Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವಯಸ್ಕರ ಶೋಗಳ ಪ್ರಸಾರ: ಆಲ್ಟ್ ಬಾಲಾಜಿ ಸೇರಿ 25 ಒಟಿಟಿ ಬ್ಯಾನ್..ಇದರ ಮಾಲಿಕರು ಯಾರು ಗೊತ್ತಾ?
ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುತ್ತಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ಹಲವು ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಲಕ್ಷಾಂತರ ಚಂದಾದಾರರ ಹೊಂದಿದ್ದ ಈ ಅಪ್ಲಿಕೇಶನ್‌ಗಳು ಹಾಗೂ ವೆಬ್‌ಸೈಟ್‌ನಲ್ಲಿ ಅಶ್ಲೀಲ ದೃಶ್ಯಗಳು, ಸಿನಿಮಾಗಳ, ಕಂಟೆಂಟ್‌ಗಳಿದ್ದವು. ಈ ಸಂಬಂಧ ಸುಮಾರು 25 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬ್ಯಾನ್ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇದರಲ್ಲಿ ಮುಖ್ಯವಾಗಿ ಆಲ್ಟ್ ಬಾಲಾಜಿ (ALTBalaji) ಉಲ್ಲು (ULLU), ಬಿಗ್ ಶಾರ್ಟ್ಸ್ (Big Shots), DesiFlix, Boomex, Navarasa Lite, Gulab ಸೇರಿ ಹಲವು ಅಪ್ಲಿಕೇಷನ್‌ಗಳನ್ನು ಬ್ಯಾನ್ ಮಾಡಲಾಗಿದೆ. ಇದರಲ್ಲಿ ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಅತೀ ಹೆಚ್ಚು ವೀಕ್ಷಕರ ಪಡೆದಿದ್ದ ಹಾಗೂ ಭಾರತದ ಟಾಪ್ 10 ಓಟಿಟಿಗಳಲ್ಲಿ ಸ್ಥಾನ ಪಡೆದಿದ್ದವು.

ಪ್ರಸಾರ ಇಲಾಖೆ ಈ ಅಪ್ಲಿಕೇಶನ್‌ಗಳಲ್ಲಿ ಕಂಟೆಂಟ್‌ಗಳನ್ನು ಪರಿಶೀಲನೆಗೆ ಒಳಪಡಿಸಿತ್ತು ಎಂದು ತಿಳಿದುಬಂದಿದೆ. ಹಾಗೆ ಈ ಒಟಿಟಿಗಳು ಪ್ರಸಾರ ಕಾಯ್ದೆಯನ್ನು ಉಲ್ಲಂಘಿಸಿ ಅಶ್ಲೀಲ ಕಂಟೆಂಟ್ ಅನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿವೆ ಎಂದು ತಿಳಿದುಬಂದಿತ್ತು. ಹೀಗಾಗಿ ಭಾರತದಲ್ಲಿ ಈ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಲಾಗಿದೆ.
ಈ ಅಪ್ಲಿಕೇಶನ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದ ದೃಶ್ಯಗಳು ಅಶ್ಲೀಲತೆ, ಪ್ರಚೋದನಕಾರಿ, ಅಶ್ಲೀಲ ಸಂಭಾಷಣೆಗಳಿಂದ ಕೂಡಿದ್ದವು ಎಂದು ವಿವರಿಸಲಾಗಿದೆ. ಈ ಅಪ್ಲಿಕೇಶನ್‌ಗಳು ಹಾಗೆ ವೆವ್‌ಸೈಟ್‌ಗಳು ಇದಕ್ಕೂ ಮೊದಲೇ ಪರಿಶೀಲನೆಗೆ ಒಳಪಟ್ಟಿದ್ದವು. ಈ ವರ್ಷದ ಏಪ್ರಿಲ್‌ನಲ್ಲಿ, OTT ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಪ್ರಸಾರ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL)ಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಪ್ರಮುಖ ಡಿಜಿಟಲ್ ವೇದಿಕೆಗಳಿಗೆ ನೋಟಿಸ್ ಕೂಡ ನೀಡಿತ್ತು.
