For Quick Alerts
ALLOW NOTIFICATIONS  
For Daily Alerts

ಒಂದೇ ರಾಶಿಯ ಸ್ತ್ರೀ-ಪುರುಷರು ವಿವಾಹವಾದರೆ ಏನಾದರೂ ಸಮಸ್ಯೆ ಬರುತ್ತದೆಯೇ?

By Deepu
|

ವಿವಾಹ ಎನ್ನುವುದು ಪ್ರವಿತ್ರವಾದ ಬಂಧನ. ಈ ಬಾಂಧವ್ಯ ಚಿರಕಾಲ ಪ್ರೀತಿ-ವಾತ್ಸಲ್ಯದಿಂದ ಕೂಡಿರಬೇಕೆಂದರೆ ಹೊಂದಾಣಿಕೆ ಎನ್ನುವುದು ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ಇವೆಲ್ಲವೂ ಸರಿಯಾಗಿ ಆಗಬೇಕೆಂದರೆ ಮೊದಲು ಹುಡುಗ ಹಾಗೂ ಹುಡುಗಿಯ ಕುಂಡಲಿಯ ಹೊಂದಾಣಿಕೆ ಇರಬೇಕಾಗುತ್ತದೆ. ಹಾಗೊಮ್ಮೆ ಕುಂಡಲಿಯಲ್ಲಿ ಹೊಂದಾಣಿಕೆ ಇಲ್ಲವೆಂದಾದರೆ ದಾಂಪತ್ಯ ಜೀವನ ವಿರಸ, ಕಲಹಗಳಿಂದಲೇ ಕೂಡಿರುತ್ತದೆ.

ಈ ಕಾರಣಕ್ಕಾಗಿ ಹಿಂದೂ ಧರ್ಮದ ಹೆಚ್ಚಿನವರು ಕುಂಡಲಿಯ ಹೊಂದಾಣಿಕೆ ಇಲ್ಲವೆಂದಾದರೆ ವಿವಾಹವನ್ನು ಮುಂದುವರಿಸಲು ಹೋಗುವುದಿಲ್ಲ. ಆಧುನಿಕತೆ ಹಾಗೂ ಸಾಮಾಜಿಕವಾಗಿ ಹೆಚ್ಚು ಜನರೊಡನೆ ಹುಡುಗ ಹಾಗೂ ಹುಡುಗಿಯರ ಒಡನಾಟ ಇರುವುದರಿಂದ, ಪ್ರೇಮ ವಿವಾಹದ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಂತಹ ಪ್ರೇಮ ವಿವಾಹದಲ್ಲಿ ಜಾತಕ ಅಥವಾ ಕುಂಡಲಿಗಳ ಹೊಂದಾಣಿಕೆ ನೋಡುವುದಿಲ್ಲ. ಹಾಗಾಗಿಯೇ ಹೆಚ್ಚಿನ ವಿವಾಹವು ಇಂದು ಬಹು ಬೇಗ ವಿಚ್ಛೇದನ ಪಡೆದುಕೊಳ್ಳುತ್ತಿದೆ.

ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ವಧು ಮತ್ತು ವರನ ನಕ್ಷತ್ರ ಹಾಗೂ ರಾಶಿಯು ಒಂದೇ ಆಗಿರಬಾರದು. ಹಾಗೊಮ್ಮೆ ಒಂದೇ ಅಥವಾ ಏಕ ನಕ್ಷತ್ರ ಮತ್ತು ರಾಶಿಯಾಗಿದ್ದರೆ ದಾಂಪತ್ಯ ಜೀವನದಲ್ಲಿ ವಿವಿಧ ಬಗೆಯ ಸಮಸ್ಯೆಗಳು ಹಾಗೂ ಅನುಕೂಲಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಆ ಸಮಸ್ಯೆಗಳೇನು? ಅನುಕೂಲವೇನು? ಎನ್ನುವ ವಿಚಾರದ ಕುರಿತು ಬೋಲ್ಡ್ ಸ್ಕೈ ವಿವರವಾದ ವಿವರಣೆಯನ್ನು ನಿಮ್ಮ ಮುಂದಿಡುತ್ತಿದೆ....

