Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭೂಮಿಯತ್ತ ಚಲಿಸುತ್ತಿದೆ 380 ಅಡಿಯ ಕ್ಷುದ್ರಗ್ರಹ: ನಾಳೆ ಅತ್ಯಂತ ಸಮೀಪಕ್ಕೆ!
ಸೌರವ್ಯೂಹದಲ್ಲಿ ಆಕಾಶಕಾಯಗಳ ನಡುವೆ ಕ್ಷುದ್ರಗ್ರಹಗಳು ಸಹ ಇವೆ. ಈ ಕ್ಷುದ್ರಗ್ರಹಗಳು ಯಾವ ನಿಯಂತ್ರಣಕ್ಕೂ ಸಿಗದೆ ಅಡ್ಡಾದಿಡ್ಡಿಯಾಗಿ ಚಲಿಸುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ. ಕೆಲವೊಮ್ಮೆ ಇವು ಬರಿಗಣ್ಣಿನಿಂದ ನೋಡಬಹುದಾದ ದೂರದಲ್ಲೇ ಹಾದು ಹೋಗುತ್ತವೆ. ಮತ್ತೆ ಕೆಲವೊಮ್ಮೆ ಭೂಮಿಯ ಸಮೀಪಕ್ಕೂ ಬರುತ್ತವೆ.
ಅಲ್ಲದೆ ಹಿಂದೆ ಭೂಮಿಗೆ ಅಪ್ಪಳಿಸಿರುವ ಘಟನೆಗಳು ಸಹ ವರದಿಯಾಗಿವೆ. ಸೈಬೀರಿಯಾದ ಮೇಲೆ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಕೋಟ್ಯಂತರ ವರ್ಷಗಳ ಹಿಂದೆ ಈ ಭೂಮಿ ಮೇಲಿದ್ದ ಡೈನೋಸಾರ್ ಸಂತತಿ ನಶಿಸಿ ಹೋಗಲು ಈ ಕ್ಷುದ್ರಗ್ರಹವೇ ಕಾರಣ ಎಂದು ನಂಬಲಾಗಿದೆ.

ಈಗ ಮತ್ತೊಂದು ಕ್ಷುದ್ರಗ್ರಹವಾದ 2011 MW1, ಭೂಮಿಯ ಕಡೆಗೆ 28,946 kmph ವೇಗದಲ್ಲಿ ಚಲಿಸುತ್ತಿದೆ ಎಂದು ನಾಸಾ ತಿಳಿಸಿದೆ. ಜೊತೆಗೆ ಈ ಕ್ಷುದ್ರಗ್ರಹದ ಬಗ್ಗೆ ನಾಸಾ ಎಚ್ಚರಿಕೆ ನೀಡಿದೆ, ಇದು ಅಪೋಲೋ-ಕ್ಲಾಸ್ ಕ್ಷುದ್ರಗ್ರಹ ಎಂದು ವರ್ಗೀಕರಿಸಲ್ಪಟ್ಟಿದೆ ಮತ್ತು ಅಂದಾಜು 380 ಅಡಿ ಗಾತ್ರದಲ್ಲಿದೆ ಎಂದು ತಿಳಿದುಬಂದಿದೆ. ನಾಸಾದ CNEOS ಮಾಹಿತಿಯ ಪ್ರಕಾರ, ಜುಲೈ 25 ರಂದು ಭೂಮಿಗೇ ಕೇವಲ 2.4 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಅಂದರೆ ಇದು ಕೇವಲ 29 ಸಾವಿರ ಕಿ.ಮೀ ದೂರದಲ್ಲಿದೆ.
2011 MW1 ಒಂದು ಬೃಹತ್ ಕ್ಷುದ್ರಗ್ರಹವಾಗಿದ್ದು, ಅದರ ಕಕ್ಷೆಯು ಭೂಮಿಯ ಕಕ್ಷೆಯ ಹತ್ತಿರ ಬರುತ್ತದೆ ಆದರೆ ತುಂಬಾ ಹತ್ತಿರದಲ್ಲಿಲ್ಲ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ಅದರ ಸಾಮೀಪ್ಯದಿಂದಾಗಿ ಭೂಮಿಯ ಸಮೀಪ ಕ್ಷುದ್ರಗ್ರಹ ಎಂದು ಹೆಸರಿಸಿದೆ. ಆದರೆ ಇದನ್ನು 'ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ (PHA)' ಎಂದು ವರ್ಗೀಕರಿಸಿಲ್ಲ. ಇದರ ಗಾತ್ರವನ್ನ ಗಗನಚುಂಬಿ ಕಟ್ಟಡಕ್ಕೆ ಹೋಲಿಸಬಹುದಾದರು ಈ ಕ್ಷುದ್ರಗ್ರಹದಿಂದ ಯಾವ ಹಾನಿಯೂ ಇಲ್ಲ ಎಂದು ನಾಸಾ ಖಚಿತಪಡಿಸಿದೆ.
