Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2024-25ರ ಬಜೆಟ್: ಮಹಿಳೆಯರಿಗೆ ಆರ್ಥಿಕ ಸ್ವಾವಲಂಬಿಗಳಾಗಲು ಬಂಪರ್ ಕೊಡುಗೆಗಳಿವು
2024-25ರ ಬಜೆಟ್‌ನಲ್ಲಿ ಮಹಿಳೆಯರಿಗೆ ಹಚ್ಚಿನ ಒತ್ತು ನೀಡಲಾಗಿದೆ. ಈ ಬಜೆಟ್‌ನಲ್ಲಿ ಹೇಳಲಾಗಿರುವ ಅಂಶಗಳು ಮಹಿಳೆಯರಿಗೆ ಯಾವೆಲ್ಲಾ ರೀತಿಯಿಂದ ಸಹಕಾರಿಯಾಗಿದೆ ಎಂದು ನೋಡುವುದಾದರೆ:

ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ಇರುವ ಬಂಪರ್ ಕೊಡುಗೆಗಳು
ಮಹಿಳೆಯರಿಗೆ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖವಾಗಿ ಗಮನ ಹರಿಸಿರುವುದು ಬಡವರು, ಮಹಿಳೆಯರು, ಯುವಕರು ಹಾಗೂ ರೈತರು.
ಬಜೆಟ್‌ನಲ್ಲಿ ಮಹಿಳೆಯರಿಗೆ ದೊರೆತಿರುವ ಬಂಪರ್ ಕೊಡುಗೆಗಳೇನು?
ಬಜೆಟ್‌ನಲ್ಲಿ ಮಹಿಳೆಯರಿಗೆ 3 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದ್ದು ಇದರಿಂದಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.
ಮಹಿಳೆಯರಿಗೆ, ಹುಡುಗಿಯರಿಗೆ ಹಾಸ್ಟೆಲ್ ಸೌಲಭ್ಯ
ದೂರದ ಪ್ರದೇಶಗಗಳಿಗೆ ಹೋಗಿ ಓದುತ್ತಿರುವ ಅಥವಾ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ತಂಗಲು ಸುರಕ್ಷಿತ ತಾಣ ಒದಗಿಸಲು ಹಾಸ್ಟೆಲ್ ಸೌಲಭ್ಯ ಕಲ್ಪಿಸಲಿದೆ. ಇದರಿಂದಾಗಿ ಎಷ್ಟೊ ಬಡ ಹೆಣ್ಮಕ್ಕಳಿಗೆ ಸಹಕಾರಿಯಾಗಲಿದೆ.
ವೃತ್ತಿ ಪರ ಕೌಶಲ್ಯ ಯೋಜನೆಗಳು
ಮಹಿಳೆಯರು ವೃತ್ತಿ ಕೌಶಲ್ಯ ಕಲಿಯಲು ಇಚ್ಛಿಸಿದರೆ ಅದಕ್ಕೆ ಅವಕಾಶಗಳನ್ನು ಒಗಿಸುತ್ತಿದೆ, ಅವರಿಗೆ ಲೋನ್‌ಗಳನ್ನು ಒದಗಿಸುತ್ತಿದೆ. ಈ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತೇಜನ ನೀಡಲಾಗುತ್ತಿದೆ. ಅವರಿಗೆ ಅವಶ್ಯಕವಾದ ಸೂಕ್ತತರಬೇತಿ ಕೆಂದ್ರಗಳನ್ನು ಸ್ಥಾಪಿಸಿ ಅ ಮೂಲಕ ಮಹಿಳೆಯರು ಆರ್ಥಿಕ ಬೆಳವಣಿಗೆ ಹೊಂದಲು ಸರ್ಕಾರ ಪ್ರಯತ್ನಿಸುತ್ತಿದೆ.
