Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಓಹೋ ರಶ್ಮಿಕಾ ಕನ್ನಡದವರಲ್ಲ: ಕನ್ನಡಿಗರ ಕಣ್ಣು ಕೆಂಪಾಗಿಸಿದ ರಶ್ಮಿಕಾ ಮಂದಣ್ಣ ಮಾಡಿಕೊಂಡ 5 ವಿವಾದಗಳು
ಯಾವತ್ತೂ ನಾವು ಎಲ್ಲಿಂದ ಬಂದಿದ್ದೇವೆ ಎಂದು ಮರೆಯದ ಎಂದಿಗೂ ಜೀವನದಲ್ಲಿ ಎಂದಿಗೂ ಕೆಳಕ್ಕೆ ಬೀಳಲ್ಲ ಎಂಬ ಮಾತಿದೆ, ಇದನ್ನು ರಶ್ಮಿಕಾ ಮಂದಣ್ಣ ಎಂಬ ನಟಿ ಅರಿತುಕೊಂಡರೆ ಚೆನ್ನಾಗಿರುತ್ತೆ, ಹೆಂಗೆಂಗೋ ಮರೆದವರು ಈಗ ನೆನಪಿನಲ್ಲಿಯೂ ಇಲ್ಲ, ಹಾಗಾಗಿ ಬಾಲಿವುಡ್‌ನಲ್ಲಿ ನಟಿಸುತ್ತಿದ್ದೇನೆ ಎಂಬ ಕಾರಣಕ್ಕೆ ನಾನು ಕರ್ನಾಟಕದಿಂದ ಬಂದವಳು ಎಂದು ಹೇಳಲು ಅಲರ್ಜಿ ರೋಗವೇ?
ಎಲ್ಲಿಂದೋ ಬಂದು ಕನ್ನಡ ಸಿನಿಮಾದಲ್ಲಿ ನಟಿಸಿದವರೇ ಕನ್ನಡ ಭಾಷೆಗೆ, ಕನ್ನಡ ನೆಲಕ್ಕೆ ಗೌರವ ಸೂಚಿಸುವಾಗ ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲಿ, ಕನ್ನಡ ಸಿನಿಮಾದಲ್ಲಿ ಛಾನ್ಸ್ ಸಿಕ್ಕಿದ್ದಕ್ಕೆ ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಆದರೆ ಅದೆಲ್ಲಾ ಬಿಟ್ಟು ನಾನು ಹೈದರಾಬಾದ್‌ನವಳು ಎಂದು ಒಂದಿಷ್ಟೂ ಪಶ್ಚಾತಾಪ ಇಲ್ಲದೆ ಹೇಳ್ತಾಳೆ ಎಂದರೆ ಕನ್ನಡಿಗರಿಗೆ ಅವಳನ್ನು ಸಹಿಸಲು ಸಾಧ್ಯವೇ? (ಕ್ಷಮಿಸಿ ಕನ್ನಡಕ್ಕೆ ಗೌರವ ನೀಡದವಳಿಗೆ ನಾವು ಗೌರವ ನೀಡಬೇಕೆ?)

ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಮಂದಣ್ಣ
ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪಾಗುತ್ತೆ, ಆದರೆ ಬೇಕಂತಲೇ ಪದೇ ಪದೇ ತಪ್ಪು ಮಾಡುತ್ತಿದ್ದರೆ ಯಾರಿಗೆ ತಾನೆ ಸಹಿಸಲು ಸಾಧ್ಯವಿಲ್ಲ, ಈಗ ಇರುವ ನಟಿಯರಲ್ಲಿ ರಶ್ಮಿಕಾಳಷ್ಟು ಕನ್ನಡಿಗರ ಕೋಪ ಕಟ್ಟಿಕೊಂಡಿರುವ ನಟಿ ಮತ್ತೊಬ್ಬರಿಲ್ಲ, ಕನ್ನಡಿಗರು ಸರಿಯಾಗಿ ಎದಿರೇಟು ಕೊಟ್ಟಾಗ ಸ್ವಲ್ಪ ಸಮಯ ಮೆತ್ತಗಾಗುವ ರಶ್ಮಿಕಾ ಮತ್ತೆ-ಮತ್ತೆ ಅದೇ ತಪ್ಪು ಮಾಡುತ್ತಲೇ ಇದ್ದಾರೆ.
ಕನ್ನಡ ಸಿನಿಮಾದ ಮೂಲಕ ನಟಿಯಾಗಿ ಬೆಳೆದ ರಶ್ಮಿಕಾ ಕನ್ನಡದ ಬಗ್ಗೆ ಮಾಡಿರುವ ವಿವಾದಗಳೆಂದರೆ
ವಿವಾದ 1
ನಾನು ಹೈದರಾಬಾದ್‌ನವಳು ಎಂಬ ಹೇಳಿಕೆ
ಕೊಡವರು ಎಲ್ಲೇ ಹೋಗಲಿ ನಾನು ಕೊಡಗಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ನೋಡುತ್ತೇವೆ, ಆದರೆ ಈ ರಶ್ಮಿಕಾ ತಾನು ಹೈದರಾಬಾದ್‌ನವಳು ಎಂದು ಹೇಳುವ ಮೂಲಕ ಕೊಡಗಿಗೂ ಅವಮಾನ ಮಾಡಿದ್ದಾಳೆ, ತನಗೆ ಸ್ಟಾರ್ ಪಟ್ಟ ನೀಡಿದ ಕನ್ನಡಿಗರಿಗೂ ಅವಮಾನ ಮಾಡಿದ್ದಾಳೆ.
