Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ವೈನ್ ಬಗ್ಗೆ ಇರುವ ಈ ಕಟ್ಟುಕತೆಗಳನ್ನು ನಂಬುತ್ತೀರಾ?
ವೈನ್ ಬಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳ ಬಗ್ಗೆ ಹೇಳುವ ಮುಂಚೆ ವೈನ್ ಅನ್ನು ಹೇಗೆ ಕಂಡು ಹಿಡಿಯಲಾಯಿತು ಎಂಬ ಕಥೆಯನ್ನು ನಿಮಗೆ ಹೇಳುವೆ. ಪರ್ಶೀಯನ್ ಪುರಾಣ ಕಥೆಯಲ್ಲಿ ಹೀಗೊಂದು ಪ್ರಕರಣವಿದೆ. ಅಲ್ಲಿಯ ರಾಜಕುಮಾರಿ ಅವಳ ತಂದೆ(ರಾಜ), ಅವಳ ಮೇಲೆ ಇಟ್ಟಂತಹ ನಂಬಿಕೆಯನ್ನು ಕಳೆದುಕೊಂಡಳು. ಇದರಿಂದ ಜಿಗುಪ್ಸೆಗೊಂಡ ಆಕೆ ಹಾಳಾದ ದ್ರಾಕ್ಷಿಯಿಂದ ವಿಷ ತಯಾರಿಸಿ ಸಾಯಬೇಕೆಂದು ತೀರ್ಮಾನಿಸಿ ದ್ರವವನ್ನು ತಯಾರಿಸಿ ಕುಡಿಯುತ್ತಾಳೆ.
ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪಿದ ಆಕೆ ನಂತರ ಎದ್ದು ನೋಡಿದಾಗ ತಾನು ಕುಡಿದ ದ್ರವದಿಂದ ಸಾಯಲಿಲ್ಲ ಎಂಬ ಅಂಶ ತಿಳಿಯುತ್ತದೆ. ಅಲ್ಲಿಗೆ ಬಂದ ರಾಜ ಮಗಳ ತಪ್ಪನ್ನು ಕ್ಷಮಿಸುತ್ತಾನೆ. ಅವಳು ತಾನು ಕಂಡು ಹಿಡಿದ ಹೊಸ ದ್ರವದ ಬಗ್ಗೆ ತಿಳಿಸುತ್ತಾಳೆ, ಆ ದ್ರವದ ರುಚಿ ಮತ್ತು ಕಿಕ್ ರಾಜನಿಗೂ ಇಷ್ಟವಾಗಿ, ಹಾಳಾದ ದ್ರಾಕ್ಷಿಯಿಂದ ದ್ರವವನ್ನು ತಯಾರಿಸಲು ಅಪ್ಪಣೆ ಹೊರಡಿಸುತ್ತಾನೆ, ಈ ರೀತಿ ವೈನ್ ನ ಉಗಮವಾಯಿತು, ಕಥೆ ಚೆನ್ನಾಗಿದೆಯೆಲ್ಲಾ?
ಇಲ್ಲಿ ನಾವು ವೈನ್ ಬಗ್ಗೆ ಇರುವ ಕೆಲ ಮಿಥ್ಯೆ ಕಲ್ಪನೆಗಳ ಬಗ್ಗೆ ಹೇಳುತ್ತಿದ್ದೇವೆ. ವೈನ್ ಬಗ್ಗೆ ಅನೇಕ ಕಟ್ಟುಕತೆಗಳನ್ನು ನೀವೂ ಕೇಳಿರುತ್ತೀರಿ, ಅನುಸರಿಸುತ್ತಲೂ ಇರುತ್ತೀರಿ! ಬನ್ನಿ ವೈನ್ ಬಗ್ಗೆ ಇರುವ ಕೆಲವು ಮಿಥ್ಯೆ ಕಲ್ಪನೆಗಳೇನು ಎಂದು ನೋಡೋಣ:

