Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಈ 5 ರಾಶಿಯವರು ವೃತ್ತಿಯಲ್ಲಿ ಯಶಸ್ಸಿನ ಏಣಿಯನ್ನು ಬಹುಬೇಗ ಹತ್ತುತ್ತಾರೆ!
ವೃತ್ತಿ ಜೀವನದಲ್ಲಿ ಯಶಸ್ಸು ಅನ್ನೋದು ಪ್ರತೊಯೊಬ್ಬ ವ್ಯಕ್ತಿಗೂ ತುಂಬಾನೇ ಮುಖ್ಯವಾಗುತ್ತದೆ. ನಾವು ಹೊಸತಾಗಿ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಕಡಿಮೆ ಸಂಭಳಕ್ಕೆ ದುಡಿಯುತ್ತೇವೆ. ವರ್ಷ ಕಳೆದಂತೆ ಒಂದೊಳ್ಳೆ ಸ್ಥಾನಕ್ಕೆ ಹೋಗಬೇಕು, ಕೈ ತುಂಬಾ ದುಡ್ಡು ಸಂಪಾದನೆ ಮಾಡಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ಆದರೆ ಅಂದುಕೊಂಡ ಹಾಗೆ ಎಲ್ಲರ ಆಸೆಗಳು ನೆರವೇರೋದಿಲ್ಲ. ಅದೆಷ್ಟೋ ಜನ ಇನ್ನೂ ಕೂಡ ಕಡಿಮೆ ಸಂಭಳಕ್ಕೆ ಕತ್ತೆ ತರ ದುಡಿಯುತ್ತಾರೆ. ಇತ್ತ ವೃತ್ತಿ ಜೀವನದಲ್ಲಿ ಅವರು ಯಾವ ರೀತಿಯ ಪ್ರಗತಿಯನ್ನು ಕೂಡ ಕಾಣೋದಿಲ್ಲ. ಆದರೆ ಕೆಲವು ಜನರ ಅದೃಷ್ಟ ಮಾತ್ರ ತುಂಬಾನೇ ಚೆನ್ನಾಗಿರುತ್ತದೆ. ವೃತ್ತಿ ಜೀವನದಲ್ಲಿ ಬಹುಬೇಗ ಯಶಸ್ಸನ್ನು ಕಾಣುತ್ತಾರೆ. ದೊಡ್ಡ ಹುದ್ದೆ ಜೊತೆಗೆ ಕೈ ತುಂಬಾ ಸಂಪಾದನೆಯನ್ನೂ ಮಾಡುತ್ತಾರೆ. ಅಷ್ಟಕ್ಕು ಈ ಅದೃಷ್ಟವಂತ ರಾಶಿಯವರು ಯಾರೆಂದು ತಿಳಿಯೋಣ.
ಮೇಷ ರಾಶಿ
ವೃತ್ತಿ ಜೀವನದಲ್ಲಿ ಮೇಷ ರಾಶಿಯವರು ಮುನ್ನಡೆಯನ್ನು ಸಾಧಿಸುತ್ತಾರೆ. ಹಾಗೂ ಈ ರಾಶಿಯವರು ಹುಟ್ಟು ನಾಯಕರಾಗಿ ಇರುತ್ತಾರೆ. ಇವರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿರುತ್ತದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಯಾವತ್ತಿಗೂ ಇವರು ಹಿಂದೆ ಸರಿಯುವವರಲ್ಲ. ಸವಾಲುಗಳಿದೆ ಎದೆಯೊಡ್ಡಿ ನಿಲ್ಲುವ ದೈರ್ಯ, ತಾಕತ್ತು ಇವರಲ್ಲಿರುತ್ತದೆ. ಹೀಗಾಗಿ ವೃತ್ತಿ ಕ್ಷೇತ್ರದಲ್ಲಿ ಇವರ ಪ್ರಗತಿ ಯಾವಗಲೂ ಚೆನ್ನಾಗಿಯೇ ಇರುತ್ತದೆ. ಇವರಲ್ಲಿರುವ ಕೆಲವೊಂದು ಗುಣಗಳಿಂದ ಇತರರೂ ಸ್ಫೂರ್ತಿ ಪಡೆದುಕೊಳ್ಳುತ್ತಾರೆ.
