Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ನಡೆಯಲಿವೆ ಆಘಾತಕಾರಿ ಘಟನೆಗಳು; ಬಾಬಾ ವಂಗಾ ಹೇಳಿರುವ 4 ಭವಿಷ್ಯವಾಣಿ!
ಎಲ್ಲರಿಗೂ ಭವಿಷ್ಯದ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರಲಿದೆ. ಹಾಗೆ ಮುಂದೆ ಸಂಭವಿಸಬಹುದಾದ ಘಟನೆಗಳ ಕುರಿಯಾಗಿಯೂ ಹಲವರಿಗೆ ಕುತೂಹಲ ಇರಲಿದೆ. ಇಂತಹ ಭವಿಷ್ಯ ನುಡಿಯುವ ಹಲವರಲ್ಲಿ ನಾವು ಬಾಬಾ ವಂಗಾ ಕುರಿತಾಗಿ ಕೇಳಿರುತ್ತೇವೆ. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿರುವ ಈ ಮಹಿಳೆಯು ಮುಂಬರುವ ಹಲವು ವರ್ಷಗಳ ಕಾಲ ಭೂಮಿ ಮೇಲೆ ಏನೆಲ್ಲಾ ನಡೆಯಬಹುದು ಎಂಬುದನ್ನು ವಿವರಿಸಿದ್ದಾರೆ.
ಚಿಕ್ಕ ಹುಡುಗಿಯಾಗಿದ್ದ ಆಕೆ ನೈಸರ್ಗಿಕ ವಿಕೋಪವೊಂದರಲ್ಲಿ ತನ್ನ ದೃಷ್ಟಿ ಕಳೆದುಕೊಂಡ ಆಕೆ ಬಳಿಕ ಭವಿಷ್ಯಗಳ ನುಡಿಯಲು ಮುಂದಾದಳು. ಆಕೆ ನುಡಿದ ಹತ್ತು ಹಲವು ಭವಿಷ್ಯವಾಣಿಗಳು ನಿಜವಾಗಿರುವುದು ಆಕೆಯ ಮುಂಬರುವ ಘಟನೆಗಳ ಕುರಿತಾದ ವಿಚಾರದಲ್ಲಿ ಮತ್ತಷ್ಟು ಆಸಕ್ತಿ ಮೂಡಿಸುವಂತೆ ಮಾಡುತ್ತದೆ.

ಇನ್ನು ಬಾಬಾ ವಂಗಾ 2026ರಲ್ಲಿ ಯಾವೆಲ್ಲಾ ಘಟನೆಗಳು ನಡೆಯಲಿವೆ ಎಂಬುದನ್ನು ವಿವರಿಸಿದ್ದಾರೆ. ಹಾಗೆ ಅವರು ವಿವರಿಸುವಂತೆ ಮುಂಬರುವ 2026ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದನ್ನು ನೀವು ಕೇಳಿದ್ರೆ ಆಘಾತಕ್ಕೊಳಗಾಗುತ್ತೀರಿ. ಹಾಗಾದ್ರೆ ಬಾಬಾ ವಂಗಾ ಪ್ರಕಾರ 2026ರಲ್ಲಿ ಏನು ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳೋಣ.
2026 ರಲ್ಲಿ ಭೂಮಿಯ ಮೇಲೆ ಅನೇಕ ವಿಪತ್ತುಗಳು ಸಂಭವಿಸಬಹುದು ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅವರು ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು, ಭೂಕಂಪನಗಳು, ತೀವ್ರ ಹವಾಮಾನ ಬದಲಾವಣೆಗಳು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಶ್ವ ಯುದ್ಧ ಭೀತಿಗಳು
ಭೂಮಿಯ ಮೇಲೆ ಸಂಭವಿಸುವ ವಿಪತ್ತು ಅಥವಾ ಆಪತ್ತಿನಲ್ಲಿ ಮೂರನೇ ವಿಶ್ವ ಯುದ್ದ ಸಹ ಒಂದಾಗಿರಲಿದೆಯಂತೆ. ವಂಗಾ ಅವರ ಪ್ರಕಾರ ವಿಶ್ವವು 3ನೇ ವಿಶ್ವ ಯುದ್ಧದ ಅಂಚಿನಲ್ಲಿದೆ. ದೇಶ ದೇಶಗಳ ನಡುವೆ ಈ ವರ್ಷ ಮುಖಾಮುಖಿಗಳು ಮುಂದುವರೆಯಲಿದೆಯಂತೆ. ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ, ಚೀನಾ ತೈವಾನ್ ಅನ್ನು ವಶಪಡಿಸಿಕೊಳ್ಳುವ ಬೆದರಿಕೆ ಮತ್ತು ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ನೇರ ಮುಖಾಮುಖಿಯು ಮುಂಬರುವ ವರ್ಷದಲ್ಲಿ ಜಗತ್ತಿನಲ್ಲಿ ಬಹಳ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಲಿದೆ. ಹಾಗೆ 2026ರಲ್ಲಿ ಹಲವು ದೇಶಗಳ ನಡುವಿನ ಶೀತಲ ಸಮರ ಮುನ್ನಲೆಗೆ ಬರಲಿದೆ ಎಂದು ಹೇಳಿದ್ದಾರೆ.