ವೈನ್ ಗೆ ಹಾಕಿದ ಕಾರ್ಕ್
ವೈನ್ ಗೆ ಹಾಕಿದ ಕಾರ್ಕ್ ನ ವಾಸನೆಯಿಂದ ವೈನ್ ನ ಗುಣಮಟ್ಟ ತಿಳಿಯಬಹುದೆಂದು ಅನೇಕ ವೈನ್ ಪ್ರಿಯರು ಹೇಳುತ್ತಾರೆ. ಆದರೆ ವೈನ್ ಕಾರ್ಕ್ ನ ವಾಸನೆಗೂ, ವೈನ್ ನ ವಾಸನೆಗೂ ಯಾವುದೇ ಸಂಬಂಧವಿರುವುದಿಲ್ಲ. ವೈನ್ ಕಾರ್ಕ್ ಮರದ ವಾಸನೆ ಬೀರುವುದೇ ಹೊರತು ಅದರಲ್ಲಿರುವ ವೈನ್ ನ ವಾಸನೆ ಬೀರುವುದಿಲ್ಲ.

ವೈನ್ ಬಾಟಲಿಯ ಮುಚ್ಚಳ ಬಿಚ್ಚಿಟ್ಟರೆ ರುಚಿ ಹೆಚ್ಚು
ವೈನ್ ಬಾಟಲಿಯ ಮುಚ್ಚಳ(ಕಾರ್ಕ್) ತೆಗೆದು ಹಾಗೇ ಒಂದು ಗಂಟೆ ಇಟ್ಟರೆ ವೈನ್ ರುಚಿ ಹೆಚ್ಚುವುದು ಎಂಬುವುದು ಕೆಲವರ ನಂಬಿಕೆಯಾಗಿದ್ದು, ಅದನ್ನು ಅನುಸರಿಸುತ್ತಾರೆ ಕೂಡ. ಆದರೆ ವೈನ್ ನ ಮುಚ್ಚಳ ತೆಗೆದು ಹಾಗೇ ವೈನ್ ಅನ್ನು ಇಟ್ಟರೆ ಅದರ ವಾಸನೆ, ರುಚಿ ಕಡಿಮೆಯಾಗುವುದು.

ವೈನ್ ನ ಕಾಯ್ದಿರಿಸುವ ವಿಧಾನ
ವೈನ್ ಅನ್ನು ಕಾಯ್ದಿರಿಸಲು ವೈನ್ ಸೆಲ್ಲರ್ ಬೇಕೆಂದಿಲ್ಲ. ತುಂಬಾ ವೈನ್ ಇದ್ದರೆ ಮಾತ್ರ ಅದರ ಅವಶ್ಯಕತೆ ಬೀಳುವುದು, ನಿಮ್ಮ ಅವಶ್ಯಕತೆಗೆ ತಕ್ಕಷ್ಟು ಮಾತ್ರ ವೈನ್ ನಿಮ್ಮಲ್ಲಿದ್ದರೆ ಬಾಕ್ಸ್ ನಲ್ಲಿ ಕಾಯ್ದಿರಿಸಬಹುದು.

ಫ್ರಿಜ್ ನಲ್ಲಿ ಇಡುವ ಬಗ್ಗೆ
ವೈನ್ ಅನ್ನು ಫ್ರಿಜ್ ನಲ್ಲಿ ಇಡಬಾರದೆಂದು ಹೇಳುತ್ತಾರೆ. ಆದರೆ ವೈಟ್ ವೈನ್ ಅನ್ನು ಫ್ರಿಜ್ ನಲ್ಲಿ ಇಡಬಹುದು. ಸರ್ವ್ ಮಾಡುವ 2 ಗಂಟೆಯ ಮೊದಲು ವೈನ್ ಅನ್ನು ಇಟ್ಟರೆ ವೈಟ್ ವೈನ್ ಕುಡಿಯಲು ರುಚಿಯಾಗಿರುತ್ತದೆ.