ನೀನು ಈ ರೀತಿ ಹೇಳಿರುವುದು ನಮಗೆ ಸಂತೋಷವಾಗಿದೆ, ನಿನ್ನಂಥವಳು ನಮಗೂ ಬೇಡ ಎಂದು ಕನ್ನಡಿಗರು ಕಟುವಾಗಿಯೇ ಟೀಕೆ ಮಾಡುತ್ತಿದ್ದಾರೆ.
ವಿವಾದ 2
ತಾನು ನಟಿಸಿದ ಮೊದಲ ಚಿತ್ರದ ಪ್ರೊಡೆಕ್ಷನ್ ಹೌಸ್ ಹೇಳಲು ಹಿಂದೇಟು ಹಾಕಿದ ರಶ್ಮಿಕಾ
ರಕ್ಷಿತ್‌ಶೆಟ್ಟಿ-ರಶ್ಮಿಕಾ ಮಂದಣ್ಣ ವೈಯಕ್ತಿಕ ಕಾರಣಗಳಿಂದ ದೂರಾಗಿರಬಹುದು, ಆದರೆ ಪರಂವಃ ಸ್ಟುಡಿಯೋ ರಶ್ಮಿಕಾ ಮಂದಣ್ಣಗೆ ಮೊದಲು ಅವಕಾಶ ನೀಡಿದ ಪ್ರೊಡೆಕ್ಷನ್ ಹೌಸ್, ಅದನ್ನು ಹೇಳದೆ ಅವಮಾನ ಮಾಡಿದ್ದಕ್ಕೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ರಿಷಬ್ ಶೆಟ್ಟಿ ಕೂಡ ತಮ್ಮದೇ ಶೈಲಿಯಲ್ಲಿ ರಶ್ಮಿಕಾರಿಗೆ ತಿರುಗೇಟು ನೀಡಿದ್ದರು.
ವಿವಾದ 3
ಕಾಂತಾರ ಚಿತ್ರ ನೋಡಿಲ್ಲ ಎಂಬ ಹೇಳಿಕೆ
ಇಡೀ ಬಾರತೀಯ ಚಿತ್ರರಂಗ ತಿರುಗಿ ನೋಡಿದ ಚಿತ್ರವದು, ಎಲ್ಲರೂ ಅದನ್ನು ವೀಕ್ಷಿಸಿದ್ದಾರೆ. ಆಕೆ ಆ ಚಿತ್ರ ನೋಡಿಲ್ಲ ಎಂದಾಗ ಆವಾಗಲೂ ತುಂಬಾನೇ ಟೀಕೆ ಎದುರಿಸಬೇಕಾಯಿತು.
ವಿವಾದ 4
ಪುನೀತ್ ರಾಜ್‌ಕುಮಾರ್ ತೀರಿ ಹೋದಾಗ ಅವರ ಕುರಿತು ಏನೂ ಹೇಳದ ಇದ್ದಾಗ
ಪುನೀತ್ ರಾಜ್‌ಕುಮಾರ್ ತೀರಿ ಹೋದಾಗ ಎಲ್ಲರೂ ಅವರ ಬಗ್ಗೆ ಸಾಕಷ್ಟು ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರೆ ಜೊತೆಗೆ ನಟಿಸಿದ್ದರೂ ರಶ್ಮಿಕಾ ಮಂದಣ್ಣ ಮೌನವಾಗಿದ್ದರೂ ಆವಾಗ ಜನರು ರಶ್ಮಿಕಾಳ ಈ ನಡೆ ವಿರೋಧಿಸಿದಾಗ ಪೋಸ್ಟ್ ಹಾಕಿದಳು.
ವಿವಾದ 5
ಕನ್ನಡ ಬರಲ್ಲ ಎಂಬ ಹೇಳಿಕೆ
ಕಿರಿಕ್‌ಪಾರ್ಟಿಪ್ರಮೋಷನ್‌ನಲ್ಲಿ ಕನ್ನಡ ಮಾತನಾಡುತ್ತಿದ್ದ ರಶ್ಮಿಕಾ ತೆಲುಗಿಗೆಗೆ ಹೋದಾಗ ತೆಲಗು ಕಲಿತು ಮಾತನಾಡಲು ಆಗುತ್ತೆ, ತಮಿಳು ಕಲಿತು ಮಾತನಾಡೋಕೆ ಆಗುತ್ತೆ, ಹಿಂದೆ ಗೊತ್ತು, ಆದರೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ ಕನ್ನಡ ಬರಲ್ಲ ಎಂಬ ಹೇಳಿಕೆಯನ್ನು ನೀಡಿ ಕನ್ನಡಿಗರ ಕಣ್ಣು ಕೆಂಪಾಗಿಸಿದರು.



Click it and Unblock the Notifications