ಮಾನವನ ಮೀರಿಸಲಿವೆ ಎಐಗಳು
ಈಗಾಗಲೆ ಎಐ ಇಡೀ ವಿಶ್ವದ ನಿದ್ದೆಗಡಿಸಿದೆ. ಅದ್ರಲ್ಲೂ 2026ರಲ್ಲಿ ಎಐ ಮಾನವರನ್ನು ಹಿಂದಿಕ್ಕಿ ಬುದ್ದಿವಂತಿಕೆಯಲ್ಲಿ ಮುಂದೆ ಸಾಗಲಿವೆ ಎಂಬುದು ವಂಗಾ ಭವಿಷ್ಯವಾಣಿ ಆಗಿದೆ. ಅವರ ಪ್ರಕಾರ ಮಾನವನ ಜಾಗದಲ್ಲಿ ಅಥವಾ ಹಲವು ಕೆಲಸಗಳಲ್ಲಿ ಕೃತಕ ವಸ್ತುಗಳ ಚಾಲ್ತಿ ಬರಲಿದೆ ಎಂದು ಹೇಳಿದ್ದಾರೆ. ಅಂದರೆ ಇದೊಂದು ನಿರುದ್ಯೋಗ ಸಮಸ್ಯೆ ದೊಡ್ಡದಾಗಬಹುದು ಎಂದಿದ್ದಾರೆ.
ಏಲಿಯನ್ ಸಂಪರ್ಕ
2026ರಲ್ಲಿ ಮೊದಲ ಬಾರಿಗೆ ಮಾನವರಿಗೆ ಏಲಿಯನ್ ಕುರಿತಾದ ದೊಡ್ಡ ಸಾಕ್ಷಿ ಅಥವಾ ಮಾಹಿತಿ ಸಿಗಬಹುದು ಎಂದು ಅವರು ಹೇಳಿದ್ದಾರೆ. ಅದ್ರಲ್ಲೂ 2026ರ ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ ಕುರಿತಾದ ದೊಡ್ಡ ವಿಚಾರವೊಂದು ತಿಳಿದುಬರಲಿದೆ ಎಂದಿದ್ದಾರೆ. ಈ ಭವಿಷ್ಯವಾಣಿಗೆ ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲದಿದ್ದರೂ ಅವರ ಹೇಳಿಕೆಯ ಬಳಿಕ ಬಹಳ ಚರ್ಚೆ ಹುಟ್ಟುಹಾಕಿದೆ.
ಭೂಕಂಪನ ಹಾಗೂ ಜ್ವಾಲಾಮುಖಿ ಸ್ಪೋಟ
2026ರಲ್ಲಿ ಹಲವು ರೀತಿಯ ನೈಸರ್ಗಿಕ ವಿಕೋಪಗಳ ಕುರಿತಾಗಿ ಅವರು ಭವಿಷ್ಯ ನುಡಿದಿದ್ದಾರೆ. ಅದ್ರಲ್ಲೂ ದ್ವೀಪರಾಷ್ಟ್ರಗಳ ಪಾಲಿಗೆ 2026ರ ಬಹಳ ನೋವಿನ ವರ್ಷವಂತೆ. ಹಲವು ಬಾರಿ ಭೂಕಂಪನಗಳು ಸಂಭವಿಸುವುದಾಗಿ ಅವರು ಹೇಳಿದ್ದಾರೆ. ಹಾಗೆ ಹಲವು ಜ್ವಾಲಾಮುಖಿಗಳು ಆಗಸದೆತ್ತರಕ್ಕೆ ಚಿಮ್ಮಲಿವೆ ಎಂದಿದ್ದಾರೆ. ಅದ್ರಲ್ಲೂ ಹಲವು ವರ್ಷದಿಂದ ಸುಪ್ತ ಸ್ಥಿತಿಯಲ್ಲಿರುವ ಜ್ವಾಲಾಮುಖಿ ಸ್ಫೋಟವು ಹಲವು ರೀತಿಯಾಗಿ ಅನಾಹುತಗಳ ತರಲಿವೆ ಎಂದಿದ್ದಾರೆ.



Click it and Unblock the Notifications











