Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಇನ್ಸೂಲಿನ್ ಇಂಜೆಕ್ಷನ್ ಖುದ್ದು ತಾನೆ ಹಾಕಿಕೊಳ್ಳುವ 6 ವರ್ಷದ ಮಗು! ವಿಡಿಯೋ ವೈರಲ್
ಇಂಜೆಕ್ಷನ್ ತೆಗೆದುಕೊಳ್ಳುವುದು ಅಂದ್ರೆ ಮಕ್ಕಳಷ್ಟೇ ಅಲ್ಲ ಹಿರಿಯರು ಕೂಡ ಭಯಪಡುತ್ತಾರೆ. ಇಂಜೆಕ್ಷನ್‌ನಿಂದ ಯಾವುದೇ ರೀತಿ ನೋವು ಅನುಭವಿಸದೇ ಇದ್ದರೂ ಕೂಡ ಭಯ ಇದ್ದೇ ಇರಲಿದೆ. ಹೀಗಾಗಿ ಇಂಜೆಕ್ಷನ್‌ನಿಂದ ತಪ್ಪಿಸಿಕೊಳ್ಳಲು ಹಲವು ರೀತಿ ಕಸರತ್ತು ಮಾಡೋದು ನೋಡಬಹುದು. ಅದ್ರಲ್ಲೂ ಮಕ್ಕಳಂತು ಇಂಜೆಕ್ಷನ್ ಮಾತ್ರವಲ್ಲ ಡಾಕ್ಟರ್ ಪದ ಕೇಳಿದ್ರೂ ಕೂಡ ಭಯ ಬೀಳೋದು ನೋಡಬಹುದು.
ಆದ್ರೆ ಮಕ್ಕಳಿಗೆ 5 ವರ್ಷದವರೆಗೂ ಹಲವು ರೀತಿಯ ಇಂಜೆಕ್ಷನ್ ಅನ್ನು ನೀಡಬೇಕಾಗುತ್ತದೆ. ಮೊದಲ ಎರಡು ವರ್ಷದಲ್ಲಿ ಮಕ್ಕಳಿಗೆ ಸೂಜಿಯ ಕುರಿತು ಅಷ್ಟೇನು ಭಯ ಇಲ್ಲದಿದ್ದರೂ ಅನಂತರ ಇಂಜೆಕ್ಷನ್ ಕುರಿತಾಗಿ ಭಯ ಹುಟ್ಟಿಕೊಳ್ಳುತ್ತದೆ. ನಂತರ ಯಾವುದಾದರು ಅನಾರೋಗ್ಯ ಕಾಡಿದಾಗ ಮಕ್ಕಳಿಗೆ ಇಂಜೆಕ್ಷನ್ ಕೊಡಿಸುವುದು ಕಷ್ಟವಾಗುತ್ತದೆ.

ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಚಿಕ್ಕ ಮಗುವಿಂದು ತಾನಾಗಿಯೇ ಇಂಜೆಕ್ಷನ್ ಟ್ಯೂಬ್ ಹಿಡಿದುಕೊಂಡು ಇನ್ಸೂಲಿನ್ ತೆಗೆದುಕೊಳ್ಳುತ್ತಿರುವುದು ನೋಡಬಹುದು. ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. 6 ವರ್ಷದ ಬಾಲಕಿ ತನ್ನ ಇನ್ಸುಲಿನ್ ಡೋಸ್ ಅನ್ನು ಸ್ವತಃ ಚುಚ್ಚಿಕೊಳ್ಳುವ ಮೂಲಕ ಮಧುಮೇಹದ ವಿರುದ್ಧ ಹೋರಾಡುತ್ತಾ ತನ್ನ ಧೈರ್ಯದ ಮೂಲಕ ಆನ್‌ಲೈನ್‌ನಲ್ಲಿ ಅಚ್ಚರಿ ಮೂಡಿಸಿದ್ದಾಳೆ.
ಮಕ್ಕಳಲ್ಲಿ ಉಂಟಾಗುವ ಮಧುಮೇಹ ಸಮಸ್ಯೆಗೆ ಹಲವು ಕಾರಣಗಳಿವೆ. ಇದನ್ನು ನಿಯಂತ್ರಿಸಲು ಹಾಗೆ ಚಿಕಿತ್ಸೆಗಾಗಿ ಇನ್ಸುಲಿನ್ ಚುಚ್ಚು ಮದ್ದು ತೆಗೆದುಕೊಳ್ಳಬೇಕಾಗುತ್ತದೆ. ಇದು ನಿತ್ಯವೂ ಹರ್ಮೋನ್ ಅನ್ನು ನಿಯಂತ್ರಣದಲ್ಲಿಡಲು ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಇದೇ ಕಾರಣಕ್ಕೆ ಈ 6 ವರ್ಷದ ಮಗು ತನ್ನ ಇನ್ಸುಲಿನ್ ಇಂಜೆಕ್ಷನ್ ತಾನೆ ಹಾಕಿಕೊಳ್ಳುತ್ತಿದ್ದಾಳೆ.
