Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ದುಬಾರಿ ಕಾಕ್ ಟೇಲ್ ಗಳ ಟೇಸ್ಟ್ ನೋಡಿದ್ದೀರಾ?
ಕಾಕ್ ಟೈಲ್ ಪ್ರಿಯರಾ ನೀವು? ನೀವು ಅತ್ಯಂತ ಬೆಲೆ ಬಾಳುವ ಕಾಕ್ ಟೈಲ್ ನ ಟೇಸ್ಟ್ ಮಾಡಿದ್ದೀರಾ? ಹೌದು ಎನ್ನುವುದಾದರೆ ಈ ಕೆಳಗಿನ ಬ್ರಾಂಡ್ ನ ಕಾಕ್ ಟೈಲ್ ಟೇಸ್ಟ್ ಮಾಡಿದ್ದರೆ ಮಾತ್ರ ಹೌದು ಅನ್ನಿ.
2-3 ಆಲ್ಕೋಹಾಲ್ ಮಿಶ್ರ ಮಾಡಿ ತಯಾರಿಸುವ ಕಾಕ್ ಟೈಲ್ ನ ಒಂದು ಪೆಗ್ ಗೆ ಸಾವಿರ ಡಾಲರ್ ನಿಂದ ಹಿಡಿದು ಹನ್ನೆರಡು ಸಾವಿರ ಡಾಲರ್ ವರೆಗೆ ಇದೆ! ಆ ದುಬಾರಿ ಕಾಕ್ ಟೈಲ್ ಗಳಾವುವು ಎಂದು ತಿಳಿಯುವ ಕುತೂಹಲವೇ, ಹಾಗದರೆ ಮುಂದೆ ಓದಿ:

Magie Noir
cognac, ಶಾಂಪೇನ್, ಬ್ಲ್ಯಾಕ್ ಬೆರ್ರಿ ಮದ್ಯ, ಲಿಚಿ, ಲೆಮನ್ ಗ್ರಾಸ್ ಬಳಸಿ ಮಾಡುವ ಈ ಕಾಕ್ ಟೇಲ್ ಬೆಲೆ 630 ಡಾಲರ್.

Mai Tai
ಈ ದುಬಾರಿ ರಮ್ ಕಾಕ್ ಟೇಲ್ 6 ಬಾಟಲ್ ಗಳು ಮಾತ್ರ ಬಾಕಿ ಇದೆಯಂತೆ. ಆದ್ದರಿಂದಲೇ ಇದಕ್ಕೆ ಡಿಮ್ಯಾಂಡ್ ಕೂಡ ಅಧಿಕವಿದೆ. ಈ ಮದ್ಯ ಟೇಸ್ಟ್ ಮಾಡ ಬಯಸುವುದಾದರೆ 1. 267 ಡಾಲರ್ ಕೊಡಲು ರೆಡಿಯಾಗಬೇಕು.

Kentucky Derby Mint Julep
ಈ ಮದ್ಯವನ್ನು ಬೆಳ್ಳಿ ಗ್ಲಾಸ್ ನಲ್ಲಿ ಸರ್ವ್ ಮಾಡಲಾಗುವುದು, ಇದರ ಬೆಲೆ 1000 ಡಾಲರ್!

Ritz Paris Sidecar
ಪ್ರಾನ್ಸ್ ನ ಅತ್ಯತ್ತಮವಾದ ದ್ರಾಕ್ಷಿ ಮತ್ತು 19ನೇ ಶತಮಾನದ cognac ಮದ್ಯ ಬಳಸಿ ಇದನ್ನು ತಯಾರಿಸಲಾಗುವುದು. ಇದರ ಬೆಲೆ 1,670 ಡಾಲರ್.

My Cherry Amor
ಈ ಕಾಕ್ ಟೇಲ್ ಬೆಲೆ 2000 ಡಾಲರ್. ಒಂದು ಪೆಗ್ ಗೆ ಅಷ್ಟೊಂದು ದುಡ್ಡು ಕೊಟ್ಟು ಕುಡಿಯುವವನು ಅದೆಷ್ಟು ಕಾಕ್ ಟೇಲ್ ಪ್ರೇಮಿಯಾಗಿರಬೇಡ!

Salvatore's Legacy
ಇದು ಅತ್ಯಂತ ಬೆಲೆ ಬಾಳುವ ಮದ್ಯವಾಗಿದ್ದು ಇದರ ಬೆಲೆ 8, 625 ಡಾಲರ್.

The Winston
ಅತ್ಯಂತ ಬೆಲೆ ಬಾಳುವ ಕಾಕ್ ಟೇಲ್ ಆದ ಇದರ ಬೆಲೆ $12,916. ಬೆಲೆ ಕೇಳಿಯೇ ತಲೆ ತಿರುಗುತ್ತದೆ, ಇನ್ನು ಕುಡಿದವರ ಗತಿ.



Click it and Unblock the Notifications
