Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ರಕ್ಷಾ ಬಂಧನಕ್ಕೆ ಸಹೋದರನಿಗೆ ನೀಡಬಹುದಾದ ₹1 ಸಾವಿರದೊಳಗಿನ ಗಿಫ್ಟ್..!
ಅಣ್ಣಾ-ತಂಗಿಯ ಬಂಧವನ್ನು ಮತ್ತಷ್ಟು ಬಿಗಿಯಾಗಿಸು ರಕ್ಷಾ ಬಂಧನ ಹತ್ತಿರವಾಗುತ್ತಿದೆ. ಇನ್ನೇನು ರಕ್ಷಾ ಬಂಧನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಜನ ಈಗಿನಿಂದಾನೇ ಹಬ್ಬಕ್ಕೆ ಸಿದ್ಧತೆಯನ್ನೂ ನಡೆಸಿದ್ದಾರೆ. ಸಹೋದರ ಬಾಳಿನಲ್ಲಿ ಎಲ್ಲ ವಿಷಯಗಳಲ್ಲೂ ಜಯಸಿಗಲಿ, ಅವರಿಗೆ ಯಾವುದೇ ಸಮಸ್ಯೆ ಎದುರಾಗದಿರಲಿ, ಜೀವನ ಪ್ರತಿ ಹೆಜ್ಜೆಯಲ್ಲೂ ರಕ್ಷಣೆ ಸಿಗಲಿ ಎಂದು ಸಹೋದರಿಯು ಹಾರೈಸಿ ಸಹೋದರ ಮಣಿಕಟ್ಟಿಗೆ ಕಟ್ಟುವ ರಕ್ಷಾ ಕವಚವೇ ರಕ್ಷಾ ಬಂಧನ.
ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. 2024ನೇ ಸಾಲಿನಲ್ಲಿ ರಕ್ಷಾಬಂಧನದ ಹಬ್ಬವನ್ನು ಆಗಸ್ಟ್ 19ರಂದು ಆಚರಿಸಲಾಗುತ್ತಿದೆ. ಸದಾ ಕಾಲ ಸಹೋದರ ಏಳ್ಗೆ ಬಯಸುವ ಸಹೋದರಿ ಸಹೋದರರ ಭ್ರಾತೃತ್ವ ಸಾರುವ ಈ ರಕ್ಷಾ ಬಂಧನವನ್ನ ದೇಶದ ಎಲ್ಲಾ ಭಾಗದಲ್ಲೂ ಆಚರಿಸಲಾಗುತ್ತದೆ. ಪುರಾಣಗಳಲ್ಲೂ ಸಹ ಈ ಹಬ್ಬದ ಉಲ್ಲೇಖಗಳಿವೆ.

ಇನ್ನು ಸಹೋದರಿ ರಾಖಿ ಕಟ್ಟಿದ ಬಳಿಕ ತನ್ನ ಸಹೋದರನಿಗೆ ಯಾವುದಾದರು ಉಡುಗೊರೆ ನೀಡದಿದ್ದರೆ ಹೇಗೆ? ಹೆಣ್ಣು ಮಕ್ಕಳ ಯಾವ ಗಿಫ್ಟ್ ನೀಡಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಹಾಗಾದ್ರೆ ನೀವು 1 ಸಾವಿರ ರೂಪಾಯಿಯಲ್ಲಿ ಯಾವ ಗಿಫ್ಟ್ ನೀಡಬಹುದು ಎಂಬುದನ್ನು ನಾವಿಂದು ಹೇಳುತ್ತೇವೆ ನೋಡಿ.
ಫೆರೆರೋ ರೋಚರ್ ಚಾಕೊಲೇಟ್‌ಗಳು
ಚಾಕೊಲೇಟ್‌ಗಳು ಅಂದ್ರೆ ಯಾರಗೆ ಇಷ್ಟ ಆಗಲ್ಲ ಹೇಳಿ. ಇನ್ನು ಶುಭ ಕಾರ್ಯದಲ್ಲಿ, ಸಂತೋಷದ ಸಮಯದಲ್ಲಂತು ಈ ಚಾಕೊಲೇಟ್‌ಗಳು ಇದ್ದರೆ ಮತ್ತಷ್ಟು ಮೆರಗು. ಹೀಗಾಗಿ ರಕ್ಷಾ ಬಂಧನದ ಈ ಸಮಯದಲ್ಲಿ ನೀವು ಚಾಕೊಲೇಟ್ ಅನ್ನು ಸಹೋದರನಿಗೆ ನೀಡಬಹುದು. ಅದ್ರಲ್ಲೂ ಈ ಫೆರೆರೋ ರೋಚರ್ ಚಾಕೊಲೇಟ್‌ಗಳು ಮಾರುಕಟ್ಟೆಯಲ್ಲಿ ಸಿಗುವ ಅತ್ಯುತ್ತಮ ರುಚಿಯ ಚಾಕೊಲೇಟ್‌ಗಳು. 1 ಸಾವಿರ ರೂಪಾಯಿಗೆ ಒಂದು ಬಾಕ್ಸ್ ನಿಮಗೆ ಸಿಗುತ್ತೆ. ಇದರ ಹಾಲಿ ರುಚಿ ಹಾಗೂ ರೋಸ್ಟೆಡ್ ಚಾಕೋ ಫ್ಲೇವರ್ ಬಾಯಿಯಲ್ಲಿ ನೀರು ತರಿಸುತ್ತೆ.
