Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಅಕ್ಟೋಬರ್‌ನಲ್ಲಿದೆ 7 ರಾಶಿಗಳ ಸಂಚಾರ: ಈ ರಾಶಿಯವರಿಗೆ ಅದೃಷ್ಟಕರ
ಅಕ್ಟೋಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಗ್ರಹಗಳು ಆಗಾಗ ರಾಶಿ ಬದಲಾಯಿಸುತ್ತಿರುತ್ತದೆ, ಕೆಲವೊಮದು ಗ್ರಹಗಳು 30 ದಿನಕ್ಕೊಮ್ಮೆ ರಾಶಿ ಬದಲಾವಣೆ ಮಾಡಿದರೆ ಇನ್ನು ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಒಂದು ತಿಂಗಳಿಗಿಂತ ಅಧಿಕ ಸಮಯವಿರಲಿದೆ. ಗ್ರಹಗಳಲ್ಲಿ ಶನಿಗ್ರಹ ಅತೀ ದೀರ್ಘ ಸಮಯ ಅಂದರೆ ಎರಡೂವರೆ ವರ್ಷ ಒಂದೇ ರಾಶಿಯಲ್ಲಿ ಇರಲಿದೆ.
ಅಕ್ಟೋಬರ್ ತಿಂಗಳಿನಲ್ಲಿ ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿದೆ. ಈ ತಿಂಗಳಿನಲ್ಲಿ ಸೂರ್ಯ, ಶುಕ್ರ, ರಾಹು-ಕೇತು ಮತ್ತು ಬುಧ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ತಿಂಗಳಿನಲ್ಲಿ ಯಾವ ಗ್ರಹ ಯಾವ ರಾಶಿಗೆ ಪ್ರವೇಶ ಮಾಡಲಿದೆ, ಇದರ ಪ್ರಭಾವ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣ
ಬುಧವು ಬುದ್ಧಿವಂತಿಕೆ, ವ್ಯವಹಾರ, ಗಣಿತ ಮತ್ತು ಸಂವಹನಕ್ಕೆ ಸಂಬಂಧಿಸಿದ ಗ್ರಹವೆಂದು ಪರಿಗಣಿಸಲಾಗಿದೆ. ಬುಧನು ಅಕ್ಟೋಬರ್ 01ರಂದು ಕನ್ಯಾ ರಾಶಿಗೆ ಪ್ರವೇಶಿಸಲಿದೆ
ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ
ಶುಕ್ರನನ್ನು ಸಂತೋಷ, ಸಂಪತ್ತು, ಸೌಂದರ್ಯ , ಸೌಕರ್ಯಕ್ಕೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರವು 02 ಅಕ್ಟೋಬರ್ 2023 ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದೆ.
ತುಲಾ ರಾಶಿಯಲ್ಲಿ ಮಂಗಳ ಸಂಚಾರ
ಮಂಗಳ ಗ್ರಹವನ್ನು ಧೈರ್ಯ ಮತ್ತು ಶೌರ್ಯದ ಗ್ರಹವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹವು ತುಲಾ ರಾಶಿಗೆ ಅಕ್ಟೋಬರ್ 03, 2023 ರಂದು ಸಂಜೆ 05:12 ಕ್ಕೆ ಸಾಗಲಿದೆ.
ತುಲಾ ಸಂಕ್ರಾಂತಿ
ಸೂರ್ಯನು ಪ್ರತಿ ತಿಂಗಳು ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಇದೀಹ ಸೂರ್ಯ ಕನ್ಯಾ ರಾಶಿಯನ್ನು ಬಿಟ್ಟು ತುಲಾ ರಾಶಿಗೆ ಪ್ರವೇಶಿಸಲಿದೆ. ಸೂರ್ಯನು ಅಕ್ಟೋಬರ್ 18ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ತುಲಾ ರಾಶಿಯಲ್ಲಿ ಬುಧದ ಬದಲಾವಣೆ
ಕನ್ಯಾ ರಾಶಿಯಲ್ಲಿರುವ ಬುಧ ತುಲಾ ರಾಶಿಗೆ ಪ್ರವೇಶಿಸಲಿದೆ. ಅಕ್ಟೋಬರ್ 19, 2023 ರಂದು, ಬುಧವು ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡಲಿದೆ.
