Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
54 ವರ್ಷ ಹಿಂದಿನ ಪತ್ರಿಕೆಯಲ್ಲೇ ಸೂರ್ಯ ಗ್ರಹಣದ ಉಲ್ಲೇಖ..! ಇದರ ವಿಶೇಷವೇನು?
ಈ ವರ್ಷ 4 ಗ್ರಹಗಳಿಗೆ ನಾವುಗಳು ಸಾಕ್ಷಿಯಾಗಲಿದ್ದೇವೆ. ಎರಡು ಚಂದ್ರಗ್ರಹಣ ಹಾಗೂ ಮತ್ತೆರಡು ಸೂರ್ಯಗ್ರಹಣವಾಗಿವೆ. ಈ ತಿಂಗಳ 25ರ ಹೋಳಿ ಹುಣ್ಣಿಮೆಯಂದು ಮೊದಲ ಚಂದ್ರಗ್ರಹಣ ಸಂಭವಿಸಿದರೆ, ಏಪ್ರಿಲ್ 8ರಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಈ ಕುರಿತು ಬಹುಪಾಲು ಮಂದಿಗೆ ತಿಳಿದಿದೆ. ಹಿಂಧೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರವಾಗಿ ನಾವು ತಿಥಿ, ಸಮಯ, ಕಾಲ ನೋಡುತ್ತೇವೆ. ಜೊತೆಗೆ ಗ್ರಹಣ ಕಾಲಗಳನ್ನು ಎಲ್ಲಾ ಕ್ಯಾಲೆಂಡರ್‌ಗಳೂ ನಿಖರವಾಗಿ ಹೇಳುತ್ತವೆ.
ಆದರೆ ಈ ಗ್ರಹಣದ ಕುರಿತಂತೆ ಹತ್ತಾರು ವರ್ಷದ ಹಿಂದೆಯೂ ಉಲ್ಲೇಖವಿದ್ದರೆ ಎಷ್ಟು ಆಶ್ಚರ್ಯವಾಗುತ್ತದೆ ಅಲ್ಲವೇ. ಹೌದು ಇಲ್ಲೊಂದು ಪತ್ರಿಕೆಯಲ್ಲಿ ಈ ಸೂರ್ಯಗ್ರಹಣದ ಕುರಿತಾದ ವಿಚಾರ ಮುದ್ರಣವಾಗಿದೆ. ಗ್ರಹಣ ಕಾಲವನ್ನು ಹಿಂದೆ ಹೇಗೆ ಅಂದಾಜು ಮಾಡುತ್ತಿದ್ದರು ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ.

ಓಹಿಯೋ ನಗರದ ದಿನ ಪತ್ರಿಕೆಯೊಂದರಲ್ಲಿ ಈ ಸೂರ್ಯ ಗ್ರಹಣದ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ, ಇದು ಬರೋಬ್ಬರಿ 54 ವರ್ಷಗಳ ಹಿಂದೆ ಅಂದರೆ ನಿಮಗೂ ಅಚ್ಚರಿಯಾಗುತ್ತದೆ. 1970ರಲ್ಲಿ ಮುದ್ರಣಗೊಂಡಿದ್ದ ಈ ಪತ್ರಿಕೆಯಲ್ಲಿ ಸೂರ್ಯ ಗ್ರಹಣದ ಕುರಿತಾದ ಮಾಹಿತಿ ಹಂಚಿಕೊಳ್ಳಲಾಗಿದೆ.
ಅದರಲ್ಲಿ 2024ರಲ್ಲಿ ಮುಂದಿನ ಸೂರ್ಯ ಗ್ರಹಣ ಪ್ರದರ್ಶನ ಎಂದು ಹೆಡ್‌ಲೈನ್ ನೀಡಲಾಗಿದೆ. ಅಂದರೆ 1970ರಲ್ಲಿ ಈ ರೀತಿಯ ವಿಶೇಷ ಸೂರ್ಯಗ್ರಹಣ ಉಂಟಾಗಿತ್ತು. ಈಗ 54 ವರ್ಷದ ಬಳಿಕ ಈ ಸೂರ್ಯ ಗ್ರಹಣ ಮತ್ತೆ ಕಾಣಿಸಿಕೊಳ್ಳುತ್ತಿದೆ.
ಹಾಗಾದ್ರೆ ಈ ಸೂರ್ಯ ಗ್ರಹಣ ವಿಶೇಷ ಏಕೆ?
ಈ ಏಪ್ರಿಲ್ 8ರಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ಅಪರೂಪದ ಗ್ರಹಣ ಎಂದು ಕರೆಯಲಾಗಿದೆ. ಏಕೆಂದರೆ ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿಕೊಳ್ಳುತ್ತಾನೆ. ಇದರಿಂದ ಭೂಮಿಯ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಕತ್ತಲೆ ಆವರಿಸಿಕೊಳ್ಳಲಿದೆ. ಜೊತೆಗೆ ಚಂದ್ರ ಎಂದಿಗಿಂತ ದೊಡ್ಡದಾಗಿ ಗೋಚರವಾಗುತ್ತದೆ. ಗ್ರಹಣದ ಹಿಂದಿನ ದಿನದಂದು ಚಂದ್ರನು ಭೂಮಿಗೆ ಕೇವಲ 3,60,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು, ಇದು ಚಂದ್ರ ಅತ್ಯಂತ ಸಮೀಪಕ್ಕೆ ಬರುವ ದಿನವಾಗಿದೆ.
ಉತ್ತರ ಅಮೆರಿಕಾ ಮತ್ತು ಮಧ್ಯ ಅಮೆರಿಕದಾದ್ಯಂತ ಈ ಗ್ರಹಣ ಗೋಚರಿಸುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸಂಪೂರ್ಣ ಕತ್ತಲೆಯ ಹಾದಿಯಲ್ಲಿ 4 ನಿಮಿಷ ಮತ್ತು 28 ಸೆಕೆಂಡುಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಸೂರ್ಯ ಗ್ರಹಣದ ಸಮಯ ಬರೋಬ್ಬರಿ 7.5 ನಿಮಿಷಗಳಾಗಿದೆ.
ಈ ಗ್ರಹಣದ ಬಳಿಕ ಆಗಸ್ಟ್ 12 2026ರಂದು ಇದೇ ರೀತಿಯ ಗ್ರಹಣ ಮತ್ತೆ ಬರಲಿದೆ. ಅಂದು ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಅಟ್ಲಾಂಟಿಕ್ ಸಾಗರದಲ್ಲಿ ಗೋಚರವಾಗಲಿದೆ.
2024ರಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ಇದಾದ 15 ದಿನಗಳಲ್ಲಿ ಚೈತ್ರ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಮಾರ್ಚ್ 25 ರಂದು ನಡೆಯಲಿರುವ ಪೆನಂಬ್ರಾಲ್ ಚಂದ್ರಗ್ರಹಣವು ಅತ್ಯಂತ ಚಿಕ್ಕದಾದ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಅಂಚಿನಲ್ಲಿ ಹಾದುಹೋಗುತ್ತದೆ. ಇದು ಯುರೋಪ್, ಉತ್ತರ ಮತ್ತು ಪೂರ್ವ ಏಷ್ಯಾ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ. ಅಂದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ.
ಸೂರ್ಯಗ್ರಹಣ ಎಂದರೇನು?
ಸೂರ್ಯಗ್ರಹಣವು ಒಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಚಂದ್ರನು ತನ್ನ ಕಕ್ಷೆಯ ಚಲನೆಯ ವೇಳೆ ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸಂಭವಿಸುತ್ತದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಪ್ರವೇಶಿಸಿದಾಗ ಸೂರ್ಯನ ಕಿರಣಗಳು ಕೆಲವು ಸಮಯ ಭೂಮಿಗೆ ಬರದಂತೆ ತಡೆಯುತ್ತದೆ. ಈ ಸಂದರ್ಭದಲ್ಲಿ, ಚಂದ್ರನ ನೆರಳು ಮಾತ್ರ ಭೂಮಿಯ ಮೇಲೆ ಬೀಳುತ್ತದೆ ಇದನ್ನು ಸೂರ್ಯ ಗ್ರಹಣ ಎನ್ನಲಾಗುತ್ತದೆ. ಸೂರ್ಯಗ್ರಹಣವು ಪೂರ್ಣ ಸೂರ್ಯಗ್ರಹಣ, ಭಾಗಶಃ ಗ್ರಹಣ ಮತ್ತು ಉಂಗುರ ಗ್ರಹಣ ರೂಪದಲ್ಲಿ ಸಂಭವಿಸುತ್ತದೆ.



Click it and Unblock the Notifications