Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಪದಕ ಬೇಟೆಗಿಳಿದ 7 ತಿಂಗಳ ಗರ್ಭಿಣಿ..! ಮೊದಲ ಸುತ್ತಿನಲ್ಲಿ ಗೆದ್ದು ಅಚ್ಚರಿ ಮೂಡಿಸಿದ ನಾರಿ!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಬೇಕು ಅಂದ್ರೆ ಅದೆಷ್ಟೋ ವರ್ಷ ಕಠಿಣ ಅಭ್ಯಾಸ, ನಿದ್ರೆಗಳಿಲ್ಲದ ರಾತ್ರಿ ಕಳೆಯಬೇಕಿದೆ. ಇದಕ್ಕಾಗಿ ಹಗಲು ರಾತ್ರಿ ಬೆವರು ಹರಿಸಬೇಕಿದೆ. ಇಷ್ಟಿದ್ದು, ಒಲಿಂಪಿಕ್‌ನಲ್ಲಿ ಭಾಗಿಯಾಗಲು ಅವಕಾಶ ಸಿಗಲಿದೆ ಎಂಬುದು ದೂರದ ಮಾತಾಗಲಿದೆ. ಒಂದು ವೇಳೆ ಭಾಗಿಯಾದರು ಪದಕ ಗೆಲ್ಲವುದು ಮತ್ತೊಂದು ಕನಸಾಗಿರಲಿದೆ.
ಹೀಗೆ ಒಲಿಂಪಿಕ್ಸ್ ಎಂಬ ಕ್ರೀಡಾ ಹಬ್ಬದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಕ್ರೀಡಾಪಟುವಿನ ಆಸೆ ಪದಕ ಗೆಲ್ಲುವುದಾಗಿರುತ್ತೆ, ಅದು ಯಾವುದಾದ್ರು ಒಂದು ಪದಕ ಬಂದರೆ ಶ್ರಮಕ್ಕೆ ತಕ್ಕೆ ಫಲ ಸಿಕ್ಕಿದೆ ಎಂದುಕೊಳ್ಳುತ್ತಾರೆ. ಜೊತೆಗೆ ಹತ್ತಾರು ವರ್ಷದ ತಯಾರಿ ಫಲಶೃತಿಯಾಗಲೆಂದು ಇಡೀ ದೇಶ ಕಾಯುತ್ತಿರುತ್ತದೆ.

ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 7 ತಿಂಗಳ ಗರ್ಭಿಣಿಯೊಬ್ಬರು ಪದಕ ಬೇಟೆಗಿಳಿದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೌದು ಆಕೆ 7 ತಿಂಗಳ ಗರ್ಭಿಣಿಯಾಗಿದ್ದರು ತನ್ನ ಕನಸು ಕಮರಲು ಬಿಡದೆ ಸ್ಪರ್ಧೆಯಲ್ಲಿ ಭಾಗಿಯಾಗಿ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
26 ವರ್ಷದ ನಾದಾ ಹಫೀಜ್ ಈಜಿಪ್ಟಿನ ಕ್ರೀಡಾ ಪಟು ಆಗಿದ್ದಾರೆ. ಅವರು ಫೆನ್ಸರ್ ಕ್ರೀಡೆಯಲ್ಲಿ ಭಾಗಿಯಾಗುತ್ತಿದ್ದು, ಮೊದಲು ಸುತ್ತಿನಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ ಸ್ಪರ್ಧೆಯಲ್ಲಿ USA ಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ತಮ್ಮ ಮೊದಲ ಪಂದ್ಯವನ್ನು 15-13 ಅಂಕಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ. ನಂತರ ಅವರು 16 ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹಯಾಂಗ್ ಅವರ ವಿರುದ್ಧ ಕೆಲವೇ ಅಂಕದಿಂದ ಹಿಂದುಳಿದು ಸ್ಪರ್ಧೆಯಿಂದ ಹೊರಗೆ ಬಿದ್ದಿದ್ದಾರೆ.
ಈ ಕುರಿತಂತೆ ಅವರು ಸಂತಸ ಹಂಚಿಕೊಳ್ಳುತ್ತ, ಗರ್ಭಿಣಿಯಾಗಿರುವ ವಿಚಾರವನ್ನೂ ಸಹ ಹಂಚಿಕೊಂಡರು. ಈ ವೇದಿಕೆಯಲ್ಲಿ ಇಬ್ಬರು ಆಟಗಾರರು ನಿಮಗೆ ಕಾಣಿಸುತ್ತಿದ್ದರು ಆದರೆ ಅಲ್ಲಿ ಮೂವರು ಹೋರಾಡುತ್ತಿದ್ದರು. ನಾನು ನನ್ನ ಪ್ರತಿಸ್ಪರ್ಧಿ ಹಾಗೂ ಇನ್ನು ಪ್ರಪಂಚಕ್ಕೆ ಬರಲು ಕಾಯುತ್ತಿರುವ ಪುಟ್ಟ ಮಗು. ನನ್ನ ಮಗು ಮತ್ತು ನಾನು ಭಾವನಾತ್ಮಕವಾಗಿ, ದೈಹಿಕವಾಗಿ ಎಲ್ಲಾ ಸವಾಲುಗಳನ್ನು ಸಮನಾಗಿ ಪಾಲು ಹೊಂದಿದ್ದೇವೆ ಎಂದು ಅವರು ಹೇಳಿದರು.
2014 ರಲ್ಲಿ, ಹಫೀಜ್ ಈಜಿಪ್ಟ್ ರಾಷ್ಟ್ರೀಯ ಹಿರಿಯ ಮಹಿಳಾ ಸೇಬರ್ ಫೆನ್ಸಿಂಗ್ ತಂಡವನ್ನು ಸೇರಿಕೊಂಡರು. ಮುಂದಿನ ವರ್ಷ, ಅವರು ಈಜಿಪ್ಟಿನ ಹಿರಿಯ ಮಹಿಳಾ ಸೇಬರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ತಮ್ಮ ಮೊದಲ ವಿಜಯವನ್ನು ಗಳಿಸಿದರು.
ಅವರು ಅಲ್ಜೀರಿಯಾದಲ್ಲಿ ಆಫ್ರಿಕನ್ ವಲಯ ಅರ್ಹತೆ ಮೂಲಕ 2016 ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 2021 ರಲ್ಲಿ, ಅವರು ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಳಿಸಿದರು. 2018ರ ಆಫ್ರಿಕನ್ ಝೋನಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮತ್ತು 2014 ಮತ್ತು 2019 ರಲ್ಲಿ ಕಂಚಿನ ಪದಕಗಳನ್ನು ಪಡೆದಿದ್ದರು.
"ನನ್ನ ಪತಿ ಮತ್ತು ನನ್ನ ಕುಟುಂಬದ ವಿಶ್ವಾಸವನ್ನು ಹಂಚಿಕೊಂಡಿದ್ದಕ್ಕಾಗಿ ನಾನು ಅದೃಷ್ಟಶಾಲಿಯಾಗಿದ್ದೇನೆ" ಎಂದು ಹಫೀಜ್ ತನ್ನ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. "ಈ ನಿರ್ದಿಷ್ಟ ಒಲಿಂಪಿಕ್ಸ್ ವಿಭಿನ್ನವಾಗಿತ್ತು. ಮೂರು ಬಾರಿ *ಒಲಿಂಪಿಯನ್* ಆದರೆ ಈ ಬಾರಿ ಪುಟ್ಟ ಒಲಿಂಪಿಯನ್! ಎಂದು ತನ್ನ ಮಗುವಿನ ಕುರಿತು ಸಹ ಈ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಅವರ ಈ ಸಾಧನೆಯ ಕುರಿತು ಜನರ ಗಮನ ಸೆಳೆದಿದೆ. ಗರ್ಭಿಣಿಯಾಗಿದ್ದರು ಸಹ ತನ್ನ ದೇಶದಕ್ಕಾಗಿ, ತನ್ನ ಕನಸು ಈಡೇರಿಸಲು ಆಕೆ ಹಿಂದು ಮುಂದು ಯೋಚಿಸದೆ ಇಂತಹ ದೊಡ್ಡ ಕೆಲಸಕ್ಕೆ ಕೈ ಹಾಕಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.



Click it and Unblock the Notifications