ಮೀನ ರಾಶಿಯಲ್ಲಿ ರಾಹುವಿನ ಸಂಚಾರ
ವೈದಿಕ ಜ್ಯೋತಿಷ್ಯದಲ್ಲಿ, ರಾಹು ಗ್ರಹವನ್ನು ಪಾಪ ಗ್ರಹವೆಂದು ಪರಿಗಣಿಸಲಾಗಿದೆ. ರಾಹು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ರಾಹು ಸುಮಾರು 18 ತಿಂಗಳುಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಅಕ್ಟೋಬರ್ 30, 2023 ರಂದು, ರಾಹುವು ಮೇಷ ರಾಶಿಯನ್ನು ತೊರೆದು ದೇವಗುರು ಗುರುವಿನ ರಾಶಿಯಾದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ರಾಶಿ ಬದಲಾವಣೆ ಬಹಳ ವಿಶೇಷವಾಗಿರುತ್ತದೆ. ಏಕೆಂದರೆ ರಾಹು ಇನ್ನು 18 ತಿಂಗಳ ಬಳಿಕ ರಾಶಿ ಬದಲಾವಣೆ ಮಾಡಲಿದೆ.
ಕನ್ಯಾರಾಶಿಯಲ್ಲಿ ಕೇತುವಿನ ಸಂಚಾರ
ರಾಹು-ಕೇತುಗಳ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳು ರಾಹುವಿನ ಹೊರತಾಗಿ, ಕೇತು ಕೂಡ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸುಮಾರು ಒಂದೂವರೆ ವರ್ಷಗಳ ನಂತರ ಕೇತು ಅಕ್ಟೋಬರ್ 30 ರಂದು ಮಧ್ಯಾಹ್ನ 02:13 ಕ್ಕೆ ಶುಕ್ರ ಅಧಿಪತಿಯಾಗಿರುವ ತುಲಾ ರಾಶಿಗೆ ಪ್ರವೇಶಿಸಲಿದೆ.
ಅಕ್ಟೋಬರ್ ತಿಂಗಳು ಈ ರಾಶಿಯವರಿಗೆ ಈ ತಿಂಗಳು ಶುಭವಾಗಿದೆ
ಸುಮಾರು 18 ತಿಂಗಳ ನಂತರ ಅಕ್ಟೋಬರ್ ತಿಂಗಳಿನಲ್ಲಿ ರಾಹು-ಕೇತುಗಳ ರಾಶಿಯಲ್ಲಿ ಬದಲಾವಣೆಯಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಈ ತಿಂಗಳು ಬಹಳ ವಿಶೇಷವಾಗಿರುತ್ತದೆ. ರಾಹು-ಕೇತುಗಳ ಹೊರತಾಗಿ, ಸೂರ್ಯ , ಬುಧ, ಶುಕ್ರ, ಮಂಗಳ ಗ್ರಹ ರಾಶಿ ಬದಲಾವಣೆ ಮಾಡುವುದರಿಂದ ಅಕ್ಟೋಬರ್ ತಿಂಗಳು ಮಿಥುನ, ಸಿಂಹ, ಕನ್ಯಾ, ಮಕರ, ಧನು, ಕುಂಭ ರಾಶಿಯವರಿಗೆ ವಿಶೇಷವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. . ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಅಕ್ಟೋಬರ್ ತಿಂಗಳು ವ್ಯಾಪಾರದಲ್ಲಿ ತೊಡಗಿರುವವರಿಗೆ ಲಾಭದಾಯಕವಾಗಿರಲಿದೆ.



Click it and Unblock the Notifications
