Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಆಗಸದಲ್ಲಿ ಕಾಣಿಸಿಕೊಂಡ 4 ಚಂದ್ರ: ಈ ಅಚ್ಚರಿ ಘಟನೆ ಹಿಂದಿದೆ ವೈಜ್ಞಾನಿಕ ಸತ್ಯ!
ಆಗಸದಲ್ಲಿ ಕೆಲವೊಮ್ಮೆ ಎಷ್ಟು ವಿಚಿತ್ರ ವಿದ್ಯಮಾನಗಳು ನಡೆಯುತ್ತವೆ ಅಂದ್ರೆ ನಮ್ಮ ಕಣ್ಣನ್ನು ನಾವು ನಂಬೋಕು ಆಗೋದಿಲ್ಲ. ಹಾಗೆ ಕೆಲವೊಮ್ಮೆ ಅವು ವಿಜ್ಞಾನಕ್ಕೂ ಸವಾಲು ಹಾಕುತ್ತವೆ. ಇನ್ನು ಚಂದ್ರನ ಕುರಿತಾದ ಅಚ್ಚರಿಗಳಂತು ಎಲ್ಲರನ್ನು ಕುತೂಹಲಕ್ಕೆ ತಳ್ಳುತ್ತವೆ. ಸದ್ಯ ಈಗ ವೈರಲ್ ಆಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಕೂಡ ಹಲವರಿಗೆ ಅಚ್ಚರಿ ತಂದಿದೆ.
ರಷ್ಯಾದಲ್ಲಿ ಒಂದೇ ಬಾರಿಗೆ 4 ಚಂದ್ರ ಕಾಣಿಸಿಕೊಂಡಿದೆ. ಆಗಸದಲ್ಲಿ ಒಂದಕ್ಕಿಂತ ಹೆಚ್ಚು ಚಂದ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನ ಆಗಸದಲ್ಲಿ ಇಂತಹದೊಂದು ಅಚ್ಚರಿ ನಡೆದಿದೆ. ಅಪರೂಪದ ವಿದ್ಯಮಾನವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆಗಸದಲ್ಲಿ ಒಂದು ಚಂದ್ರ ಇರೋದು ಸಾಮಾನ್ಯ ಆದ್ರೆ ಈ 4 ಚಂದ್ರ ಹೇಗೆ ಕಾಣಿಸಿಕೊಂಡವು ಎಂದು ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ. ಹಲವರು ಈ ಫೋಟೋ ಮತ್ತು ವಿಡಿಯೋಗಳು ನಕಲಿ, ಎಐ ನಿರ್ಮಿತ ಎಂದು ವಾದಿಸಿದ್ದಾರೆ. ಆದ್ರೆ ಇದು ನಿಜವಾಗಿಯೂ ನಡೆದಿರುವ ವಿದ್ಯಮಾನವಾಗಿದೆ. ಹಾಗೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ಈ ಅಪರೂಪದ ವಿದ್ಯಮಾನವನ್ನು ಪ್ಯಾರಾಸೆಲೆನೆ ಎಂದು ಕರೆಯಲಾಗುತ್ತದೆ. ಒಂದ ಚಂದ್ರ ಇದ್ದರೂ ನಮ್ಮ ಕಣ್ಣಿಗೆ ಒಂದಕ್ಕಿಂತ ಹೆಚ್ಚು ಚಂದ್ರ ಕಾಣಿಸುವ ಈ ಪ್ರಕ್ರಿಯೆಗೆ ಪ್ಯಾರಾಸೆಲೆನೆ ಎಂದು ಹೆಸರು. ಇದೊಂದು ಸಾಮಾನ್ಯ ವಕ್ರೀಭವನ ಪ್ರಕ್ರಿಯೆಯಾಗಿದ್ದು, ಇದಕ್ಕೆ ವಿಶೇಷ ಅರ್ಥಗಳ ಕಲ್ಪಿಸುವುದು ಅಥವಾ ಮೂಢನಂಬಿಕೆಯನ್ನು ಬಿತ್ತುವ ಅಗತ್ಯವೇ ಇಲ್ಲ.
