Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇ ತಿಂಗಳಿನಲ್ಲಿ ಈ ವಿಶೇಷ ದಿನಗಳು, ಹಿಂದೂಗಳಿಗೆ ಈ ಮಾಸ ತುಂಬಾನೇ ವಿಶೇಷವಾಗಿದೆ
2024ರ 5ನೇ ಮಾಸ ಮೇ, ಮೇ ತಿಂಗಳಿನಲ್ಲಿ ಹಬ್ಬಗಳು ಹಾಗೂ ವ್ರತಗಳ ಪಟ್ಟಿ ನೋಡಿದರೆ ಈ ತಿಂಗಳಿನಲ್ಲಿ ಅನೇಕ ವಿಶೇಷಗಳ ದಿನಗಳಿವೆ, ಅಮ್ಮಂದಿರ ದಿನದಿಂದ ಹಿಡಿದು ಏಕಾದಶಿ, ಪ್ರದೋಶ, ನಾರದ ಜಯಂತಿ, ಬುದ್ಧ ಪೂರ್ಣಿಮಾ ಹೀಗೆ ಅನೇಕ ವ್ರತಗಳಿವೆ, ಬನ್ನಿ ಈ ತಿಂಗಳಿನಲ್ಲಿ ಯಾವೆಲ್ಲಾ ದಿನ ವಿಶೇಷ ದಿನಗಳಾಗಿವೆ ಎಂದು ನೋಡೋಣ ಬನ್ನಿ:

ಅಂತರರಾಷ್ಟ್ರೀಯ ಕಾರ್ಮಿಕ ದಿನ
ಮೇ 1, ಬುಧವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ
ಮೇ 1, ಬುಧವಾರ
ಅಗ್ನಿ ನಕ್ಷತ್ರ ಪ್ರಾರಂಭ
ಮೇ 4, ಶನಿವಾರ
ಮೇ 4 ವರೂಧಿನಿ ಏಕಾದಶಿ
ಮೇ 4, ಶನಿವಾರ
ವಿಶ್ವ ನಗು ದಿನ
ಮೇ 5, ಭಾನುವಾರ
ಪ್ರದೋಷ ವ್ರತ ಮೇ 4 ಭಾನುವಾರ
ಮಾಸಿಕ ಶಿವರಾತ್ರಿ
ಮೇ 6, ಸೋಮವಾರ
ದರ್ಶ ಅಮವಾಸ್ಯೆ
ಮೇ 7, ಮಂಗಳವಾರ
ರವೀಂದ್ರನಾಥ್ ಟಾಗೂರ್ ಜಯಂತಿ
ಮೇ 8, ಬುಧವಾರ
ಅಕ್ಷಯ ತೃತೀಯಾ
ಮೇ 10, ಶುಕ್ರವಾರ
ರೋಹಿಣಿ ವ್ರತ
ಮೇ 10, ಶುಕ್ರವಾರ
ತ್ರೇತಾ ಯುಗ
ಮೇ 10 ಶುಕ್ರವಾರ
ಪರುಶರಾಮ ಜಯಂತಿ
ಮೇ 10 ಶುಕ್ರವಾರ
ವಿನಾಯಕ ಚತುರ್ಥಿ
ಮೇ 11, ಶನಿವಾರ
ರಾಮಾನುಜ ಜಯಂತಿ
ಮೇ 12, ಭಾನುವಾರ
ತಾಯಂದಿರ ದಿನ
ಮೇ 12 ಭಾನುವಾರ
ಸೀತಾ ನವಮಿ
ಮೇ 16, ಗುರುವಾರ
ಮೋಹಿನಿ ಏಕಾದಶಿ
ಮೇ 19, ಭಾನುವಾರ
ಪ್ರದೋಷ ವ್ರತ
ಮೇ 20, ಮಂಗಳವಾರ
ನರಸಿಂಹ ಜಯಂತಿ
ಮೇ 21, ಮಂಗಳವಾರ
ಕೂರ್ಮಾ ಜಯಂತಿ
ಮೇ 23, ಗುರುವಾರ
ಬುದ್ಧ ಪೂರ್ಣಿಮಾ
ಮೇ 23, ಗುರುವಾರ
ವೈಶಾಖ ಪೂರ್ಣಿಮಾ ವ್ರತ
ಮೇ 23, ಗುರುವಾರ
ನಾರದ ಜಯಂತಿ
ಮೇ 24, ಗುರುವಾರ
ಅಗ್ನಿ ನಕ್ಷತ್ರ ಮುಕ್ತಾಯ
ಮೇ 28, ಮಂಗಳವಾರ
ಏಕದಂತ ಸಂಕಷ್ಠಿ ಚತುರ್ಥಿ
ಮೇ 26, ಭಾನುವಾರ
ತಂಬಾಕು ರಹಿತ ದಿನ
ಮೇ 31 ಶುಕ್ರವಾರ
ಕಾರ್ಮಿಕ ದಿನ
ಕಾರ್ಮಿಕರು ಇಲ್ಲದಿದ್ದರೆ ಒಂದು ದೇಶ ಅಭಿವೃದ್ಧಿಯಾಗಲು ಸಾಧ್ಯವೇ? ಖಂಡಿತ ನಿಲ್ಲ. ಯಾವುದೇ ಕಂಪನಿಯಾಗಿರಲಿ ಅಲ್ಲಿ ಉದ್ಯೋಗಿಗಳು ದುಡಿದರೆ ಮಾತ್ರ ಕಂಪನಿಗಳು ಬೆಳೆಯಲು ಸಾಧ್ಯ. ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಕಾರ್ಮಿಕರ ಸಮಸ್ಯೆಗಳು ಬಗೆಹರಿಯಬೇಕು ಎಂಬ ಉದ್ದೇಶದಿಂದ ಕಾರ್ಮಿಕ ದಿನವನ್ನು ಆಚರಿಸಲಾಗುವುದು.
