Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ವಿಲ್ಸ್ ಫ್ಯಾಷನ್ ವೀಕ್ -ಮಸಾಬಾ ಡಿಸೈನರ್ ರ ಕಲೆಕ್ಷನ್
ವಿಲ್ಸ್ ತನ್ನ ಫ್ಯಾಷನಬಲ್ ಡಿಸೈನ್ ಮತ್ತು ಅತ್ಯುತ್ತಮವಾದ ಗುಣಮಟ್ಟದಿಂದಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಡ್ರೆಸ್ ಬ್ರಾಂಡ್ ಆಗಿದೆ. ಫ್ಯಾಷನ್ ಲೋಕ ಬಹು ನಿರೀಕ್ಷಿಸುತ್ತಿದ್ದ ವಿಲ್ಸ್ ಇಂಡಿಯಾ ಫ್ಯಾಷನ್ ವೀಕ್ (WIFW) ನ ಓಪಿನಿಂಗ್ ನಲ್ಲಿ ಸೆಲೆಬ್ರಿಟಿಗಳು ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದರು. ಸ್ಪ್ರಿಂಗ್ ಕಲೆಕ್ಷನ್ ಡಿಸೈನ್ ವಸ್ತ್ರಗಳನ್ನು ಧರಿಸಿ ಸೆಲೆಬ್ರಿಟಿಗಳು ramp walk ಮಾಡಿದರು.
ಬಾಲಿವುಡ್ ನ ಫೇಮಸ್ ಡಿಸೈನರ್ ಮಸಾಬಾ ಗುಪ್ತಾ ತಯಾರಿಸಿದ ಡ್ರೆಸ್ ಗೆ ಪ್ರಮುಖ ಶೋಟಾಪರ್ ಆಗಿ ಕಾಣಿಸಿದವರು ಬಾಲಿವುಡ್ ಸೆಲೆಬ್ರಿಟಿ ಅಲಿಯಾ ಭಟ್. ಮಸಾಬಾ ಗುಪ್ತಾ ಡಿಸೈನ್ ಮಾಡಿದ ಸ್ಪ್ರಿಂಗ್ -ಸಮ್ಮರ್ ಕಲೆಕ್ಷನ್ ಡ್ರೆಸ್ ವಿನ್ಯಾಸ ಹೇಗಿದೆ ಎಂದು ಕಣ್ಣಾಡಿಸೋಣ ಬನ್ನಿ:

ಅಲಿಯಾ ಭಟ್
ಅಲಿಯಾ ಭಟ್ ಪಿಂಕ್ ಕಲರ್ ನ ಮಂಡಿವರೆಗಿನ ಫ್ರಿಲ್ ಡ್ರೆಸ್ ಧರಿಸಿ WIFW ನಲ್ಲಿ ramp ವಾಕ್ ಮಾಡಿದರು. ಈ ಡ್ರೆಸ್ ನಲ್ಲಿ ಅದರ ಪ್ರಿಂಟ್ ತಕ್ಷಣ ನೋಡುಗರ ಗಮನವನ್ನು ಸೆಳೆಯುವಂತಿದೆ. ಡಿಮ್ ಕಲರ್ ಪಿಂಕ್ ಡ್ರೆಸ್ ನ ತೋಳು ಕಪ್ಪು ತೋಳಿನ ವಿನ್ಯಾಸ ಎದ್ದು ಕಾಣುವಂತಿದೆ.

ಕಟ್ ಮ್ಯಾಕ್ಸಿ
ಅಲಿಯಾ ಭಟ್ ಧರಿಸಿದ ಡ್ರೆಸ್ ಬಣ್ಣದ್ದೇ ಮ್ಯಾಕ್ಸಿ ಇದು. ಆದರೆ ವಿನ್ಯಾಸದಲ್ಲಿ ಭಿನ್ನವಾಗಿದೆ. ಬೇಸಿಗೆಯಲ್ಲಿ ಹೊರಗಡೆ ಹೋಗುವಾಗ ಧರಿಸಲು ಸೂಕ್ತವಾದ, ಫ್ಯಾಷನಬಲ್ ಮ್ಯಾಕ್ಸಿ ಇದಾಗಿದೆ.

