Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
4ನೇ ಮಹಡಿಯಿಂದ ಬಿದ್ದ 7 ತಿಂಗಳ ಮಗು: ಅಪಾರ್ಟ್‌ಮೆಂಟ್ ನಿವಾಸಿಗಳು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್
ಚೆನ್ನೈನಲ್ಲಿ 7 ತಿಂಗಳ ಮಗು ನಾಲ್ಕನೇ ಫ್ಲೋರ್‌ನಿಂದ ಬೀಳುತ್ತಿರುವ ಮಗುವನ್ನು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ಆ ಅಪಾರ್ಟ್‌ಮೆಂಟ್‌ನ ನಿವಾಸಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಮಗುವಿನ ರಕ್ಷಣೆ ಮಾಡಿದ್ದಾರೆ.
ಮಗುವಿನ ರಕ್ಷಣೆ
ಮಗು ಚೆನ್ನೇ ಅಪಾರ್ಟ್‌ಮೆಂಟ್‌ನ ರೂಫ್ ಮೇಲೆ ಬಿದ್ದಿದೆ. ಎರಡನೇ ಫ್ಲೋರ್‌ನ ಶೀಟ್ ಮೇಲೆ ಬಿದ್ದಿದೆ, ಜಾರುವಂತಿದೆ ಆ ಶೀಟ್, ಮಳೆ ನೀರು ಜಾರಿ ಬೀಳಲು ಆ ಶೀಟ್ ಇಡಲಾಗಿದೆ, ಅದರ ಮೇಲೆ ಬಿದ್ದಿದೆ. ಬಿದ್ದ ತಕ್ಷಣ ಅಪಾರ್ಟ್‌ಮೆಂಟ್‌ನವರಿಗೆ ವಿಷಯ ತಿಳಿದಿದೆ.

ಎಲ್ಲರೂ ಓಡಿ ಬರುತ್ತಾರೆ, ಪುಣ್ಯಕ್ಕೆ ಮಗು ಅದರ ಮೇಲೆಯೇ ಇದೆ, ಒಡಿ ಹೋಗಿ ಬೆಡ್‌ಶೀಟ್ ತರುತ್ತಾರೆ, ಮಗು ಅಕಸ್ಮಾತ್ ಜಾರಿದರೆ ಬೆಡ್‌ಶೀಟ್ ಮೇಲೆ ಬೀಳಲಿ ಎಂದು ಬೆಡ್‌ಶೀಟ್ ಹಿಡಿಯುತ್ತಾರೆ.
ಒಂದುಷ್ಟು ಪುರುಷರು ಬಿಲ್ಡಿಂಗ್ ಹತ್ತುತ್ತಾರೆ, ಮೊದಲನೇ ಮಹಡಿ ಕಿಟಕಿಯಂಥ ಸ್ಥಳದಿಂದ ಹೊರಬಂದು ಮಗುವನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ. ಇವರು ನಿಲ್ಲುವಲ್ಲಿಯೂ ಗ್ರಿಪ್ ಇರಲಿಲ್ಲ, ಸ್ವಲ್ಪ ಹೆಚ್ಚುಕಮ್ಮಿಯಾದರೂ ಇವರು ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಗುತ್ತದೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಗುವಿನ ರಕ್ಷಣೆ ಮಾಡುತ್ತಾರೆ, ಮೆಲ್ಲನೆ ಕೈ ಹಾಕಿದಾಗ ಮಗು ಅವರ ಕೈ ಸಿಗುತ್ತೆ, ಮೆಲ್ಲನೆ ಹಿಡಿದು ಕೆಳಗಡೆಗೆ ನಿಂತವರಿಗೆ ಕೊಡುತ್ತಾರೆ, ಹೀಗೆ ಮಗುವಿನ ಪ್ರಾಣ ಬಚಾವ್ ಆಗುತ್ತೆ..
ಆ ಮಗು ಹಾಗೂ ಮಗುವಿನ ತಾಯಿ ತಂದೆಯ ಪುಣ್ಯ
ಒಂದು ಮೂರು-ನಾಲ್ಕು ವರ್ಷದ ಮಗುವಿಗಾದರೆ ಕೆಲಗಡೆ ಹಿಡಿಯಬಹುದು ಗಟ್ಟಿಯಾಗಿ ಹಿಟ್ಕೋ , ನಾವು ಬಂದು ಕೆಳಗಡೆ ತರುತ್ತೇವೆ ಎಂದು ಹೇಳಬಹುದು, ಆದರೆ ಇದು 7 ತಿಂಗಳ ಮಗು, ತೆವಳಿಕೊಂಡು ಹೋಗುವ ಪ್ರಾಯ, ಆ ಶೀಟ್‌ನ ತುದಿಯಲ್ಲಿ ಮಲಗಿರುವುದು ನೋಡುವಾಗ ಭಯವಾಗುತ್ತೆ.