ಮಹಿಳೆಯರು ಆರ್ಥಿಕ ಸ್ವಾವಲಂಬಿಯಾದರೆ ಅವರ ಬದುಕು ಅತಂತ್ರವಾಗುವುದಿಲ್ಲ
ಏನೇ ಸವಾಲುಗಳು ಬರಲಿ ಆರ್ಥಿಕ ಸ್ವಾವಲಂಬಿಯಾಗಿರುವ ಮಹಿಳೆ ಕುಗ್ಗುವುದಿಲ್ಲ, ಅವಳಿಗೆ ಅದೆಲ್ಲವನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುವುದು, ತಾನು ದುಡಿಯಲು ಪ್ರಾರಂಭಿಸಿದರೆ ತನ್ನ ಕುಟುಂಬವನ್ನು ಕೂಡ ರಕ್ಷಣೆ ಮಾಡುತ್ತಾಳೆ, ಆ ನಿಟ್ಟಿನಲ್ಲಿ ಮಹಿಳೆಯರಿಗೆ ಅರ್ಥಿಕ ಸ್ವಾವಲಂಬನೆಯತ್ತ ಸಾಗಲು ಈ ಬಜೆಟ್‌ನಲ್ಲಿ ಅನುವು ಮಾಡಲಾಗಲಿದೆ.
ಮುದ್ರಾ ಯೋಜನೆಯಂಥ ಯೋಜನೆಗಳು ಕೂಡ ಸಹಕಾರಿಯಾಗಿದೆ
ಮುದ್ರಾ ಯೋಜನೆಯ ಹಣವನ್ನು 10-20 ಲಕ್ಷಕ್ಕೆ ಏರಿಸಲಾಗಿದೆ. ಮಹಿಳೆಯರು ಇದರ ಸೌಲಭ್ಯಗಳನ್ನು ಪಡೆಯಬಹುದು.
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಡೆಗೆ ಗಮನಹರಿಸುವುದು ಅವಶ್ಯಕ ಏಕೆಂದರೆ:
ಅವಳಲ್ಲಿ ಆರ್ಥಿಕ ಸುರಕ್ಷತೆ ಇರುತ್ತದೆ. ಯಾರ ಜೀವನ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅವಳು ಆರ್ಥಿಕವಾಗಿ ಗಂಡನನ್ನೇ ಅವಲಂಬಿಸಿದ್ದರೆ ಆತನ ದುಡಿಮೆ ನಿಂತಾಗ ಅಥವಾ ಆತನಿಗೆ ಅರ್ಥಿಕ ಸಂಕಷ್ಟ ಬಂದಾಗ ಇಡೀ ಕುಟುಂಬ ಅನುಭವಿಸಬೇಕಾಗುತ್ತದೆ, ಅದೇ ಮಹಿಳೆ ಕೂಡ ಆರ್ಥಿಕ ಸ್ವಾವಲಂಬಿಯಾಗಿದ್ದರೆ ಇಂಥ ಕಷ್ಟದ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸುತ್ತಾಳೆ.
ಅವಳಲ್ಲಿ ಆತ್ಮವಿಶ್ವಾಸ ಚೆನ್ನಾಗಿರುತ್ತದೆ: ಕೆಲ ಹೆಣ್ಮಕ್ಕಳು ತುಂಬಾನೆ ಮಾನಸಿಕ ಹಾಗೂ ದೈಹಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದೇ ಆರ್ಥಿಕ ಸ್ವಾವಂಬಿಯಾಗಿದ್ದರೆ ಅವಳು ಇದನ್ನು ಸಹಿಸಿಕೊಂಡು ಇರಬೇಕಾದ ಪರಿಸ್ಥಿತಿ ಬರಲ್ಲ.
ದೇಶದ ಆರ್ಥಿಕತೆಗೆ ಒಳ್ಳೆಯದು
ಹೌದು ಮಹಿಳೆ ಆರ್ಥಿಕವಾಗಿ ಸಬಳಾದರೆ ದೇಶದ ಆರ್ಥಿಕತೆಗೆ ಒಳ್ಳೆಯದಂತೆ. ದೇಶದ ಜಿಡಿಪಿಗೆ ಮಹಿಳೆಯರ ಕೊಡುಗೆ ಶೇ.20ಕ್ಕಿಂತಲೂ ಕಡಿಮೆ, ಅದೇ ಅವಳು ಆರ್ಥಿಕ ಸ್ವಾವಲಂಬಿಯಾದರೆ ಮನೆ ಪ್ರಗತಿಯಾಗುವುದು, ದೇಶದ ಅಭಿವೃದ್ಧಿಗೂ ಒಳ್ಳೆಯದು.



Click it and Unblock the Notifications
