Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಚಿನ್ನದ ಖರೀದಿ ಮಾಡುವಾಗ ಹಣ ಉಳಿತಾಯಕ್ಕೆ ಗಮನಿಸಬೇಕಾದ 6 ಸಂಗತಿಗಳಿವು
ಚಿನ್ನ ಮಧ್ಯಮ ವರ್ಗದವರ ಪಾಲಿಎ ಬಲು ದುಬಾರಿಯಾಗುತ್ತಿದೆ, ಬಜೆಟ್‌ನಲ್ಲಿ ಚಿನ್ನದ ಆಮದು ಸುಂಕ ಹೆಚ್ಚಿಸಲಾಗಿದೆ, ಹೀಗಾಗಿ ಚಿನ್ನದ ಬೆಲೆ ಹೆಚ್ಚಾಗುವುದೇ ಹೊರತು ಕಡಿಮೆಯಾಗುವ ಸೂಚನೆಯಿಲ್ಲ, ಈಗ ಚಿನ್ನದ ರೇಟ್ 22 ಗ್ರಾಂ ಚಿನ್ನಕ್ಕೆ 7700 ಆಗಿದೆ (ದಿನದಲ್ಲಿ 2ಬಾರಿ ಚಿನ್ನದ ಬೆಲೆ ಹಾಕಲಾಗುವುದು, ಚಿನ್ನ ಖರೀದಿಗೆ ಮುನ್ನ ಆಯಾ ದಿನದ ಚಿನ್ನದ ಬೆಲೆ ಪರಿಶೀಲಿಸಿ). ಇನ್ನೇನು ಮದುವೆ ಸೀಸನ್ ಚಿನ್ನ ಮತ್ತಷ್ಟು ದುಬಾರಿಯಾಗುವ ನಿರೀಕ್ಷೆಯಿದೆ. ಚಿನ್ನ ಖರೀದಿ ಮಾಡಲು ಹೋಗುವಾಗ ಈ ಅಂಶಗಳನ್ನು ಗಮನಿಸಿದರೆ ಒಳ್ಳೆಯದು

ಖರೀದಿಗೆ ಮುನ್ನ ನಿಮ್ಮ ಸಿಟಿಯಲ್ಲಿ ಗೋಲ್ಡ್ ರೇಟ್ ಎಷ್ಟಿದೆ ಎಂಬುವುದನ್ನು ಚೆಕ್ ಮಾಡಿ
ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು.
ಅಲ್ಲದೆ ಜ್ಯೂವೆಲರಿಯಿಂದ ಜ್ಯೂವೆಲರಿಗೆ ಲೇಬರ್‌ಕಾಸ್ಟ್ ಕೂಡ ಭಿನ್ನವಾಗಿರುತ್ತದೆ
ಚಿನ್ನದ ಶುದ್ಧತೆ ಬಗ್ಗೆ ಗಮನಿಸಬೇಕಾದ ಅಂಶಗಳು
ಚಿನ್ನದ ಶುದ್ಧತೆಯನ್ನು 24 ಕ್ಯಾರೆಟ್‌ನಲ್ಲಿ ಅಳೆಯಲಾಗುವುದು
24K ಶುದ್ಧ ಚಿನ್ನವಾಗಿದೆ
24K ತುಂಬಾ ಮೃದುವಾಗಿರುತ್ತದೆ, ಅಲ್ಲದೆ ತುಂಬಾನೇ ಹಳದಿ ಬಣ್ಣದಲ್ಲಿರುತ್ತದೆ
24K ನಾಣ್ಯ, ಚಿನ್ನದ ಬಿಸ್ಕೆಟ್, ಗಡ್ಡೆ, ಚಿನ್ನದ ಬಾರ್ ರೂಪದಲ್ಲಿ ಇರುತ್ತದೆ
ಚಿನ್ನದ ಆಭರಣ ಮಾಡಲು 22K ಚಿನ್ನ ಬಳಸಲಾಗುವುದು
22K ಚಿನ್ನವನ್ನು 91.6KDM ಎಂದು ಕರೆಯಲಾಗುವುದು, ಇದು 91.67% ಶುದ್ಧ ಚಿನ್ನವಾಗಿದೆ
18K ಚಿನ್ನ ಶೇ. 75ರಷ್ಟು ಚಿನ್ನ ಶೇ. 25ರಷ್ಟು ಇತರ ಲೋಹವಾಗಿರುತ್ತದೆ, ಅಲ್ಲದೆ ಈ ಆಭರಣ 22K ಚಿನ್ನದ ಆಭರಣಕ್ಕಿಂತ ಬೆಲೆ ಕಡಿಮೆ
ಆದರೆ ಅದಕ್ಕೆ ಬಳಸುವ ಕಲ್ಲಿನಿಂದಾಗಿ 18K ಆಭರಣ ದುಬಾರಿಯಾಗಬಹುದು. 18K ಆಭರಣಕ್ಕೆ ವಜ್ರದ ಕಲ್ಲಿದ್ದರೆ ಆ ಆಭರಣ ತುಂಬಾ ದುಬಾರಿಯಾಗಬಹುದು.
