Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಮಾರ್ಚ್ ತಿಂಗಳಿನಲ್ಲಿ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ: ಯಾವಾಗ, ಭಾರತದಲ್ಲಿ ಎಷ್ಟೊತ್ತಿಗೆ ನಡೆಯಲಿದೆ?
ಗ್ರಹಣ ಎಂಬುವುದು ವಿಜ್ಞಾನದ ಪ್ರಕಾರ ಖಗೋಳದಲ್ಲಿ ನಡೆಯುವ ವಿದ್ಯಾಮ್ಯಾನ, ಇನ್ನು ಜ್ಯೋತಿಷ್ಯ ಪ್ರಕಾರ ಗ್ರಹಣವೆಂದರೆ ಅಶುಭ, ಈ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ದೇವಾಲಯದಲ್ಲಿ ಪೂಜೆ ಮಾಡುವುದಿಲ್ಲ, ಗರ್ಭಿಣಿಯರು ಹೆಚ್ಚಿನ ಜಾಗ್ರತೆವಹಿಸಬೇಕು, ಗ್ರಹಣ ನಡೆಯುವ ಹೊತ್ತಿನಲ್ಲಿ ರೋಗಿಗಳು, ಮಕ್ಕಳು, ಗರ್ಭಿಣಿಯರನ್ನು ಹೊರತು ಪಡಿಸಿ ಬೇರೆ ಯಾರೂ ಆಹಾರ ಸೇವಿಸುವಂತಿಲ್ಲ ಎಂದು ಹೇಳಲಾಗುವುದು.
ಈ ವರ್ಷದ ಮೊಟ್ಟ ಮೊದಲ ಸೂರ್ಯಗ್ರಹಣ ಇದೇ ಮಾಸ ಉಂಟಾಗಲಿದೆ. ವರ್ಷದ ಮೊದಲ ಗ್ರಹಣ ಯಾವಾಗ ಉಂಟಾಗಲಿದೆ? ಈ ಗ್ರಹಣದ ಸಮಯ ಹಾಗೂ ಇದು ಭಾರತದಲ್ಲಿ ಗೋಚರವಾಗುವುದೇ? ವೈದಿಕ ಸಾಸ್ತ್ರದ ಪ್ರಕಾರ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಈ ವರ್ಷದ ಮೊದಲ ಗ್ರಹಣ
ವರ್ಷದ ಮೊದಲ ಗ್ರಹಣ ಮಾರ್ಚ್ 29 ಅಮವಾಸ್ಯೆಯಂದು ಸಂಭವಿಸಲಿದೆ.
ಗ್ರಹಣದ ಸಮಯ: ಮಧ್ಯಾಹ್ನ 2:21ರಿಂದ ಸಂಜೆ 06:14ರವರೆಗೆ ಸೂತಕವಿದೆ
ಭಾರತದಲ್ಲಿ ಈ ಗ್ರಹಣ ಸಂಭವಿಸಲಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಏನು ಮಾಡಬಾರದು?
ಗ್ರಹಣದ ಸಮಯದಲ್ಲಿ ಹೊರಗಡೆ ಓಡಾಡಬಾರದು
ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ
ಆಹಾರವನ್ನು ಸೇವಿಸುವಂತಿಲ್ಲ
ಗ್ರಹಣದ ಸಮಯದಲ್ಲಿ ಮಲಗುವುದು ಅಶುಭ ಎಂದು ಪರಿಗಣಿಸಲಾಗಿದೆ.
ಆಹಾರ ಬೇಯಿಸುವಂತಿಲ್ಲ
ದೇವರ ಮಂತ್ರ ಪಠಿಸುತ್ತಾ ಸಮಯ ಕಳೆದರೆ ತುಂಬಾನೇ ಒಳ್ಳೆಯದು.
ಗ್ರಹಣದ ನಂತರ ಏನು ಮಾಡಬೇಕು?
ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ ಮನೆಯಲ್ಲಿ ಗಂಗಾಜಲ ಸಿಂಪಡಿಸಿ ನಂತರ ದೇವರಿಗೆ ದೀಪ ಹಚ್ಚಬೇಕು.
ಈ ದಿನ ನಿರ್ಗತಿಕರಿಗೆ ದಾನ ಮಾಡಬೇಕು.
ಸಮೀಪದ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.
ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಬಹುದೇ?
ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಾರದು ಎಂದು ಹೇಳುವುದು ಬರಿ ಧಾರ್ಮಿಕ ನಂಬಿಕೆ ಮಾತ್ರವಲ್ಲ, ವೈಜ್ಞಾನಿಕ ಸತ್ಯ ಕೂಡ ಹೌದು. ಬರಿಗಣ್ಣಿನಲ್ಲಿ ವೀಕ್ಷಿಸಿದರೆ ಕಣ್ಣಿನ ದೃಷ್ಟಿಗೆ ಹಾನಿ ಉಂಟಾಗಬಹುದು. ಕೆಲವು ಕಡೆ ಸೂರ್ಯಗ್ರಹಣ ನೋಡಲು ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ, ಅಲ್ಲಿ ಹೋಗಿ ನೋಡಬಹುದು, ಹಾಗೆಯೇ ಬರಗಣ್ಣಿನಲ್ಲಿ ನೋಡುವ ಹುಂಬ ಸಾಹಸ ಮಾಡಿದರೆ ಇದರಿಂದ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.
ಸೂರ್ಯ ಗ್ರಹಣ ಹೇಗೆ ಉಂಟಾಗುವುದು?
ಸೂರ್ಯ ಮತ್ತು ಭೂಮಿಯ ಮಧ್ಯ ಚಂದ್ರ ಅಡ್ಡಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ, ಸೂರ್ಯ ಹಾಗೂ ಭೂಮಿ ಮಧ್ಯ ಚಂದ್ರ ಬಂದಾಗ ಸೂರ್ಯನ ಬೆಳಕು ಭೂಮಿಯನ್ನು ತಲುಪದೆ ಕತ್ತಲಾವರಿಸುತ್ತದೆ, ಇದರಿಂದಾಗಿ ಗ್ರಹಣ ಉಂಟಾಗುವುದು. ವರ್ಷದಲ್ಲಿ ಎರಡು ಬಾರಿ ಸೂರ್ಯಗ್ರಹಣ ಉಂಟಾಗುವುದು.
ವರ್ಷದ ಎರಡನೇ ಸೂರ್ಯಗ್ರಹಣ ಯಾವಾಗ?
ಮಾರ್ಚ್‌ನಲ್ಲಿ ಆದ ಬಳಿಕ ಸೆಪ್ಟೆಂಬರ್ 21ಕ್ಕೆ ವರ್ಷದ 2ನೇ ಸೂರ್ಯಗ್ರಹಣ ಸಂಭವಿಸಲಿದೆ.



Click it and Unblock the Notifications