ಮದುವೆ ಮತ್ತು ಜ್ಯೋತಿಷ್ಯ

ಮದುವೆ ಮತ್ತು ಜ್ಯೋತಿಷ್ಯ

ಪ್ರತಿಯೊಂದು ನಕ್ಷತ್ರ ಹಾಗೂ ರಾಶಿಗೆ ಅನುಗುಣವಾಗಿ ವ್ಯಕ್ತಿಯು ವಿಶೇಷವಾದ ವ್ಯಕ್ತಿತ್ವವನ್ನು ಪಡೆದುಕೊಂಡಿರುತ್ತಾನೆ. ಬೇರೆ ಬೇರೆ ರಾಶಿ ಹಾಗೂ ನಕ್ಷತ್ರದವರ ಕೆಲವು ಗುಣಗಳ ಹೊಂದಾಣಿಕೆ ಹಾಗೂ ಸಹಾಯದ ಮೇರೆಗೆ ಜೀವನವು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿಯೇ ವಿವಾಹದಲ್ಲಿ ನಕ್ಷತ್ರ ಹಾಗೂ ರಾಶಿಯ ಹೊಂದಾಣಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಇವರಲ್ಲಿ ನೀವ್ಯಾರು?

ಇವರಲ್ಲಿ ನೀವ್ಯಾರು?

ಆದರೆ ಕೆಲವೊಮ್ಮೆ ಕೆಲವು ರಾಶಿ ಚಕ್ರದ ಚಿಹ್ನೆಯು ತಮ್ಮದೇ ಆದ ಹೊಂದಾಣಿಕೆಯಲ್ಲಿ ದಾಂಪತ್ಯವನ್ನು ಪೂರ್ಣ ಗೊಳಿಸುತ್ತದೆ. ಇಂತಹ ರಾಶಿ ಚಕ್ರಗಳ ಹೊಂದಾಣಿಕೆಯ ಬಗ್ಗೆ ಊಹಿಸಲು ಕಷ್ಟವಾಗುವುದು. ಕೆಲವೊಂದು ಗುಣ ಸಕಾರಾತ್ಮಕ ಫಲಿತಾಂಶವನ್ನು ಹಾಗೂ ಕೆಲವು ನಕಾರಾತ್ಮಕ ಫಲಿತಾಂಶವನ್ನು ನೀಡಬಹುದು.

ಒಂದೇ ರಾಶಿ ಚಕ್ರವು ಮದುವೆಗೆ ಹೊಂದಿಕೆಯಾಗುತ್ತದೆಯೇ?

ಒಂದೇ ರಾಶಿ ಚಕ್ರವು ಮದುವೆಗೆ ಹೊಂದಿಕೆಯಾಗುತ್ತದೆಯೇ?

ಕೆಲವೊಮ್ಮೆ ನಮಗೆ ಸೂಕ್ತ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸುಲಭ ಹಾಗೂ ಒಂದು ಬಗೆಯ ಹಿತವಾದ ಅನುಭವ ಉಂಟಾಗುವುದು. ಇದು ರಾಶಿ ಚಕ್ರಗಳ ಹೊಂದಾಣಿಕೆಯ ಪ್ರಭಾವ ಎಂದು ಹೇಳಬಹುದು. ಆದರೆ ಸಂಬಂಧಗಳ ಸೂಕ್ತ ಹೊಂದಾಣಿಕೆಯ ಅರಿವಾಗುವುದು ಮದುವೆ ಬಂಧನದಿಂದಲೇ.ಕೆಲವೊಮ್ಮೆ ವ್ಯಕ್ತಿಗಳು ತಮ್ಮ ಗುಣ ಹಾಗೂ ವರ್ತನೆಗೆ ಸರಿಯಾಗಿ ವಿರುದ್ಧವಾಗಿರುವಂತವರನ್ನು ಇಷ್ಟಪಡುತ್ತಾರೆ. ಇದು ರಾಶಿ ಚಕ್ರಗಳಲ್ಲಿರುವ ಕೆಲವು ವಿಚಾರದರಲ್ಲಿ ಹೊಂದಾಣಿಕೆಯಾಗಿರುತ್ತದೆ. ಹಾಗಾಗಿಯೇ ಆಕರ್ಷಿತರಾಗಿರುತ್ತಾರೆ ಎನ್ನಲಾಗುವುದು.

