Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರು ಯಾರ ಜೊತೆಗಾದರೂ ಸುಲಭವಾಗಿ ಬೆರೆಯುತ್ತಾರೆ!
ಈ ಜಗತ್ತಿನಲ್ಲಿರುವ ಎಲ್ಲರ ಗುಣ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ಗುಣವನ್ನು ಹೊಂದಿರುತ್ತಾರೆ. ಕೆಲವರು ತುಂಬಾನೇ ಸೈಲೆಂಟ್ ಆಗಿದ್ದು ಯಾರ ಜೊತೆಗೆ ಬೆರೆಯೋದಕ್ಕೂ ಇಷ್ಟ ಪಡೋದಿಲ್ಲ. ಆದರೆ ಇನ್ನೂ ಕೆಲವರು ತುಂಬಾನೇ ಮಾತನಾಡುತ್ತಾರೆ. ಎಲ್ಲರ ಜೊತೆಗೆ ಒಂದಾಗಿ ಇರುತ್ತಾರೆ. ಇಂತಹ ಗುಣ ಇರುವವರಿಗೆ ಹೋದಲೆಲ್ಲಾ ಸ್ನೇಹಿತರು ಇರುತ್ತಾರೆ.
ಸಾಮಾಜಿಕವಾಗಿ ಕೂಡ ಇವರು ತುಂಬಾನೇ ಆಕ್ಟೀವ್ ಆಗಿ ಇರುತ್ತಾರೆ. ಎಲ್ಲಿ ಹೋಗಿ ಕೂಡ ಇವರು ದೈರ್ಯವಾಗಿ ಮಾತನಾಡುತ್ತಾರೆ. ಯಾವುದೇ ಅಂಜಿಕೆ, ಅಳುಕು ಇವರಲ್ಲಿ ಇರೋದಿಲ್ಲ. ಕೆಲವೇ ಕೆಲವು ರಾಶಿಯವರಲ್ಲಿ ಮಾತ್ರ ಇಂತಹ ಗುಣ ಇರುತ್ತದೆ. ಅಷ್ಟಕ್ಕು ಎಲ್ಲರೊಳಗೆ ಒಂದಾಗಿ ಬೆರೆಯುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯವರು ಅತ್ಯತ್ತಮ ಸಂವಹನಕ್ಕೆ ಹೆಸರುವಾಸಿಯಾಗಿರುತ್ತಾರೆ. ಯಾರ ಬಳಿಯಾದರೂ ಹೋಗಿ ಮಾತನಾಡುವ ಚಾಕಚಕ್ಯತೆ ಇವರಲ್ಲಿದೆ. ಮಿಥುನ ರಾಶಿಯ ಅಧಿಪತಿ ಬುಧಗ್ರಹ. ಮಿಥುನ ರಾಶಿಯವರಿಗೆ ಇರುವ ಬುದ್ಧಿ ಹಾಗೂ ಬಹುಮುಖ ಪ್ರತಿಭೆಯಿಂದ ಇವರು ಸಾಮಾಜಿಕ ಸಂದರ್ಭಗಳಲ್ಲಿ ಸುಲಭವಾಗಿ ತೊಡಗಿಕೊಳ್ಳುತ್ತಾರೆ. ಇವರು ಜನರು ಮತ್ತು ವಿಷಯಗಳ ಬಗ್ಗೆ ಸ್ವಾಭಾವಿಕ ಕುತೂಹಲವನ್ನು ಹೊಂದಿದ್ದಾರೆ. ಈ ರಾಶಿಯವರು ಅತ್ಯುತ್ತಮ ಸಂಭಾಷಣೆಕಾರರಾಗಿರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸಿಂಹ ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ. ಯಾರ ಗಮನವನ್ನಾದರೂ ಇವರತ್ತ ಸುಲಭವಾಗಿ ಸೆಳೆದುಕೊಳ್ಳುತ್ತಾರೆ. ಸಿಂಹ ರಾಶಿಯವರ ಆತ್ಮೀಯ ಮತ್ತು ಉದಾರ ಸ್ವಭಾವವು ಇವರನ್ನು ಎಂತವರೂ ಕೂಡ ಇಷ್ಟ ಪಡುವಂತೆ ಮಾಡುತ್ತದೆ. ಮಾತೇ ಇವರಿಗೆ ಬಂಡವಾಳ. ಇವರು ಆಡುವ ಮಾತಿನಿಂದ ಯಾರನ್ನೂ ಬೇಕಾದರೂ ಗೆಲ್ಲುವ ಶಕ್ತಿ ಹೊಂದಿದ್ದಾರೆ.