ಈ ವೀಡಿಯೊವನ್ನು ಲೀನಾ ಬರ್ಗಟ್ ಕಾಂಬ್ಳೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅವರು "ಪ್ರತಿ ಡೋಸ್, ಪ್ರತಿದಿನ... ಅವಳು ಚಾಂಪಿಯನ್‌ನಂತೆ ಹೋರಾಡುತ್ತಾಳೆ. ನನ್ನ ಪುಟ್ಟ ಯೋಧ ತ್ರಿಷಾ ಬಗ್ಗೆ ಹೆಮ್ಮೆಪಡುತ್ತಾಳೆ" ಎಂದು ಬರೆದುಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಮಗು ತನ್ನ ಬಲ ತೊಡೆಗೆ ಇನ್ಸುಲಿನ್ ಅನ್ನು ಎಚ್ಚರಿಕೆಯಿಂದ ಚುಚ್ಚಿಕೊಳ್ಳುತ್ತಿರುವುದು ನೋಡಬಹುದು.
ಆಕೆ ಎಚ್ಚರಿಕೆಯಿಂದ ನೋವನ್ನು ಎದುರಿಸದೆಯೇ ಇಂಜೆಕ್ಷನ್ ಅನ್ನು ಚುಚ್ಚಿಕೊಳ್ಳುತ್ತಿರುವುದು ನೋಡಿ ಹಲವರು ಅಚ್ಚರಿಗೆ ಒಳಗಾಗಿದ್ದಾರೆ. ಮತ್ತೆ ಕೆಲವರು ಇದೊಂದು ಆಘಾತಕಾರಿ ವಿಚಾರವಾಗಿಯೂ ಪರಿಗಣಿಸಿಸದ್ದಾರೆ. ಆದಾಗ್ಯೂ ಇನ್ನೂ ಹಲವರು ಕಳವಳ ವ್ಯಕ್ತಪಡಿಸಿ, ಚಿಕ್ಕ ಮಗುವಿಗೆ ಇನ್ಸುಲಿನ್ ಇಂಜೆಕ್ಷನ್‌ಗಳನ್ನು ಸಂಪೂರ್ಣವಾಗಿ ಒಂಟಿಯಾಗಿ ನಿರ್ವಹಿಸಲು ಅವಕಾಶ ನೀಡುವುದು ಅಪಾಯಕಾರಿ ಎಂದು ಗಮನಿಸಿದರು. ಕೆಲವರು ಪೋಷಕರನ್ನು ಎಚ್ಚರಿಕೆಯಿಂದಿರಿ ಅವರ ಮೇಲೆ ನಿಗಾ ಇಡಬೇಕಾಗುತ್ತದೆ. ಹೀಗೆ ಅವರಿಗೆ ಇಂಜೆಕ್ಷನ್ ತೆಗೆದುಕೊಳ್ಳಲು ಬಿಡಬಾರದು ಎಂಬ ಸಲಹೆ ನೀಡಿದ್ದಾರೆ.
ಇನ್ನು ಕೆಲವರು ಮಗುವಿನ ಧೈರ್ಯ ಕಂಡು ಶಾಕ್ ಆಗಿದ್ದಾರೆ, ನಾವು ದೊಡ್ಡವರಾಗಿದ್ದರೂ ವೈದ್ಯರಿಂದ ಇಂಜೆಕ್ಷನ್ ಪಡೆಯಲು ಹೆದರಿಕೊಳ್ಳುತ್ತೇವೆ. ಆದ್ರೆ ಈ ಪುಟ್ಟ ಮಗು ಯಾರ ಸಹಾಯವನ್ನು ಕೇಳದೆ ತಾನೇ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಧೈರ್ಯಶಾಲಿ ಎಂದು ಹೊಗಳಿದ್ದಾರೆ.
ಇನ್ಸುಲಿನ್ ಇಂಜೆಕ್ಷನ್ ಅನ್ನು ಮನೆಯಲ್ಲಿ ತೆಗೆದುಕೊಳ್ಳಬಹುದಾದರು ಅದರ ಡೋಸೇಜ್ ವೈದ್ಯರು ನಿರ್ಧರಿಸುತ್ತಾರೆ, ಹಾಗೆ ಮೇಲ್ವಿಚಾರಣೆಯ ಮೂಲಕವೇ ನೀಡಬೇಕಾಗುತ್ತದೆ.
ಬಹುತೇಕ ಹಿರಿಯ ಮಧುಮೇಹಿಗಳು, ಆಸ್ಪತ್ರೆಗಳಿಗೆ ತೆರಳಿಯೇ ಈ ಇಂಜೆಕ್ಷನ್ ಪಡೆಯುತ್ತಾರೆ. ಆದರೆ ಈ ಮಗುವಿನ ಧೈರ್ಯ ನೋಡಿ ಎಲ್ಲರು ಒಮ್ಮೆ ಶಾಕ್ ಆಗಿದ್ದಾರೆ. ಹಾಗೆ ಮಕ್ಕಳಿಗೆ ಈ ರೀತಿ ಇಂಜೆಕ್ಷನ್ ಹಾಕಿಕೊಳ್ಳುವುದನ್ನು ಈಗಲೇ ಅಭ್ಯಾಸ ಮಾಡಿಸಿದರೆ ಮುಂದೆ ಇದು ಅಪಾಯಗಳನ್ನು ಕೂಡ ತರಬಹುದು ಎಂಬ ಕಳವಳ ಸಹ ವ್ಯಕ್ತಪಡಿಸಿದ್ದಾರೆ. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.



Click it and Unblock the Notifications