ಮೇಷ ರಾಶಿವರು ಮೇಷ ರಾಶಿವರೊಂದಿಗೆ

ಮೇಷ ರಾಶಿವರು ಮೇಷ ರಾಶಿವರೊಂದಿಗೆ

ಈ ರಾಶಿಯವರು ಬಹಳ ಸ್ವಾಭಿಮಾನಿಗಳು ಹಾಗೂ ಹಠದ ಸ್ವಭಾವ ಹೊಂದಿದವರಾಗಿರುವುದರರಿಂದ ಅದೇ ಸ್ವಭಾವದವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಂಬಂಧ ಮುಂದುವರಿಸಲಾರರು. ಇವರು ಪರಸ್ಪರ ಜಗಳ ಹಾಗೂ ಮುನಿಸು ಉಂಟಾದಾಗ ಇಬ್ಬರಲ್ಲೂ ಇರುವ ಹಠ ಮತ್ತು ಸ್ವಾಭಿಮಾನದಿಂದ ಇಬ್ಬರ ನಡುವೆ ಕ್ಷಮೆ ಹಾಗೂ ಪ್ರೀತಿ ಹುಟ್ಟದು. ಬದಲಿಗೆ ನಿರಂತರ ಅನಗತ್ಯ ಮುನಿಸು ಅಥವಾ ಜಗಳ ಮುಂದುವರಿಯುವುದು.

ವೃಷಭ ರಾಶಿಯವರು ವೃಷಭ ರಾಶಿಯವರೊಂದಿಗೆ

ವೃಷಭ ರಾಶಿಯವರು ವೃಷಭ ರಾಶಿಯವರೊಂದಿಗೆ

ಈ ರಾಶಿ ಚಕ್ರದವರು ಉತ್ತಮ ಹೊಂದಾಣಿಕೆ ಕಾಣಬಹುದು. ಒಂದೇ ದಿಕ್ಕಿನ ಯೋಚನೆ, ಕಲ್ಪನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ಅಡುಗೆ, ಕ್ರೀಡೆಗಳಂತಹ ಸ್ವಭಾವವು ಪರಸ್ಪರ ಪ್ರೀತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ . ಇವರಲ್ಲಿ ಇರುವ ಸಮತೋಲನದ ಕಾರ್ಯಗಳು ಈ ಸಂಬಂಧವನ್ನು ಉತ್ತಮ ಯಶಸ್ಸಿಗೆ ಕೊಂಡೊಯ್ಯುವುದು.

ಮಿಥುನ ರಾಶಿಯವರು ಮಿಥುನ ರಾಶಿಯವರೊಂದಿಗೆ

ಮಿಥುನ ರಾಶಿಯವರು ಮಿಥುನ ರಾಶಿಯವರೊಂದಿಗೆ

ಈ ರಾಶಿಯವರು ಒಂದೇ ರಾಶಿಯವರನ್ನು ವಿವಾಹವಾದರೆ ಯಾವುದೇ ರೀತಿಯ ಬೇಸರವನ್ನು ಅನುಭವಿಸುವುದಿಲ್ಲ. ಇಬ್ಬರಲ್ಲೂ ಸ್ಥಿರತೆ ಇರುವುದರಿಂದ ಪರಸ್ಪರ ಸಂಬಂಧವನ್ನು ಗೌವರವಿಸುತ್ತಾರೆ. ಇಬ್ಬರಲ್ಲಿ ಒಬ್ಬರು ಬೇಸರದಿಂದ ಮುಖ ತಿರುಗಿಸಿಕೊಂಡರೆ ಇನ್ನೊಬ್ಬರ ಭಾವನೆ ಹಾಗೂ ವಾತ್ಸಲ್ಯದ ಗುಣ ಅವರ ಸಿಟ್ಟನ್ನು ತಣಿಸುವುದು. ಹಾಗಾಗಿ ದಾಂಪತ್ಯವು ಸುಖಕರವಾಗಿರುವುದು.