ಈ ವಿದ್ಯಮಾನವನ್ನು ಮೂನ್ ಡಾಗ್, ಅಣುಕು ಚಂದ್ರ ಎಂದು ಸಹ ಕರೆಯಲಾಗುತ್ತದೆ. ಇದು ಚಂದ್ರನ ಬೆಳಕಿನ ವಕ್ರೀಭವನ ಪ್ರಕ್ರಿಯೆಯಿಂದ ಉಂಟಾಗುವ ಸಾಮಾನ್ಯ ವಿದ್ಯಮಾನ ಎಂದು ಹೇಳಲಾಗಿದೆ. ಸೂರ್ಯ ಬೆಳಕಿನ ಕಾರಣದಿಂದಾಗಿ ಚಂದ್ರನು ಬಹಳಷ್ಟು ಹೊಳೆಯುತ್ತಾನೆ. ಚಂದ್ರನಿಗೆ ತನ್ನದೇ ಸ್ವಂತ ಬೆಳಕಿಲ್ಲ. ಹೀಗಿರುವಾಗ ಪ್ರಕಾಶಾಮಾನವಾದ ಬೆಳಕು ಚಂದ್ರನ ತಾಕಿ ಹೊರಬರುವಾಗ ಅದು ಮೋಡಗಳ ಮೇಲೆ ಬೀಳುತ್ತದೆ ಅಥವಾ ಮೋಡಗಳ ಹಾದು ಹೋಗುತ್ತದೆ.
ಹೀಗೆ ತೆಳುವಾದ ಬೆಳಕು ಹಾದುಹೋಗುವಾಗ ಸಿರಸ್ ಅಥವಾ ಸಿರೋಸ್ಟ್ರಾಟಸ್ ಮೋಡಗಳ ಮೂಲಕ ಹಾದು ಹೋಗುತ್ತದೆ. ಈ ಸಮಯದಲ್ಲಿ ಪ್ಯಾರಾಸೆಲೆನೆ ರೂಪುಗೊಳ್ಳುತ್ತದೆ. ಸಿರಸ್ ಮೋಡಗಳು ಅಂದರೆ ಭೂಮಿಯಿಂದ ಸುಮಾರು 8ರಿಂದ 12 ಸಾವಿರ ಅಡಿಗಳ ಮೇಲೆ ರೂಪುಗೊಳ್ಳುವ ತೆಳುವಾದ ಮೋಡಗಳು. ಇವು ಗಾಡವಾಗಿರದೆ ತೆಳು ಬಿಳಿ ಹಾಲಿನಂತೆ ರೂಪುಗೊಂಡಿರುತ್ತದೆ. ಇದರಲ್ಲಿ ಹೆಚ್ಚು ಹಿಮದ ಕಣಗಳು ತುಂಬಿರುತ್ತದೆ. ಈ ಮೋಡದಲ್ಲಿ ಚಂದ್ರನ ಬೆಳಕು ಹಾದು ಹೋದಾಗ ಅಲ್ಲಿ ಚಂದ್ರನಂತೆ ಕಾಣುವ ಮತ್ತೊಂದು ನೆರಳು ಹುಟ್ಟಿಕೊಳ್ಳುತ್ತದೆ.
ಮೋಡವು ಚಳಿ ಗಾಳಿಯ ಕಾರಣಕ್ಕೆ ಹೆಪ್ಪುಗಟ್ಟುವ ಸ್ಥಿತಿ ತಲುಪಿರುವ ಸಮಯದಲ್ಲಿ ಈ ರೀತಿಯ ವಿದ್ಯಮಾನ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಪ್ಯಾರಾಸೆಲೆಗಳು ಸಾಮಾನ್ಯವಾಗಿ 22 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಕೋನದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಸದ್ಯ ಆಗಸದಲ್ಲಿ ಈ ವಿಚಿತ್ರ ಸನ್ನಿವೇಶ ಕಂಡ ಜನರು ಮಾತ್ರ ಅಚ್ಚರಿಗೆ ಒಳಗಾದರು. ಆಗಸದಲ್ಲಿ 4 ಚಂದ್ರ ಬರಲು ಹೇಗೆ ಸಾಧ್ಯ ಎಂದು ಅಚ್ಚರಿ ಹೊರಹಾಕಿದ್ದಾರೆ, ಮತ್ತೆ ಕೆಲವರು ಇದು ನಕಲಿ, ಸುಳ್ಳು ಎಂದು ವಾದಿಸಿದ್ದಾರೆ. ಆದ್ರೆ ಈ ರೀತಿಯ ವಿದ್ಯಮಾನ ಈ ಹಿಂದೆ ಕೂಡ ನಡೆದಿರುವ ಉದಾಹರಣೆಗಳಿವೆ. ಸದ್ಯ ಈ ನಕಲಿ ಚಂದ್ರನ ವಿಡಿಯೋಗಳು ಜನರಲ್ಲಿ ಅಚ್ಚರಿ ಮೂಡಿಸಿರುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications
