Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳನ ಮೇಲೆ 60 ಈಜುಕೊಳದಷ್ಟು ನೀರಿನ ನಿಕ್ಷೇಪ ಪತ್ತೆ..!
ಭೂಮಿಯನ್ನು ಬಿಟ್ಟರೆ ಮಾನವನಿಗೆ ಮತ್ತಷ್ಟು ಆಸಕ್ತಿ ಇರುವ ಗ್ರಹ ಅಂದ್ರೆ ಅದು ಮಂಗಳ ಗ್ರಹ. ಮಂಗಳ ಗ್ರಹದ ಕುರಿತು ಅಧ್ಯಯನಕ್ಕಾಗಿ ಮಾನವ ಯಾವಾಗಲು ಯತ್ನಿಸುತ್ತಲೇ ಇದ್ದು, ಹಲವು ಯೋಜನೆಗಳ ಮೂಲಕ ಕೆಂಪು ಗ್ರಹದ ಮೇಲೆ ಕಣ್ಣಿಟ್ಟಿದ್ದಾನೆ. ಅಲ್ಲಿನ ವಾತಾವರಣ, ಜೀವರಾಶಿ ವೃದ್ಧಿಗೆ ಪೂಕರ ವಾತಾವರಣ ಇದೆಯೇ ಎಂಬ ಕುರಿತು ದಶಕಗಳಿಂದ ಅಧ್ಯಯನ ನಡೆಯುತ್ತಲೇ ಇದೆ.
ಆದ್ರೆ ಮಂಗಳನ ಮೇಲೆ ನೀರು ಇರುವ ಕುರಿತಂತೆ ಈ ಮೊದಲೇ ಬಹಳಷ್ಟು ಅಧ್ಯಯನದಲ್ಲಿ ದೃಢವಾಗಿದ್ದು, ಹಿಂದೊಮ್ಮೆ ಮಂಗಳನ ಮೇಲೆ ಬೃಹತ್ ನದಿಗಳು ಹರಿದಿವೆ ಎಂಬುದಕ್ಕೆ ಪುರಾವೆಗಳು ಸಹ ಸಿಕ್ಕಿತ್ತು. ಆದರೆ ಈಗ ಹೊಸ ಅಧ್ಯಯನವೊಂದರಲ್ಲಿ ಇದಕ್ಕೆ ಪೂರಕವಾಗಿ ಹೊಸದೊಂದು ಮಾಹಿತಿ ಹೊರಬಿದ್ದಿದೆ.

ನೇಚರ್ ಜಿಯೋಸೈನ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಮಂಗಳ ಗ್ರಹದಲ್ಲಿ ಹಿಮ ರೂಪದ ನೀರಿನ ಕುರಿತು ಹೊಸ ಆವಿಷ್ಕಾರ ಹೊರಬಿದ್ದಿದೆ. ಮಂಗಳದ ಸಮಭಾಜಕ ವೃತ್ತದ ಬಳಿ ಇರುವ ಬೃಹತ್ ಶಿಖರಗಳ ಸರಪಳಿಯಾದ ಥಾರ್ಸಿಸ್ ಮಾಂಟೆಸ್ ಜ್ವಾಲಾಮುಖಿಗಳ ಮೇಲೆ ನೀರಿನ ಮಂಜುಗಡ್ಡೆಯ ನಿಕ್ಷೇಪಗಳನ್ನು ಗುರುತಿಸಲಾಗಿದೆ.