ಮೇಕಿಂಗ್ ಚಾರ್ಜ್ ಎಂದರೇನು? ಏಕೆ ಇದು ಎಲ್ಲಾ ಅಂಗಡಿಗಳಲ್ಲಿ ಒಂದೇ ರೀತಿ ಇರುವುದಿಲ್ಲ
ಎಲ್ಲಾ ಆಭರಣಕ್ಕೆ ಒಂದೇ ರೀತಿ ಮೇಕಿಂಗ್ ಚಾರ್ಜ್ ಹಾಕಲು ಸಾಧ್ಯವಿಲ್ಲ, ಡಿಸೈನ್ ಕಡಿಮೆ ಇರುವ ಆಭರಣಕ್ಕಿಂತ , ಡಿಸೈನ್ ಹೆಚ್ಚಿರುವ ಆಭರಣಕ್ಕೆ ಹೆಚ್ಚಿನ ಮೇಕಿಂಗ್ ಚಾರ್ಜ್ ತೆಗೆದುಕೊಳ್ಳುತ್ತಾರೆ. ಹಾಗಾಗು ಮೇಕಿಂಗ್ ಚಾರ್ಕ್ ಶೇ. 3ರಿಂದ ಶೇ25ರಷ್ಟು ಕೂಡ ಇರಬಹುದು. ಅಲ್ಲದೆ ಇದು ಅಂಗಡಿಯಿಂದ-ಅಂಗಡಿಗೆ ಭಿನ್ನವಾಗಿರುತ್ತದೆ. 0% ಮೇಕಿಂಗ್ ಚಾರ್ಜ್‌ನಲ್ಲಿ ನೀಡ್ತಾ ಇದ್ದೀವಿ ಎಂದರೆ ಅವರು ಬೇರೆ ರೀತಿಯಲ್ಲಿ ನಿಮ್ಮನ್ನು ಮೋಸ ಮಾಡಬಹುದು. ಹಾಗಾಗಿ ಮೇಕಿಂಗ್ ಚಾರ್ಜ್ ವಿಷಯದಲ್ಲಿ ಜಾಗ್ರತೆವಹಿಸಿ.
ವೇಸ್ಟೇಜ್ ಜಾರ್ಜ್ ಎಂದರೇನು?
ಬರಿ ಚಿನ್ನದ ಆಭರಣಕ್ಕಿಂತ ಕಲ್ಲುಗಳು, ಹರಳುಗಳಿರುವ ಚಿನ್ನದ ಆಭರಣಕ್ಕೆ ವೇಸ್ಟೇಜ್ ಚಾರ್ಜ್ ಅಧಿಕವಿರುತ್ತದೆ. ಇನ್ನು ಚಿನ್ನದ ತೂಕ ಹಾಗೂ ಹರಳು ಅಥವಾ ಕಲ್ಲಿನ ತೂಕ ಪ್ರತ್ಯೇಕವಾಗಿರಬೇಕು.
ಯಾವಾಗ ಚಿನ್ನ ಖರೀದಿ ಸೂಕ್ತ
ಹಬ್ಬದ ಸಮಯದಲ್ಲಿ ಹಾಗೂ ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ಅಧಿಕವಿರುತ್ತದೆ.
ಪ್ಲಾಟಿನಂ ಜ್ಯೂವೆಲರಿ ಖರೀದಿ ಮಾಡುವುದಾದರೆ
ನೀವು ಪ್ಲಾಟಿನಂ ಖರೀದಿಸುವಾಗ ತುಂಬಾನೇ ಜಾಗ್ರತೆವಹಿಸಬೇಕು. ವೈಟ್ ಗೋಲ್ಡ್ ನೀಡಿ ಪ್ಲಾಟಿನಂ ಅಂತ ಮೋಸ ಮಾಡುತ್ತಿಲ್ಲ ಎಂಬುವುದರ ಬಗ್ಗೆ ಖಾತರಿ ಮಾಡಿಕೊಳ್ಳಿ.



Click it and Unblock the Notifications
