Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿನ ಸಪ್ತ ಕುದುರೆಯ ಫೋಟೋ ಇದೆಯೇ? ಈ ತಪ್ಪುಗಳು ಆಗಲೇಬಾರದು
ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ನೀವು ಈ ಏಳು ಕುದುರೆಗಳ ಫೋಟೋವನ್ನು ನೋಡಿರುತ್ತೀರಿ. ಇಂತಹದೊಂದು ಚಿತ್ರ ಮನೆಯ ಅಂದವನ್ನು ಹೆಚ್ಚಿಸೋದಂತೂ ನಿಜ. ಆದರೆ ಇದು ಅಂದಕ್ಕಾಗಿ ಮಾತ್ರವಲ್ಲ ಈ ಚಿತ್ರವನ್ನು ಮನೆಯಲ್ಲಿ ಇರಿಸೋದರ ಹಿಂದೆ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಕಾರಣಗಳು ಇದೆ. ಈ ಏಳು ಕುದುರೆಗಳ ಚಿತ್ರ ಪಟವನ್ನು ಮನೆಯಲ್ಲಿ ಇರಿಸೋದ್ರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
ಈ ಕುದುರೆಗಳು ಶಕ್ತಿ, ಅಭಿವೃದ್ಧಿ, ಸಾಧನೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತಂತೆ. ಹಾಗಂತ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಈ ಕುದುರೆಯ ಚಿತ್ರ ಪಟವನ್ನು ಎಲ್ಲಂದರಲ್ಲಿ ಇರಿಸುವ ಹಾಗಿಲ್ಲ. ಸ್ವಲ್ಪ ತಪ್ಪಾದರೂ ಇದರಿಂದ ಋಣಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗಬೇಕೆಂದರೆ ಸರಿಯಾದ ಜಾಗದಲ್ಲೇ ಚಿತ್ರ ಪಟವನ್ನು ಇರಿಸಬೇಕು. ಅಷ್ಟಕ್ಕು ಮನೆಯ ಯಾವ ದಿಕ್ಕಿನಲ್ಲಿ ಏಳು ಕುದುರೆಗಳ ಚಿತ್ರಪಟ ಇರಿಸಬೇಕು? ಇದ್ರಿಂದ ಏನೆಲ್ಲಾ ಉಪಯೋಗ ಇದೆ ಅನ್ನೋದನ್ನು ತಿಳಿಯೋಣ.

ಮನೆಯ ಯಾವ ದಿಕ್ಕಿನಲ್ಲಿ ಕುದುರೆಯ ಚಿತ್ರಪಟ ಇರಿಸಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಏಳು ಕುದುರೆಗಳ ಚಿತ್ರಪಟವನ್ನು ಲಿವಿಂಗ್ ರೂಂ, ಬೆಡ್ ರೂಂ, ಆಫಿಸ್, ವ್ಯಾಪಾರದ ಸ್ಥಳದಲ್ಲಿ ಇರಿಸಬಹುದು. ಒಂದು ವೇಳೆ ನೀವು ಮನೆಯಲ್ಲಿ ಈ ಚಿತ್ರಪಟವನ್ನು ಇರಿಸೋದಕ್ಕೆ ಯೋಚಿಸುತ್ತಿದ್ದರೆ ದಕ್ಷಿಣ ಭಾಗದಲ್ಲಿ ಇಟ್ಟರೆ ಒಳ್ಳೆಯದು. ಯಾಕಂದ್ರೆ ದಕ್ಷಿಣವು ಯಶಸ್ಸು ಮತ್ತು ಖ್ಯಾತಿಯನ್ನು ಪ್ರತಿನಿಧಿಸುತ್ತದೆ. ಒಂದು ವೇಳೆ ದಕ್ಷಿಣ ಭಾಗದಲ್ಲಿ ಗೋಡೆ ಇರದಿದ್ದರೆ ಮನೆ ಅಥವಾ ಆಫಿಸ್ ನ ಉತ್ತರ ಅಥವಾ ಪೂರ್ವ ಭಾಗದಲ್ಲಿ ಇರಿಸಬಹುದು.
ಏಳು ಕುದುರೆಗಳ ಚಿತ್ರದೊಂದಿಗೆ ಇರುವ ಚಂದ್ರ
ಮಾರುಕಟ್ಟೆಯಲ್ಲಿ ಅನೇಕ ವಿಧದ ಏಳು ಕುದುರೆಯ ಚಿತ್ರಗಳು ಲಭ್ಯವಿದೆ. ಅದ್ರಲ್ಲೂ ಏಳು ಕುದುರೆಯೊಂದಿಗೆ ಬ್ಯಾಕ್ ಗ್ರೌಂಡ್ ನಲ್ಲಿ ಚಂದ್ರ ಚಿತ್ರ ಇರುವ ಫೋಟೋವನ್ನು ನೀವು ಖರೀದಿಸಿದರೆ ತುಂಬಾನೇ ಒಳ್ಳೆಯದು. ಈ ಚಿತ್ರ ನಿಮಗೆ ಅದೃಷ್ಟವನ್ನು ಹೊತ್ತು ತರುತ್ತಂತೆ. ಈ ಚಿತ್ರವು ಯಶಸ್ಸು, ಅಭಿವೃದ್ಧಿ ಹಾಗೂ ಶಾಂತಿಯನ್ನು ಪ್ರತಿನಿಧಿಸುತ್ತದೆ. ಈ ಚಿತ್ರವನ್ನು ನೀವು ಮನೆ ಅಥವಾ ಆಫಿಸ್ ನಲ್ಲಿ ಹಾಕಬಹುದು.