ಕರ್ಕ ರಾಶಿಯವರು ಕರ್ಕರಾಶಿಯವರೊಂದಿಗೆ

ಕರ್ಕ ರಾಶಿಯವರು ಕರ್ಕರಾಶಿಯವರೊಂದಿಗೆ

ಇಬ್ಬರಲ್ಲೂ ಸೂಕ್ಷ್ಮ ಹಾಗೂ ಪೋಷಣೆಯ ಸ್ವಭಾವ ಇರುವುದರಿಂದ ಸಂಬಂಧ ಉತ್ತಮವಾಗಿ ಇರುವುದು ಎಂದು ಹೇಳಬಹುದು. ಈ ರಾಶಿಯವರು ಹೆಚ್ಚು ಭಾವಾವೇಶದಿಂದ ವರ್ತಿಸುತ್ತಾರೆ. ಅದಕ್ಕಾಗಿ ಅವರು ಪರಸ್ಪರ ಸಹನೆ ಹಾಗೂ ಹೊಂದಾಣಿಕೆಯ ಗುಣವನ್ನು ಅಳವಡಿಸಿಕೊಳ್ಳಬೇಕು. ಈ ಗುಣವು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ತಿರುಗಬಹುದು. ಅದಕ್ಕಾಗಿ ಎಚ್ಚರಿಕೆಯಿಂದ ಇರಬೇಕಾಗುವುದು ಎಂದು ಹೇಳಲಾಗುತ್ತದೆ.

ಸಿಂಹ ರಾಶಿಯವರು ಸಿಂಹ ರಾಶಿಯವರೊಂದಿಗೆ

ಸಿಂಹ ರಾಶಿಯವರು ಸಿಂಹ ರಾಶಿಯವರೊಂದಿಗೆ

ಈ ರಾಶಿಯವರು ಬಹಳ ಸಿಟ್ಟು ಹಾಗು ಉದ್ವೇಗದ ಗುಣವನ್ನು ಹೊಂದಿರುತ್ತಾರೆ. ಇವರ ವಿವಾಹ ಸಂಬಂಧದಲ್ಲಿ ಏನಾಗಬಹುದು ಎಂದು ಊಹಿಸಲು ಸ್ವಲ್ಪ ಕಷ್ಟ ಎಂದೇ ಹೇಳಬಹದು. ಯಾಋಇಗೆ ಮೊದಲು ಕೋಪ ಬರುವುದು ಎಂದು ಅಂದಾಜಿಸಲಾಗುವುದಿಲ್ಲ. ಪ್ರೀತಿ, ಹೊಂದಾಣಿಕೆಯಲ್ಲಿ ಹಾಗೂ ಮನೋಭಾವದ ಸಮಾನತೆಯಿಂದ ಉತ್ತಮ ಹೊಂದಾಣಿಕೆ ಹಾಗೂ ಗೌರವದಿಂದ ದಾಂಪತ್ಯ ನಡೆಸುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಬಹುದು.

ಕನ್ಯಾ ರಾಶಿಯವರು ಕನ್ಯಾ ರಾಶಿಯವರೊಂದಿಗೆ

ಕನ್ಯಾ ರಾಶಿಯವರು ಕನ್ಯಾ ರಾಶಿಯವರೊಂದಿಗೆ

ಇವರು ಪರಸ್ಪರ ಒಬ್ಬರಿಗೊಬ್ಬರು ಸೃಷ್ಟಿಯಾಗಿರುವವರಂತೆ ಇರುತ್ತಾರೆ. ಪರಸ್ಪರ ಆಕರ್ಷಣೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ, ಹೊಂದಾಣಿಕೆ ಹೀಗೆ ಎಲ್ಲಾ ಗುಣಗಳು ಹೊಂದಾಣಿಕೆ ಹಾಗೂ ಗೌರವದಿಂದ ಜೀವನ ನಡೆಸುತ್ತಾರೆ. ಇಬ್ಬರು ಪರಸ್ಪರ ಒಟ್ಟಿಗೆ ಇರಲು ಇಷ್ಟಪಡುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಆಧಾರ ಸ್ತಂಭವಾಗಿ ನಿಲ್ಲುತ್ತಾರೆ ಎಂದು ಹೇಳಬಹುದು.