ವರೂಧಿನಿ ಏಕಾದಶಿ
ಈ ವರ್ಷ ವರೂಧಿನಿ ಏಕಾದಶಿಯನ್ನು ಮೇ 4ರಂದು ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಶ್ರೀ ವಿಷ್ಣುವನ್ನು ಪೂಜಿಸಿ ತುಳಿಸಿಯನ್ನು ನೈವೇದ್ಯದಲ್ಲಿ ಹಾಕಿ ಶ್ರೀ ವಿಷ್ಣುವಿಗೆ ಅರ್ಪಿಸಬೇಕು.
ಬುದ್ದ ಪೂರ್ಣಿಮೆ
ಮೇ 23ರಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುವುದು. ಮನು ಕುಲಕ್ಕೆ ಅಹಿಂಸೆಯ ಮಹತ್ವ ಸಾರಿದ ಬುದ್ಧ ಜನಿಸಿದ ದಿನವನ್ನು ಬೌದ್ಧ ಪೂರ್ಣಿಮೆಯನ್ನು ಆಚರಿಸಲಾಗುವುದು. ಈ ದಿನ ಜನರು ಪುಣ್ಯ ನದಿಯಲ್ಲಿ ಸ್ನಾನ ಮಾಡಿ ದಾನ ಧರ್ಮದ ಕಾರ್ಯ ಮಾಡುತ್ತಾರೆ.
ನಾರದ ಜಯಂತಿ
ನಾರದ ಮುನಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುದ್ದಿಯನ್ನು ಮುಟ್ಟಿಸುತ್ತಿದ್ದರು ಹೀಗಾಗಿ ನಾರದ ಮುನಿಗಳನ್ನು ಜಗತ್ತಿನ ಮೊದಲ ಪತ್ರಕರ್ತ ಎಂದು ಕೂಡ ಹೇಳುತ್ತಾರೆ. ನಾರದ ಮುನಿಗಳು ಶ್ರೀ ವಿಷ್ಣುವಿನ ಕಟ್ಟಾ ಭಕ್ತ. ಹಿಂದೂಗಳು ಪ್ರತಿವರ್ಷ ನಾರದ ಜಯಂತಿಯನ್ನು ಆಚರಿಸಲಾಗುವುದು. ಈ ವರ್ಷ ಮೇ 24ರಂದು ನಾರದ ಜಯಂತಿ ಆಚರಿಸಲಾಗುವುದು.
ಸಂಕಷ್ಠಿ ಚತುರ್ಥಿ
ಪ್ರತಿ ತಿಂಗಳು ಸಂಕಷ್ಠಿ ಚತುರ್ಥಿ ಆಚರಣೆ ಮಾಡಲಾಗುವುದು. ಈ ದಿನ ಉಪವಾಸವಿದ್ದು ಏಕದಂತನನ್ನು ಪೂಜಿಸುತ್ತಾರೆ. ಸಕಲ ಕಷ್ಟಗಳು ನಿವಾರಣೆಗೆ ಏಕದಂತನನ್ನು ಪೂಜಿಸಲಾಗುವುದು. ಮೇ ತಿಂಗಳಿನಲ್ಲಿ ಮೇ 26ರಂದು ಆಚರಿಸಲಾಗುವುದು.
ಅಮ್ಮಂದಿರ ದಿನ: ಈ ತಿಂಗಳಿನಲ್ಲಿಯೇ ಅಮ್ಮಂದಿರ ದಿನವಿದೆ, ಅವರ ಜೀವ ಪಣಕ್ಕಿಟ್ಟು ನಮ್ಮನ್ನು ಭೂಮಿಗೆ ತಂದ ದೇವತೆ, ಅವಳ ದಿನವನ್ನು ಸಂಭ್ರಮಿಸುವ ದಿನ.



Click it and Unblock the Notifications