ಸಮುದ್ರದ ಹತ್ತಿರವಿರುವ ಏಳು ಕುದುರೆಗಳ ಚಿತ್ರಪಟ
ಸಮುದ್ರದ ದಡಕ್ಕೆ ಓಡಿಕೊಂಡು ಬರುವ ಏಳು ಕುದುರೆಗಳ ಚಿತ್ರವೂ ಕೂಡ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಚಿತ್ರವನ್ನು ನಿಮ್ಮ ಮನೆಗೆ ತಂದರೆ ತುಂಬಾನೇ ಒಳ್ಳೆಯದು. ಏಕೆಂದರೆ ಇದು ಕೂಡ ನಿಮ್ಮಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ನೀವು ಕೆಲಸದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
ಕುದುರೆಯ ಚಿತ್ರವನ್ನು ಮನೆಯಲ್ಲಿ ಇಡಲು ಟಿಪ್ಸ್!
- ಕುದುರೆಯ ಚಿತ್ರಪಟವನ್ನು ಖರೀದಿಸುವಾಗ ಕುದುರೆಗಳ ಮುಖಗಳು ಶಾಂತಿಯುತವಾಗಿದ್ಯಾ ಅನ್ನೋದನ್ನು ಗಮನಿಸಿ. ಎಂದಿಗೂ ಆಕ್ರಮಣಕಾರಿಯಾಗಿರುವ ಕುದುರೆಯ ಮುಖ ಹೊಂದಿರುವ ಚಿತ್ರಗಳನ್ನು ಆಯ್ದುಕೊಳ್ಳಬೇಡಿ.
- ವಾಸ್ತು ಶಾಸ್ತ್ರದ ಪ್ರಕಾರ ಚಿತ್ರಪಟವನ್ನು ಸರಿಯಾದ ದಿಕ್ಕಿನಲ್ಲೇ ಇರಿಸಬೇಕು. ಯಾವುದೋ ದಿಕ್ಕಿನಲ್ಲಿ ಇರಿಸಿದರೆ ಇದರಿಂದ ನಕಾರಾತ್ಮಕ ಪರಿಣಾಮ ಬೀರಬಹುದು.
- 7 ಕುದುರೆ ವರ್ಣಚಿತ್ರವನ್ನು ಆಯ್ಕೆಮಾಡುವಾಗ ಮತ್ತೊಂದು ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಿ. ಅದೇನೆಂದರೆ ಆ ಚಿತ್ರದ ಹಿಂದುಗಡೆ ಅಂದ್ರೆ ಬ್ಯಾಕ್ ಗ್ರೌಂಡ್ ನಲ್ಲಿ ಧೂಳು, ಚಂಡಮಾರುತಗಳು, ಪ್ರಕ್ಷುಬ್ಧತೆ, ಸೂರ್ಯಾಸ್ತ, ಅಥವಾ ಯಾವುದೇ ಇತರ ಅಸಮಾಧಾನ ಅಥವಾ ನಕಾರಾತ್ಮಕ ಹವಾಮಾನವನ್ನು ಹೊಂದಿರಬಾರದು.
- ನೀವು ಆಯ್ದುಕೊಂಡಿರುವ ವರ್ಣಚಿತ್ರದಲ್ಲಿನ ಕುದುರೆಗಳು ಯಾವುದೇ ಅಡೆತಡೆಗಳಿಲ್ಲದೆ ನೇರ ರೇಖೆಯಲ್ಲಿ ಓಡುವಂತಿರಬೇಕು.
- ಕೇವಲ ಒಂದೇ ಕುದುರೆ ಇರುವ ಚಿತ್ರ ಪಟವನ್ನು ಖರೀದಿಸಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ದುರಾದೃಷ್ಟಕರ ಎಂದು ಪರಿಗಣಿಸಲಾಗಿದೆ.
- ಅಪೂರ್ಣವಾಗಿರುವ ಚಿತ್ರಕಲೆಯನ್ನು ಯಾವುದೇ ಕಾರಣಕ್ಕೂ ಖರೀದಿಸಬೇಡಿ.
ಏಳು ಕುದುರೆಗಳ ಚಿತ್ರ ಪಟವನ್ನು ಬೆಡ್ ರೂಂನಲ್ಲಿ ಹಾಕಬಹುದಾ?
ವಾಸ್ತು ಶಾಸ್ತ್ರ ಪ್ರಕಾರ ಏಳು ಕುದುರೆಗಳ ಚಿತ್ರ ಪಟವನ್ನು ಬೆಡ್ ರೂಂನಲ್ಲಿ ಇಡೋದು ಅಷ್ಟೊಂದು ಉತ್ತಮವಲ್ಲ. ಇದ್ರ ಜೊತೆಗೆ ಪೂಜಾ ಕೋಣೆ, ಓದುವ ಕೋಣೆ, ವಾಷ್ ರೂಂ ಗೆ ಎದುರಾಗುವ ಹೋಡೆಯ ಮೇಲೂ ಈ ಚಿತ್ರವನ್ನು ಹಾಕಬೇಡಿ.ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುವ ಸಾಧ್ಯತೆಯಿದೆ.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಕೆಲಸ ಮಾಡುವಾಗಲೂ ಅದಕ್ಕೆ ಅದರದ್ದೇ ಆದ ರೀತಿ, ರಿವಾಜುಗಳು ಇರುತ್ತದೆ. ಅದೇ ರೀತಿ ಏಳು ಕುದುರೆಗಳ ಚಿತ್ರ ಪಟವನ್ನು ಮನೆ, ಆಫಿಸ್ ಗಳಲ್ಲಿ ಹಾಕುವಾಗ ಈ ಮೇಲಿನ ವಿಚಾರದ ಬಗ್ಗೆ ಗಮನಕೊಡಿ.



Click it and Unblock the Notifications











