Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಗೂಗಲ್‌ನಲ್ಲಿ ಈ 5 ವಿಚಾರ ಸರ್ಚ್ ಮಾಡುವ ಧೈರ್ಯ ಮಾಡಬೇಡಿ..! ಜೈಲು ಫಿಕ್ಸ್..!
ಇಂದು ನಿಮ್ಮ ಯಾವುದೇ ಪ್ರಶ್ನೆ, ಯಾವುದೇ ವಸ್ತು, ನಿಮಗೆ ಗೊತ್ತಿಲ್ಲದ ಯಾವುದೇ ವಿಚಾರವನ್ನು ತಿಳಿಯಬೇಕು ಅಂದ್ರೆ ಥಟ್ ಅಂತ ಎಲ್ಲರಿಗೂ ನೆನಪಾಗೋದು ಗೂಗಲ್, ಗೂಗಲ್‌ನಲ್ಲಿ ಹುಡುಕಿದರೆ ಸಿಗದ ಉತ್ತರವಿಲ್ಲ. ಅಲ್ಲಿ ಎಲ್ಲಾ ವಿಚಾರಗಳಿಗೂ ಸೂಕ್ತ ಉತ್ತರವಿದೆ. ಎಲ್ಲಾ ಮಾಹಿತಿ ನಿಮಗೆ ಸಿಗುತ್ತೆ. ನೀವು ಏನೇ ಕೇಳಿದ್ರು ಈಗ ಉತ್ತರ ನೀಡುವಂತಹ ಗೂಗಲ್ ಅಸಿಸ್ಟೆಂಟ್ ಕೂಡ ಇದೆ.
ನೀವು ಅಕ್ಷರಗಳ ಟೈಪ್ ಮಾಡುವುದು ಕೂಡ ಬೇಡ, ನಿಮ್ಮ ಧ್ವನಿ ಕೇಳಿ ಹಾಗೆ ಫೋಟೋ ನೀಡಿದರು ಕೂಡ ಅದರ ಜಾತಕ ನಿಮ್ಮ ಮುಂದಿಡಲಿದೆ. ಗೂಗಲ್ ಇಲ್ಲದೆ ನಾವು ದಿನವನ್ನೂ ಊಹಿಸಲು ಸಾಧ್ಯವಿಲ್ಲ. ಹಾಗೆ ಗೂಗಲ್ ಇಲ್ಲದೆ ಯಾವ ಕೆಲಸವು ಮಾಡಲಾಗದು ಎಂಬಷ್ಟು ಇಡೀ ಜಗತ್ತು ಒಗ್ಗಿಕೊಂಡಿದೆ. ಹಾಗೆ ಭೂಮಿ ಮೇಲೆ ಗೂಗಲ್ ಅನ್ನು ಬಳಸದ ವ್ಯಕ್ತಿಯನ್ನು ಹುಡುಕುವುದು ಬಲು ಕಷ್ಟವಾಗಬಹುದು.

ಇನ್ನು ಗೂಗಲ್‌ನಲ್ಲಿ ಏನೆ ಹುಡುಕಿದರು ನಿಮಗೆ ಉತ್ತರವಂತು ಸಿಗುತ್ತೆ, ಆದ್ರೆ ಕೆಲವೊಂದು ವಿಚಾರವನ್ನು ನೀವು ಗೂಗಲ್‌ನಲ್ಲಿ ಹುಡುಕಿದ್ರೆ ಖಂಡಿತ ನೀವು ಜೈಲು ವಾಸ ಅನುಭವಿಸಬೇಕಾಗುತ್ತದೆ. ಹೌದು ಕೆಲವೊಂದು ವಿಚಾರಗಳನ್ನು ನೀವು ಅಪ್ಪಿ ತಪ್ಪಿಯೂ ಗೂಗಲ್ ಮಾಡಬೇಡಿ, ಅದು ನಿಮಗೆ ಸಮಸ್ಯೆ ತರಬಹುದು. ಹಾಗಾದ್ರೆ ಗೂಗಲ್‌ನಲ್ಲಿ ಯಾವೆಲ್ಲಾ ವಿಚಾರ ಹುಡುಕಬಾರದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
'ಬಾಂಬ್ ತಯಾರಿಸುವುದು ಹೇಗೆ'
ಗೂಗಲ್‌ನಲ್ಲಿ ನೀವು ಎಂದಿಗೂ ಬಾಂಬ್ ತಯಾರಿಸುವುದು ಹೇಗೆ ಎಂದು ಸರ್ಚ್ ಮಾಡಬೇಡಿ. ಇದೊಂದು ಕ್ರಿಮಿನಲ್ ಅಪರಾಧವಾಗುತ್ತದೆ. ಭದ್ರತಾ ಸಂಸ್ಥೆಗಳು ಇಂತಹ ಚಟುವಟಿಕೆಯ ಮೇಲೆ ಕಣ್ಣಿಟ್ಟಿರುತ್ತವೆ. ಒಂದು ವೇಳೆ ನೀವು ಈ ರೀತಿಯ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಾಡಿರುವುದು ಭದ್ರತಾ ಸಂಸ್ಥೆಯ ಗಮನಕ್ಕೆ ಬಂದರೆ ಅಥವಾ ಅಂತಹ ಘಟನೆ ನಿಮ್ಮ ಸುತ್ತಮುತ್ತ ನಡೆದಾಗ ನೀವು ಅದರಲ್ಲಿ ಪಾಲುದಾರರಾಗಬೇಕಾಗುತ್ತದೆ.