ಸನ್ ಗ್ಲಾಸ್
ಸಾಮಾನ್ಯವಾಗಿ ಹುಡುಗರಿಗೆ ಸನ್ ಗ್ಲಾಸ್ ಹಾಕಿಕೊಳ್ಳುವ ಅಭ್ಯಾಸ ಇರುತ್ತೆ. ಅದ್ರಲ್ಲೂ ಬ್ರಾಂಡೆಡ್ ಸನ್ ಗ್ಲಾಸ್ ಹಾಕೋದು ಈಗಿನ ಫ್ಯಾಷನ್. ಹೀಗಾಗಿ ಈ ರಕ್ಷ ಬಂಧನದ ವೇಳೆ 1 ಸಾವಿರ ರೂಪಾಯಿ ಒಳಗೆ ಸಿಗುವ ಯಾವುದಾದ್ರು ಸನ್ ಗ್ಲಾಸ್ ಗಿಫ್ಟ್ ಮಾಡಿ.
ಸ್ಮಾರ್ಟ್ ವಾಚ್
ಈಗಂತು ಸ್ಮಾರ್ಟ್ ವಾಚ್‌ನ ಯುಗ. ಎಲ್ಲರ ಕೈಲು ಸ್ಮಾರ್ಟ್ ವಾಚ್ ಇದ್ದೇ ಇರುತ್ತೆ. ನಿಮ್ಮ ಸಹೋದರನಿಗೂ 1 ಸಾವಿರ ರೂಪಾಯಿ ಒಳಗೆ ಸಿಗುವ ಅತ್ಯುತ್ತಮ ಸ್ಮಾರ್ಟ್ ವಾಚ್ ಗಿಫ್ಟ್ ಆಗಿ ನೀಡಬಹುದು. ಇದರ ಜೊತೆಗೆ ಸ್ಮಾರ್ಟ್ ರಿಂಗ್ ಸಹ ಈಗ ಮಾರುಕಟ್ಟೆಯಲ್ಲಿವೆ ಆದರೆ 1 ಸಾವಿರ ರೂಪಾಯಿಗಿಂತ ಸ್ವಲ್ಪ ಹೆಚ್ಚು ಹಣ ವ್ಯಯಿಸಿದರೆ ಸಹೋದರನಿಗೆ ಸ್ಮಾರ್ಟ್ ರಿಂಗ್ ನೀಡಬಹುದು. ಇತ್ತೀಚಿಗೆ ಸ್ಮಾರ್ಟ್ ರಿಂಗ್ ಫ್ಯಾಷನ್ ಹೆಚ್ಚಾಗುತ್ತಲಿದೆ.
ಪರಿಮಳಯುಕ್ತ ಮೇಣದಬತ್ತಿ
ನೀವು ಮನೆಯಲ್ಲಿ ಅಲಂಕಾರಿಕಾ ವಸ್ತುವನ್ನು ಗಿಫ್ಟ್ ನೀಡುವ ಯೋಚನೆಯಲ್ಲಿದ್ದರೆ ಈ ಪರಿಮಳಯುಕ್ತ ಮೇಣದ ಬತ್ತಿ ನೀಡಬಹುದು. ಇದು ಮನೆಯಲ್ಲಿ ಸುಗಂಧ ಹರಡುತ್ತದೆ. ಇದು ದೀರ್ಘಾಕಾಲದ ತಾಜಾ ಹಾಗೂ ಸುಗಂಧ ಹರಡುತ್ತದೆ. ಇದು ಸಹ ಸಹೋದರನಿಗೆ ಗಿಫ್ಟ್ ಮಾಡಬಹುದು. ಇದನ್ನು ಮನೆಯ ಹಾಲ್‌ನಲ್ಲಿ ಅಥವಾ ರೂಮ್‌ನಲ್ಲಿ ಇಡಬಹುದು.
ಹೆಡ್ ಫೋನ್ಸ್
ಯುವಕರು ಹೆಚ್ಚಾಗಿ ಗ್ಯಾಜೆಟ್ ಪ್ರೇಮಿಗಳು, ಅದ್ರಲ್ಲೂ ಮೊಬೈಲ್ ಫೋನ್ ಸಂಬಂಧಿ ಯಾವುದೇ ಗ್ಯಾಜೆಟ್ ಆದರೂ ಅವರಿಗೆ ಇಷ್ಟವಾಗುತ್ತೆ. ಈ ಸಾಲಿನ ಇನ್ನೊಂದು ಗ್ಯಾಜೆಟ್ ಅಂದರೆ ಅದು ಹೆಡ್ ಫೋನ್‌ಗಳು 1 ಸಾವಿರಕ್ಕೆ ಅತ್ಯುತ್ತಮ ಹೆಡ್‌ಫೋನ್ ಅಥವಾ ಇಯರ್ ಫೋನ್‌ಗಳು ಲಭ್ಯವಿದೆ ಇದನ್ನು ರಕ್ಷಾ ಬಂಧನದ ದಿನ ಉಡುಗೊರೆಯಾಗಿ ನೀಡಬಹುದು.



Click it and Unblock the Notifications