Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯ ಬಾತ್‌ರೂಮ್‌ನಲ್ಲಿ 35 ಹಾವಿನ ಮರಿ ಪತ್ತೆ..! ಶಾಕ್ ಆದ ಮಂದಿ!
ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲದಲ್ಲಿ ಕಾಯಿಲೆಗಳು ಹೇಗೆ ಹೆಚ್ಚಾಗುತ್ತದೆಯೋ ಹಾಗೆಯೇ ಹುಳು, ಹಾವು, ಕೀಟಗಳ ಕಾಟವು ಹೆಚ್ಚಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹಾವುಗಳ ಕಾಟ ತುಸು ಹೆಚ್ಚಾಗಲಿದೆ ಎಂದೇ ಹೇಳಬಹುದು. ಏಕೆಂದರೆ ಮಳೆಗಾಲದಲ್ಲಿ ಅವುಗಳಿಎಗ ಆಹಾರ, ನೀರು ಸುಲಭವಾಗಿ ಸಿಗುತ್ತದೆ.
ಹೀಗಾಗಿ ಮಳೆಗಾಲದಲ್ಲಿ ಹಾವುಗಳ ಬಗ್ಗೆ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಮನೆಯ ಬಳಿ ಸಣ್ಣ ಕೈ ತೋಟ ಇದ್ದರೂ ಅಲ್ಲಿಯೇ ಹಾವುಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಜೊತೆಗೆ ಕೆಲವೊಂದು ಹಾವುಗಳು ಮಳೆಗಾಲದಲ್ಲಿ ಮಾತ್ರವೇ ಕಣ್ಣಿಗೆ ಬೀಳುತ್ತವೆ. ಆದ್ರೆ ಎಲ್ಲಾ ಹಾವುಗಳು ಅಪಾಯಕಾರಿಯೇ.

ಆದ್ರೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಹಾವಿನ ಮರಿಗಳು ಬಾತ್‌ರೂಮ್ ಒಳಗಿನಿಂದ ಹೊರಬರುತ್ತಿದ್ದು, ನೋಡಿದವರು ಅಕ್ಷಶಃ ದಂಗಾಗಿದ್ದಾರೆ. ಅಸ್ಸಾಂನ ನಗಾಂವ್ ಜಿಲ್ಲೆಯ ಮನೆಯೊಂದರಿಂದ 35 ಕ್ಕೂ ಹೆಚ್ಚು ಮರಿ ಹಾವುಗಳು ಹೊರಬರುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಭಯ ಹುಟ್ಟಿಸುವಂತಿದೆ.
ಇತ್ತೀಚೆಗೆ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಕಲಿಯಾಬೋರ್‌ನಲ್ಲಿ ಬಾತ್‌ರೂಮ್‌ನಲ್ಲಿ ಹತ್ತಾರು ಹಾವುಗಳು ತೆವಳುತ್ತಿರವ ವಿಡಿಯೋ ಇದಾಗಿದ್ದು, ನೋಡುಗರಲ್ಲಿ ನಡುಕ ಹುಟ್ಟಿಸಿದೆ. ಈ ಹಾವುಗಳನ್ನು ಸರ್ಪೆಂಟ್ ಮ್ಯಾನ್ ಎಂದು ಕರೆಯಲಾಗುತ್ತದೆ. ಈ ಹಾವುಗಳನ್ನು ಉರಗ ರಕ್ಷಕರು ಹಿಡಿದು ಬಕೆಟ್‌ನಲ್ಲಿ ತುಂಬಿದ್ದಾರೆ.