ಪ್ರಿಂಟ್
ಮಸಾಬಾ ಗುಪ್ತಾ ವಿನ್ಯಾಸ ಮಾಡಿದ ಡ್ರೆಸ್ ಗಳಲ್ಲಿ ಕಂಡು ಬರುವ ಪ್ರಿಂಟ್ ತುಂಬಾ ಅಕ್ಷರಗಳಿಂದ ತುಂಬಿದ್ದು, ತುಂಬಾ ಯೂನಿಕ್ ಆಗಿದೆ.

ಕ್ರಾಪ್ ಟಾಪ್
ಮಿನಿ ಶಾರ್ಟ್ ಗೆ , ಬ್ಲ್ಯಾಕ್ ಕಲರ್ ಕ್ರಾಪ್ ಟಾಪ್ ಸಮ್ಮರ್ ಕಲೆಕ್ಚನ್ ನಲ್ಲಿ ಕಂಡು ಬರುವ ಒಂದು ಡ್ರೆಸ್ ವಿನ್ಯಾಸವಾಗಿದೆ.

ಹೈ ವೇಯಿಸ್ಟ್ ಲಾಂಗ್ ಸ್ಕರ್ಟ್
ಲೋ ವೇಸ್ಟ್ ಫ್ಯಾಷನ್ ನಿಧಾನಕ್ಕೆ ಮಾಯವಾಗಿ ಪುನಃ ಹೈ ವೇಯಿಸ್ಟ್ ಡ್ರೆಸ್ಸಿಂಗ್ ಸ್ಟೈಲ್ ಚಾಲ್ತಿಗೆ ಬರುತ್ತಿದೆ. ಈ ವಸ್ತ್ರವನ್ನು ನೋಡಿ ಹೈ ವೇಯಿಸ್ಟ್ ಸ್ಕರ್ಟ್ ಗೆ ಶೀರ್ ಜಾಕೆಟ್ ನಲ್ಲಿ ಪೋಸ್ ನೋಡುತ್ತಿರುವ ಮಾಡಲ್.

ಶೀರ್ Silhouette
ಮಸಾಬಾ ಗುಪ್ತಾ 2014 ಕಲೆಕ್ಷನ್ ಗಳಲ್ಲಿ ಕಂಡು ಬರುವ ಮತ್ತೊಂದು ಆಕರ್ಷಕ ಡಿಸೈನ್ ನ ಡ್ರೆಸ್.

ಗೋಥಿಕ್ ಪ್ರಿಂಟ್
ಈ ಬ್ಲ್ಯಾಕ್ ಔಟ್ ಫಿಟ್ ಗೆ ಗೋಥಿಕ್ ಪ್ರಿಂಟ್ ಮತ್ತು ಶೀರ್ ಬಾಟಂ ಇದ್ದು ಡಿಫರೆಂಟ್ ಆಗಿದೆ.

ಮೋನೋಕ್ರೊಮೆ ಪ್ರಿಂಟ್
ಮಸಾಬಾ ಕಲೆಕ್ಷನ್ ನಲ್ಲಿ ಮೊನೊಕ್ರೊಮೆ ಪ್ರಿಂಟ್ ವಿನ್ಯಾಸವನ್ನು ಕಾಣಬಹುದು.

ಮೋನೋಕ್ರೊಮೆ ಬ್ಲೌಸ್ ಮತ್ತು ರೆಡ್ ಸ್ಯಾರಿ
ಕೆಂಪು ಬಣ್ಣದ ಸೀರೆಗೆ , ಸ್ಟೈಲಿಶ್ ರೀತಿಯಲ್ಲಿ ಸ್ಯಾರಿ ಹಾಕಿ ಪ್ರಿಂಟ್ಡ್ ಬ್ಲೌಸ್ ನಲ್ಲಿ ಕಾಣಿಸಿದ ಮಾಡಲ್.

ಡಿಸೈನರ್
WIFW ನಲ್ಲಿ ಡಿಸೈನರ್ ಮಸಾಬಾ ಗುಪ್ತಾ ಜೊತೆ ನಟಿ ಅಲಿಯಾಭಟ್.



Click it and Unblock the Notifications
