Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಸಂಭವಿಸಲಿದೆ 4 ಗ್ರಹಣ: ಭಾರತದಲ್ಲಿ ಒಂದು ಗೋಚರ, ದಿನಾಂಕ, ಸಮಯ, ಮಾಹಿತಿ ಇಲ್ಲಿದೆ
ಪ್ರತಿ ವರ್ಷದವೂ ಆಕಾಶದಲ್ಲಿ ಹಲವು ರೀತಿಯ ವಿದ್ಯಮಾನಗಳ ನಾವು ನೋಡುತ್ತಲೇ ಇರುತ್ತೇವೆ. ಅದ್ರಲ್ಲೂ ಹಲವು ಗ್ರಹಗಳ ಚಲನೆ, ಆಕಾಶಕಾಯಗಳು, ಗ್ರಹಣ ಹೀಗೆ ಹತ್ತು ಹಲವು ವಿದ್ಯಮಾನಗಳನ್ನು ನಾವು ವೀಕ್ಷಿಸಲಿದ್ದೇವೆ. ಪ್ರತಿ ವರ್ಷವು ಗ್ರಹಣಗಳು ಹಾಗೆ ಗ್ರಹಗಳ ಚಲನೆಯ ಸಮಯ ದಿನಾಂಕ ಬದಲಾಗುತ್ತದೆ. ಇನ್ನು ಗ್ರಹಣ ವಿಚಾರದಲ್ಲಿ ಈ 2026ರಲ್ಲೂ ಸಹ 4 ಗ್ರಹಣಗಳು ಸಂಭವಿಸುವುದು ನೆನೆಯಬಹುದು.
2026ರಲ್ಲಿ 4 ಗ್ರಹಣಗಳು ಸಂಭವಿಸುತ್ತಿವೆ. ಅದ್ರಲ್ಲೂ ಭಾರತದಲ್ಲೂ ಗೋಚರವಾಗುತ್ತವೆ. ಎರಡು ಚಂದ್ರಗ್ರಹಣ ಹಾಗೂ ಎರಡು ಸೂರ್ಯ ಗ್ರಹಣ ಕೂಡ ಸಂಭವಿಸಲಿವೆ. ಆದ್ರೆ ಭಾರತದಲ್ಲಿ ಯಾವೆಲ್ಲಾ ಗ್ರಹಣಗಳು ಗೋಚರವಾಗುತ್ತಿದೆ ಎಂಬುದು ನಮಗೆ ಮುಖ್ಯವಾಗುತ್ತೆ. ಹೀಗಾಗಿ ನಾವಿಂದು ಭಾರತದಲ್ಲಿ ಗೋಚರವಾಗುವ ಗ್ರಹಣಗಳ ಕುರಿತಾಗಿ ತಿಳಿದುಕೊಳ್ಳೋಣ.

ಖಗೋಳಶಾಸ್ತ್ರದಲ್ಲಿ ಆಸಕ್ತಿ ಇರುವ ಮಂದಿ ಈ ಗ್ರಹಣ ಸೇರಿದಂತೆ ಹಲವು ವಿಸ್ಮಯಗಳನ್ನು ತಣ್ತುಂಬಿಕೊಳ್ಳಲು ಮುಂದಾಗೋದು ಸಾಮಾನ್ಯ. ಹಾಗೆ ಗ್ರಹಣಗಳು ಕೂಡ ವೈಜ್ಞಾನಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆದಿವೆ. ಒಂದು ವರ್ಷದಲ್ಲಿ 3ಕ್ಕಿಂತ ಹೆಚ್ಚು ಗ್ರಹಣಗಳು ಸಂಭವಿಸುತ್ತವೆ. ಹಾಗೆ ಗ್ರಹಣಗಳು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗೋಚರವಾಗುತ್ತವೆ.