ಆದರೆ ಅದು ಹಾಗೆಯೇ ಮಲಗಿಕೊಂಡು ಇತ್ತು, ಸ್ವಲ್ಪ ಅಲುಗಾಡಿದರೂ ಕೆಳಗೆ ಬೀಳುತ್ತಿತ್ತು, ಆ ದೇವರೆ ಮಗುವಿಗೆ ಹಾಗೆಯೇ ಮಾಡಿರಬಹುದು ಎಂದನಿಸುವುದು, ಆ ತಾಯಿಯೂ ವಿಲವಿಲನೆ ಒದ್ದಾಡಿದಳು, ದೇವರೇ ನನ್ನ ಮಗುವನನ್ನು ಉಳಿಸಿಕೊಡು ಎಂದು ಪ್ರಾರ್ಥಿಸಿದಳು, ಅಲ್ಲಿರುವ ಜನರೆಲ್ಲಾ ಸೇರಿ ಮಗುವಿಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ಮಾಡಿದ್ದಾರೆ. ಅವರು ಮಾಡಿದ ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇಬೇಕು.
ಅಗ್ನಿಶಾಮಕ ದಳದವರು ಬರುವಷ್ಟು ಸಮಯ ಇರಲಿಲ್ಲ
ಸಾಮಾನ್ಯವಾಗಿ ಇಂಥ ಘಟನೆ ನಡೆದಾಗ ಅಗ್ನಿಶಾಮಕ ದಳದವರು ಬರುತ್ತಾರೆ, ಆದರೆ ಇಲ್ಲಿ ಅಷ್ಟು ಸಮಯ ಇರಲಿಲ್ಲ, ಹಾಗಾಗಿ ಅಪಾರ್ಟ್‌ಮೆಂಟ್‌ನವರೇ ರಿಸ್ಕ್ ತೆಗೆದುಕೊಂಡು ಮಗುವಿನ ಪ್ರಾಣ ರಕ್ಷಣೆಗೆ ಒಂದಾಗಿದ್ದಾರೆ, ಮಗುವಿನ ರಕ್ಷಣೆಗೆ ಮಾನವೀಯತೆ ತೋರಿಸಿದ್ದಾರೆ. ಮಗು ಅವರ ಕೈಗೆ ಸಿಕ್ಕಿದಾಗ ಅಲ್ಲಿ ನೆರೆದವರು ನಿಟ್ಟುಸಿರು ಬಿಟ್ಟರು.
ಮಗು ಬಿದ್ದಿದ್ದು ಹೇಗೆ?
ತಾಯಿ ಈ 7 ತಿಂಗಳ ಮಗುವನ್ನು ಎತ್ತಿಕೊಂಡಿರುತ್ತಾಳೆ, ಬಹಶಃ ಅಲ್ಲಿ ಜಾಗ ಕಾಣುತ್ತಿದೆಯೆಲ್ಲಾ ಅದೇ ರೀತಿ ಅವರು ಇರುವ ಕಡೆ ಕೂಡ ಇದೆ, ಅದರ ತುದಿಯಲ್ಲಿ ನಿಂತಿದ್ದಾರೆ, ಮಗು ಕೈ ತಪ್ಪಿ ಕೆಳಗೆ ಬಿದ್ದಿದೆ. ಆದರೆ ಅದೃಷ್ಟಕ್ಕೆ ಅಲ್ಲಿದ್ದ ಶೀಟ್ ಮೇಲೆ ಬಿದ್ದಿದೆ. ಹಾಗಾಗಿ ಪುಣ್ಯಕ್ಕೆ ಏನೂ ಆಗಿಲ್ಲ. ಸ್ವಲ್ಪ ಜಾರಿದರೂ ಏನಾಗುತ್ತಿತ್ತೋ , ಊಹಿಸಿದರೆ ಭಯವಾಗುತ್ತೆ.
ಇಂಥ ಘಟನೆಗಳು ಮರುಕಳಿಸುತ್ತಲೇ ಇದೆ
ಚಿಕ್ಕ ಮಕ್ಕಳಿರುವಾಗ ತಾಯಂದಿರು ಬಾಲ್ಕನಿ ಬಳಿ ನಿಂತು ತಿನಿಸುವುದು, ಆಟ ಆಡಿಸುವುದು ಮಾಡಬಾರದು, ಸ್ವಲ್ಪ ಎಚ್ಚರ ತಪ್ಪಿದರೆ ಮಕ್ಕಳು ಕೆಳಗೆ ಬೀಳುತ್ತಾರೆ, ಆದರೆ ಮಹಡಿ ಮನೆಗಳ ಸ್ಟೆಪ್‌ಗಳಲ್ಲಿ, ಅಪಾರ್ಟ್‌ಮೆಂಟ್‌ನಲ್ಲಿ ಮಗು ಹೊರಗಡೆ ಹೋಗದಂತೆ ಜಾಗ್ರತೆ ಮಾಡಬೇಕು.



Click it and Unblock the Notifications