ಇಷ್ಟೊಂದು ಪ್ರಮಾಣದಲ್ಲಿ ಮಂಜುಗಡ್ಡೆಯಂತಹ ನೀರಿನ ನಿಕ್ಷೇಪ ಪತ್ತೆಯಾಗಿರುವುದು ಇದೇ ಮೊದಲು. ಈ ತೆಳುವಾದ, ವ್ಯಾಪಕವಾದ ಮಂಜಿನ ಪದರಗಳು ಅಂದಾಜು 150,000 ಟನ್‌ಗಳಷ್ಟು ನೀರಿಗೆ ಸಮನಾಗಿರುತ್ತದೆ, ಮಂಗಳ ಗ್ರಹದಲ್ಲಿ ಅತ್ಯಂತ ಕಡಿಮೆ ತಾಪಮಾನ ಉಂಟಾಗಿದ್ದ ಕಾಲಚಕ್ರದಲ್ಲಿ ಈ ಪ್ರಕ್ರಿಯೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದು ಒಲಿಂಪಿಕ್ಸ ಕ್ರೀಡಾಕೂಟದಲ್ಲಿರುವ 60 ಈಜುಕೊಳಗಳಿಗೆ ಸಮನಾದ ನೀರಿನ ಪ್ರಮಾಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ಆವಿಷ್ಕಾರದ ಡೇಟಾವು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಎಕ್ಸೋಮಾರ್ಸ್ ಮತ್ತು ಮಾರ್ಸ್ ಎಕ್ಸ್‌ಪ್ರೆಸ್ ಮಿಷನ್‌ಗಳಿಂದ ಸೆರೆಹಿಡಿಯಲಾದ 30,000 ಕ್ಕೂ ಹೆಚ್ಚು ಚಿತ್ರಗಳಿಂದ ದೃಢವಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎಕ್ಸೋಮಾರ್ಸ್ ಮತ್ತು ಮಾರ್ಸ್ ಎಕ್ಸ್‌ಪ್ರೆಸ್ ಮಿಷನ್‌ಗಳು ಗ್ರಹದ ಸುತ್ತ ಸುತ್ತುವ ಮೂಲಕ ಈ ನಿಕ್ಷೇಪದ 30,000 ಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳದ ಸಮಭಾಜಕದ ಸುತ್ತಲೂ ಹಿಮವು ರೂಪುಗೊಳ್ಳುವುದು ಅಸಂಭವವೆಂದು ನಾವು ಭಾವಿಸಿದ್ದೇವೆ, ಏಕೆಂದರೆ ಸೂರ್ಯನ ಬೆಳಕು ಮತ್ತು ತೆಳುವಾದ ವಾತಾವರಣದ ಮಿಶ್ರಣವು ಮೇಲ್ಮೈ ಮತ್ತು ಪರ್ವತದ ತುದಿಯಲ್ಲಿ ಹಗಲಿನಲ್ಲಿ ತಾಪಮಾನವನ್ನು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಬ್ರೌನ್ ವಿಶ್ವವಿದ್ಯಾನಿಲಯದ ಪೋಸ್ಟ್‌ಡಾಕ್ಟರಲ್ ಅಡೋಮಾಸ್ ವ್ಯಾಲಂಟಿನಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮಾನವ ವಾಸಕ್ಕೆ ಯೋಜನೆ ರೂಪಿಸುತ್ತಿರುವುದಾಗಿ ಹೇಳಿದ್ದರು. ಮಂಗಳನ ಮೇಲೆ ಮುಂದಿನ 20 ವರ್ಷದಲ್ಲಿ ನಗರಗಳ ನಿರ್ಮಿಸಿ ಮುಂದಿನ 30 ವರ್ಷದಲ್ಲಿ ಮಾನವ ವಾಸಕ್ಕೆ ಮುಂದಾಗಲಾಗುವುದು ಎಂದು ಹೇಳಿ ಸಂಚಲನ ಮೂಡಿಸಿದ್ದರು.
ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಎಲಾನ್ ಮಸ್ಕ್, ಮುಂದಿನ 5 ವರ್ಷಗಳಲ್ಲಿ ಈ ಬಗ್ಗೆ ಯೋಜನೆ ರೂಪಿಸುತ್ತೇವೆ. 10 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮನುಷ್ಯರನ್ನು ಅಲ್ಲಿಗೆ ಇಳಿಸುತ್ತೇವೆ. 20 ವರ್ಷಗಳಲ್ಲಿ ಅಲ್ಲಿ ನಗರವನ್ನು ನಿರ್ಮಿಸಬಹುದು, 30 ವರ್ಷಗಳಲ್ಲಿ ಅಲ್ಲಿ ಜನರು ವಾಸಯೋಗ್ಯವನ್ನಾಗಿ ಮಾಡುತ್ತೇವೆ ಎಂದಿದ್ದರು.
ಆದರೆ ಈಗ ಮಂಗಳನ ಮೇಲೆ ನೀರಿನ ನಿಕ್ಷೇಪ ಸಹ ಕಂಡುಬಂದಿರುವುದು ಹೊಸ ಆಶಾ ಭಾವನೆ ಮೂಡಿಸಿದೆ. ಅಲ್ಲದೆ ಇದು ಮುಂದಿನ ದಿನಗಳಲ್ಲಿ ಹೊಸ ಅಧ್ಯಯನ ಹಾಗೂ ಮಂಗಳನ ಮೇಲೆ ಮಾನವ ಇಳಿಯುವ ಕಾರ್ಯಸಾಧನೆಗೆ ಮತ್ತಷ್ಟು ವೇಗ ನೀಡಲಿದೆ.



Click it and Unblock the Notifications