ಕ್ಷುದ್ರಗ್ರಹಗಳು, ಸಾಮಾನ್ಯವಾಗಿ ಚಿಕ್ಕ ಗ್ರಹಗಳು ಎಂದು ಕರೆಯಲ್ಪಡುತ್ತವೆ, ಅವು ಆರಂಭಿಕ ಸೌರವ್ಯೂಹದ ರಚನೆಯಿಂದ ಅವಶೇಷಗಳಾಗಿವೆ. ಈಗ ಸುಮಾರು 1,385,217 ಕ್ಷುದ್ರಗ್ರಹಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಕ್ಷುದ್ರಗ್ರಹಗಳ ಆಧ್ಯಯನದಿಂದಾಗಿ ಗ್ರಹಗಳ ರಚನೆ, ಚಲನೆ, ಸೌರಮಂಡಲ ರಚನೆಯ ಕುರಿತ ಮಾಹಿತಿ ತಿಳಿಯಬಹುದು.
ಕ್ಷುದ್ರಗ್ರಹ ಟ್ರ್ಯಾಕಿಂಗ್ ಮಾಹಿತಿಯನ್ನು ಸಂಗ್ರಹಿಸಲು ಮೀಸಲಾಗಿರುವ ಹಲವಾರು ವೀಕ್ಷಣಾಲಯಗಳನ್ನು ನಾಸಾ ನಿರ್ವಹಿಸುತ್ತದೆ. ಇವುಗಳಲ್ಲಿ PAN-STARRS, ಕ್ಯಾಟಲಿನಾ ಸ್ಕೈ ಸಮೀಕ್ಷೆ, NASA ನ NEOWISE ಮಿಷನ್ ಮತ್ತು ಹೊಸ NEO ಸರ್ವೇಯರ್ ಸೇರಿವೆ.
14 ವರ್ಷದ ಬಳಿಕ ಭೂಮಿಯತ್ತ ಮತ್ತೊಂದು ಕ್ಷುದ್ರಗ್ರಹ
ಸುಮಾರು 14 ವರ್ಷಗಳ ನಂತರ ಕ್ಷುದ್ರಗ್ರಹವೊಂದು ಸಂಭಾವ್ಯ ಭೂಮಿ ಅಪ್ಪಳಿಸುವ ಕುರಿತು ತಜ್ಞರ ತಂಡ ಮಾಹಿತಿ ನೀಡಿದೆ. ಈ ಬಾರಿ ಶೇ.72ರಷ್ಟು ಪ್ರಮಾಣ ಈ ಕ್ಷುದ್ರಗ್ರಹ ಭೂಮಿ ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಈ ಕ್ಷುದ್ರಗ್ರಹ ಭೂಮಿ ತಲುಪಲಿದೆಯಂತೆ. ಈಗಾಗಲೆ ಅದರ ವೇಗ ಸಹ ಹೆಚ್ಚಾಗಿದ್ದು, ಭೂಮಿಯ ವಾತಾವರಣ ತಲುಪಬೇಕಾದರೆ 14 ವರ್ಷ ಬೇಕಂತೆ.
ನಿಖರವಾಗಿ ಹೇಳಬೇಕೆಂದರೆ 2038 ಜುಲೈ 12ರಂದು ಅದು ಭೂಮಿ ಅಪ್ಪಳಿಸಬಹುದು ಎಂದು ನಾಸಾ ತಿಳಿಸಿದೆ. ಈ ಸಮಯಕ್ಕೆ ಆ ಕ್ಷುದ್ರಗ್ರಹದ ಆಕಾರ ಹಾಗೂ ಗಾತ್ರ ಸೇರಿದಂತೆ ನಿಖರವಾದ ವೇಗ ಗುರುತು ಪತ್ತೆ ಸಾಧ್ಯವಾಗಿಲ್ಲವಂತೆ. ಆದರೆ ಈ ಕ್ಷುದ್ರಗ್ರಹದ ಅಪಾಯಯಗಳ ಕುರಿತು ಇನ್ನೂ ಅಧ್ಯಯನ ನಡೆಯುತ್ತಿದೆ.
ಒಂದು ಸಾವಿರ ಕಿಮೀ ಅಥವಾ ಅದಕ್ಕಿಂತ ಕಡಿಮೆ ವ್ಯಾಸ ಇರುವ ಆಕಾಶಕಾಯವನ್ನು ಕ್ಷುದ್ರ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇವು ಯಾವ ಗ್ರಹಗಳ ಸಮೀಪ ಹಾದು ಹೋಗುತ್ತವೇಯೋ ಆಗ ಆ ಗ್ರಹದ ಗುರುತ್ವಾಕರ್ಷಣಾ ಬಲಕ್ಕೆ ಒಳಗಾಗುತ್ತವೆ.



Click it and Unblock the Notifications