ಇನ್ನ ಈ 4 ಗ್ರಹಣಗಳಲ್ಲಿ ಕೇವಲ 1 ಗ್ರಹಣ ಮಾತ್ರವೇ ಭಾರತದಲ್ಲಿ ಗೋಚರವಾಗುತ್ತಿದೆ. ಹಾಗಾದ್ರೆ 2026ರಲ್ಲಿ ಸಂಭವಿಸುವ ಗ್ರಹಣಗಳ ಸಮಯ, ದಿನಾಂಕ ಹಾಗೆ ಭಾರತದಲ್ಲಿ ಗೋಚರವಾಗುವ ಗ್ರಹಣ ಯಾವುದು ಯಾವಾಗ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಫೆಬ್ರವರಿ 17- ಮೊದಲ ಸೂರ್ಯಗ್ರಹಣ
ಈ ವರ್ಷದ ಮೊದಲ ಗ್ರಹಣ ಫೆಬ್ರವರಿಯಲ್ಲಿ ಸಂಭವಿಸಲಿದೆ. ಫೆ.17ರಂದು ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದನ್ನು ರಿಂಗ್ಸ್ ಆಫ್ ಫೈರ್ ಎಂದು ಕರೆಯುವ ಸೂರ್ಯ ಗ್ರಹಣವಾಗಿದೆ. ಈ ಸಮಯದಲ್ಲಿ ಸೂರ್ಯನು ಬಹುತೇಕ ಅಂದರೆ ಶೇ.96ರಷ್ಟು ಮುಚ್ಚಿರುತ್ತಾನೆ. ಈ ಗ್ರಹಣವು 2 ನಿಮಿಷಕ್ಕೂ ಹೆಚ್ಚು ಸಮಯ ಉಂಟಾಗುತ್ತದೆ. ಈ ಗ್ರಹಣವು ದಕ್ಷಿಣಾ ಆಫ್ರಿಕಾ ಭಾಗದಲ್ಲಿ ಮಾತ್ರವೇ ಗೋಚರವಾಗುತ್ತದೆ. ಅಂದರೆ ಇದು ಭಾರತದಲ್ಲಿ ಗೋಚರವಾಗುತ್ತಿಲ್ಲ.
ಮಾರ್ಚ್‌ನಲ್ಲಿ ಎರಡನೇ ಗ್ರಹಣ
ಈ ವರ್ಷದ ಎರಡನೇ ಗ್ರಹಣವು ಮಾರ್ಚ್ 3 ರಂದು ಸಂಭವಿಸಲಿದೆ. ಸೂರ್ಯ ಗ್ರಹಣದ ನಂತರ ಚಂದ್ರ ಗ್ರಹಣ ಉಂಟಾಗುತ್ತಿದೆ. ಇದು ವರ್ಷದ ಮೊದಲ ಚಂದ್ರಗ್ರಹಣವಾಗಿದೆ. ಈ ಚಂದ್ರಗ್ರಹಣ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘವಾಗಿರಲಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಆಕಾಶ ಘಟನೆಯನ್ನು ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಇದು ಭಾರತದಲ್ಲಿ ಗೋಚರಿಸುವ ವರ್ಷದ ಏಕೈಕ ಗ್ರಹಣವಾಗಿದೆ. ನೀವು ಸಹ ಮಾರ್ಚ್ 3ರಂದು ಈ ಗ್ರಹಣವನ್ನು ವೀಕ್ಷಿಸಬಹುದು.
ಎರಡನೇ ಸೂರ್ಯಗ್ರಹಣ ಜುಲೈ 29
ಈ ವರ್ಷದ ಎರಡನೇ ಸೂರ್ಯಗ್ರಹಣ ಮತ್ತು ಒಟ್ಟಾರೆ ಮೂರನೇ ಗ್ರಹಣ ಜುಲೈ 29 ರಂದು ಸಂಭವಿಸುತ್ತದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಗ್ರಹಣ ಕೂಡ ಆಫ್ರಿಕಾ, ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಕ್ಟಿಕಾದ ಹೆಚ್ಚಿನ ದೇಶಗಳಲ್ಲಿ ಗೋಚರಿಸುತ್ತದೆ. ಈ ವರ್ಷ ಭಾರತದಲ್ಲಿ ಯಾವುದೇ ಸೂರ್ಯ ಗ್ರಹಣ ಗೋಚರಿಸುವುದಿಲ್ಲ.
ವರ್ಷದ ಕೊನೆಯ ಚಂದ್ರ ಗ್ರಹಣ
ವರ್ಷದ ಎರಡನೇ ಚಂದ್ರಗ್ರಹಣ ಆಗಸ್ಟ್ 28 ರಂದು ಸಂಭವಿಸುತ್ತದೆ. ಇದು ವರ್ಷದ ನಾಲ್ಕನೇ ಮತ್ತು ಕೊನೆಯ ಗ್ರಹಣವಾಗಿರುತ್ತದೆ. ಈ ಚಂದ್ರಗ್ರಹಣ ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಈ ಗ್ರಹಣಗಳು ಭಾರತದಲ್ಲಿ ಗೋಚರವಾಗದಿದ್ದರೂ ಗ್ರಹಣದ ಪ್ರಭಾವನ್ನು ಅಲ್ಲಗೆಳೆಯುವಂತಿಲ್ಲ. ಅಚ್ಚರಿ ಏನೆಂದರೆ ವರ್ಷದ 4 ಗ್ರಹಣಗಳು ವರ್ಷದ ಮೊದಲಾರ್ಧದಲ್ಲೇ ಮುಗಿಯಲಿವೆ.



Click it and Unblock the Notifications