ಸಿಂಹ ರಾಶಿ
ತಮ್ಮ ಕಾಂತೀಯ ವರ್ಚಸ್ಸು ಮತ್ತು ಸಹಜ ಮೋಡಿಯೊಂದಿಗೆ ಸಿಂಹ ರಾಶಿಯವರು ಸಾಮಾನ್ಯವಾಗಿ ಕೆಲಸದ ಸ್ಥಳದಲ್ಲಿ ಕೇಂದ್ರಬಿಂದುವಾಗಿರುತ್ತಾರೆ. ಇವರಲ್ಲಿರುವ ಆತ್ಮವಿಶ್ವಾಸ ಮತ್ತು ಸ್ವಯಂ-ಭರವಸೆಯು ಇತರರನ್ನು ತಮ್ಮ ಕಡೆಗೆ ಸೆಳೆಯುವಂತೆ ಮಾಡುತ್ತದೆ. ಸಿಂಹ ರಾಶಿಯವರು ದೊಡ್ಡ ಕನಸು ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸದೇ ಬಿಡುವವರಲ್ಲ. ಇವರಲ್ಲಿರುವ ಕೌಶಲ್ಯದಿಂದಲೇ ವೃತ್ತಿ ಜೀವನದಲ್ಲಿ ಬಹಳಷ್ಟು ಎತ್ತರಕ್ಕೆ ಇವರು ಏರುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ವೃತ್ತಿ ಜೀವನದಲ್ಲಿ ಬಹಳಷ್ಟು ಪ್ರಗತಿಯನ್ನು ಕಂಡುಕೊಳ್ಳುತ್ತಾರೆ. ಈ ರಾಶಿಯವರು ವೃತ್ತಿ ಜೀವನದಲ್ಲಿ ಕಾಯ್ದುಕೊಳ್ಳುವ ಸಮತೋಲನ ಹಾಗೂ ಸರಿ ಸಾಟಿಯಿಲ್ಲದ ಸಾಮರ್ಥ್ಯ ಇವರನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.
ಈ ರಾಶಿಯವರಲ್ಲಿರುವ ಚಾತುರ್ಯದ ಸಂವಹನ ಮತ್ತು ಸಾಮಾನ್ಯ ನೆಲೆಯನ್ನು ಹುಡುಕುವ ಕೌಶಲ್ಯವು ಯಾವುದೇ ತಂಡದಲ್ಲಿ ಅವರನ್ನು ಅಮೂಲ್ಯವಾದ ಆಸ್ತಿಯನ್ನಾಗಿ ಮಾಡುತ್ತದೆ. ಸಕಾರಾತ್ಮಕ ಸಂಬಂಧಗಳನ್ನು ಬೆಳೆಸುವ ಈ ಕೌಶಲ್ಯವು ಅವರ ವೃತ್ತಿಪರ ಪ್ರಯಾಣದಲ್ಲಿ ಅವರನ್ನು ಬಹಳಷ್ಟು ಮೇಲಕ್ಕೆ ಕರೆದುಕೊಂಡು ಹೋಗುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಪ್ರತಿಯೊಂದು ವಿಚಾರದಲ್ಲೂ ತುಂಬಾನೇ ಶಿಸ್ತು ಬದ್ಧವಾಗಿ ಜೀವನ ನಡೆಸುತ್ತಾರೆ. ಇವರು ವೃತ್ತಿ ಜೀವನದಲ್ಲಿ ಕ್ರಮಬದ್ಧ ವಿಧಾನಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರು ಸ್ಪಷ್ಟವಾದ ಗುರಿಯನ್ನು ಹೊಂದಿರುತ್ತಾರೆ. ಹಂತ-ಹಂತದ ಯೋಜನೆಗಳನ್ನು ರಚಿಸುತ್ತಾರೆ. ಮತ್ತು ತಮ್ಮ ಗುರಿಗಳತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಹಾಗೂ ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇವರಲ್ಲಿರುವ ತಾಳ್ಮೆಯೂ ವೃತ್ತಿಜೀವನದ ಏರಿಳಿತಗಳನ್ನು ಸ್ಥಿತಿಸ್ಥಾಪಕತ್ವದಿಂದ ಎದುರಿಸಲು ಅನುವು ಮಾಡಿಕೊಡುತ್ತದೆ.
ಧನು ರಾಶಿ
ಧನು ರಾಶಿಯವರು ತಮ್ಮ ವೃತ್ತಿ ಜೀವನದ ಬಗ್ಗೆ ಬಹಳಷ್ಟು ಯೋಚಿಸುತ್ತಾರೆ. ಏನಾದರೂ ಸಾಧಿಸಬೇಕು ಅನ್ನೋ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಜೊತೆಗೆ ಗುರಿಯನ್ನು ಮುಟ್ಟುವವರೆಗೂ ತಮ್ಮ ಪ್ರಯತ್ನವನ್ನು ಇವರು ನಿಲ್ಲಿಸೋದಿಲ್ಲ. ಜ್ಞಾನ ಮತ್ತು ಹೊಸ ಅನುಭವಗಳಿಗಾಗಿ ಇವರ ಮನಸ್ಸು ತುಡಿಯುತ್ತಿರುತ್ತದೆ.
ಹೀಗಾಗಿ ಹೊಸ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತದೆ. ಧನು ರಾಶಿಯವರು ತಮ್ಮ ಆರಾಮ ವಲಯದಿಂದ ಹೊರಬರಲು ಹೆದರುವುದಿಲ್ಲ. ಹಾಗೂ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಇಷ್ಟ ಪಡುತ್ತಾರೆ. ಇವರಲ್ಲಿರುವ ಈ ಎಲ್ಲಾ ಗುಣಗಳಿಂದ ಬಹುಬೇಗ ಯಶಸ್ಸಿನ ಏಣಿಯನ್ನು ಏರುತ್ತಾರೆ.



Click it and Unblock the Notifications