ತುಲಾ ರಾಶಿವರು ತುಲಾ ರಾಶಿಯವರೊಂದಿಗೆ

ತುಲಾ ರಾಶಿವರು ತುಲಾ ರಾಶಿಯವರೊಂದಿಗೆ

ಇಬ್ಬರು ಪರಸ್ಪರ ನ್ಯೂನ್ಯತೆಯನ್ನು ಸ್ವೀಕರಿಸಲು ಮತ್ತು ತಮ್ಮಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಂಡರೆ ಮಾತ್ರ ದಾಂಪತ್ಯ ಜೀವನವು ಸುಂದರವಾಗಿರುತ್ತದೆ. ಪರಸ್ಪರ ಸಾಮರಸ್ಯಕ್ಕೆ ಹಂಬಲಿಸುತ್ತಾರೆಯಾದರೂ ಪ್ರೀತಿಯನ್ನು ತೋರಿಸಿಕೊಳ್ಳಲು ಕಷ್ಟ ಪಡುವರು. ಪರಸ್ಪರ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಚಂಡಮಾರುತದಂತೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ವೃಶ್ಚಿಕ ರಾಶಿಯವರು ವೃಶ್ಚಿಕ ರಾಶಿಯವರೊಂದಿಗೆ

ವೃಶ್ಚಿಕ ರಾಶಿಯವರು ವೃಶ್ಚಿಕ ರಾಶಿಯವರೊಂದಿಗೆ

ಇವರು ಪರಸ್ಪರ ನಿಗೂಢವಾದ ಹಾಗೂ ಭಾವೋದ್ರೇಕದ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಇಬ್ಬರಲ್ಲೂ ಆತ್ಮೀಯತೆಯನ್ನು ಕಂಡುಕೊಳ್ಳುತ್ತಾರೆ. ಆದರೆ ನಂಬಿಕೆಯ ಸಮಸ್ಯೆ, ಸಂಶಯ, ಗುಣಗಳು ಹೆಚ್ಚಾಗಿರುವುದರಿಂದ ಈ ರಾಶಿಯವರಲ್ಲಿ ಪರಸ್ಪರ ಜಗಳ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇವರ ಪ್ರೀತಿಯು ಅಸ್ಪಷ್ಟ ಮತ್ತು ಅಖಂಡವಾಗಿರುತ್ತದೆ.

ಧನು ರಾಶಿಯವರು ಧನುರಾಶಿಯವರೊಂದಿಗೆ

ಧನು ರಾಶಿಯವರು ಧನುರಾಶಿಯವರೊಂದಿಗೆ

ಆರೋಗ್ಯಕರ ಪೈಪೋಟಿಯಿಂದ ಪರಸ್ಪರ ಒಬ್ಬರನ್ನೊಬ್ಬರು ಆನಂದದಿಂದ ಇಟ್ಟುಕೊಂಡಿರುತ್ತಾರೆ. ಪರಸ್ಪರ ವಿರೋಧಾತ್ಮ ಅಭಿಪ್ರಾಯವನ್ನು ಹೊಂದಿದ್ದರೂ ಸಹ ಆರೋಗ್ಯಕರ ಚರ್ಚೆ ಹಾಗೂ ಮನೋಭಾವದಿಂದ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಆದರೆ ಪರಸ್ಪರ ಸ್ವಾತಂತ್ರ್ಯವಾಗಿರಬೇಕೆನ್ನುವ ಭಾವವು ಸಂಬಂಧವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.

