Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ ಬೇಳೆ ಸಾರು ಸಾಮನ್ಯದ್ದಲ್ಲ 24 ಕ್ಯಾರೆಟ್ ಚಿನ್ನ ಹಾಕಿ ಮಾಡಲಾಗಿದೆ! ಎಲ್ಲಿಯ ರೆಸ್ಟೋರೆಂಟ್?
ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ದಾಲ್ ಕರಿ (ಬೇಳೆ ಸಾರು) ಬೆಸ್ಟ್ ಉದಾಹರಣೆ. ಬೇಳೆ ಸಾರು ಎಂದಾಗ ನಮಗೆ ಒಂಥರಾ ಅಸಡ್ಡೆ, ಅಂಗಡಿಗೆ ಹೋದಾಗ ಅನ್ನದ ಜೊತೆ ಬೇಳೆ ಸಾಕು ಫ್ರೀ ಸಿಗುತ್ತದೆ, ಆದರೆ ಈ ಬೇಳೆ ಸಾರು ಅಂತಿಂಥದ್ದಲ್ಲ ಇದಕ್ಕೆ ಚಿನ್ನದ ಬೆಲೆ ಹೌದು ಚಿನ್ನ ಹಾಕಿದ ಈ ಬೇಳೆ ಸಾರಿಗೆ ಚಿನ್ನದ ಬೆಲೆ ಇಲ್ಲದಿರಲು ಸಾಧ್ಯವೇ?
ದುಬೈನಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ದೊರೆಯುವುದು 24ಕ್ಯಾರೆಟ್ ಗೋಲ್ಡ್ ಬೇಳೆ ಸಾರು
ನೀವು ದುಬೈನ ಐಷಾರಾಮಿ ಹೋಟೆಲ್ ಗೆ ಹೋದಾಗ ಅಲ್ಲಿ ನೀವು ಈ ಚಿನ್ನದ ಬೇಳೆ ಸಾರು ರುಚಿ ನೋಡಲು ಬಯಸುವುದಾದರೆ ಇದನ್ನು ಸವಿಯಬಹುದು.

ಶುದ್ಧ ಚಿನ್ನವನ್ನು ಬಳಸಲಾಗುವುದು
ಈ ಬೇಳೆ ಸಾರಿಗೆ ಶುದ್ಧ ಚಿನ್ನವನ್ನು ಸೇರಿಸಲಾಗುವುದು. ಹೌದು ಬೇಳೆ ಸಾರು ಮಾಡಿ ಸರ್ವ್ ಮಾಡುವಾಗ 24 ಕ್ಯಾರೆಟ್ ಚಿನ್ನವನ್ನು ಕರಗಿಸಿ ಆ ರಸವನ್ನು ಬೇಳೆ ಸಾರಿನ ಮೇಲೆ ಹಾಕಿ ಸರ್ವ್ ಮಾಡಬಹುದು, ಇನ್ನು ಇದನ್ನು ಸವಿಯಬೇಕೆಂದರೆ ನಮ್ಮ ಜೇಬು ಗಟ್ಟಿಯಾಗಿರಬೇಕು. ಚಿನ್ನ ಸೇರಿಸಿರುವ ಸಾರು ಅದೂ ದುಬೈಯಲ್ಲಿ ಅಂದ ಮೇಲೆ ಬೆಲೆ ನೀವು ಊಹಿಸಬಹುದು.
ಇತ್ತೀಚೆಗೆ ಚಿನ್ನದ ಐಸ್‌ಕ್ರೀಮ್ ವೈರಲ್ ಆಗಿತ್ತು
ಗಿಚ್ಚಿಗಿಲಿಗಿಲಿ ನಟಿ ನಿವೇದಿತಾ ಗೌಡ ಕೂಡ ಚಿನ್ನದ ಐಸ್‌ಕ್ರೀಮ್ ಸವಿಯುವ ಫೋಟೋ ಹಾಕಿದ್ದರು, ಆ ಐಸ್‌ಕ್ರೀಮ್‌ಗೆ 24 ಕ್ಯಾರೆಟ್ ಚಿನ್ನದ ಲೇಪನವಿತ್ತು. ಅದು ಬೆಂಗಳೂರಿನಲ್ಲಿಯೇ ಲಭ್ಯವಿದೆ, ಇದರಲ್ಲಿ 24 ಕ್ಯಾರೆಟ್ ಗೋಲ್ಡ್ ಕವರ್ ಇತ್ತು, ಇದರ ಬೆಲೆ ಸುಮಾರು ಸಾವಿರುಗಟ್ಟಲೆ ಇದೆ ಎಂದು ಹೇಳಲಾಗುವುದು. ಚಿನ್ನದ ಐಸ್‌ಕ್ರೀಮ್ ಅಹಮದಾಬಾದ್, ಮುಂಬೈ ಬಿಟ್ಟರೆ ಸಿಗುವುದು ಬೆಂಗಳೂರಿನ ಒಂದು ಶಾಪ್‌ನಲ್ಲಿ ಮಾತ್ರ.
ಚಿನ್ನವನ್ನು ತಿನ್ನಬಹುದೇ?
ಚಿನ್ನವನ್ನು ಆ ಕಾಲದಿಂದಲೂ ಔಷಧಗಳಲ್ಲಿ ಬಳಸಲಾಗುತ್ತಿತ್ತು, ಈ ಚಿನ್ನವನ್ನು ತಿನ್ನುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಹೇಳಲಾಗುವುದು.
ಚಿನ್ನವನ್ನು ಸವಿಯುವುದರಿಂದ ಈ ಪ್ರಯೋಜನಗಳಿವೆ
* ಉರಿಯೂತದ ಸಮಸ್ಯೆ ಕಡಿಮೆಯಾಗುವುದು
* ಕ್ಯಾನ್ಸರ್ ಚಿಕಿತ್ಸೆಯಲ್ಲೂ ಬಳಸಲಾಗುವುದು
* ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು
* ಚಿನ್ನವನ್ನು ಸರ್ಜರಿಯಲ್ಲಿ ಬಳಸಲಾಗುವುದು. ರಕ್ತನಾಳಗಳು, ನರಗಳನ್ನು ಸರಿಪಡಿಸಲು ಬಳಸಲಾಗುವುದು.
ನೀವು ಚಿನ್ನವನ್ನು ಕರಗಿಸಿ ತಿನ್ನಬೇಡಿ
ಚಿನ್ನವನ್ನು ಅಡುಗೆಯಲ್ಲಿ ಬಳಸುವುದಕ್ಕೂ ಒಂದು ವಿಧಾನ ಅಂತ ಇರುತ್ತದೆ, ಆದ್ದರಿಂದ ಅದನ್ನು ನಾವು ಕರಗಿಸಿ ಬಳಸಿದರೆ ಆಗಲ್ಲ, ಮನೆಯ ಚಿನ್ನ ವ್ಯರ್ಥವಾಗುತ್ತದೆ, ಮನೆಯಲ್ಲಿರುವ ಚಿನ್ನದಲ್ಲಿ ಸ್ವಲ್ಪ ತಾಮ್ರದಂಶವಿರುತ್ತದೆ, ಆದರೆ ಅಡುಗೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಬಳಸಲಾಗುವುದು.



Click it and Unblock the Notifications
