Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
2024-25 ಬಜೆಟ್ ಮಧ್ಯಮವರ್ಗ ಹಾಗೂ ಬಡವರ ಜೀವನಶೈಲಿಗೆ ಸಹಕಾರಿಯಾಗಿದೆ, ಹೇಗೆ?
2024-25ನೇ ಕೇಂದ್ರ ಬಜೆಟ್‌ನಲ್ಲಿ ಕೆಲವೊಂದು ವಸ್ತುಗಳು ದುಬಾರಿಯಾಗಲಿದೆ, ಇನ್ನು ಕೆಲವು ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಕೆಲವೊಂದು ಪ್ರಮುಖ ವಸ್ತುಗಳ ಬೆಲೆ ಕಡಿಮೆಯಾಗಲಿದೆ, ಇದರಿಂದಾಗಿ ಜನ ಸಾಮಾನ್ಯರ ಜೀವನಶೈಲಿಯಲ್ಲಿ ಬದಲಾವಣೆಯಾಗಲಿದೆ. ಇದರಿಂದ ಬಡವರು, ಮಧ್ಯಮವರ್ಗದವರು, ಶ್ರೀಮಂತರು ಎನ್ನದೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ, ಅದರಲ್ಲಿಯೂ ಮಧ್ಯಮವರ್ಗದವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.

2024-25ರ ಬಜೆಟ್ ಬಳಿಕ ಈ ವಸ್ತುಗಳ ಬೆಲೆ ಕಡಿಮೆಯಾಗಲಿದೆ
ಕ್ಯಾನ್ಸರ್ ಔಷಧ:
ಆರೋಗ್ಯದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ. ಕ್ಯಾನ್ಸರ್ ಔಷಧಗಳು ಬಲು ದುಬಾರಿ. ಒಂದು ಬಾರಿ ಔಷಧ ಖರೀದಿಸಲು ಸಾವಿರಾರು ರುಪಾಯಿ ಖರ್ಚು ಆಗುತ್ತದೆ. ಹಾಗಾಗಿ ಈ ಔಷಧ ಬೆಲೆ ಕಡಿಮೆಯಾದರೆ ಅದು ಕ್ಯಾನ್ಸರ್ ರೋಗಿಯ ಕುಟುಂಬಕ್ಕೆ ಬಹುದೊಡ್ಡ ಕೊಡುಗೆಯಾಗಿದೆ.
ಕ್ಯಾನ್ಸರ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮನೆಯ ಸದಸ್ಯರಿಗೆ ಕ್ಯಾನ್ಸರ್ ಬಂದರೆ ಅದರ ದುಃಖ ಒಂದು ಕಡೆ, ಜೊತೆಗೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಬಡ ಹಾಗು ಮಧ್ಯಮ ವರ್ಗದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ, ಆ ನಿಟ್ಟಿನಲ್ಲಿ ನೋಡುವುದಾದರೆ ಕ್ಯಾನ್ಸರ್ ಔಷಧ ಬೆಲೆ ಕಡಿಮೆಯಾದರೆ ಅದು ತುಂಬಾನೇ ಸಹಕಾರಿಯಾಗಿದೆ.
ಮೊಬೈಲ್ ಬೆಲೆ ಇಳಿಕೆಯಾಗಲಿದೆ: ಮೊಬೈಲ್ ಎಂಬುವುದು ನಮ್ಮ ಜೀವನಶೈಲಿಯ ಪ್ರಮುಖ ಅಂಗವಾಗಿದೆ, ಇದರ ಬೆಲೆ ಕಡಿಮೆಯಾದರೆ ಒಳ್ಳೆಯದು.
ಬೆಳ್ಳಿ, ಬಂಗಾರ, ಪ್ಲಾಟಿನಂ
ಬೆಳ್ಳಿ, ಬಂಗಾರ ಕಸ್ಟಮ್ ಡ್ಯೂಟಿ ಶೇ.6ರಷ್ಟು ಕಡಿತಗೊಳಿಸಿರುವುದರಿಂದ ತುಂಬಾನೇ ಪ್ರಯೋಜನಕಾರಿಯಾಗಿದೆ. ಈಗ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆ ಕಡಿಮೆಯಾದರೆ ಇದು ಕೂಡ ಮಧ್ಯಮವರ್ಗದವರಿಗೆ ಸಹಕಾರಿಯಾಗಿದೆ. ಚಿನ್ನದ ಬೆಲೆ ಹೆಚ್ಚಾದರೂ ಮದುವೆ ಸಂದರ್ಭದಲ್ಲಿ ಚಿನ್ನ ಖರೀದಿ ಅನಿವಾರ್ಯವಾಗಿದೆ, ಚಿನ್ನದ ಬೆಲೆ ಕಡಿಮೆಯಾದರೆ ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಕಡಿಮೆಯಾಗಬಹುದು.
ಯಾವ ವಸ್ತುಗಳ ಬೆಲೆ ಹೆಚ್ಚಾಗಲಿದೆ?
ಪ್ಲಾಸ್ಟಿಕ್, ಫ್ಲೆಕ್ಸ್ ತೆರಿಗೆ
ಆಮದು ಬಟ್ಟೆ
ಪ್ಲಾಸ್ಟಿಕ್, ಫೆಕ್ಸ್ ಅನಿವಾರ್ಯವಲ್ಲ, ಅಲ್ಲದೆ ಪರಿಸರಕ್ಕೆ ಮಾರಕ ಕೂಡ. ಆಮದು ಬಟ್ಟೆಗಿಂತ ಸ್ವದೇಶಿ ಬಟ್ಟೆಗಳಿರುವಾಗ ಇದರ ಬಗ್ಗೆ ಕೂಡ ಚಿಂತಿಸಬೇಕಾಗಿಲ್ಲ.



Click it and Unblock the Notifications