ಈ ಕುರಿತು ಉರಗ ರಕ್ಷಕ ದೇಕಾ ಮಾತನಾಡಿ, 'ಮನೆಯ ಮಾಲೀಕರು ಹಾವುಗಳಿರುವ ಕುರಿತು ನನಗೆ ಮಾಹಿತಿ ನೀಡಿದರು. ತಕ್ಷಣ ನಾನು ಸ್ಥಳಕ್ಕೆ ತಲುಪಿದೆ. ಸ್ಥಳದಲ್ಲಿ ಅನೇಕ ಹಾವುಗಳು ಹರಿದಾಡುತ್ತಿರುವುದನ್ನು ನಾನು ಗಮನಿಸಿದೆ. ಹೊಸದಾಗಿ ನಿರ್ಮಿಸಿದ ಮನೆಯ ಶೌಚಾಲಯದಿಂದ ಸುಮಾರು 35 ಹಾವುಗಳು ಹೊರಬಂದಿವೆ. ನಂತರ ನಾನು ಜೋಯಸಾಗರ ದಲಾನಿ ಪ್ರದೇಶದಲ್ಲಿ ಈ ಹಾವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದೇನೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ತಾಯಿ ಹಾವು ಇದೇ ಬಾತ್‌ರೂಮ್‌ನಲ್ಲಿ ಮೊಟ್ಟೆ ಇಟ್ಟಿದೆ. ಮರಿಗಳು ಎಲ್ಲಿಂದಲೋ ಬಂದು ಸೇರಿಕೊಂಡಿದ್ದಲ್ಲ. ಬದಲಿಗೆ ಅಲ್ಲಿಯೇ ಜೀವ ಪಡೆದಿವೆ. ಆದರೆ ಅದನ್ನು ಮಾಲೀಕರು ನೋಡಿರಲಿಲ್ಲ. ಹಾವಿನ ಮರಿಗಳು ಹೊರಬಂದ ಬಳಿಕವಷ್ಟೇ ಅವರಿಗೆ ಈ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾವುಗಳ ಕಂಡ ಜನರು ಶಾಕ್ ಆಗಿದ್ದಾರೆ. ಹಾವು ಮೊಟ್ಟೆ ಇಟ್ಟು ಮರಿ ಮಾಡುವವರೆಗೂ ಮಾಲೀಕರಿಗೆ ತಿಳಿದಿಲ್ಲ ಎಂದರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಹಾವು ಮರಿ ಮೊಟ್ಟೆಗಳ ಇಟ್ಟ ಬಳಿಕ ಅಲ್ಲಿರುವುದಿಲ್ಲ. ತಾಯಿ ಹಾವು ಮೊಟ್ಟೆ ಇಟ್ಟು ಸ್ಥಳ ಬಿಟ್ಟು ತೆರಳಿರುತ್ತದೆ. ಹೀಗಾಗಿ ಯಾರಿಗೂ ಇದು ತಿಳಿಯುವುದಿಲ್ಲ.
ಆದರೆ ಈ ವಿಡಿಯೋ ಎಂತವೆಇಗೂ ಭಯ ಹುಟ್ಟಿಸುವಂತಿದೆ. ಒಂದು ವೇಳೆ ಈ ಮರಿಗಳು ಬೆಳೆದು ಅಲ್ಲಿಯೇ ದೊಡ್ಡದಾದರೂ ಮಾಳಿಕರಿಗೆ ತಿಳಿಯುತ್ತಿರಲಿಲ್ಲ. ಅವು ಸಣ್ಣ ಮರಿಗಳಾಗಿದ್ದರು ವಿಷ ಹೊಂದಿರುತ್ತವೆ. ಆದರೆ ಹಾವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮಳೆಗಾಲದಲ್ಲಿ ಹಾವುಗಳಿಂದ ರಕ್ಷಣೆ ಪಡೆಯುವುದು ಹೇಗೆ?
ನಾವು ಮೊದಲೇ ಹೇಳಿದಂತೆ ಮಳೆಗಾಲದಲ್ಲಿ ಹಾವುಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಮನೆಯ ಸುತ್ತಲು ಸ್ವಚ್ಛವಾಗಿಡಿ, ಗಿಡಗಳು, ಪೊದೆಗಳು, ಕಳೆ ಬೆಳೆದಿದ್ದರೆ ಆದಷ್ಟು ಅವುಗಳ ತೆರೆವು ಮಾಡಿ. ಮನೆಯ ಸುತ್ತ ಕಸಗಳ ಹಾಕಬೇಡಿ. ಪ್ಲಾಸ್ಟಿಕ್ ಚೀಲಗಳು, ಹಳೆಯ ಪೀಠೋಪಕರಣಗಳು, ಪ್ಲಾಸ್ಟಿಕ್ ಬಾಟಲಿಗಳ ಇಡಬೇಡಿ. ಹಾವುಗಳು ಯಾವಾಗಲು ಬೆಚ್ಚಗಿನ ಸ್ಥಳ ಹುಡುಕುತ್ತಿರುತ್ತವೆ. ಹೀಗಾಗಿ ಅವು ಉಳಿದುಕೊಳ್ಳಲು ಸಹಾಯ ಮಾಡುವಂತಹ ಜಾಗವನ್ನು ನೀವೆ ನಿರ್ಮಿಸಿ ಕೊಡಬೇಡಿ.



Click it and Unblock the Notifications
