Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ಸವಿಯಲೇಬೇಕಾದ 4 ಬೆಸ್ಟ್ ರೆಸಿಪಿ ಐಡಿಯಾ; ಬೆಸ್ಟ್ ರುಚಿ, ಹೆಲ್ತಿ
ಚಳಿಗಾಲ ಆರಂಭಗೊಂಡಿದೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ತಾಪಮಾನ ಗಣನೀಯ ರೀತಿಯಲ್ಲಿ ಇಳಿಮುಖವಾಗಿದೆ. ದಕ್ಷಿಣ ಭಾರತದಲ್ಲಿ ಮೋಡ ಕವಿದ ವಾತಾವರಣ ಹಿನ್ನೆಲೆ ಚಳಿ ಸ್ವಲ್ಪ ಬಿಡುವು ನೀಡಿದೆ. ತಜ್ಞರ ಪ್ರಕಾರ ವಾಡಿಕೆಗಿಂತ ಈ ವರ್ಷ ಚಳಿ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಅದ್ರಲ್ಲೂ ಭಾರತದಲ್ಲಿ ಈ 3 ತಿಂಗಳ ಕಾಲ ಚಳಿ ವಿಪರೀತವಾಗುವ ಸಾಧ್ಯತೆ ಇದೆ.
ಹಾಗೆ ಚಳಿಗಾಲದಲ್ಲಿ ಆರೋಗ್ಯ ಕುರಿತಾದ ಎಚ್ಚರಿಕೆ ಅಗತ್ಯವಾಗಿರಲಿದೆ. ನಾವು ಎಷ್ಟು ಸುರಕ್ಷಿತವಾಗಿರುತ್ತೇವೆಯೋ ಅಷ್ಟು ನಮ್ಮ ಆರೋಗ್ಯದ ದೃಷ್ಟಿಯಲ್ಲಿ ಒಳಿತಾಗಲಿದೆ. ಹಾಗೆ ಈ ಚಳಿಗಾಲದ ಸಮಯದಲ್ಲಿ ಯಾವ ಫುಡ್ ನಮ್ಮ ದೇಹಕ್ಕೆ ಉತ್ತಮವಾಗಿರಲಿದೆ? ಹಾಗೆ ಯಾವ ಫುಡ್ ಅನ್ನು ಸವಿಯುವುದು ಈ ಚಳಿಗಾಲದಲ್ಲಿ ನಮ್ಮ ದೇಹದ ಸಮತೋಲನ ಕಾಪಾಡಲು ಸಹಕಾರಿಯಾಗಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ಚಳಿಗಾಲ ಅಂದ ಕೂಡಲೆ ಕೆಮ್ಮು, ಶೀತ, ಜ್ವರ ಮುಂತಾದ ಕಾಯಿಲೆಗಳು ಸಹ ಬರುತ್ತವೆ. ಈ ಕಾಯಿಲೆಗಳನ್ನು ನಿಭಾಯಿಸಲು, ಒಳಗಿನಿಂದ ನಮ್ಮನ್ನು ಬೆಚ್ಚಗಾಗಿಸುವ ಆಹಾರವನ್ನು ಸೇವಿಸಲು ನಮಗೆ ಸಲಹೆ ನೀಡಲಾಗುತ್ತದೆ. ನಿಮ್ಮ ಊಟದ ಜೊತೆಗೆ ವಿವಿಧ ರೀತಿಯ ಚಳಿಗಾಲದ ಆಹಾರಗಳನ್ನು ಸೇರಿಸುವುದರಿಂದ ಅವು ಹೆಚ್ಚು ನಿಮ್ಮ ದೇಹಕ್ಕೆ ಅಗತ್ಯವಿರುವ ಉಷ್ಣತೆಯನ್ನು ನೀಡಲು ಸಹಾಯ ಮಾಡುತ್ತದೆ.
ರಸಂ ಮತ್ತು ಅನ್ನ
ಚಳಿಗಾಲದ ಬೆಸ್ಟ್ ಖಾದ್ಯಗಳಲ್ಲಿ ರಸಂ ಮತ್ತು ಅನ್ನ ಮೊದಲ ಸ್ಥಾನ ನೀಡಬಹುದು. ಏಕೆಂದರೆ ಚಳಿಗಾಲದಲ್ಲಿ ಹೆಚ್ಚು ಮಸಾಲೆ ಭರಿತ ಆಹಾರವು ನಿಮ್ಮ ದೇಹದ ಉಷ್ಣಾಂಶ ಹೆಚ್ಚು ಮಾಡಬಹುದಾದರು ಇದು ಜೀರ್ಣಕ್ರಿಯೆಗೆ ಬಹಳ ಸಮಸ್ಯೆ ತರಬಹುದು. ಹೀಗಾಗಿ ನೀವು ರಸಂ ಸವಿಯುವುದು ಬಹಳ ಉತ್ತಮ. ರಸಂ ಮಾಡಲು ಹೆಚ್ಚಾಗಿ ಜೀರಿಗೆ, ಸಾಸಿವೆ, ಶುಂಠಿ, ಬೆಳ್ಳುಳ್ಳಿ ಸೇರಿ ಹಲವು ಆರೋಗ್ಯಕರ ಅಂಶಗಳ ಸೇರಿಸುವುದರಿಂದ ಅದು ನಿಮ್ಮ ಆರೋಗ್ಯಕ್ಕೂ ಕೂಡ ಉತ್ತಮ. ಕೆಮ್ಮು, ಶೀತ, ನೆಗಡಿಯಂತಹ ಕಾಲೋಚಿತ ಸಮಸ್ಯೆಗಳನ್ನು ಇದು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಹಲವಾರು ರಸಂ ಮಾಡುವ ವಿಧಾನಗಳಿವೆ. ಎಲ್ಲಾ ವಿಧಾನವೂ ಊಟದೊಂದಿಗೆ ಅತ್ಯಂತ ರುಚಿ ನೀಡಲಿದೆ.
