಯತ್ರಿ ದೇವಿಯ ಶಾಪವಿದೆ. ಆದ್ದರಿಂದ ದೇವಾಲಯದೊಳಗೆ ವಿವಾಹಿತ ಪುರುಷರು ಹೋಗುವುದಿಲ್ಲ.
6. ಜೋಧ್‌ಪುರದ ಸಂತೋಷಿ ದೇವಿಯ ದೇವಾಲಯ
ಈ ದೇವಾಲಯ ಜೋಧ್‌ಪುರದಲ್ಲಿದೆ, ಈ ದೇವಾಲಯದಲ್ಲಿಯೂ ಪುರುಷರನ್ನು ಒಳಗಡೆ ಬಿಡುವುದಿಲ್ಲ. ಮಹಿಳೆಯರು ಇಲ್ಲಿಗೆ ಶಾಂತಿ ಸಮಧಾನ ಬಯಸಿ ಬರುತ್ತಾರೆ. ಗರ್ಭಗುಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲ, ಮಹಿಳೆಯರೇ ದೇವಿಗೆ ಪೂಜೆ ಮಾಡುತ್ತಾರೆ.
7. ಕೊಯಂಬತ್ತೂರಿನಲ್ಲಿರುವ ಲಿಂಗ ಭೈರವಿ ದೇವಾಲಯ
ಈ ದೇವಾಲಯಕ್ಕೆ ಹೆಣ್ಮಕ್ಕಳು ಮುಟ್ಟಿನ ಸಮಯದಲ್ಲಿ ಕೂಡ ಬರಬಹುದು. ಇಲ್ಲಿ ಅರ್ಚಕರು ಮಹಿಳೆಯರೇ ಆಗಿದ್ದಾರೆ. ಸದ್ಗುರು ಸ್ಥಾಪಿಸಿರುವ ದೇವಾಲಯವಿದೆ. ಈ ದೇವಾಲಯಕ್ಕೆ ಹೆಣ್ಮಕ್ಕಳು ಮುಟ್ಟಿನ ವೇಳೆ ಅಶುಭ, ಮೈಲಿಗೆ ಎಂದೆಲ್ಲಾ ಯೋಚಿಸದೆ ಬಂದು ಪೂಜೆ ಸಲ್ಲಿಸಿ ಹೋಗಬಹುದು.
ಈ ದೇವಾಲಯವನ್ನು ಈಶ ಫೌಂಡೇಷನ್‌ನ ಸ್ಥಾಪಿಸಇರುವ ಸದ್ಗುರು ಸ್ಥಾಪಿಸಿದ್ದಾರೆ. ಮಹಿಳೆಯರು ಮುಟ್ಟಿನ ಸಮಯದಲ್ಲಿಯೂ ಪೂಜೆಯನ್ನು ಮಾಡಬಹುದು, ಆ ಸಮಯದಲ್ಲಿಯೂ ಅವರು ದೇವರನ್ನು ಆರಾಧನೆ ಮಾಡಬಹುದು, ಮುಟ್ಟು ಎಂಬುವುದು ಮೈಲಿಗೆಯಲ್ಲಿ, ಅದು ಪ್ರಕೃತಿಯ ಸಹಜ ನಿಯಮ ಎಂಬುವುದಾಗಿ ಅವರು ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಇದೀಗ ಭೈರವಿ ದೇವಿಯ ದೇವಾಲಯ ಸ್ಥಾಪಿಸುವುದರ ಮೂಲಕ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಪುರುಷ ಹಾಗೂ ಮಹಿಳೆಯರು ಇಲ್ಲಿಗೆ ಬಂದು ಪೂಜೆ ಸಲ್ಲಿಸಬಹುದು, ಆದರೆ ಗರ್ಭಗುಡಿಗೆ ಮಹಿಳೆಯರು ಮಾತ್ರ ಪ್ರವೇಶ ಮಾಡಬಹುದು.



Click it and Unblock the Notifications