ಹೆಚ್ಚು ಹಣ ಪಾವತಿಸಿದ ವೈನ್ ಮಾತ್ರ ಒಳ್ಳೆಯದು
ಈ ಭಾವನೆ ಹೆಚ್ಚಿನವರಲ್ಲಿರುತ್ತದೆ. ಒಳ್ಳೆಯ ಗುಣ ಮಟ್ಟದ ವೈನ್ ಆಗಿರಬೇಕಾದರೆ ಅದು ದುಬಾರಿ ಬೆಲೆಯದ್ದು ಆಗಿರಬೇಕು. ಹಾಗೇನು ಇಲ್ಲ ಕೆಲವೊಮ್ಮೆ ಒಳ್ಳೆಯ ಗುಣ ಮಟ್ಟದ ವೈನ್ ಸಾಧಾರಣ ಬೆಲೆಗೆ ದೊರೆಯುತ್ತದೆ.

ವೈಟ್ ವೈನ್ v/s ರೆಡ್ ವೈನ್
ಬಿಳಿ ಮಾಂಸದ ಜೊತೆ ಸರ್ವ್ ಮಾಡಲು ಬಿಳಿ ವೈನ್, ಕೆಂಪು ಮಾಂಸದ ಜೊತೆ ಸರ್ವ್ ಮಾಡಲು ಕೆಂಪು ವೈನ್ ಬೆಸ್ಟ್ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ ಹಾಗೇನು ಇಲ್ಲ, ಎರಡೂ ವೈನ್ ಪ್ರತ್ಯೇಕ ರುಚಿ ಹೊಂದಿದ್ದು, ಆಹಾರಕ್ಕೂ-ವೈನ್ ಗೂ ಸಂಬಂಧವಿಲ್ಲ.

ವೈನ್ ಕುಡಿಯುವ ಮುಂಚೆ ವಾಸನೆ ಗ್ರಹಿಸುವುದೇಕೆ?
ವೈನ್ ಕುಡಿಯುವ ಮುಂಚೆ ಜನರು ಅದರ ವಾಸನೆ ಗ್ರಹಿಸುತ್ತಾರೆ. ಹೀಗೆ ವಾಸನೆ ಗ್ರಹಿಸಿದರೆ ಬೇಗನೆ ಕಿಕ್ ದೊರೆಯುವುದು ಎಂಬ ತಪ್ಪು ಕಲ್ಪನೆಯಿದೆ. ವೈನ್ ಕುಡಿಯಲು ಯೋಗ್ಯವೇ, ಇಲ್ಲವೇ ಅನ್ನುವುದನ್ನು ಅದರ ವಾಸನೆಯಿಂದ ತಿಳಯಬಹುದೇ ಹೊರತು, ವಾಸನೆ ಗ್ರಹಿಸುವುದರಿಂದ ಯಾವುದೇ ಕಿಕ್ ದೊರೆಯುವುದಿಲ್ಲ.

ದ್ರಾಕ್ಷಿಯ ರಸ ಮಾತ್ರ ಬಳಸಿ ರೆಡ್ ವೈನ್ ಮಾಡಲಾಗುವುದು
ಇದೊಂದು ತಪ್ಪು ಕಲ್ಪನೆ. ದ್ರಾಕ್ಷಿಯ ರಸ ಬಿಳಿ ಬಣ್ಣದಲ್ಲಿರುತ್ತದೆ, ಅದರ ಜೊತೆಗೆ ಅದರ ಸಿಪ್ಪೆಯನ್ನು ಸೇರಿಸಿ ರೆಡ್ ವೈನ್ ಮಾಡಲಾಗುವುದು, ಆಗ ಮಾತ್ರ ಅದಕ್ಕೆ ಕೆಂಪು ಬಣ್ಣ ದೊರೆಯುವುದು.



Click it and Unblock the Notifications