ಜಿಲೇಬಿ
ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ಸಿಹಿ ಉತ್ತಮವಲ್ಲ ಎಂದು ಸಹ ಹೇಳಲಾಗುತ್ತದೆ. ಆದರೆ ಜಿಲೇಬಿ ಸವಿಯೋದು ಚಳಿಗಾಲದ ಸಮಯದಲ್ಲಿ ಆರಾಮ ನೀಡಲಿದೆ. ಅದ್ರಲ್ಲೂ ಬಿಸಿ ಹಾಲು ಮತ್ತು ಜಿಲೇಬಿ ಸವಿ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹಾಲಿನೊಂದಿಗೆ ಸಿಹಿ ಜಿಲೇಬಿ ಸವಿಯುವುದು ಕಾಲೋಚಿತ ಸಮಸ್ಯೆಗಳ ದೂರ ಮಾಡಲಿದೆ. ದೇಹವನ್ನು ಬೆಚ್ಚಗಾಗಿಸುವ ವಿಧಾನವೂ ಹೌದು.
ಟೀ ಮತ್ತು ಪಕೋಡಾ
ಚಳಿಗಾಲದಲ್ಲಿ ಟೀ ಮತ್ತು ಕಾಫಿಯಂತಹ ಪಾನಿಯ ಅತೀ ಹೆಚ್ಚು ಸೇವಿಸಲಾಗುತ್ತೆ. ಟೀ ಜೊತೆಗೆ ಬಿಸಿಬಿಸಿಯಾದ ಬೋಂಡಾ, ಬಜ್ಜಿ, ಪಕೋಡಾ ಕೂಡ ಸವಿಯೋದು ಕಾಮನ್. ಪಕೋಡಾಗಳು, ಮಸಾಲಾ ಟೀ ಮತ್ತು ಚಳಿಗಾಲವು ಪರಸ್ಪರ ಪೂರಕವಾಗಿರುತ್ತವೆ. ಚಳಿಯ ಸಮಯದಲ್ಲಿ ಬಿಸಿ ಬಿಸಿಯ ಪಕೋಡಾ ನಿಮ್ಮ ಬಾಯಲ್ಲಿ ನೀರು ತರಿಸಲಿದೆ. ಹಾಗೆ ಇದನ್ನು ಮಾಡೋದು ಸಹ ಬಹಳ ಸುಲಭವಾಗಿದೆ. ಹೀಗಾಗಿ ಚಳಿಗಾಲದ ಬೆಸ್ಟ್ ಸ್ನ್ಯಾಕ್ಸ್‌ಗಳಲ್ಲಿ ಪಕೋಡಾ ಕೂಡ ಒಂದು.
ಆಲೂ ಪಲ್ಯ ಮತ್ತು ಪರಾಠ
ಮನೆಯಲ್ಲಿ ಪಲ್ಯ ತಯಾರಿಸಲು ಹಲವಾರು ಮಾರ್ಗಗಳಿವೆ, ಆದರೆ ಆಲೂ ಹಾಗೂ ಮೆಂತ್ಯ ಸೊಪ್ಪು ಹಾಕಿ ಮಾಡುವ ಪಲ್ಯ ಅತ್ಯಂತ ಜನಪ್ರಿಯ ಮತ್ತು ಚಳಿಗಾಲಕ್ಕೆ ಬೆಸ್ಟ್ ಖಾದ್ಯ ಆಗಿರಲಿದೆ. ಇದು ತ್ವರಿತ, ಸರಳ ಮತ್ತು ತುಂಬಾ ರುಚಿಕರವಾಗಿರುತ್ತದೆ. ಹಾಗೆ ಇದರೊಂದಿಗೆ ಪರಾಠ ಮಾಡಿ ಸವಿಯುವುದು ಚಳಿಗಾಲದ ದಿನವನ್ನು ಮತ್ತಷ್ಟು ಬೆಚ್ಚಗಾಗಿಸಲಿದೆ.



Click it and Unblock the Notifications