ತುಲಾ ರಾಶಿ
ತುಲಾ ರಾಶಿಯವರು ಯಾರ ಜೊತೆಗೆ ಬೇಕಾದರೂ ಅತ್ಯಂತ ಸುಲಭವಾಗಿ ಬೆರೆಯುತ್ತಾರೆ. ಯಾವಾಗಲೂ ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ಯಾವುದೇ ಭಯ ಇಲ್ಲದೇ ಮಾತನಾಡುವ ಚಾಕಚಕ್ಯತೆ ಇವರಲ್ಲಿದೆ. ತುಲಾ ರಾಶಿಯನ್ನು ಶುಕ್ರನು ಆಳೋದ್ರಿಂದ ಈ ರಾಶಿಯವರು ಆಕರ್ಷಕ, ರಾಜತಾಂತ್ರಿಕ ಮತ್ತು ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಇದ್ದ ಜಾಗವೆಲ್ಲಾ ಲವಲವಿಕೆಯಿಂದ ಕೂಡಿರುತ್ತದೆ.
ಧನು ರಾಶಿ
ಧನು ರಾಶಿಯವರು ಜಗತ್ತನ್ನು ಅನ್ವೇಷಿಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಇಷ್ಟಪಡುವ ಸಾಹಸಮಯ ಜೀವಿಗಳು. ಧನು ರಾಶಿಯವರು ಗುರು ಗ್ರಹದಿಂದ ಆಳಲ್ಪಡುತ್ತಾರೆ. ಇವರು ಮುಕ್ತ ಮನಸ್ಸಿನವರು ಮತ್ತು ಉತ್ಸಾಹಭರಿತರಾಗಿದ್ದಾರೆ. ಹೀಗಾಗಿ ಇವರು ಎಲ್ಲರನ್ನೂ ತಮ್ಮತ್ತ ಆಕರ್ಷಿಸುತ್ತಾರೆ. ಇವರಿದ್ದಲೆಲ್ಲಾ ಸ್ನೇಹಿತರು ಹಾಗೂ ಆಪ್ತರು ಖುಷಿಯಾಗಿ ಇರುತ್ತಾರೆ. ಇವರು ಯಾರ ಬಳಿಯೂ ಮಾತನಾಡೋದಕ್ಕೆ ಅಂಜಿಕೆ ಪಟ್ಟುಕೊಳ್ಳೋದಿಲ್ಲ.
ಮೇಷ ರಾಶಿ
ಮೇಷ ರಾಶಿಯವರು ಅಪರಿಚಿತರೊಂದಿಗೂ ಕೂಡ ಪರಿಚಿತರಂತೆ ಮಾತನಾಡುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಮೇಷ ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ. ಹೀಗಾಗಿ ಸಂವಹನ ಇವರಿಗೆ ಕಷ್ಟ ಆಗೋದಿಲ್ಲ. ಮಾತನಾಡುವ ಕಲೆ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಯಾವುದೇ ಕೆಲಸ ಮಾಡೋದಕ್ಕೂ ಹಿಂಜರಿಯೋದಿಲ್ಲ. ಈ ರಾಶಿಯವರು ಉತ್ಸಾಹಿಗಳು.



Click it and Unblock the Notifications