ಚೈಲ್ಡ್ ಪೋರ್ನೋಗ್ರಫಿ
ಮಕ್ಕಳು ಮತ್ತು ಅಪ್ರಾಪ್ತರ ಒಳಗೊಂಡಿರುವ ಅಶ್ಲೀಲತೆ ಕುರಿತಂತೆ ನೀವು ಹುಡುಕಿದರೆ ಅದು ಕ್ರಿಮಿನಲ್ ಅಪರಾಧವಾಗಲಿದೆ. ಈ ಕಾರಣಕ್ಕೆ ನೀವು ಜೈಲು ವಾಸ ಅನುಭವಿಸಬೇಕಾಗುತ್ತದೆ. ಗರಿಷ್ಠ ಏಲು ವರ್ಷ ಜೈಲು, ದಂಡವೂ ಹಾಕಬಹುದಾದ ಕಾನೂನು ಇದೆ.
ಪೈರೆಸಿ ಸಿನಿಮಾ
ಸಾಮಾನ್ಯವಾಗಿ ಈ ರೀತಿಯ ಹುಡುಕಾಟವನ್ನು ಎಲ್ಲರು ಮಾಡುತ್ತಾರೆ. ಹೊಸ ಸಿನಿಮಾ ರಿಲೀಸ್ ಆದಾಗ ಅದರ ಪೈರೆಸಿ ಅವತರಣಿಕೆ ಸಿಗಬಹುದೇ ಎಂಬುದನ್ನು ಎಲ್ಲರು ಗೂಗಲ್‌ನಲ್ಲಿ ಹುಡುಕಾಡುತ್ತಾರೆ. ಆದ್ರೆ ಇದು ಕ್ರಿಮಿನಲ್ ಅಪರಾಧವಾಗಿದೆ. ಈ ರೀತಿ ಮಾಡುವಾಗ ಸಿಕ್ಕಿಬಿದ್ದರೆ ಗರಿಷ್ಠ 3 ವರ್ಷ ಜೈಲು ಹಾಗೂ 10 ಲಕ್ಷ ರೂಪಾಯಿ ವರೆಗೂ ದಂಡ ವಿಧಿಸುವ ಅವಕಾಶವಿದೆ.
ಹ್ಯಾಕ್ ಮಾಡುವುದು ಹೇಗೆ?
ನೀವು ಹ್ಯಾಕಿಂಗ್ ಕುರಿತು ಕಲಿಯಲು ಗೂಗಲ್ ಅನ್ನು ಬಳಸಿದರೆ ಅದು ಕ್ರಿಮಿನಲ್ ಅಪರಾಧ. ನಿಮಗೆ ಇಲ್ಲಿ ಉತ್ತರಗಳು ಸಿಗಬಹುದು., ಆದ್ರೆ ಈ ರಿತಿ ಸರ್ಚ್ ಮಾಡುವುದು ಕೂಡ ದೊಡ್ಡ ಅಪರಾಧವಾಗಿದೆ. ಹಾಗೆ ಹ್ಯಾಕಿಂಗ್ ಸಾಫ್ಟ್‌ವೇರ್‌ಗಳ ಕುರಿತಿ ಹುಡುಕುವುದು ಸಹ ಇದೇ ಸಾಲಿಗೆ ಸೇರಲಿದೆ.
ಟೆರರಿಸ್ಟ್ ಗುಂಪು ಸೇರುವುದು ಹೇಗೆ?
ವಿಶ್ವದಲ್ಲಿ ಗುರುತಿಸಲಾಗಿರುವ ಹಲವು ಭಯೋತ್ಪಾದನಾ ಗುಂಪುಗಳ ಕುರಿತು ನೀವು ತಿಳಿಯಬಹುದು. ಆದ್ರೆ ಈ ಗುಂಪುಗಳಿಗೆ ಸೇರಿಕೊಳ್ಳುವುದು ಹೇಗೆ ಎಂಬ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಡಿ. ಏಕೆಂದರೆ ಭದ್ರತಾ ಸಂಸ್ಥೆಗಳು ಈ ರೀತಿಯ ಕೀವರ್ಡ್ ಮೇಲೆ ಹೆಚ್ಚು ನಿಗ ಇಟ್ಟಿರುತ್ತವೆ. ಹೀಗಾಗಿ ಇದರಿಂದ ನಿಮಗೆ ಸಮಸ್ಯೆ ತರಬಹುದು.



Click it and Unblock the Notifications