 ಮಕರ ರಾಶಿಯವರು ಮಕರ ರಾಶಿಯವರೊಂದಿಗೆ

ಮಕರ ರಾಶಿಯವರು ಮಕರ ರಾಶಿಯವರೊಂದಿಗೆ

ಇವರು ಪರಸ್ಪರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಅಲ್ಲದೆ ಕೆಲಸದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಪ್ರಶಂಸಿಸುತ್ತಾರೆ. ಸಂಬಂಧ ಕ್ರಮೇಣ ಹಂಚಿಕೆಯ ಗುಣ ಹಾಗೂ ಆಳವಾದ ಬಾಧ್ಯತೆಯಿಂದ ಸೃಷ್ಟಿಸುತ್ತದೆ. ಇವರಲ್ಲಿ ವೈಯಕ್ತಿಕ ಆಕಾಂಕ್ಷೆಗಳು ಹಸ್ತಕ್ಷೇಪ ಮಾಡುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಕುಂಬ ರಾಶಿಯವರ ಕುಂಬರಾಶಿಯವರೊಂದಿಗೆ

ಕುಂಬ ರಾಶಿಯವರ ಕುಂಬರಾಶಿಯವರೊಂದಿಗೆ

ಇವರಿಗೆ ಪರಸ್ಪರ ಆಧ್ಯಾತ್ಮಿಕ ಶಕ್ತಿಯಿಂದ ಅರಿತುಕೊಳ್ಳಲು ಕಷ್ಟವಾಗುವುದು. ಇವರು ಉದಾರ ಗುಣದವರಾಗಿದ್ದರೂ ಇವರಲ್ಲಿರುವ ಭಾವೋದ್ವೇಗಗಳು, ಪರಸ್ಪರ ಮನಃಸ್ಥಿತಿಯ ಬದಲಾವಣೆಯು ಸಂಬಂಧವನ್ನು ಅಲುಗಾಡಿಸಬಹುದು. ಕೆಲವು ನಕಾರಾತ್ಮಕ ಗುಣವು ಒಂದೇ ಬಗೆಯಲ್ಲಿರುವುದರಿಂದ ಹೊಂದಾಣಿಕೆ ಕಷ್ಟವಾಗುವುದು.

ಮೀನ ರಾಶಿಯವರು ಮೀನ ರಾಶಿಯವರೊಂದಿಗೆ

ಮೀನ ರಾಶಿಯವರು ಮೀನ ರಾಶಿಯವರೊಂದಿಗೆ

ಇವರ ಸಂಬಂಧದಲ್ಲಿ ದೂರದೃಷ್ಟಿಗಳು ಒಟ್ಟಿಗೆ ಕನಸು ಕಾಣಬಹುದು. ಪರಸ್ಪರ ಪ್ರೀತಿ ವಿಶ್ವಾಸ ತೋರುತ್ತವೆಯಾದರೂ ಕೆಲವೊಮ್ಮೆ ಮುನಿಸು ಮತ್ತು ಜಗಳ ಗಂಭೀರ ಸ್ಥಿತಿಗೆ ತಲುಪಬಹುದು. ಇಬ್ಬರೂ ವಿಶ್ರಾಂತಿ ಹೊಂದುವುದನ್ನು ಬಯಸುವುದಿಲ್ಲವಾದ್ದರಿಂದ ಎಲ್ಲಾ ಕೆಲಸವನ್ನು ಸುಗಮವಾಗಿ ನಡೆಸಬಲ್ಲರು. ಆದರೂ ಇವರ ಸಂಬಂಧಗಳ ಬಗ್ಗೆ ಹೀಗೆ ಎಂದು ಹೇಳಲು ಸ್ವಲ್ಪ ಕಷ್ಟವಾಗಬಹುದು.

English summary

What happens when Same Zodiac Sign people?

When two people fall for each other, it is either for the reason that there is some ‘opposite attraction’ or simply ‘like-mindedness’. As we know, relationships are like a jigsaw puzzle, and only the perfect fit can fix the void.
X
Desktop Bottom Promotion