ವಿವಾದಗಳ ಸುತ್ತಿಕೊಂಡಿದ್ದ ಆಲ್ಟ್ ಬಾಲಾಜಿ
ಈ ಪಟ್ಟಿಯಲ್ಲಿ ಆಲ್ಟ್ ಬಾಲಾಜಿ ಬಹಳ ಸದ್ದು ಮಾಡಿದ ಹಾಗೆ ಅತೀ ಹೆಚ್ಚು ಚಂದಾದಾರರ ಹೊಂದಿದ್ದ ಅಪ್ಲಿಕೇಶನ್ ಆಗಿತ್ತು. ಸಿಲ್ವರ್ ಸ್ಕ್ರೀನ್ ಕ್ವೀನ್ ಎಂದೇ ಹೆಸರು ಪಡೆದಿದ್ದ ಏಕ್ತಾ ಕಪೂರ್ ಮಾಲಿಕತ್ವವಿದೆ. ಬಾಲಾಜಿ ಟೆಲಿ ಫಿಲ್ಮ್ಸ್ ಎಂಬ ಸಂಸ್ಥೆಯಡಿಯಲ್ಲಿ ಏಕ್ತಾ ಕಪೂರ್ ಅವರ ತಾಯಿ ಶೋಭಾ ಕಪೂರ್ ಈ ಸಂಸ್ಥೆ ಮುನ್ನಡೆಸುತ್ತಿದ್ದರು. ಆಲ್ಟ್ ಬಾಲಾಜಿಯ ಅಪ್ಲಿಕೇಶನ್ ಆರಂಭದಲ್ಲಿ ಉತ್ತಮ ಹೆಸರು ಗಳಿಸಿತ್ತು. ಸೀರಿಯಲ್‌ಗಳು, ವೆಬ್ ಸೀರಿಸ್‌ಗಳು ಅಲ್ಲಿ ಸುದ್ದಿಯಾಗಿದ್ದವು.
ಆದ್ರೆ ಬರು ಬರುತ್ತಾ ಈ ಆಲ್ಟ್ ಬಾಲಾಜಿಯಲ್ಲಿ ವಯಸ್ಕರ ದೃಶ್ಯಾವಳಿಗಳು ಹೆಚ್ಚಾದವು. ಹಾಗೆ ಅಲ್ಲಿನ ವೆಬ್‌ಸೀರಿಸ್‌ಗಳು ಅಶ್ಲೀಲತೆಯನ್ನೇ ಕೇಂದ್ರ ಬಿಂದುವಾಗಿಸಿದವು, ಹಾಗೆ ಶುಲ್ಕ ನೀಡಿ ವಿಡಿಯೋಗಳ ನೋಡಬೇಕಾಗಿತ್ತು. ಈ ಮೊದಲು ''XXX: Uncensored Season 2 ಎಂಬ ವೆಬ್ ಸೀರಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಲಾಗಿತ್ತು. ಅದರಲ್ಲಿ ಭಾರತೀಯ ಸೇನೆಯನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೋರ್ಟ್‌ನಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಆಲ್ಟ್ ಬಾಲಾಜಿಯ ವೈರಲ್ ವೆಬ್ ಸೀರಿಸ್ ಆಗಿದ್ದ ಗಂಧಿ ಬಾತ್ ಹಲವು ಅವತಾರಣಿಕೆಯಲ್ಲಿ ಹೊರಬಂದಿತ್ತು. ಅದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಅಶ್ಲೀಲ ದೃಶ್ಯ ಪ್ರಸಾರ ಮಾಡಿದ್ದರು ಎಂಬ ಕಾರಣಕ್ಕೆ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿತ್ತು.
ಬ್ಯಾನ್ ಆಗಿರುವ ಅಪ್ಲಿಕೇಶನ್‌ಗಳು
ಉಲ್ಲು
ALTT (ALTBalaji)
ಡೆಸಿಫ್ಲಿಕ್ಸ್
ಬಿಗ್ ಶಾಟ್ಸ್
ಬೂಮೆಕ್ಸ್
ಮೂಡ್ಎಕ್ಸ್
ನಿಯಾನ್ಎಕ್ಸ್ ವಿಐಪಿ
ಮೊಜ್ಫ್ಲಿಕ್ಸ್
ಟ್ರಿಫ್ಲಿಕ್ಸ್
ಹಲ್ಚುಲ್ ಆಪ್
ಹಾಟ್ಎಕ್ಸ್ ವಿಐಪಿ
ಅನ್ಕಟ್ ಅಡ್ಡಾ
ಬೆಷರಾಮ್ಸ್
ಎಕ್ಸ್ಟ್ರಾಮೂಡ್
ಚಿಕೂಫ್ಲಿಕ್ಸ್
ಫ್ಯೂಗಿ
ನ್ಯೂಫ್ಲಿಕ್ಸ್
ಪ್ರೈಮ್ ಪ್ಲೇ
ಹಂಟರ್ಸ್
ರ್ಯಾಬಿಟ್ ಮೂವೀಸ್
ವೂವಿ
ಎಕ್ಸ್ ಪ್ರೈಮ್
ಯೆಸ್ಮಾ
ಡ್ರೀಮ್ಸ್ ಫಿಲ್ಮ್ಸ್
ಹಾಟ್ ಶಾಟ್ಸ್ ವಿಐಪಿ



Click it and Unblock the Notifications